ಡೊನಾಲ್ಡ್ ಟ್ರಂಪ್ಗೆ ಟಕ್ಕರ್ ಕೊಡ್ತಾರಾ ಕಮಲಾ ಹ್ಯಾರಿಸ್
ಯುದ್ಧಕ್ಕೂ ಮುನ್ನವೇ ಶಸ್ತ್ರತ್ಯಾಗ ಮಾಡಿದ ಅಧ್ಯಕ್ಷ ಜೋ ಬೈಡನ್
ಭಾರತಕ್ಕೂ ಕಮಲಾ ಹ್ಯಾರಿಸ್ಗೂ ಇರುವ ನಂಟು ಏನು ಗೊತ್ತಾ?
ವಾಷಿಂಗ್ಟನ್: ವಿದೇಶಗಳಲ್ಲಿ ಈಗ ಭಾರತೀಯರದ್ದೇ ದರ್ಬಾರ್. ಗೂಗಲ್, ಮೈಕ್ರೋಸಾಫ್ಟ್ ಹೀಗೆ ಹತ್ತಾರು ಪ್ರಮುಖ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಯನ್ನು ಅಲಂಕರಿಸುವ ಮೂಲಕ ಭಾರತೀಯ ಮೂಲದವರು ಈ ದೇಶದ ಗರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯುತ್ತಿದ್ದಾರೆ. ಇದು ವಿದೇಶಿ ಸಂಸ್ಥೆಗಳ ಮಾತಾದ್ರು ಪಾಶ್ಚಿಮಾತ್ಯ ರಾಷ್ಟ್ರಗಳ ರಾಜಕಾರಣದಲ್ಲಿಯೂ ಭಾರತೀಯರು ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಅದಕ್ಕೆ ದೊಡ್ಡ ಸಾಕ್ಷಿಯಾಗಿ ನಿಂತಿದ್ದರು ರಿಷಿ ಸುನಕ್. ಇಂಗ್ಲೆಂಡಿನ ಪ್ರಧಾನಿ ಪಟ್ಟ ಅಲಂಕರಿಸಿ ಕೊನೆಗೆ ಮೊನ್ನೆ ನಡೆದ ಚುನಾವಣೆಯಲ್ಲಿ ಸೋಲುಂಡು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು. ಈಗ ಮತ್ತೊಬ್ಬ ಭಾರತೀಯ ಮೂಲದ ನಾರಿ ವಿಶ್ವದ ದೊಡ್ಡಣ್ಣ ಎಂದೇ ಕರೆಯಲ್ಪಡುವ ಅಮೆರಿಕಾದ ಗದ್ದುಗೆ ಏರಲು ಸಜ್ಜಾಗಿದ್ದಾರೆ. ಹೆಸರು ಕಮಲಾ ಹ್ಯಾರೀಸ್, ಸದ್ಯ ಅಮೆರಿಕಾದ ವೈಯ್ಸ್ ಪ್ರೆಸಿಡೆಂಟ್ ಅಂದ್ರೆ ಉಪಾಧ್ಯಕ್ಷ ಸ್ಥಾನದಲ್ಲಿರುವ ಕಮಲಾ ಹ್ಯಾರಿಸ್ ಬರುವ ಚುನಾವಣೆಯಲ್ಲಿ ಗೆದ್ದು ಅಮೆರಿಕಾದ ಗದ್ದುಗೆಯ ಮೇಲೆ ಕುಳಿತುಕೊಳ್ಳುವ ಸಮರಕ್ಕೆ ಸಜ್ಜಾಗಿದ್ದಾರೆ.
ಇದನ್ನೂ ಓದಿ: ಭಾರತ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಅಧ್ಯಕ್ಷರಾಗ್ತಾರಾ.. ಜೋ ಬೈಡನ್ ಹೇಳಿದ್ದೇನು?
ಯಾರು ಈ ಕಮಲಾ ಹ್ಯಾರಿಸ್? ಭಾರತಕ್ಕೂ ಇವರಿಗೂ ಇರೋ ನಂಟು ಏನು?
ಕಮಲಾ ಹ್ಯಾರಿಸ್ರನ್ನ ಸದ್ಯ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಜೋ ಬಿಡನ್ ಅಧ್ಯಕ್ಷ ಗಾದಿ ರೇಸ್ನಿಂದ ಹಿಂದೆ ಸರಿದಿದ್ದು, ಡೆಮಾಕ್ರಟಿಕ್ ಪಕ್ಷದಿಂದ ಸದ್ಯ ಕಮಲಾ ಹ್ಯಾರಿಸ್ ಹೆಸರು ಮುನ್ನೆಲೆಗೆ ಬಂದಿದೆ ಹಾಗೂ ಅವರನ್ನೇ ಅಧ್ಯಕ್ಷಗಿರಿ ಅಭ್ಯರ್ಥಿ ಎಂದು ಅಂತಿಮಗೊಳಿಸಲಾಗಿದೆ. ಈ ರಾಜಕೀಯ ಬೆಳವಣಿಗಳಳನ್ನು ತಿಳಿದುಕೊಳ್ಳುವ ಮೊದಲು, ಕಮಲಾ ಹ್ಯಾರಿಸ್ಗೂ ಭಾರತಕ್ಕೂ ಇರುವ ನಂಟು ಏನು ಅನ್ನೋದನ್ನ ನೋಡೋಣ.
ಇದನ್ನೂ ಓದಿ: ಮಹಿಳೆಗೆ ಕಿಸ್ ಮಾಡಲು ಹೋದ ಜೋ ಬೈಡನ್.. US ಪ್ರೆಸಿಡೆಂಟ್ ಕನ್ಫ್ಯೂಸ್ ಆಗಿದ್ದೆಲ್ಲಿ?
ಕಮಲಾ ಹ್ಯಾರಿಸ್ಗೂ ತಮಿಳುನಾಡಿನಲ್ಲಿರುವ ತುಳಸೇಂದ್ರಪುರಂ ಎಂಬ ಸಣ್ಣ ಹಳ್ಳಿಗೂ ಒಂದು ನಂಟಿದೆ. ಕಮಲಾ ಹ್ಯಾರಿಸ್ ಅವರ ತಾಯಿಯ ಕುಟುಂಬದ ಬೇರುಗಳು ಇದೇ ಹಳ್ಳಿಯೊಂದಿಗೆ ಬೆಸೆದುಕೊಂಡಿವೆ. ಚೆನೈನಿಂದ 320 ಕಿಲೋ ಮೀಟರ್ ದೂರದಲ್ಲಿರುವ ತುಳಸೇಂದ್ರಪುರದಲ್ಲಿ ಕಮಲಾ ಹ್ಯಾರಿಸ್ ಅವರ ಬಾಲ್ಯದ ಹೆಜ್ಜೆ ಗುರುತುಗಳಿವೆ. ಕಮಲಾ ಹ್ಯಾರಿಸ್ ಅವರ ತಾಯಿ ಇದೇ ಗ್ರಾಮದವರು. ಕಮಲಾ ತಮ್ಮ ಐದನೇ ವಯಸ್ಸಿನಲ್ಲಿದ್ದಾಗ ಒಮ್ಮೆ ಈ ಹಳ್ಳಿಗೆ ಭೇಟಿ ಕೂಡ ನೀಡಿದ್ದನ್ನು ಹಲವು ಬಾರಿ ಖುದ್ದು ಅವರೇ ನೆನಪಿಸಿಕೊಂಡಿದ್ದಾರೆ. ಚೆನ್ನೈ ಬೀಚ್ಗಳಲ್ಲಿ ಅವರು ಅಲೆದಾಡಿದ್ದನ್ನು ಕೂಡ ಜ್ಞಾಪಿಸಿಕೊಳ್ಳುತ್ತಾರೆ. ಅಮೆರಿಕಾದ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಆಯ್ಕೆಯಾದಾಗ ಈ ಹಳ್ಳಿಯಲ್ಲಿ ಹಬ್ಬವೇ ಸೃಷ್ಟಿಯಾಗಿತ್ತು. ಪಟಾಕಿ ಹೊಡೆದು ಸ್ವೀಟು ಹಂಚಿ ನಮ್ಮೂರಿನಲ್ಲಿ ಪುಟ್ಟ, ಪುಟ್ಟ ಹೆಜ್ಜೆಯಿಟ್ಟು ನಡೆದ ಮಗುವೊಂದು ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ರಾಷ್ಟ್ರಕ್ಕೆ ಉಪಾಧ್ಯಕ್ಷೆಯಾಗಿದ್ದಾಳೆ ಅಂತ ಸಂಭ್ರಮಿಸಿ ಸಿಹಿ ಹಂಚಿ ಖುಷಿ ಪಟ್ಟಿದ್ದರು.
ಇದನ್ನೂ ಓದಿ: BREAKING: ಅಮೆರಿಕ ಚುನಾವಣೆಗೆ ಅತಿ ದೊಡ್ಡ ಟ್ವಿಸ್ಟ್.. ರೇಸ್ನಿಂದ ಹಿಂದೆ ಸರಿದ ಅಧ್ಯಕ್ಷ ಜೋ ಬೈಡನ್; ಯಾಕೆ?
ಕಮಲಾ ತಾಯಿ ಶ್ಯಾಮಲಾ ಇದೇ ಹಳ್ಳಿಯವರು ಅವರು ಅಮೆರಿಕಾದಲ್ಲಿ ಕ್ಯಾನ್ಸರ್ ಸಂಶೋಧಕರು ಹಾಗೂ ಮಾನವ ಹಕ್ಕುಗಳ ಹೋರಾಟಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. 1962ರಲ್ಲಿ ಆಫ್ರೋ-ಅಮೆರಿಕಾ ಅಸೋಸಿಯೇಷನ್ನ ಒಂದು ಮೀಟಿಂಗ್ನಲ್ಲಿ ಅವರು ಜಮೈಕಾ ಮೂಲದ ಡೊನಾಲ್ಡ್ ಜೆ ಹ್ಯಾರಿಸ್ ಎಂಬುವವರನ್ನು ಭೇಟಿಯಾಗುತ್ತಾರೆ. ಸ್ಟಾನ್ಫಾರ್ಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿದ್ದರು. ಇವರ ಭೇಟಿ ಸ್ನೇಹವಾಗಿ ಸ್ನೇಹ ಪ್ರೇಮಕ್ಕೆ ತಿರುಗಿ 1963ರಲ್ಲಿ ಈ ಜೋಡಿ ವಿವಾಹವಾಗುತ್ತಾರೆ. ಕಮಲಾ ಮತ್ತು ಮಾಯಾ ಎಂಬ ಇಬ್ಬರು ಹೆಣ್ಣು ಮಕ್ಕಳು ಇವರ ಪ್ರೇಮದ ಗುರುತಾಗಿ ಜನ್ಮಿಸುತ್ತವೆ. ಅದೇ ಅಂದಿನ ಕಮಲಾ ಹ್ಯಾರಿಸ್ ಈಗ ಅಮೆರಿಕಾ ಅಧ್ಯಕ್ಷ ಸ್ಥಾನಕ್ಕೆ ಟ್ರಂಪ್ಗೆ ಪೈಪೋಟಿ ನೀಡುವ ಎತ್ತರಕ್ಕೆ ಬೆಳೆದಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂದು ಈಗಾಗಲೇ ಕಮಲಾ ಹ್ಯಾರಿಸ್ರನ್ನ ಪಕ್ಷವೂ ಘೋಷಿಸಿಯಾಗಿದೆ. ಇದೇ ವರ್ಷ ನವೆಂಬರ್ 5 ರಂದು ನಡೆಯಲಿರುವ ಚುನಾವಣೆಗೆ ಕಮಲಾ ಹ್ಯಾರೀಸ್ ಚುನವಣಾ ರಣಕಣದಲ್ಲಿ, ಮಾಜಿ ಅಧ್ಯಕ್ಷ ಟ್ರಂಪ್ ಅವರ ವಿರುದ್ಧ ಸೆಣಸಲಿದ್ದಾರೆ.
ಟ್ರಂಪ್ಗೆ ಟಕ್ಕರ್ ಕೊಡ್ತಾರಾ ಕಮಲಾ ಹ್ಯಾರಿಸ್..?
ಅಮೆರಿಕಾದ ಹಾಲಿ ಅಧ್ಯಕ್ಷ ಜೋ ಬಿಡನ್ ಯುದ್ಧಕ್ಕೂ ಮುನ್ನವೇ ಶಸ್ತ್ರತ್ಯಾಗ ಮಾಡಿದ್ದಾರೆ. ಚುನಾವಣಾ ರಣಕಣದಿಂದ ಜೋ ಬಿಡನ್ ಹಿಂದೆ ಸರಿದಿದ್ದಾರೆ, ಈಗಾಗಲೇ 82ನೇ ವಯಸ್ಸಿನಲ್ಲಿರುವ ಜೋ ಬಿಡನ್ ವಯಸ್ಸಿನ ಕಾರಣದಿಂದಾಗಿ ಚುನಾವಣ ಕಣದಿಂದ ಹಿಂದೆ ಸರಿದಿದ್ದಾರೆ. ಮತ್ತೊಂದು ಬಾರಿ ಅಮೆರಿಕಾದ ಅಧ್ಯಕ್ಷರಾಗುವ ಕನಸಿನಿಂದ ಹೊರ ಬಂದಿದ್ದಾರೆ. ಹೀಗಾಗಿ ಅವರ ಸ್ಥಾನಕ್ಕೀಗ ಅಮೆರಿಕಾದ ಉಪಾಧ್ಯಕ್ಷೆ ಸ್ಥಾನದಲ್ಲಿರುವ ಕಮಲಾ ಹ್ಯಾರಿಸ್ ಬಂದು ಕುಳಿತಿದ್ದಾರೆ. ನವೆಂಬರ್ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ನೇರಾನೇರ ಸಣೆದಾಟಕ್ಕೆ ಸಜ್ಜಾಗಿದ್ದಾರೆ. ಹಾಗಿದ್ರೆ ಕಮಲಾ ಹ್ಯಾರಿಸ್ ಟ್ರಂಪ್ ವಿರುದ್ದ ಸರಳವಾಗಿ ಗೆಲ್ಲುತ್ತಾರಾ? ಟ್ರಂಪ್ಗೆ ಚುನಾವಣೆಯಲ್ಲಿ ಮತ್ತೊಂದು ಬಾರಿ ಸೋಲುಣಿಸುವಲ್ಲಿ ಡೆಮಾಕ್ರಟಿಕ್ ಪಕ್ಷ ಮತ್ತೊಮ್ಮೆ ಯಶಸ್ವಿಯಾಗಲು ಕಮಲಾ ಹ್ಯಾರಿಸ್ ನಿರ್ಣಾಯಕ ಪಾತ್ರವಹಿಸಲಿದ್ದಾರಾ ಅಂತ ನೋಡಿದಾಗ ಬಹುತೇಕ ಹೌದು ಎಂಬ ಉತ್ತರವೇ ಮೂಲಗಳಿಂದ ಬರುತ್ತಿದೆ.
ಇದನ್ನೂ ಓದಿ: ಬೆಂಗಳೂರು IT ಉದ್ಯೋಗಿಗಳಿಗೆ 14 ಗಂಟೆ ಕೆಲಸ.. ಹೋರಾಟದ ಬಳಿಕ ರಾಜ್ಯ ಸರ್ಕಾರದ ನಿಲುವೇನು?
ಕೆಲವೇ ಕೆಲವು ದಿನಗಳ ಹಿಂದೆ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಹಂತಕನೊಬ್ಬ ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನ ಮಾಡಿದ್ದು ಎಲ್ಲರಿಗೂ ತಿಳಿದ ವಿಷಯವೇ. ಈ ದುರ್ಘಟನೆಯ ಬಳಿಕ ಡೊನಾಲ್ಡ್ ಟ್ರಂಪ್ ಮೇಲೆ ಅಮೆರಿಕಾದಾದ್ಯಂತ ಒಂದು ಅನುಂಕಪದ ಅಲೆ ಸೃಷ್ಟಿಯಾಗಿತ್ತು. ಇದೇ ಒಂದು ಹತ್ಯಾ ಯತ್ನದ ಪ್ರಯತ್ನ ಮುಂದೆ ಡೊನಾಲ್ಡ್ ಟ್ರಂಪ್ಗೆ ಅಧ್ಯಕ್ಷ ಗಾದಿಗೆ ಏರುವ ಹೆದ್ದಾರಿಯಾಗಿ ಪರಿಣಮಿಸಲಿದೆ ಎಂದೇ ಎಲ್ಲರೂ ಮಾತನಾಡಿದ್ದರು. ಯಾವಾಗ ಜೋ ಬೈಡನ್ ರೇಸ್ನಿಂದ ಹಿಂದೆ ಸರಿದು ಕಮಲಾ ಹ್ಯಾರಿಸ್ ಮುನ್ನೆಲೆಗೆ ಬಂದರೋ ಆವಾಗ ಇಡೀ ಆಟದ ದಿಕ್ಕೆ ಬದಲಾಗಿ ಹೋಯ್ತು. ಕಮಲಾ ಹ್ಯಾರಿಸ್ ಹಾಗೂ ಡೊನಾಲ್ಡ್ ಟ್ರಂಪ್ ನಡುವೆ ನೇರ ಚುನಾವಣಾ ಯುದ್ಧ ನಡೆದರೆ ಕಮಲಾ ಗೆಲ್ಲುವುದು ಪಕ್ಕಾ ಅಂತಿವೆ ಹಲವು ಎಕ್ಸಿಟ್ ಪೋಲ್ಗಳು.
ಇತ್ತೀಚೆಗೆ ನ್ಯೂಯಾರ್ಕ್ ಟೈಮ್ಸ್ ನಡೆಸಿದ ಎಕ್ಸಿಟ್ ಪೋಲ್ನಲ್ಲಿ ಕಮಲಾ ಹ್ಯಾರಿಸ್ ಪೆನ್ಸಿಲ್ವೆನಿಯಾ ಹಾಗೂ ವರ್ಜಿನಿಯಾದಲ್ಲಿ ಕಮಲಾ ಹ್ಯಾರಿಸ್ಗೆ ಭಾರೀ ಮುನ್ನಡೆ ಸಿಗಲಿದೆ ಅನ್ನೋದು ಸ್ಪಷ್ಟವಾಗಿದೆ. ಪ್ರಮುಖವಾಗಿ ಬ್ಲ್ಯಾಕ್ ವೋಟ್ಸ್ ಅಂದ್ರೆ ಕಪ್ಪು ವರ್ಣದವರ ಮತಗಳು ಕಮಲಾ ಹ್ಯಾರಿಸ್ ಬುಟ್ಟಿಗೆ ಸರಳವಾಗಿ ಬೀಳಲಿವೆ ಅನ್ನೊದು ನ್ಯೂಯಾರ್ಕ್ ಪೋಲ್ನಲ್ಲಿ ಕಂಡು ಬಂದಿದೆ. ಅಷ್ಟು ಮಾತ್ರವಲ್ಲ ಕಮಲಾ ಹ್ಯಾರಿಸ್ ಭಾರತೀಯ ಮೂಲದವರು ಅನ್ನೋದು ಕೂಡ ನಿರ್ಣಾಯಕ ಪಾತ್ರವನ್ನು ವಹಿಸಲಿದೆ. ಯುಎಸ್ನಲ್ಲಿ ಸುಮಾರು ಶೇಕಡಾ 2 ರಷ್ಟು ಭಾರತೀಯ ಅಮೆರಿಕನ್ನರಿದ್ದಾರೆ. ಈ ವೋಟ್ಗಳು ಕೂಡ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸಲಿವೆ. ಕಮಲಾ ಹ್ಯಾರಿಸ್ ಕೂಡ ಭಾರತದ ನಂಟು ಹೊಂದಿರುವುದರಿಂದ ಒಂದು ಭಾವನಾತ್ಮಕ ಬೆಸುಗೆಯೂ ಕೂಡ ಇಲ್ಲಿ ವರ್ಕೌಟ್ ಆಗುವ ಚಾನ್ಸ್ ಇದೆ.
ಇನ್ನೂ ಫಾಕ್ಸ್ ನ್ಯೂಸ್ ನಡೆಸಿದ್ದ ಸರ್ವೇಯಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಜೋ ಬಿಡನ್ಗೆ ನಡುವಿನ ಚುನಾವಣೆ ನಡೆದ್ರೆ ಟ್ರಂಪ್ಗೆ ಶೇಕಡಾ 49ಷ್ಟು ಪಾಯಿಂಟ್ಸ್ ಬಂದಿದ್ರೆ, ಬಿಡನ್ಗೆ 48 ರಷ್ಟು ಪಾಯಿಂಟ್ ಬಂದಿದ್ದವು. ಅದೇ ಆಟ ಬದಲಾದಾಗ ನಡೆದ ಸರ್ವೆಯಲ್ಲಿಯೂ ಕೂಡ ಅದೇ ಪಾಯಿಂಟ್ ರಿಪೀಟ್ ಆಗಿದೆ. ಟ್ರಂಪ್ಗೆ ಶೇಕಡಾ 49ರಷ್ಟು ಪಾಯಿಂಟ್ಸ್ ಬಂದ್ರೆ ಹ್ಯಾರಿಸ್ಗೆ 48ರಷ್ಟು. ಇದು ಇದೀಗಷ್ಟೇ ಆರಂಭವಾದ ಯುದ್ಧ ಹೀಗಾಗಿ ರಣಕಣದ ಕಾವು ಮುಂದೆ ಬದಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದ್ರೆ ಟ್ರಂಪ್ ಮಾತ್ರ ನಾನು ಕಮಲಾ ಹ್ಯಾರಿಸ್ರನ್ನ ಅತ್ಯಂತ ಸುಲಭವಾಗಿ ಸೋಲಿಸುತ್ತೇನೆ ಎಂದೇ ಹೇಳುತ್ತಿದ್ದಾರೆ. ಇವೆಲ್ಲವುಗಳಿಗೂ ಸ್ಪಷ್ಟ ಉತ್ತರ ನವೆಂಬರ್ 5ರ ಬಳಿಕವೇ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ