Advertisment

ಆದಾಯ ತೆರಿಗೆ ಇಲಾಖೆ ಇಂದ ಖಾಲಿ ಹುದ್ದೆಗಳ ಅಧಿಸೂಚನೆ ರಿಲೀಸ್.. ಇಂದಿನಿಂದ ಅರ್ಜಿ ಸಲ್ಲಿಸಬಹುದು

author-image
Bheemappa
Updated On
ಆದಾಯ ತೆರಿಗೆ ಇಲಾಖೆ ಇಂದ ಖಾಲಿ ಹುದ್ದೆಗಳ ಅಧಿಸೂಚನೆ ರಿಲೀಸ್.. ಇಂದಿನಿಂದ ಅರ್ಜಿ ಸಲ್ಲಿಸಬಹುದು
Advertisment
  • ಆದಾಯ ತೆರಿಗೆ ಇಲಾಖೆಯಲ್ಲಿ ಹಲವು ಉದ್ಯೋಗಗಳು ಖಾಲಿ.. ಖಾಲಿ
  • ಎಷ್ಟು ವರ್ಷದ ಒಳಗಿನ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು?
  • ಆದಾಯ ತೆರಿಗೆ ಇಲಾಖೆಯ ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿ ಇದೆ

ಆದಾಯ ತೆರಿಗೆ ಇಲಾಖೆ (Income Tax Department)ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಸ್ಟೆನೋಗ್ರಾಫರ್ (Stenographer) ಅಂದರೆ ಮಾತನಾಡುವ ಭಾಷೆಯನ್ನು ಸಂಕ್ಷಿಪ್ತ ರೂಪದಲ್ಲಿ ಸಂಕೇತಿತವಾಗಿ ಬರೆಯುವುದು. ಹೊಸ ಸ್ಟೆನೋಗ್ರಾಫರ್ ಉದ್ಯೋಗಗಳನ್ನ ಇಲಾಖೆಯೂ ಆಹ್ವಾನ ಮಾಡಿದೆ.

Advertisment

ಆದಾಯ ತೆರಿಗೆ ಇಲಾಖೆಯು ಗ್ರೇಡ್-1 ಸ್ಟೆನೋಗ್ರಾಫರ್ ಉದ್ಯೋಗಗಳನ್ನು ಭರ್ತಿ ಮಾಡಲು ಮುಂದಾಗಿದೆ. ಉದ್ಯೋಗ ಆಕಾಂಕ್ಷಿಗಳು ಈ ಕೆಲಸಗಳಿಗೆ ಪ್ರಯತ್ನ ಮಾಡಬಹುದು. ಅರ್ಜಿ ಪ್ರಕ್ರಿಯೆ, ಶುಲ್ಕ, ಕೆಲಸ ಮಾಡುವುದು ಎಲ್ಲಿ, ವಿದ್ಯಾರ್ಹತೆ, ವಯಸ್ಸಿನ ಮಿತಿ ಸೇರಿ ಮುಂತಾದ ಮಾಹಿತಿ ಇಲ್ಲಿ ನೀಡಲಾಗಿದೆ.

ಉದ್ಯೋಗದ ಹೆಸರು- ಗ್ರೇಡ್-1 ಸ್ಟೆನೋಗ್ರಾಫರ್ (Stenographer)

ಒಟ್ಟು ಉದ್ಯೋಗಗಳ ಸಂಖ್ಯೆ- 62

ಇದನ್ನೂ ಓದಿ: ಭಾರತೀಯ ಸೇನೆ ಸೇರಲು ಸುವರ್ಣಾವಕಾಶ.. ಅಗ್ನಿವೀರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

publive-image

ಕೆಲಸ ಮಾಡುವ ಸ್ಥಳ- ಆಂಧ್ರ, ತೆಲಂಗಾಣ

ಸಂಬಳ- 35,400 ರೂಪಾಯಿ ಇಂದ 1,12,400 ರೂಪಾಯಿ

ವಿದ್ಯಾರ್ಹತೆ-

ಆದಾಯ ತೆರಿಗೆ ಇಲಾಖೆಯ ನಿಯಮಗಳ ಪ್ರಕಾರ ಇದೆ. ಮೂಲ ಅಧಿಸೂಚನೆ ಪರಿಶೀಲನೆ ಮಾಡಬಹುದು.

ವಯಸ್ಸಿನ ಮಿತಿ
56 ವರ್ಷದ ಒಳಗಿನವರಿಗೆ ಅವಕಾಶ ಇದೆ

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಲಿಖಿತ ಪರೀಕ್ಷೆ
ಸಂದರ್ಶನ

ಇಲಾಖೆಯ ವೆಬ್​ಸೈಟ್​ನಿಂದ ಅಭ್ಯರ್ಥಿಗಳು ಅರ್ಜಿಯ ಪ್ರತಿ ಡೌನ್​ಲೋಡ್ ಮಾಡಿಕೊಳ್ಳಬೇಕು. ಬಳಿಕ ಅದನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಕೇಳಿರುವ ಎಲ್ಲ ದಾಖಲೆಗಳನ್ನು (ಜೆರಾಕ್ಸ್) ಲಗತ್ತಿಸಿ. ಇವುಗಳಿಗೆ ಸೆಲ್ಫ್​ ಅಟೆಸ್ಟೆಡ್ ಮಾಡುವುದು ಮರೆಯಬೇಡಿ. ಬಳಿಕ ಈ ಕೆಳಗೆ ಕೊಟ್ಟಿರುವ ವಿಳಾಸಕ್ಕೆ ಪೋಸ್ಟ್​ ಮೂಲಕ ಕಳುಹಿಸಿಕೊಡಿ​.

Advertisment

ವಿಳಾಸ;-

Office of the Principal Chief Commissioner of Income Tax, Andhra Pradesh & Telangana,
Hyderabad ‘C’ Block, 10th Floor, Income Tax Towers,
A C Guards, Masab Tank, Hyderabad- 500004

ಅರ್ಜಿ ಡೌನ್​ಲೋಡ್​ಗೆ Website- http://incometaxindia.gov.in

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ- 23 ಏಪ್ರಿಲ್ 2025

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment