/newsfirstlive-kannada/media/post_attachments/wp-content/uploads/2024/01/Siddu-Dkshiva.jpg)
ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯ ಅಖಾಡಕ್ಕಿಳಿದು ರಾಜಕೀಯದಲ್ಲಿ ಹೊಸ ಅಧ್ಯಾಯ ಸೃಷ್ಟಿಸಲು ಡಿಸಿಎಂ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ಆದರೆ ಡಿಕೆಶಿ ಅವರ ಈ ನಿರ್ಧಾರಕ್ಕೆ ಕಾಂಗ್ರೆಸ್ ನಾಯಕರಲ್ಲೇ ಭಿನ್ನ ಸ್ವರ ಕೇಳಿ ಬಂದಿದೆ. ಹೊಸ ಅಧ್ಯಾಯದ ಅಸ್ತ್ರ ಪ್ರಯೋಗಕ್ಕೆ ಮುಂದಾಗಿರುವ ಡಿಕೆಶಿಗೆ ಕಾಂಗ್ರೆಸ್ನ ಒಗ್ಗಲಿಗ ಸಚಿವರ ನಾಯಕರು, ಶಾಸಕರು ನಿಮ್ಮ ಸ್ಪರ್ಧೆ ಬೇಡ ಎಂದು ಸಲಹೆ ನೀಡಿದ್ದಾರಂತೆ.
ಚನ್ನಪಟ್ಟಣದಲ್ಲಿ ರಂಗೇರಿದ ಉಪ ಚುನಾವಣೆ ಸಮರ
ಡಿಕೆಶಿ ಸ್ಪರ್ಧೆ ನಿರ್ಧಾರಕ್ಕೆ ಕೈ ನಾಯಕರಲ್ಲೇ ಅಪಸ್ವರ
ಬೊಂಬೆನಾಡು ಚನ್ನಪಟ್ಟದಲ್ಲಿ ಉಪ ಚುನಾವಣೆ ಅಖಾಡ ರಂಗೇರತೊಡಗಿದೆ. ಉಪಕದನಕ್ಕೆ ಮುಹೂರ್ತ ಫಿಕ್ಸ್ ಆಗೋಕು ಮೊದ್ಲೇ ರಣರಣ ರಾಜಕೀಯ ಶುರುವಾಗಿದೆ. ಡಿಸಿಎಂ ಡಿಕೆಶಿ ಚನ್ನಪಟ್ಟಣದಿಂದ ಸ್ಪರ್ಧೆ ಮಾಡೋ ಬಗ್ಗೆ ಸುಳಿವು ಸಿಕ್ಕಿದ್ದಂತೆ, ಬಿಜೆಪಿ-ಜೆಡಿಎಸ್ ಫುಲ್ ಅಲರ್ಟ್ ಆಗಿವೆ.. ಆದ್ರೆ, ಡಿ.ಕೆ.ಶಿವಕುಮಾರ್ ಅವರ ನಿರ್ಧಾರಕ್ಕೆ ಸ್ಥಳೀಯ ಸ್ವಪಕ್ಷದ ನಾಯಕರೇ ಬೇಡ ಅಂತಿದ್ದಾರೆ ಎಂದು ತಿಳಿದು ಬಂದಿದೆ.
ಸ್ಪರ್ಧೆ ಬೇಡ.. ಡಿಕೆಶಿಗೆ ಒಕ್ಕಲಿಗ ಸಚಿವರು, ಶಾಸಕರ ಸಲಹೆ!
ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ಅಖಾಡಕ್ಕೆ ಧುಮುಕಲು ಡಿಸಿಎಂ ಶಿವಕುಮಾರ್ ಸಿದ್ಧತೆ ಮಾಡಿಕೊಳ್ತಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಆಕ್ಟೀವ್ ಆಗುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.. ಟೆಂಪಲ್ ರನ್ ಮಾಡ್ತಾ.. ಸ್ಥಳೀಯ ಮುಖಂಡರನ್ನು ಭೇಟಿಯಾಗಿ ಜನರ ನಾಡಿಮಿಡಿತ ಅರಿಯುವ ತಂತ್ರಕ್ಕೆ ಕೈ ಹಾಕಿದ್ದಾರೆ. ಹೊಸ ಅಧ್ಯಾಯದ ಅಸ್ತ್ರ ಪ್ರಯೋಗಿಸಿ, ಭರ್ಜರಿ ಸಿದ್ಧತೆ ಮಾಡಿಕೊಳ್ತಿರುವ ಡಿಕೆಶಿಗೆ ಕಾಂಗ್ರೆಸ್ನ ಒಕ್ಕಲಿಗ ಸಚಿವರು, ಶಾಸಕರು ಕೆಲವೊಂದು ಸಲಹೆ ನೀಡಿದ್ದಾರಂತೆ.
ಇದನ್ನೂ ಓದಿ: ಹಾಸನದಲ್ಲಿ ಪ್ರಜ್ವಲ್ ಬಳಿಕ ಸೂರಜ್ ರೇವಣ್ಣಗೂ ಬಿಗ್ ಶಾಕ್! ಆರೋಪವೇನು? ಏನಿದರ ಅಸಲಿಯತ್ತು?
ಸಾರ್ವತ್ರಿಕ ಚುನಾವಣೆಗೂ, ಉಪ ಚುನಾವಣೆಗೂ ವ್ಯತ್ಯಾಸ ಇರುತ್ತೆ. ಚನ್ನಪಟ್ಟಣ ಕ್ಷೇತ್ರದ ಬೈ ಎಲೆಕ್ಷನ್ಗೆ ತಾವು ಸ್ಪರ್ಧೆಸೋದು ಬೇಡ. ನೀವು ಡಿಸಿಎಂ, ಪಕ್ಷದ ರಾಜ್ಯಾಧ್ಯಕ್ಷರು.. ಹೀಗಾಗಿ ಉಪ ಚುನಾವಣೆ ಉಸಾಬರಿ ಬೇಡ. ನಿಮ್ಮ ಸಹೋದರ ಡಿ.ಕೆ.ಸುರೇಶ್ ಅಥವಾ ಸಾಮಾನ್ಯ ಕಾರ್ಯಕರ್ತರನ್ನು ಕಣಕ್ಕೆ ಇಳಿಸಿ. BJP-JDS ಜೊತೆಗೆ ಕಾಣದ ಕೈಗಳು ತಮ್ಮ ವಿರುದ್ಧ ಕೆಲಸ ಮಾಡಲಿವೆ. ಒಂದ್ವೇಳೆ ತಾವು ಸ್ಪರ್ಧಿಸಿ, ಫಲಿತಾಂಶ ವ್ಯತಿರಿಕ್ತವಾದ್ರೆ ಪಕ್ಷದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಚನ್ನಪಟ್ಟಣ ಉಪ ಚುನಾವಣೆಗೆ ಸ್ಪರ್ಧಿಸಬೇಡಿ ಎಂದು ಡಿಕೆಶಿಗೆ ಸಲಹೆ ನೀಡಿದ್ದಾರೆ ಎನ್ನಲಾಗ್ತಿದೆ.
ಚನ್ನಪಟ್ಟಣದ ಮೇಲೆ ಡಿಕೆಶಿ ಪ್ರೀತಿಗೆ ಹೆಚ್‌ಡಿಕೆ ವ್ಯಂಗ್ಯ
ಉಪ ಚುನಾವಣೆ ಎದುರಾಗ್ತಿದ್ದಂತೆ ಡಿಸಿಎಂ ಡಿಕೆಶಿ ಅವರ ಚನ್ನಪಟ್ಟಣ ಭೇಟಿ ಬಗ್ಗೆ ಕೇಂದ್ರ ಸಚಿವ ಹೆಚ್‌ಡಿಕೆ ವ್ಯಂಗ್ಯವಾಡಿದ್ದಾರೆ. ಒಂದೂವರೆ ವರ್ಷದಿಂದ ಚನ್ನಪಟ್ಟಣಕ್ಕೆ ಹೋಗಿಲ್ಲ. ಆದ್ರೀಗ ಚನ್ನಪಟ್ಟಣದ ಬಗ್ಗೆ ಮಮತೆ ಬಂದಿದೆ ಎಂದು ಲೇವಡಿ ಮಾಡಿದ್ದಾರೆ. ಹಾಗೂ ನಮ್ಮ ಕಡೆಯಿಂದ ಅಭ್ಯರ್ಥಿ ಯಾರು ಅನ್ನೋದನ್ನ ಕಾಲ ನಿರ್ಧರಿಸಲಿದೆ ಎಂದು ಕುತೂಹಲ ಕೆರಳಿಸಿದ್ದಾರೆ.
ಇದನ್ನೂ ಓದಿ: HDK ವಿರುದ್ಧ ನಾಲಿಗೆ ಹರಿಬಿಟ್ಟ ದರ್ಶನ್ ಮಹಿಳಾ ಅಭಿಮಾನಿಗೆ ಸಂಕಷ್ಟ; ಆಗಿದ್ದೇನು?
ಚುನಾವಣೆ ಎಂದ ಮೇಲೆ ರಾಜಕೀಯ ನಾಯಕರ ತಂತ್ರ ರಣತಂತ್ರಗಳು ಕಾಮನ್. ಆದ್ರೆ ಬೊಂಬೆನಾಡಿನ ಬೈ ಎಲೆಕ್ಷನ್ ಮೂರು ಪಕ್ಷಗಳಿಗೂ ಪ್ರತಿಷ್ಟೆಯ ಪ್ರಶ್ನೆ ಆಗಿರೋದಂತು ಸುಳ್ಳಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ