ಕೆಜಿಗಟ್ಟಲೆ ಬಂಗಾರ, ಕಂತೆ-ಕಂತೆ ಹಣ ಪಕ್ಕದ ಮನೆಗೆ ಎಸೆದ; ಚಿನ್ನದ ಮೂಟೆ ಕುಬೇರ ಸಿಕ್ಕಿಬಿದ್ದ ಕಥೆಯೇ ರೋಚಕ!

author-image
admin
Updated On
ಕೆಜಿಗಟ್ಟಲೆ ಬಂಗಾರ, ಕಂತೆ-ಕಂತೆ ಹಣ ಪಕ್ಕದ ಮನೆಗೆ ಎಸೆದ; ಚಿನ್ನದ ಮೂಟೆ ಕುಬೇರ ಸಿಕ್ಕಿಬಿದ್ದ ಕಥೆಯೇ ರೋಚಕ!
Advertisment
  • ಎಸೆದಿರುವ ಚಿನ್ನದ ಬ್ಯಾಗ್‌ ನೋಡಿ ಪಕ್ಕದ ಮನೆಯವ ಮಾಡಿದ್ದೇನು?
  • ಅಧಿಕಾರಿ ಸಿಕ್ಕಿಕೊಳ್ಳುವ ಭೀತಿಯಲ್ಲಿ ಎಲ್ಲೆಲ್ಲಿ ಅಡಗಿಸಿದ್ದರು ಸಂಪತ್ತು?
  • ಚಿನ್ನ, ಬೆಳ್ಳಿ, ವಜ್ರ, ಆಸ್ತಿ ಪತ್ರ ನೋಡಿ ಲೋಕಾಯುಕ್ತ ಅಧಿಕಾರಿಗಳೇ ಶಾಕ್

ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳು ಬೀಸಿದ ಬಲೆಗೆ ದೊಡ್ಡ ತಿಮಿಂಗಿಲವೇ ಬಿದ್ದಿದೆ. ಅಬ್ಬಾ.. ಅದು ಅಂತಿಂಥದಲ್ಲ. ಕೆ.ಜಿಗಟ್ಟಲೆ ಚಿನ್ನ, ಕಂತೆ ಕಂತೆ ಹಣ ಪಕ್ಕದ ಮನೆಗೆ ಎಸೆದವರು. ಈ ಸಂಪತ್ತು ನೋಡಿದ್ರೆ ಇದು ಸರ್ಕಾರಿ ಅಧಿಕಾರಿ ಮನೆನಾ? ಕುಬೇರನ ಖಜಾನೆನಾ ಅನ್ನೋ ಅನುಮಾನ ಮೂಡುವಂತಿದೆ.

ಸರ್ಕಾರಿ ಅಧಿಕಾರಿಗಳಿಗೆ ಸಂಬಳ ಎಷ್ಟಿರುತ್ತೆ? ಅದ್ರಲ್ಲಿ ಅವ್ರು ಅದೆಷ್ಟು ಆಸ್ತಿ ಸಂಪಾದನೆ ಮಾಡಬಹುದು? ಅನ್ನೋ ಊಹೇ ಜನಸಾಮಾನ್ಯರಲ್ಲಿರುತ್ತೆ. ಆದ್ರೆ, ಲೋಕಾಯುಕ್ತ ದಾಳಿ ವೇಳೆ ಕೆಲವು ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ಸಿಕ್ಕಿರೋ ರಾಶಿ ರಾಶಿ ಚಿನ್ನಾಭರಣ, ಮುತ್ತುರತ್ನಗಳು, ಕಂತೆ ಕಂತೆ ಹಣ ನಿಬ್ಬೆರಗಾಗಿಸುವಂತಿದೆ.

ಇದನ್ನೂ ಓದಿ: ಫೇಸ್​ಬುಕ್‌ನಲ್ಲಿ​​ ಮೂಡಿದ ಪ್ರೀತಿ.. ಹೆಂಡತಿ, ಅತ್ತೆ, ಮಾವನನ್ನೇ ಕೊಲೆ ಮಾಡಿದ ಅಳಿಯ; ಆಗಿದ್ದೇನು? 

ಅಬ್ಬಾ.. ಅಬ್ಬಬ್ಬಬ್ಬಾ...ಇದೇನು ಮನೆನೋ? ಜ್ಯುವೆಲರಿ ಶಾಪೋ ಅಂತಾ ಕನ್ಫ್ಯೂಸ್ ಆಗ್ತಿದ್ದೀರಾ. ಇದು ಯಾರೋ ರಾಜಾಧಿರಾಜರ ಅರಮನೆಯಲ್ಲಿರೋ ಚಿನ್ನವನ್ನಲ್ಲ.. ಒಬ್ಬ ಸಾಮಾನ್ಯ.. ಸರ್ವೇ ಸಾಮಾನ್ಯ ಸರ್ಕಾರಿ ಅಧಿಕಾರಿ ಮನೆಯಲ್ಲಿ ಸಿಕ್ಕಿರೋ ಸ್ವರ್ಣದ ಮೂಟೆ. ರಾಶಿ ರಾಶಿ ಚಿನ್ನಾಭರಣಗಳು, ವಜ್ರದ ಒಡವೆಗಳು, ಬೆಳ್ಳಿ ಸಂಪತ್ತು, ಹೈಫೈ ವಾಚ್‌ಗಳು, ವಿದೇಶಿ ಕರೆನ್ಸಿಗಳು. ಒಂದಾ? ಎರಡಾ?

publive-image

ಕೆ.ಜಿ ಗಟ್ಟಲೆ ಚಿನ್ನ, ಕಂತೆ ಕಂತೆ ಹಣ ಪಕ್ಕದ ಮನೆಗೆ ಎಸೆದಿದ್ದ!
ಅಧಿಕಾರಿಗಳ ಕಂಡು ಬೆಚ್ಚಿ ಬೆರಗಾಗಿ ಸಂಪತ್ತು ಅಡಗಿಸಿದ್ದ!
ಲೋಕಾಯುಕ್ತ ಅಥವಾ ಇನ್ಯಾವುದೋ ತನಿಖಾ ಸಂಸ್ಥೆ ಅಧಿಕಾರಿಗಳು ದಿಢೀರ್‌ ರೇಡ್​ ಮಾಡಿದಾಗ ಮನೆಯಲ್ಲಿರೋ ಭ್ರಷ್ಟ ಕುಳಗಳು ಪತರಗುಟ್ಟಿಹೋಗೋದು ಕಾಮನ್​. ತಾವು ಅಡ್ಡದಾರಿ ಹಿಡಿದು ಸಂಪಾದನೆ ಮಾಡಿರೋ ಸಂಪತ್ತಿನ ಸಾಮ್ರಾಜ್ಯವನ್ನ ಕಾಪಾಡೋದು ಹೇಗೆ ಅಂತಾ ಒಂದು ಕ್ಷಣ ವಿಚಲಿತರಾಗಿಬಿಡ್ತಾರೆ. ಯಾಕಂದ್ರೆ, ನಮ್ಮ ಮನೆ ಮೇಲೆ ರೇಡ್​ ಆಗ್ಬಹುದು ಅನ್ನೋ ಊಹೆ ಅವರಲ್ಲಿರೋದಿಲ್ಲ.

ಇದನ್ನೂ ಓದಿ: ರೇಣುಕಾಸ್ವಾಮಿ ಪತ್ನಿ ಸಹಾಯಕ್ಕೆ ನಿಲ್ತಾರಾ ದರ್ಶನ್.. ಜೈಲಿಂದ ಹೊರ ಬಂದ ಬಳಿಕ ಮಾಡೋದೇನು? 

ಕಾನೂನು ಮಾಪನ ಇಲಾಖೆಯಲ್ಲಿ ಡೆಪ್ಯೂಟಿ ಕಂಟ್ರೋಲರ್​ ಆಗಿರೋ ಅಥ್ಥರ್ ಅಲಿಗೆ ಶುಕ್ರವಾರ ಕರಾಳ ಶುಕ್ರವಾರವಾಗಿ ಹೋಗಿತ್ತು. ಬೆಳ್​ ಬೆಳಗ್ಗೆ ಫೀಲ್ಡಿಗಿಳಿದಿದ್ದ ಲೋಕಾಯುಕ್ತ ಟೀಮ್​, ಬೆಳಗ್ಗಿನ ಜಾವ 5.30ರ ಸುಮಾರಿಗೆ ಈತನ ಕಲ್ಯಾಣನಗರದ ಮನೆಯ ಕಾಲಿಂಗ್​ ಬೆಲ್​ ಒತ್ತಿದ್ದರು. ಅಷ್ಟೇ, ಅಥ್ಥರ್ ಅಲಿಯ ಮನೆಯ ಸೀನ್​ ಚೇಂಜ್​ ಆಗಿ ಹೋಗಿತ್ತು. ಅಧಿಕಾರಿಗಳ ಎಂಟ್ರಿ ಗೊತ್ತಾಗಿ ಅಥ್ಥರ್​ ಅಲಿ ತಕ್ಷಣವೇ ಚಿನ್ನಾಭರಣಗಳು, ಹಣ ಇಟ್ಟಿದ್ದ ರೂಮ್​ಗೆ ಓಡೋಡಿ ಹೋಗಿದ್ದಾರೆ.

publive-image

ತಮ್ಮಲ್ಲಿದ್ದ ಕಂತೆ ಕಂತೆ ಹಣ, ಕೆ.ಜಿಗಟ್ಟಲೆ ಚಿನ್ನ ಇರೋ ಬ್ಯಾಗ್‌ ತಗೊಂಡು ಮನೆಯ ಮಹಡಿ ಮೇಲೆ ಹೋಗಿದ್ದಾರೆ. ಅಲ್ಲಿಂದ ಪಕ್ಕದ ಮನೆಯ ಗೇಟ್‌ ಒಳಗೆ ಬ್ಯಾಗ್‌ ಎಸೆದಿದ್ದಾರೆ. ಆ ಟೈಮಲ್ಲಿ ಗಡಿಬಿಡಿಯಲ್ಲಿದ್ದ ಅಲಿ ಬ್ಯಾಗ್‌ ಜಿಪ್‌ ಸರಿಯಾಗಿ ಹಾಕಿದ್ನೋ ಇಲ್ವೋ? ಯಾಕಂದ್ರೆ, ಬ್ಯಾಗ್​ನಲ್ಲಿದ್ದ ಕೆಲ ಚಿನ್ನದ ಸರಗಳು ಪಕ್ಕದ ಮನೆಯ ಗೇಟ್‌ ಸಮೀಪವೇ ಬಿದ್ದಿವೆ. ಅಧಿಕಾರಿಗಳು ಮನೆಯೊಳಗೆ ಪ್ರವೇಶ ಆಗ್ತಿದ್ದಂತೆ ಅಲಿಯ ಮುಖದಲ್ಲಿ ಭಯ ಸ್ವಲ್ಪ ಜೋರಾಗಿಯೇ ಇತ್ತಂತೆ. ಸ್ವಲ್ಪ ಸಮಯದ ಬಳಿಕ ಪಕ್ಕದ ಮನೆಯವನು ಅಲಿ ಮನೆ ಮುಂದೆ ಬಂದು ನಿಲುತ್ತಾನೆ.

ಅಲಿ ಮನೆಯ ಮಹಡಿದಿಂದ ಚಿನ್ನಾಭರಣ, ಕಂತೆ ಕಂತೆ ಹಣ ತುಂಬಿರೋ ಬ್ಯಾಗ್‌ ತಮ್ಮ ಮನೆಯ ಗೇಟ್‌ ಸಮೀಪ ಬಿದ್ದಿದೆ ಅಂತ ಅಧಿಕಾರಿಗಳಿಗೆ ಹೇಳ್ತಾನೆ. ತಕ್ಷಣವೇ ಎಚ್ಚೆತ್ತ ಅಧಿಕಾರಿಗಳು ಹೋಗಿ ಕೆ.ಜಿಗಟ್ಟಲೆ ಚಿನ್ನವಿದ್ದ ಬ್ಯಾಗ್​ನ​ ಎತ್ಕೊಂಡ್​ ಬರ್ತಾರೆ. ಅದರಲ್ಲಿ ಏನೇನ್‌ ಇದೆ ಅನ್ನೋದನ್ನ ತೆಗೆದು ನೋಡ್ತಿದ್ದಂಗೆ ದಂಗಾಗಿ ಹೋಗ್ತಾರೆ.

ಇದನ್ನೂ ಓದಿ: ಮಂಡ್ಯ ರೈತರಿಗೆ ಸಿಹಿ ಸುದ್ದಿ.. KRS ಡ್ಯಾಂಗೆ ಇಂದು ಒಳಹರಿವು ಭಾರೀ ಹೆಚ್ಚಳ; ಭರ್ತಿಯಾಗಲು ಇನ್ನೆಷ್ಟು ಬಾಕಿ? 

ಇದಾದ ಮೇಲೆ ಅಲಿಯ ಮನೆಯ ಇಂಚಿಂಚೂ ಜಾಗವನ್ನ ಜಾಲಾಡ್ತಾರೆ. ಆವಾಗ ಲೋಕಾಯುಕ್ತ ಅಧಿಕಾರಿಗಳ ಊಹೆಗೂ ನಿಲುಕದಷ್ಟು ಕಾಸ್ಟ್​ಲೀ ಐಟಮ್ಸ್, ಗೋಲ್ಡ್​ ಜುವೆಲರ್ಸ್​, ಫಾರಿನ್​ ಕರೆನ್ಸೀಸ್, ಅಸ್ತಿ ಪತ್ರಗಳು ಎಲ್ಲಾ ಸಿಗುತ್ತೆ. ಬಹುಶಃ ಬ್ಯಾಗ್‌ ಬಿಸಾಕಿ ಆಮೇಲೆ ಪಕ್ಕದ ಮನೆಯವ್ರಿಂದ ತಗೋಬಹುದು ಅನ್ನೋದು ಅಲಿಯ ಉದ್ದೇಶವಾಗಿತ್ತು ಅನ್ಸುತ್ತೆ. ಬಟ್, ಇವ್ನು ಅಂದುಕೊಂಡಿದ್ದೇ ಒಂದು ಆಗಿದ್ದೇ ಇನ್ನೊಂದು.

ಅತ್ಥರ್​ ಅಲಿ
ಕಾನೂನು ಮಾಪನ ಇಲಾಖೆ ಡೆಪ್ಯೂಟಿ ಕಂಟ್ರೋಲರ್
ಅತ್ಥರ್‌ ಅಲಿ ಬೆಂಗಳೂರು ಮೂಲದವರೇ ಆಗಿರೋ ಇವ್ರು ಕಾನೂನು ಮಾಪನ ಇಲಾಖೆಯಲ್ಲಿ ಡೆಪ್ಯೂಟಿ ಕಂಟ್ರೋಲರ್​ ಆಗಿ ಕೆಲಸ ಮಾಡ್ತಿದ್ದಾರೆ. ಆ ಇಲಾಖೆಯಲ್ಲಿ ಡೆಪ್ಯೂಟಿ ಕಂಟ್ರೋಲರ್ ಹುದ್ದೆಗೆ ಅಮ್ಮಮ್ಮಾ ಅಂದ್ರೆ ಒಂದು ಲಕ್ಷ ಚಿಲ್ಲರೆ ಸಂಬಳ ಬರಬಹುದು. ಹೆಚ್ಚಂದರೆ ವಾರ್ಷಿಕ ಆದಾಯ 15ರಿಂದ 20 ಲಕ್ಷ ರೂಪಾಯಿ ಇರಬಹುದು. ಇವ್ರಿಗೆ ಬರ್ತಿದ್ದ ಸಂಬಳದಲ್ಲಿ ಹೆಂಡ್ತಿ, ಮನೆ, ಮಕ್ಕಳು ಅಂತಾ ಎಲ್ಲವನ್ನೂ ಮೇಂಟೇನ್ ಮಾಡ್ಕೊಂಡು ನಿಯತ್ತಾಗಿ ದುಡಿದಿದ್ರೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಚಿನ್ನ, ಹಣ ಎಲ್ಲವನ್ನ ಸಂಪಾದನೆ ಮಾಡೋದಕ್ಕಾಗ್ತಿತ್ತಾ? ನೋವೇ ಅನ್ನೋ ಪಕ್ಕಾ ಮಾಹಿತಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿದೆ.

publive-image

ಅಲಿ ಚಿನ್ನದ ಕೋಟೆ!
ಕಂತೆ ಕಂತೆ ನೋಟು...₹25 ಲಕ್ಷ ನಗದು ಹಣ ಪತ್ತೆ!
ಚಿನ್ನದ ಬಳೆಗಳು, ನೆಕ್ಲೆಸ್‌, ಚೈನು...ಒಟ್ಟು 2.2 ಕೆಜಿ ಚಿನ್ನ!
ಬೆಳ್ಳಿ ಲೋಟ, ಪೂಜಾ ಸಾಮಗ್ರಿ.. ಒಟ್ಟು 2 KG ಬೆಳ್ಳಿ!
ಒಂದಲ್ಲ ಎರಡಲ್ಲ ಬರೋಬ್ಬರಿ 40ಕ್ಕೂ ಹೆಚ್ಚು ವಾಚ್‌!
ಡೈಮಂಡ್ ನೆಕ್ಲೆಸ್​ಗಳು... ವಿದೇಶಿ ನೋಟುಗಳು ಪತ್ತೆ!

ಇದೇ ನೋಡಿ ಅಥ್ಥರ್​ ಅಲಿಯ ಚಿನ್ನದ ಸಾಮ್ರಾಜ್ಯ... ಯಾವ ರಾಜಮನೆತನಕ್ಕೂ ಕಮ್ಮಿ ಇಲ್ಲದಷ್ಟು ಚಿನ್ನ, ವಜ್ರ, ಬೆಳ್ಳಿ ಐಟಮ್ಸ್​ ಒಬ್ಬ ಸರ್ಕಾರಿ ಅಧಿಕಾರಿಯ ಮನೆಯಲ್ಲಿ ಸಿಕ್ಕಿವೆ. ಇದರ ಜೊತೆಗೆ ಅಲಿ ಬೆಂಗಳೂರಿನಲ್ಲಿ ಸಾಕಷ್ಟು ಆಸ್ತಿ ಮಾಡಿದ್ದಾರೆ ಅನ್ನೋದೂ ಗೊತ್ತಾಗಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನೂ ವಶಕ್ಕೆ ಪಡ್ಕೊಂಡಿದ್ದಾರೆ. ಅವುಗಳ ಮೌಲ್ಯ ಅದೆಷ್ಟು ಕೋಟಿನೋ ಆ ಅಲ್ಲಾನೇ ಬಲ್ಲ. ಸದ್ಯ, ಅವುಗಳ ಪರಿಶೀಲನೆ ನಡೆಯುತ್ತಿದ್ದು, ಅಲಿಯ ಸಂಬಂಧಿಸಿದ ಭೂಮಿಗಳು ಯಾವ ಜಾಗದಲ್ಲಿವೆ, ಆ ಜಾಗಗಳ ಮೌಲ್ಯ ಎಷ್ಟು ಅನ್ನೋದನ್ನ ಪತ್ತೆ ಹಚ್ಚುವತ್ತ ಗಮನ ಹರಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment