ಗುರು ಪೂರ್ಣಿಮಾ ದಿನವೇ ದತ್ತಾತ್ರೇಯ ಸನ್ನಿಧಿಯಲ್ಲಿ ಜೀವ ಚೆಲ್ಲಿದ ಮಹಿಳಾ ಭಕ್ತೆ

author-image
Bheemappa
Updated On
ಗುರು ಪೂರ್ಣಿಮಾ ದಿನವೇ ದತ್ತಾತ್ರೇಯ ಸನ್ನಿಧಿಯಲ್ಲಿ ಜೀವ ಚೆಲ್ಲಿದ ಮಹಿಳಾ ಭಕ್ತೆ
Advertisment
  • ದರ್ಶನಕ್ಕೆ ಗಂಟೆಗಟ್ಟಲೇ ಸಾಲಿನಲ್ಲಿ ನಿಂತು ಸುಸ್ತು ಆಗಿದ್ದ ಭಕ್ತರು
  • ದೇವಲ ಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
  • ಬೇರೆ ಬೇರೆ ರಾಜ್ಯಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದ ಭಕ್ತರು

ಕಲಬುರಗಿ: ಗುರು ಪೂರ್ಣಿಮಾ ದಿನವೇ ದತ್ತಾತ್ರೇಯ ಸನ್ನಿಧಿಯಲ್ಲಿ ಮಹಿಳಾ ಭಕ್ತೆಯೊಬ್ಬರು ಜೀವ ಕಳೆದುಕೊಂಡಿದ್ದಾರೆ. ಇವರ ನಿಧನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಅಫಜಲಪುರ ತಾಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ.

ಬೀದರ್​ನ ಬಸವಕಲ್ಯಾಣ ತಾಲೂಕಿನ ನಿವಾಸಿ ಕಲಾವತಿ (52) ಮೃತ ಭಕ್ತೆ. ಇವರು ಗುರುಪೂರ್ಣಿಮೆ ಹಿನ್ನೆಲೆಯಲ್ಲಿ ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಆಗಮಿಸಿದ್ದರು. ದೇವರ ದರ್ಶನ ಪಡೆಯಲು ದೇವಸ್ಥಾನ ಮುಂಭಾಗ ನಿಂತಿದ್ದ ಭಕ್ತರ ಮಧ್ಯೆ ನುಕು-ನುಗ್ಗಲು ಆಗಿದೆ. ಈ ವೇಳೆ ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಉಸಿರು ಗಟ್ಟಿರಬಹುದು ಅಥವಾ ಹೃದಯಾಘಾತದಿಂದ ಮಹಿಳೆ ಕೊನೆಯುಸಿರೆಳೆದಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಇದನ್ನೂ ಓದಿ: ಯೋಗಿ ನಾಡಲ್ಲೇ ಮತಾಂತರ; 40 ಬ್ಯಾಂಕ್ ಖಾತೆ, 106 ಕೋಟಿ ರೂಪಾಯಿ ಆಸ್ತಿ.. ಬಾಬಾ, ನೀತೂ ಜೈಲು ಪಾಲು!

publive-image

ಗುರು ಪೂರ್ಣಿಮಾ ಹಿನ್ನೆಲೆಯಲ್ಲಿ ದೇವಲ ಗಾಣಗಾಪುರದ ದತ್ತಾತ್ರೇಯ ದೇವರ ದರ್ಶನಕ್ಕೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಹರಿದು ಬಂದಿದ್ದರು. ಕರ್ನಾಟಕ ಮಾತ್ರವಲ್ಲ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶದಿಂದಲೂ ಭಕ್ತರ ದಂಡು ಆಗಮಿಸಿತ್ತು. ಹೀಗಾಗಿ ದೇವರ ದರ್ಶನಕ್ಕೆ ಸಾಲಿನಲ್ಲಿ ನಿಂತಿರುವಾಗ ಮಹಿಳೆ ನಿಧನರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment