newsfirstkannada.com

ದೇವೇಗೌಡ್ರು ಕುಟುಂಬದಲ್ಲಿ ಬಂಧನ ಇದೇ ಮೊದಲು.. SIT ವಿಚಾರಣೆಯಲ್ಲಿ ರೇವಣ್ಣ ಕಣ್ಣೀರು; ಹೇಳಿದ್ದೇನು?

Share :

Published May 5, 2024 at 11:47am

    ಇಂದು ಕಿಡ್ನಾಪ್ ಪ್ರಕರಣದಲ್ಲಿ ರೇವಣ್ಣ ವಿಚಾರಣೆ ಆರಂಭಿಸಿದ SIT

    ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರ ಮನೆಯಲ್ಲಿ ವಶಕ್ಕೆ ಪಡೆದ ಎಸ್‌ಐಟಿ

    ಕಾನೂನು ಹೋರಾಟ ಎಂದಿದ್ದ ರೇವಣ್ಣ ಬಂಧನವಾದ ಮೇಲೆ ಬಾವುಕ

ಬೆಂಗಳೂರು: ಮಹಿಳೆಯ ಕಿಡ್ನಾಪ್‌ ಪ್ರಕರಣದಲ್ಲಿ ಜೆಡಿಎಸ್ ಶಾಸಕ, ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರ ಬಂಧನವಾಗಿದೆ. ನಿನ್ನೆ ಅವರನ್ನು ವಶಕ್ಕೆ ಪಡೆದಿರುವ ಎಸ್‌ಐಟಿ ಪೊಲೀಸರು ಇಂದು ಕಿಡ್ನಾಪ್ ಪ್ರಕರಣದಲ್ಲಿ ವಿಚಾರಣೆ ಆರಂಭಿಸಿದ್ದಾರೆ.

ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರ ಮನೆಯಲ್ಲಿ ವಶಕ್ಕೆ ಪಡೆದ ಎಸ್‌ಐಟಿ ತಂಡ ಹೆಚ್‌.ಡಿ ರೇವಣ್ಣ ಅವರನ್ನು ಸಿಐಡಿ ಕಚೇರಿಯಲ್ಲಿರಿಸಿದೆ. ಇಂದು ವಿಚಾರಣೆಗಾಗಿ 30ಕ್ಕೂ ಹೆಚ್ಚು ಪ್ರಶ್ನಾವಳಿಗಳನ್ನು ಸಿದ್ಧಪಡಿಸಲಾಗಿದೆ. ಎಸ್ಐಟಿ ವಿಚಾರಣೆಯಲ್ಲಿ ಹೆಚ್‌.ಡಿ ರೇವಣ್ಣ ಅವರು ಭಾವುಕರಾಗಿದ್ದು, ಅಧಿಕಾರಿಗಳು ಕೇಳಿದ ಕೆಲ ಪ್ರಶ್ನೆಗಳಿಗೆ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ರೇವಣ್ಣ ಅರೆಸ್ಟ್.. ಭಾರತದತ್ತ ಪ್ರಜ್ವಲ್​ ಮುಖ.. ಇಂದು​ ಬೆಂಗಳೂರಿಗೆ ​ರಿಟರ್ನ್​? 

ಕಿಡ್ನಾಪ್ ಪ್ರಕರಣದಲ್ಲಿ ಬಂಧನವಾದ ಬಳಿಕ ಎಸ್‌ಐಟಿ ಅಧಿಕಾರಿಗಳು ಸುತ್ತಲೂ ಕೂತು ಪ್ರಶ್ನಿಸ್ತಿರೋದಕ್ಕೆ ರೇವಣ್ಣ ಭಾವುಕರಾಗಿದ್ದಾರೆ. ಎಸ್.ಐ.ಟಿ ಅಧಿಕಾರಿಗಳ ಪ್ರಶ್ನೆಗಳಿಗೆ ತುಟಿ ಬಿಚ್ಚದ ರೇವಣ್ಣ ಮೌನಕ್ಕೆ ಶರಣಾಗಿದ್ದರು.

ಕಳೆದ 40-50 ವರ್ಷದಿಂದ ಎಲ್ಲಾ ರೀತಿಯ ಆರೋಪಗಳನ್ನು ಎದುರಿಸಿದ್ದೇವೆ. ಈ ಹಿಂದೆ ಸಿಒಡಿ, ಲೋಕಾಯುಕ್ತ ತನಿಖೆಯನ್ನ ಎದುರಿಸಿದ್ದೇವೆ. ಕಾನೂನು ಹೋರಾಟ ಮಾಡ್ತೀವಿ ಎಂದಿದ್ದ ರೇವಣ್ಣ ಅವರು ಬಂಧನವಾಗ್ತಿದ್ದಂತೆ ಮೌನಕ್ಕೆ ಶರಣಾಗಿದ್ದಾರೆ. ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರ ಕುಟುಂಬದ ವ್ಯಕ್ತಿ ಬಂಧನವಾಗಿರೋದು ಇದೇ ಮೊದಲು ಎನ್ನುತ್ತಾ ಅಧಿಕಾರಿಗಳ ಮುಂದೆ ರೇವಣ್ಣ ಭಾವುಕರಾಗಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇವೇಗೌಡ್ರು ಕುಟುಂಬದಲ್ಲಿ ಬಂಧನ ಇದೇ ಮೊದಲು.. SIT ವಿಚಾರಣೆಯಲ್ಲಿ ರೇವಣ್ಣ ಕಣ್ಣೀರು; ಹೇಳಿದ್ದೇನು?

https://newsfirstlive.com/wp-content/uploads/2024/05/revanna5.jpg

Load More