ಇದು ಭಾರತದ ಅತ್ಯಂತ ವಿಶೇಷವಾದ ಗ್ರಾಮ.. ಒಬ್ಬ ಪುರಷನಿಗೆ ಇಬ್ಬರು ಪತ್ನಿಯರು ಕಡ್ಡಾಯ! ಕಾರಣವೇನು ಗೊತ್ತಾ?

author-image
Gopal Kulkarni
Updated On
ಇದು ಭಾರತದ ಅತ್ಯಂತ ವಿಶೇಷವಾದ ಗ್ರಾಮ.. ಒಬ್ಬ ಪುರಷನಿಗೆ ಇಬ್ಬರು ಪತ್ನಿಯರು ಕಡ್ಡಾಯ! ಕಾರಣವೇನು ಗೊತ್ತಾ?
Advertisment
  • ದೇಶದ ಈ ಒಂದು ಗ್ರಾಮದಲ್ಲಿ ಇದೆ ವಿಶೇಷ ಹಾಗೂ ವಿಚಿತ್ರ ಪದ್ಧತಿ
  • ಈ ಗ್ರಾಮದ ಪ್ರತಿ ಪುರುಷನು ಎರಡು ಮದುವೆಯಾಗುವುದು ಕಡ್ಡಾಯ
  • ಒಬ್ಬ ವ್ಯಕ್ತಿ ಎರಡು ಮದುವೆಯಾಗುವುದರ ಹಿಂದಿದೆ ವಿಚಿತ್ರ ಕಾರಣ!

ಭಾರತ ಅಂದ್ರೆನೇ ವೈವಿದ್ಯತೆಗೆ, ವಿವಿಧತೆಗೆ ಒಂದು ನಿದರ್ಶನ. ಇಲ್ಲಿ ಪ್ರತಿ 50 ಕಿಲೋಮೀಟರ್​ಗೆ ಮಾತನಾಡುವ ಭಾಷೆ, ನೀರು, ಆಹಾರ ಹಾಗೂ ಬದುಕು ಪರಂಪರೆ ಬೇರೆ ಬೇರೆಯಾಗಿರುತ್ತವೆ. ಪ್ರತಿ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮಗಳು ಕೂಡ ತನ್ನದೇ ಆದ ವಿಶೇಷ ರೀತಿ ನೀತಿಗಗಳನ್ನು ಹೊಂದಿರುತ್ತದೆ. ಅದರಲ್ಲೂ ಕೆಲವೊಂದು ಯಾವ ಮಟ್ಟಿಗೆ ಇರುತ್ತವೆ ಅಂದ್ರೆ ಅಲ್ಲಿಯ ರೀತಿ ರಿವಾಜುಗಳನ್ನು ಕೇಳಿಯೇ ಮನುಷ್ಯ ಹೈರಾಣಾಗಿ ಹೋಗುತ್ತಾನೆ. ಅಂತಹುದೇ ಒಂದು ವಿಚಿತ್ರ ಸಂಪ್ರದಾಯವಿರುವ ಒಬ್ಬ ಪುರುಷನಿಗೆ ಇಬ್ಬರು ಪತ್ನಿಯರು ಕಡ್ಡಾಯವಾಗಿರುವ ಒಂದು ಗ್ರಾಮದ ಕಥೆಯನ್ನು ಇಂದು ನಾವು ನಿಮಗೆ ಇಲ್ಲಿ ಹೇಳಲಿದ್ದೇವೆ.

ಭಾರತದ ಕಾನೂನು ಪ್ರಕಾರ ಹಾಗೂ ಹಿಂದೂ ಕೋಡ್​ ಬಿಲ್​ ನಲ್ಲಿ ಉಲ್ಲೇಖವಾಗಿರುವ ಪ್ರಕಾರ ಒಬ್ಬ ವ್ಯಕ್ತಿ ಒಂದಕ್ಕಿಂತಹ ಹೆಚ್ಚು ವಿವಾಹವನ್ನು ಏಕಕಾಲಕ್ಕೆ ಆಗುವಂತಿಲ್ಲ. ಮೊದಲ ಪತ್ನಿಗೆ ವಿಚ್ಛೇದನ ನೀಡಿಯೇ ಎರಡನೇ ವಿವಾಹವಾಗಬೇಕು ಅಂತ ಕಾನೂನು ಇದೆ. ಆದ್ರೆ ರಾಜಸ್ಥಾನದ ಜೈಸಲ್ಮೇರ್​ ಜಿಲ್ಲೆಯಯಲ್ಲಿ ಒಂದು ಗ್ರಾಮವಿದೆ. ಇಲ್ಲಿ ಪ್ರತಿಯೊಬ್ಬ ಪುರಷನಿಗೂ ಇಬ್ಬರು ಪತ್ನಿಯರು ಇದ್ದಾರೆ.

publive-image

ಈ ವಿಶಿಷ್ಟ ಹಾಗೂ ವಿಚಿತ್ರ ನೀತಿಯನ್ನು ಹೊಂದಿರುವ ಗ್ರಾಮದ ಹೆಸರು ರಾಮದೇಯೋ ಕಿ ಬಸ್ತಿ ಎಂದು ಕರೆಯಲಾಗುತ್ತದೆ. ಈ ಗ್ರಾಮದ ಬಹುತೇಕ ಪುರುಷರು ಎರಡೆರಡು ಮದುವೆಯಾಗಿದ್ದಾರೆ. ಮೂಲತಃ ಭಾರತದಲ್ಲಿ ಸವತಿಯರು ಒಟ್ಟಾಗಿ ಬಾಳುವುದು ಕಡಿಮೆ. ಒಂದೇ ಮನೆಯಲ್ಲಿ ಒಬ್ಬನೇ ಪತಿಯೊಂದಿಗೆ ಇರುವುದು ಸಾಧ್ಯವೇ ಇಲ್ಲದಂತಹ ಮಾತು. ಆದ್ರೆ ಇಲ್ಲಿ ಉಭಯ ಪತ್ನಿಯರು ಕೂಡ ತನ್ನ ಗಂಡನೊಂದಿಗೆ ಒಟ್ಟಾಗಿ ಸಂಸಾರ ಮಾಡುತ್ತಾರೆ.

ಇದನ್ನೂ ಓದಿ:ಹೋಳಿ ದಿನ ಈ ಊರಲ್ಲಿ ಗಂಡಸರು ಇರಂಗೇ ಇಲ್ಲ, ಇದ್ದರೆ ಅವರ ಕತೆ ಮಗೀತು ಅಷ್ಟೇ..!

ಒಬ್ಬನೇ ವ್ಯಕ್ತಿಯ ಇಬ್ಬರು ಪತ್ನಿಯರು ಜೊತೆಯಲ್ಲಿ ಖುಷಿ ಖುಷಿಯಾಗಿಯೇ ಇರುತ್ತಾರೆ. ಒಂದೇ ಮನೆಯಲ್ಲಿ ಇರುತ್ತಾರೆ. ಈ ಗ್ರಾಮದ ಜನರು ಹೇಳುವ ಪ್ರಕಾರ ಇಲ್ಲಿ ಮದುವೆಯಾದ ಮಹಿಳೆಯರು ಪತಿಯ ವಿಚಾವರನ್ನಿಟ್ಟುಕೊಂಡು ಎಂದಿಗೂ ಕೂಡ ಜಗಳವಾಡುವುದಿಲ್ಲವಂತೆ.ಇಲ್ಲಿ ಒಬ್ಬ ಪುರುಷ ಎರಡು ಮದುವೆಯಾಗುವುದು ಕಡ್ಡಾಯ. ಅದರ ಹಿಂದೆ ಒಂದು ವಿಚಿತ್ರ ಕಾರಣವಿದೆ. ಈ ಗ್ರಾಮದ ಹಿಂದಿನ ಹಿರಿಯರಿಂದ ಬಂದ ನಂಬಿಕೆಯೆಂದರೆ ಈ ಗ್ರಾಮದಲ್ಲಿ ಮೊದಲ ಮದುವೆಯಾದ ಪತ್ನಿಯಿಂದ ಸಂತಾನ ಪ್ರಾಪ್ತಿಯಾಗುವುದಿಲ್ಲ. ಹೀಗಾಗಿ ಎಲ್ಲರೂ ಎರಡನೇ ಮದುವೆಯಾಗಬೇಕು ಎಂದು ಒಂದು ನೀತಿಯನ್ನು ರೂಪಿಸಿದ್ದಾರೆ. ಒಂದು ವೇಳೆ ಮೊದಲ ಪತ್ನಿಗೆ ಸಂತಾನವಾದರೂ ಅದು ಹೆಣ್ಣು ಮಗು ಆಗಿರುತ್ತದೆ. ಹೀಗಾಗಿ ಪುತ್ರ ಪ್ರಾಪ್ತಿಗೆ ಹಾಗೂ ವಂಶೋದ್ಧಾರಕ್ಕೆ ಎರಡನೇ ಮದುವೆಯಾಗಬೇಕು ಎಂದು ಹೇಳಿದ್ದಾರೆ. ಅಂದಿನಿಂದ ಇಂದಿನವರೆಗೂ ಈ ಗ್ರಾಮದಲ್ಲಿ ಪ್ರತಿಯೊಬ್ಬ ಪುರುಷನು ಇಬ್ಬರು ಪತ್ನಿಯರನ್ನು ಹೊಂದಿದ್ದಾರೆ .

ಇದನ್ನೂ ಓದಿ:20 ವರ್ಷ ಹಿಂದಿನ ನಟಿ ಸೌಂದರ್ಯ ಸಾವಿನ ಕೇಸ್‌ಗೆ ಬಿಗ್ ಟ್ವಿಸ್ಟ್.. ಪತಿ ರಘು ಬಿಚ್ಚಿಟ್ಟ ಸತ್ಯವೇನು?

ಆದ್ರೆ ಇತ್ತೀಚೆಗೆ ಈ ಒಂದು ಪರಂಪರೆ ಕುಸಿದು ಬೀಳುತ್ತಿದೆ. ಹೊಸ ತಲೆಮಾರಿನ ಯುವಕರು ಹಳೆಯ ಸಂಪ್ರದಾಯವನ್ನು ತಿರಸ್ಕರಿಸಿ ಏಕಪತ್ನಿವೃತಸ್ತರಾಗಿ ಬಾಳುತ್ತಿದ್ದಾರೆ. ಮೊದಲನೇ ಪತ್ನಿಯಿಂದ ಹೆಣ್ಣಾಗಲಿ ಗಂಡಾಗಲಿ ಯಾವುದೇ ಮಗುವಾದರೂ ಪರವಾಗಿಲ್ಲ. ನಾವು ಅದನ್ನೇ ಪ್ರೀತಿಯಿಂದ ಸಾಕುತ್ತೇವೆ ಎಂಬ ಮನಸ್ಥಿತಿಗೆ ಬಂದಿದ್ದು. ಇತ್ತೀಚೆಗೆ ಈ ಗ್ರಾಮದಲ್ಲಿ ಪುರುಷರು ಎರಡನೇ ಮದುವೆಯಾಗುವ ಸಂಪ್ರದಾಯ ಕಡಿಮೆಯಾಗುತ್ತಾ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment