newsfirstkannada.com

ರಾಮ ಮಂದಿರ ಉದ್ಘಾಟನೆ ಮೇಲೆ ಉಗ್ರರ ಕರಿನೆರಳು; ಮೂವರು ಶಂಕಿತರು ಅರೆಸ್ಟ್​!

Share :

Published January 20, 2024 at 6:07am

    ಆಡಿಯೋ ಬಗ್ಗೆ ತನಿಖೆ ನಡೆಸುತ್ತಿರುವ ಭದ್ರತಾ ಸಂಸ್ಥೆಗಳು

    ಯುನೈಟೆಡ್​ ಕಿಂಗ್​ಡಮ್​ನಿಂದ ಆಡಿಯೋ ಸಂದೇಶ ರವಾನೆ

    ಆಡಿಯೋ ರೆಕಾರ್ಡ್​ ಮಾಡಿ ಯೋಗಿ ಆದಿತ್ಯನಾಥ್​ಗೆ ಸಂದೇಶ

ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಮೇಲೆ ಉಗ್ರರ ಕರಿಛಾಯೆ ಆವರಿಸಿದೆ. ರಾಮನೂರಿನಲ್ಲಿ ವಿದ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿರುವ ವಾಸನೆ ಸಿಗುತ್ತಿದ್ದಂತೆ ಅಲರ್ಟ್​ ಆದ ಭಯೋತ್ಪಾದಕ ನಿಗ್ರಹ ದಳ ಮೂವರು ಅನುಮಾನಾಸ್ಪದ ವ್ಯಕ್ತಿಗಳ ಬಂಧಿಸಿ ವಿಚಾರಣೆಗೊಳಪಡಿಸಿದೆ. ಇನ್ನು ಖಲಿಸ್ತಾನಿ ಉಗ್ರ ಯೋಗಿ ಆದಿತ್ಯನಾಥ್​ಗೆ ಬೆದರಿಕೆ ಹಾಕಿದ್ದು, ಅಯೋಧ್ಯೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಶ್ರೀರಾಮ ಮಂದಿರ ಉದ್ಘಾಟನೆಯ ಮೇಲೆ ಉಗ್ರರ ಕರಿನೆರಳು
ಭಯೋತ್ಪಾದಕ ನಿಗ್ರಹ ದಳದ ಬಲೆಗೆ ಬಿದ್ದ ಮೂವರು ಶಂಕಿತರು

ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಸಂಭ್ರಮ ಸಡಗರ ಮನೆ ಮಾಡಿದೆ. ಕೋಟ್ಯಂತರ ಹಿಂದೂಗಳ ಶತಮಾನದ ಆಸೆ, ಇನ್ನು ಮೂರು ದಿನಗಳಲ್ಲಿ ಈಡೇರಲಿದೆ. ಆದ್ರೆ ಈ ಸಡಗರ ನಡುವೆ ರಾಮ ಮಂದಿರ ಲೋಕಾರ್ಪಣೆ ಮೇಲೆ ಉಗ್ರರ ಕರಿಛಾಯೆ ಮೂಡಿದೆ. ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ಈ ನಡುವಲ್ಲೇ ಭಯೋತ್ಪಾದಕ ನಿಗ್ರಹ ದಳ ಮೂವರು ಅನುಮಾನಾಸ್ಪದ ವ್ಯಕ್ತಿಗಳನ್ನು ಬಂಧಿಸಿರುವ ಬಗ್ಗೆ ತಿಳಿದು ಬಂದಿದೆ. ಉತ್ತರ ಪ್ರದೇಶ ಸರ್ಕಾರ ಮತ್ತು ಪೊಲೀಸ್ ಪ್ರಧಾನ ಕಚೇರಿಯ ಸೂಚನೆಯ ಮೇರೆಗೆ ನಡೆಸುತ್ತಿರುವ ತಪಾಸಣೆ ವೇಳೆ ಯುಪಿ-ಎಟಿಎಸ್‌ನಿಂದ ಮೂವರು ಅನುಮಾನಾಸ್ಪದ ವ್ಯಕ್ತಿಗಳನ್ನು ಬಂಧಿಸಲಾಗಿದೆ. ಲಕ್ನೋದಿಂದ ಅಯೋಧ್ಯೆಗೆ ಬರುವಾಗ ಮಾರ್ಗಮಧ್ಯೆ ರಾಜಸ್ಥಾನ ಮೂಲದ ಓರ್ವನನ್ನು ಬಂಧಿಸಲಾಗಿದ್ದು. ಆತ ನೀಡಿದ ಮಾಹಿತಿ ಮೇರೆ ಮತ್ತಿಬ್ಬರನ್ನು ಅರೆಸ್ಟ್​ ಮಾಡಲಾಗಿದೆ. ಬಂಧಿತರು ಅರ್ಶ್​ ದಲಾ ಗ್ಯಾಂಗ್​ನ ಸದಸ್ಯರೆಂದು ತಿಳಿದು ಬಂದಿದೆ. ಇದನ್ನು ಭಾರತ ಸರ್ಕಾರ ಉಗ್ರ ಸಂಘಟನೆಯೆಂದು ಘೋಷಿಸಿದೆ. ಸದ್ಯ ಅನುಮಾನ್ಪಾದ ವ್ಯಕ್ತಿಗಳುನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ರಾಮನೂರಿನಲ್ಲಿ ಭದ್ರತೆ ಹೆಚ್ಚಳ.. 10 ಸಾವಿರ ಸಿಸಿ ಕ್ಯಾಮರಾ ಕಣ್ಗಾವಲು

ಮೂವರು ಶಂಕಿತರ ಬಂಧನದ ಬೆನ್ನಲ್ಲೇ ಅಯೋಧ್ಯೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಉತ್ತರಪ್ರದೇಶ ಸರ್ಕಾರ ಭದ್ರತೆಯನ್ನು ಹೆಚ್ಚಿಸಿದೆ. ಡ್ರೋಣ್​ಗಳ ಮೂಲಕ ಕಣ್ಗಾವಲು ಹೆಚ್ಚಿಸಿದೆ. ಅಯೋಧ್ಯೆ ಜಿಲ್ಲೆಯಲ್ಲಿ 10 ಸಾವಿರ ಸಿಸಿ ಕ್ಯಾಮರಾಗಳನ್ನು ಅಳವಡಿಕೆ ಮಾಡಲಾಗಿದ್ದು, ರಾಮನೂರಿನಲ್ಲಿ ಹದ್ದಿನ ಕಣ್ಣಿಡಲಾಗಿದೆ

ಯೋಗಿ ಆದಿತ್ಯನಾಥ್​ಗೆ ಖಲಿಸ್ತಾನಿ ಉಗ್ರನ ಕೊಲೆ ಬೆದರಿಕೆ

ಖಲಿಸ್ತಾನಿ ಉಗ್ರ, ನಿಷೇಧಿತ ಸಿಕ್ಸ್ ಫಾರ್ ಜಸ್ಟಿಸ್ ಸಂಘಟನೆಯ ನಾಯಕ ಗುರುಪತ್ವಂತ್ ಸಿಂಗ್ ಪನ್ನು ಸಿಎಂ ಯೋಗಿ ಆದಿತ್ಯನಾಥ್​ಗೆ ಪ್ರಾಣ ಬೆದರಿಕೆ ಹಾಕಿದ್ದಾನೆ. ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ಎಸಗುತ್ತೇವೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್​ರನ್ನು ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆಡಿಯೋ ಮೂಲಕ ಬೆದರಿಕೆಯೊಡ್ಡಿದ್ದಾನೆ. ಆಡಿಯೋ ರೆಕಾರ್ಡ್​ ಮಾಡಿ ಯೋಗಿ ಆದಿತ್ಯನಾಥ್​ಗೆ ಸಂದೇಶ ರವಾನೆ ಮಾಡಲಾಗಿದೆ. ಯುನೈಟೆಡ್​ ಕಿಂಗ್​ಡಮ್​ನ ಸ್ಥಳವೊಂದರಲ್ಲಿ ಆಡಿಯೋ ರೆಕಾರ್ಡ್​ ಮಾಡಿರಯವ ಬಗ್ಗೆ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಭದ್ರತಾ ಸಂಸ್ಥೆಗಳು ಶೀಘ್ರದಲ್ಲೇ ಬಂಧಿತ ಮೂವರು ಶಂಕಿತರು ತನಿಖೆ ನಡೆಸುವ ಸಾಧ್ಯತೆ ಇದೆ.

ದೆಹಲಿಯಲ್ಲಿ ಖಲಿಸ್ತಾನಿ ಪರ ಗೋಡೆಬರಹ ಪತ್ತೆ

ಇತ್ತ ರಾಷ್ಟ್ರ ರಾಜಧಾನಿ ದೆಹಲಿಯ ಉತ್ತಮ್ ನಗರ ಪ್ರದೇಶದ ಸರ್ಕಾರಿ ಶಾಲೆಯೊಂದರ ಗೋಡೆಯ ಮೇಲೆ ಖಾಲಿಸ್ತಾನವನ್ನು ಬೆಂಬಲಿಸುವ ಗೋಡೆಬರಹ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಅಲರ್ಟ್​ ಆಗಿರುವ ದೆಹಲಿ ಪೊಲೀಸರು ಕಿಡಿಗೇಡಿಗಳ ಪತ್ತೆಗೆ ಮುಂದಾಗಿದ್ದಾರೆ. ಒಟ್ಟಾರೆಯಾಗಿ ಇಡೀ ದೇಶವೇ ರಾಮ ಮಂದಿರ ಲೋಕಾರ್ಪಣೆಯ ಸಂಭ್ರದಲ್ಲಿದೆ. ಈ ಸಂಭ್ರಮಕ್ಕೆ ಯಾವುದೇ ಧಕ್ಕೆ ಬರದಂತೆ ಶ್ರೀರಾಮನೇ ಕಾಪಾಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮ ಮಂದಿರ ಉದ್ಘಾಟನೆ ಮೇಲೆ ಉಗ್ರರ ಕರಿನೆರಳು; ಮೂವರು ಶಂಕಿತರು ಅರೆಸ್ಟ್​!

https://newsfirstlive.com/wp-content/uploads/2024/01/ayodhay-police.jpg

Load More