Advertisment

ಭಾರತದಲ್ಲಿ ಮೊಟ್ಟ ಮೊದಲು ಸೂರ್ಯೋದಯ ಆಗುವುದು ಯಾವ ಗ್ರಾಮದಲ್ಲಿ? ಇಲ್ಲಿದೆ ವಿಶೇಷ ಮಾಹಿತಿ!

author-image
Gopal Kulkarni
Updated On
ಭಾರತದಲ್ಲಿ ಮೊಟ್ಟ ಮೊದಲು ಸೂರ್ಯೋದಯ ಆಗುವುದು ಯಾವ ಗ್ರಾಮದಲ್ಲಿ? ಇಲ್ಲಿದೆ ವಿಶೇಷ ಮಾಹಿತಿ!
Advertisment
  • ಭಾರತದ ಈ ಒಂದು ಗ್ರಾಮದಲ್ಲಿ ಮೊದಲು ಉದಯಿಸುತ್ತಾನೆ ಸೂರ್ಯ
  • ಉಳಿದ ಪ್ರದೇಶಗಳಲ್ಲಿ ಕತ್ತಲೆ ಆವರಿಸಿಕೊಂಡಾಗ ಇಲ್ಲಿ ಚುಮುಚುಮು ಬೆಳಕು
  • ಭಾರತದ ಯಾವ ರಾಜ್ಯದಲ್ಲಿದೆ ಮೊದಲು ಸೂರ್ಯೋದಯ ಕಾಣುವ ಗ್ರಾಮ

ಸೂರ್ಯೋದಯ, ನಿತ್ಯ ಹೊಸ ಭರವಸೆಯನ್ನು ನೀಡುವ ಮೊದಲ ಕಿರಣ. ಪ್ರತಿ ಸೂರ್ಯೋದಯವು ಬದುಕಿನ ಹೊಸ ದಿನದ ಪರಿಚಯ, ಹೊಸ ಅನುಭವದ ಮೊದಲ ಕಿರಣವಾಗಿ ಭೂಮಿಯ ಮೇಲೆ ಬೀಳುತ್ತದೆ. ಇಡೀ ಪ್ರಕೃತಿ ಚಲನಶೀಲಗೊಳ್ಳಲು ಸೂರ್ಯೋದಯದಿಂದಲೇ, ಹೂವು ಅರಳುವುದರಿಂದ ಹಿಡಿದು ಹಕ್ಕಿಗಳ ಚಿಲಿಪಿಲಿಗಳಿಗೆ ಚೈತನ್ಯ ತಂದುಕೊಡುವ ಸೂರ್ಯೋದಯವನ್ನು ಕಣ್ತುಂಬಿಕೊಳ್ಳುವುದೇ ಒಂದು ಅದ್ಭುತ ಸಂಗತಿ. ಪೂರ್ವದ ತುತ್ತತುದಿಯಿಂದ ಮೆಲ್ಲಗೆ  ರಾಗರತಿಯ ನಂಜು ಏರಿಸಿಕೊಂಡು ಬರುವ ಸೂರ್ಯ, ಇಬ್ಬನಿಗಳನ್ನು ಹನಿಯಾಗಿಸಿ, ಮೊಗ್ಗುಗಳನ್ನು ಹೂವಾಗಿಸಿ ಇಡೀ ಭೂಮಿಗೆ ನಿತ್ಯ ಹೊಸ ಚೈತನ್ಯವನ್ನು ಒದಗಿಸುತ್ತಾನೆ. ಇಂತಹ ಅದ್ಭುತ ಸೂರ್ಯೋದಯವನ್ನು ಮೊಟ್ಟ ಮೊದಲು ಕಣ್ತುಂಬಿಕೊಳ್ಳುವ ಭಾರತದ ಆ ಗ್ರಾಮ ಯಾವುದು ಗೊತ್ತಾ? ಭಾರತದ ಈ ಗ್ರಾಮದಲ್ಲಿಯೇ ಮೊಟ್ಟ ಮೊದಲು ಸೂರ್ಯೋದಯ ಕಾಣಿಸಿಕೊಳ್ಳುತ್ತದೆ. ಭಾರತದ ಪೂರ್ವ ದಿಕ್ಕಿನಲ್ಲಿರುವ ರಾಜ್ಯದ ಈ ಗ್ರಾಮಕ್ಕೆ ಸೂರ್ಯ ಆ ಸೌಭಾಗ್ಯ ಕಲ್ಪಿಸಿದ್ದಾನೆ.

Advertisment

ಇದನ್ನೂ ಓದಿ:ದರ್ಪ, ಧಿಮಾಕಿನ ಪರಮಾವಧಿ.. ಲಾಲು ಪುತ್ರನ ಆವಾಜ್‌ಗೆ ಹೆದರಿದ ಪೊಲೀಸ್; ವಿಡಿಯೋ ಫುಲ್ ವೈರಲ್‌!

ಆದರೆ ಒಂದಂತೂ ಸ್ಪಷ್ಟವಾಗಿ ಹೇಳಬಹುದು, ಭಾರತದಲ್ಲಿ ಮೊದಲು ಸೂರ್ಯೋದಯ ಕಾಣುವ ಗ್ರಾಮ ಯಾವುದು ಎಂಬುದು ದೇಶದ ಸುಮಾರು ಶೇಕಡಾ 99 ರಷ್ಟು ಜನರಿಗೆ ಗೊತ್ತೇ ಇಲ್ಲ. ಈ ಒಂದು ಗ್ರಾಮ ಭಾರತದ ಪೂರ್ವೋತ್ತರ ರಾಜ್ಯವಾದ ಅರುಣಾಚಲ ಪ್ರದೇಶದಲ್ಲಿ ಇದೆ. ಅರುಣಾಚಲಪ್ರದೇಶದ ಅಂಜಾವಾ ಜಿಲ್ಲೆಯ ಡೋಂಗಾ ಎಂಬ ಗ್ರಾಮದಲ್ಲಿ ಸೂರ್ಯ ಮೊದಲು ಉದಯಿಸುತ್ತಾನೆ.

publive-image

ಒಂದು ವಿಚಾರ ನೋಡುವುದಾದ್ರೆ ಅರುಣಾಚಲ ಪ್ರದೇಶ ಭಾರತದ ಪೂರ್ವ ಭಾಗದಲ್ಲಿ ಇರುವುದರ ಜೊತೆಗೆ ಮೆರಿಡಿಯನ್ ರೇಖೆಯ ಅತ್ಯಂತ ಸಮೀಪವು ಇದೆ. ಇದೇ ಕಾರಣದಿಂದ ಭಾರತದ ಹಲವು ಪ್ರದೇಶಗಳಲ್ಲಿ ರಾತ್ರಿ ಛಾಯೆ ಆವರಿಸಿರುವ ವೇಳೆಯಲ್ಲಿ ಡೋಂಗಾ ಗ್ರಾಮದಲ್ಲಿ ಸೂರ್ಯ ಪೂರ್ವ ದಿಕ್ಕಿನಲ್ಲಿ ಮೆಲ್ಲಗೆ ಮೇಲೆದ್ದು ಬರುತ್ತಾನೆ.

Advertisment

ಇದನ್ನೂ ಓದಿ:ಯಾರಿದು ಲೆಕ್ಸ್ ಫ್ರಿಡ್ಮನ್​? AI ಸಂಶೋಧಕನೊಂದಿಗೆ ಪ್ರಧಾನಿ ಮೋದಿಯವರ 3 ಗಂಟೆಗಳ ಮಾತುಕತೆ!

ಅರುಣಾಚಲ ಪ್ರದೇಶವೆಂಬ ಸೌಂದರ್ಯ ರಾಶಿಯನ್ನು ಹೊತ್ತುಕೊಂಡು ನಿಂತಿರುವ ರಾಜ್ಯದಲ್ಲಿ ಅಷ್ಟೇ ಸೌಂದರ್ಯದ ಕಳೆಯನ್ನು ಹೊಂದಿರುವ ಗ್ರಾಮ ಈ ಡೋಂಗಾ ಗ್ರಾಮ. ಇದನ್ನು ಭಾರತದ ಸೂರ್ಯೋದಯದ ಭೂಮಿಯೆಂದು ಕೂಡ ಕರೆಯುತ್ತಾರೆ.

publive-image

ಈ ಒಂದು ಗ್ರಾಮದಲ್ಲಿ ಸೃಷ್ಟಿಯಾಗುವ ಮೊದಲ ಸೂರ್ಯೋದಯವನ್ನು ನೋಡಲು ಜನರು ದೇಶ ವಿದೇಶದಿಂದ ಹರಿದು ಬರುತ್ತಾರೆ. ಸಮುದ್ರಮಟ್ಟದಿಂದ ಸುಮಾರು 1240 ಮೀಟರ್ ಎತ್ತರದಲ್ಲಿರುವ ಈ ಗ್ರಾಮಕ್ಕೆ ಬರುವ ಜನರು ಸೂರ್ಯೋದಯ ಕಣ್ತುಂಬಿಕೊಳ್ಳಲು ನಡುರಾತ್ರಿ 3 ಗಂಟೆಗೆ ಚಾರಣ ಮಾಡಲು ಆರಂಭಿಸುತ್ತಾರೆ. ನಿಮಗೆ ಈ ಒಂದು ಮಾತನ್ನು ಕೇಳಿ ಗಾಬರಿ ಆಗಬಹುದು ಮುಂಜಾನೆ ಸುಮಾರು 5 ಗಂಟೆಗೆನೇ ಇಲ್ಲಿ ಸೂರ್ಯ ಉದಯಿಸುತ್ತಾನೆ. ಸಂಜೆ ಐದು ಗಂಟೆಯ ವೇಳೆಗೆ ಸೂರ್ಯಾಸ್ತವಾಗಲು ಆರಂಭವಾಗುತ್ತದೆ.

Advertisment

publive-image

ಆದ್ರೆ ಒಂದು ವಿಷಯವನ್ನು ಇಲ್ಲಿ ಗಮನಿಸಬೇಕು. ಇಲ್ಲಿಗೆ ಚಾರಣಕ್ಕೆಂದು ಬರುವ ಪ್ರವಾಸಿಗರಿಗೆ ಹಲವು ನಿರ್ಬಂಧಗಳಿವೆ. ಸೂರ್ಯೋದಯ ಕಾಣುವ ಬೆಟ್ಟದ ತುತ್ತತುದಿಗೆ ಹೋಗಿ ಅವರು ನಿಲ್ಲಬಹುದು. ಆದ್ರೆ ಯಾವುದೇ ಕಾರಣಕ್ಕೂ ಡೋಂಗಾ ಗ್ರಾಮ ಹಾಗೂ ಅದರ ಸುತ್ತಮುತ್ತಲಿನ ಗ್ರಾಮಗಳ ಒಳಗೆ ಪ್ರವೇಶವಿಲ್ಲ. ಕಾರಣ ಅಲ್ಲಿ ಆದಿವಾಸಿ ಜನಗಳು ನೆಲೆಸಿರುತ್ತಾರೆ. ಹೀಗಾಗಿ ಸಾಮಾನ್ಯ ಜನರಿಗೆ ಈ ಗ್ರಾಮಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಪ್ರವಾಸಿಗರು ಅರುಣಾಚಲ ಪ್ರದೇಶದಲ್ಲಿ ಪ್ರವೇಶ ಪಡೆಯಬೇಕಾದರೆ ಇನ್ನರ್ ಲೈನ್ ಪರ್ಮಿಟ್​ ಪಡೆದುಕೊಳ್ಳುವುದು ಅನಿವಾರ್ಯ. ಈ ಒಂದು ಪರವಾನಿಗೆ ಅರುಣಾಚಲಪ್ರದೇಶದ ಸರ್ಕಾರವೇ ನೀಡುತ್ತದೆ ಮತ್ತು ಹಲವು ಷರತ್ತುಗಳನ್ನು ವಿಧಿಸುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment