/newsfirstlive-kannada/media/post_attachments/wp-content/uploads/2025/01/JOB_BDA.jpg)
ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಅಡಿ ಬರುವ ಆದಾಯ ತೆರಿಗೆ ಇಲಾಖೆಯು ಹೊಸ ಉದ್ಯೋಗಗಳಿಗಾಗಿ ಅರ್ಜಿಗಳನ್ನು ಆಹ್ವಾನ ಮಾಡಿದೆ. ಇಲಾಖೆಯಲ್ಲಿ ಖಾಲಿ ಇರುವಂತ ಡೇಟಾ ಸಂಸ್ಕರಣ ಸಹಾಯಕ (Data Processing Assistant) ಉದ್ಯೋಗಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದೆ. ಹೀಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆದಾಯ ತೆರಿಗೆ ಇಲಾಖೆಯು ದೆಹಲಿ, ಲಕ್ನೋ, ಕಾನ್ಪುರ, ಚಂಡೀಗಢ, ಕೋಲ್ಕತ್ತಾ, ಹೈದರಾಬಾದ್ ಮತ್ತು ಚೆನ್ನೈ ನಗರದಲ್ಲಿನ ಆದಾಯ ತೆರಿಗೆಯ ಪ್ರಧಾನ ಮುಖ್ಯ ಆಯುಕ್ತರ ವಿವಿಧ ಕಚೇರಿಗಳಲ್ಲಿ 8 ಖಾಲಿ ಹುದ್ದೆಗಳು ಇವೆ. ಇವುಗಳನ್ನು ತುಂಬುವ ಗುರಿಯನ್ನು ಇಲಾಖೆ ಹೊಂದಿದೆ. ಆಯ್ಕೆ ಆದದವರನ್ನು ಜನರಲ್ ಸೆಂಟ್ರಲ್ ಸರ್ವಿಸಸ್ ಗ್ರೂಪ್- ಬಿ ಗೆಜೆಟೆಡ್, ನಾನ್ ಮಿನಿಸ್ಟ್ರೀಯಲ್ ಕೇಡರ್‌ನ ಭಾಗವಾಗಿರುತ್ತಾರೆ.
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಆಡಳಿತ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವವರು ಈ ಹುದ್ದೆಯ ಅವಕಾಶ ಇದೆ. ಬೇರೆಯವರಿಗೆ ಇವು ಅನ್ವಯ ಆಗಲ್ಲ. ಉದ್ಯೋಗ ಪಡೆದವರಿಗೆ ಮಾಸಿಕವಾಗಿ ₹44,900 ರಿಂದ ₹1,42,400 ರವರೆಗೆ ವೇತನ ನೀಡಲಾಗುತ್ತದೆ. ಜನವರಿ 6 ರಂದೇ ಈ ಉದ್ಯೋಗದ ನೋಟಿಫಿಕೆಶನ್ ಪ್ರಕಟಿಸಿದ್ದು ಫೆಬ್ರುವರಿ 5 ರಂದು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ವೆಬ್ಸೈಟ್- incometaxindia.gov.in
ಇದನ್ನೂ ಓದಿ:PWD; ಲೋಕೋಪಯೋಗಿ ಇಲಾಖೆಯ ಹುದ್ದೆಗಳ ಆಹ್ವಾನ.. ಇನ್ನೊಂದಿನ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶ
ವಿದ್ಯಾರ್ಹತೆ
- ಕಂಪ್ಯೂಟರ್ ಅಪ್ಲಿಕೇಶನ್‌ಗಳು/ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ
- ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಎಂಟೆಕ್
- ಬಿಇ/ಬಿಟೆಕ್ ಕಂಪ್ಯೂಟರ್ ಇಂಜಿನಿಯರ್/ ಕಂಪ್ಯೂಟರ್ ಸೈನ್ಸ್, ಕಂಪ್ಯೂಟರ್ ಟೆಕ್ನಾಲಜಿ
- 2 ವರ್ಷಗಳ ಕೆಲಸದ ಅನುಭವ ಇರಬೇಕು
- 56 ವರ್ಷದ ಒಳಗಿನ ಅಭ್ಯರ್ಥಿಗಳಿಗೆ ಅವಕಾಶ ಇದೆ
- ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
ಅರ್ಜಿ ಸಲ್ಲಿಕೆಯ ವಿಧಾನ
ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಪ್ರತಿ ಡೌನ್ಲೋಡ್ ಮಾಡಿಕೊಳ್ಳಿ. ಅರ್ಜಿ ಭರ್ತಿ ಮಾಡಿ ಕೇಳಿದ ಎಲ್ಲ ದಾಖಲೆಗಳನ್ನು ಲಗತ್ತಿಸಿ ಈ ವಿಳಾಸಕ್ಕೆ ಕಳುಹಿಸಿಕೊಡಿ.
Directorate of Income Tax (Systems),
Central Board of Direct Taxes,
Ground Floor, E2, ARA Center,
Jhandewalan Ext., New Delhi- 110055
ಸಂಪೂರ್ಣ ಮಾಹಿತಿಗಾಗಿ ಲಿಂಕ್-
https://incometaxindia.gov.in/Lists/Recruitment%20Notices/Attachments/126/cbdt-DPA-B-advertisement-on-website-v1.pdf
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ