/newsfirstlive-kannada/media/post_attachments/wp-content/uploads/2023/09/cctv-1.jpg)
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರೋದನ್ನ ವಿರೋಧಿಸಿ ಇಂದು ವಿವಿಧ ಸಂಘಟನೆಗಳು ಬೆಂಗಳೂರು ಬಂದ್‌ಗೆ ಕರೆ ನೀಡಿದೆ. ಕಾವೇರಿಗಾಗಿ ಹೋರಾಟ ನಡೆಯುತ್ತಿರುವಾಗ ಬಂದ್ ಬಿಸಿ ಸಾರ್ವಜನಿಕರಿಗೆ ತಟ್ಟಿದೆ. ಇದೇ ಸಂದರ್ಭದಲ್ಲಿ ಪ್ರತಿಭಟನೆ ಹೆಸರಲ್ಲಿ ಗೂಂಡಾಗಿರಿಗಳು ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಜಯನಗರದ ವಿವಿಧ ಹೋಟೆಲ್‌ಗಳಿಗೆ ನುಗ್ಗಿ ಕಿಡಿಗೇಡಿಗಳು ದಾಂಧಲೆ ನಡೆಸಿದ್ದಾರೆ.
/newsfirstlive-kannada/media/post_attachments/wp-content/uploads/2023/09/cctv-2.jpg)
ಕನ್ನಡ ಸಂಘಟನೆಗಳ ಶಾಲು ಧರಿಸಿ ಬಂದ ಇಬ್ಬರು ಯಾಕೆ ಹೋಟೆಲ್ ಮುಚ್ಚಿಲ್ಲವೆಂದು ಪ್ರಶ್ನಿಸಿದ್ದಾರೆ. ಬಳಿಕ ಹೋಟೆಲ್ ಒಳಗೆ ನುಗ್ಗಿ ಚೇರ್‌ಗಳನ್ನು ಎಸೆದು ದಾಂಧಲೆ ನಡೆಸಿದ್ದಾರೆ. ಜಯನಗರದ ಶ್ರೀ ಉಡುಪಿ ಹಬ್‌ನಲ್ಲಿ ಈ ಘಟನೆ ನಡೆದಿದ್ದು, ಹೋಟೆಲ್‌ನ ಗಾಜುಗಳು ಪೀಸ್, ಪೀಸ್ ಆಗಿವೆ.
/newsfirstlive-kannada/media/post_attachments/wp-content/uploads/2023/09/Bangalore-Hotel.jpg)
ಬೈಕ್‌ನಲ್ಲಿ ಬಂದ ಇಬ್ಬರಿಂದ ಈ ಕೃತ್ಯ ನಡೆದಿದ್ದು, ಜಯನಗರದ ಬೇರೆ ಬೇರೆ ಹೊಟೇಲ್‌ಗಳಲ್ಲೂ ದಾಂಧಲೆ ಮಾಡಿದ್ದಾರೆ ಎನ್ನಲಾಗಿದೆ. ಶಿವು ಮತ್ತು ವಿಶ್ವ ಎಂಬ ಸಂಘಟನೆ ಕಾರ್ಯಕರ್ತರಿಂದ ಈ ಕೃತ್ಯ ನಡೆದಿರೋ ಶಂಕೆ ವ್ಯಕ್ತವಾಗಿದೆ. ವೈಯುಕ್ತಿಕ ಕಾರಣದಿಂದ ಬಂದ್ ಹೆಸರಿನಲ್ಲಿ ಈ ದೌರ್ಜನ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.
Bengaluru Bandh : ಪ್ರತಿಭಟನೆ ಹೆಸರಲ್ಲಿ ಬೆಂಗಳೂರು ಹೋಟೆಲ್‌ಗಳಿಗೆ ನುಗ್ಗಿ ದಾಂಧಲೆ..#Newsfirstkannada#bangaloreband#CauveryBandh#CCTV#BengaluruBandh#ಬೆಂಗಳೂರುಬಂದ್#Jayanagar#CauveryWater#NewsFirstKannadapic.twitter.com/EGQPR8CSa5
— NewsFirst Kannada (@NewsFirstKan)
Bengaluru Bandh : ಪ್ರತಿಭಟನೆ ಹೆಸರಲ್ಲಿ ಬೆಂಗಳೂರು ಹೋಟೆಲ್‌ಗಳಿಗೆ ನುಗ್ಗಿ ದಾಂಧಲೆ..#Newsfirstkannada#bangaloreband#CauveryBandh#CCTV#BengaluruBandh#ಬೆಂಗಳೂರುಬಂದ್#Jayanagar#CauveryWater#NewsFirstKannadapic.twitter.com/EGQPR8CSa5
— NewsFirst Kannada (@NewsFirstKan) September 26, 2023
">September 26, 2023
ಇದನ್ನೂ ಓದಿ: ‘ಕರ್ನಾಟಕ ನೀರು ಬಿಡದಿದ್ರೆ ಇಲಿಗಳನ್ನ ತಿನ್ನಬೇಕಾಗುತ್ತೆ’- ಕಾವೇರಿಗಾಗಿ ತಮಿಳುನಾಡು ರೈತರ ಪ್ರೊಟೆಸ್ಟ್
/newsfirstlive-kannada/media/post_attachments/wp-content/uploads/2023/09/Bangalore-Hotel-Fight.jpg)
ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಿಡಿಗೇಡಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಕೇಸ್ ದಾಖಲಿಸಿರೋ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us