/newsfirstlive-kannada/media/post_attachments/wp-content/uploads/2025/01/Crocodile.jpg)
ಭೋಪಾಲ್: ಮಧ್ಯಪ್ರದೇಶದಲ್ಲಿ ಬೇನಾಮಿ ಆಸ್ತಿ ಸಂಬಂಧ ಬಿಜೆಪಿ ನಾಯಕರೊಬ್ಬರ ಮನೆ ಮೇಲೆ ದಾಳಿ ಮಾಡಿದ ಐಟಿ ಅಧಿಕಾರಿಗಳಿಗೆ ಅಚ್ಚರಿ ಒಂದು ಎದುರಾಗಿದೆ.
ಕೋಟಿ ಕೋಟಿ ಹಣ, ಚಿನ್ನದ ಬೆನ್ನತ್ತಿ ಹೋದ ಅಧಿಕಾರಿಗಳನ್ನು ಸ್ವಾಗತಿಸಿದ್ದು 3 ಮೊಸಳೆಗಳು. ಬಿಜೆಪಿಯ ಮಾಜಿ ಸಚಿವರ ಪುತ್ರ ಮಾಜಿ ಶಾಸಕ ಹರ್ವಂಶಸಿಂಗ್ ರಾಥೋಡ್ ಮನೆ ಮೇಲೆ ಐಟಿ ದಾಳಿ ದಾಳಿ ನಡೆದಿದೆ. ಈ ವೇಳೆ 3 ಕೋಟಿ ನಗದು, ಚಿನ್ನ, ಬೆಳ್ಳಿ ಆಭರಣಗಳ ಜೊತೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಪತ್ತೆಯಾಗಿದೆ.
ತೆರಿಗೆ ವಂಚನೆ ಸಂಬಂಧ ಮಧ್ಯಪ್ರದೇಶದ ಸಾಗರದಲ್ಲಿರುವ ಬಿಜೆಪಿಯ ಮಾಜಿ ಶಾಸಕ ಹರ್ವಂಶ್ ಸಿಂಗ್ ರಾಥೋಡ್, ಕೌನ್ಸಿಲರ್ ರಾಜೇಶ್ ಕೇಶರವಾಣಿ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದೆ.
ಇಬ್ಬರೂ ಸೇರಿ ಬೀಡಿ ವ್ಯಾಪಾರ ನಡೆಸುತ್ತಿದ್ದು ದಾಳಿ ವೇಳೆ ಹರ್ವಂಶಸಿಂಗ್ 155 ಕೋಟಿ ತೆರಿಗೆ ವಂಚಿಸಿದ್ದು ಪತ್ತೆಯಾಗಿದೆ. ಅಲ್ಲದೇ ರಾಥೋಡ್ ಮನೆಯಲ್ಲಿರುವ ಕೊಳದಲ್ಲಿ 3 ಮೊಸಳೆಗಳು ಪತ್ತೆಯಾಗಿವೆ. ಐಟಿ ಅಧಿಕಾರಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯಾಧಿಕಾರಿಗಳು ಮೊಸಳೆಗಳನ್ನು ವಶಕ್ಕೆ ಪಡೆದಿದ್ದಾರೆ.
ರಾಥೋಡ್ ಜೊತೆಗೆ ಬೀಡಿ ವ್ಯಾಪಾರದ ಪಾಲುದಾರ ಕೌನ್ಸಲರ್ ರಾಜೇಶ್ ಕೇಶರವಾಣಿ ಮನೆಯಲ್ಲೂ ಐಟಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಕೇಶರವಾಣಿ 140 ಕೋಟಿ ರೂ. ತೆರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಬೇನಾಮಿ ಹೆಸರಿಲ್ಲಿದ್ದ ಹಲವು ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಖಾಸಗಿ ಉದ್ಯೋಗಿಗಳಿಗೆ ಬಿಗ್ ಶಾಕ್; ಇನ್ಮುಂದೆ ದಿನಕ್ಕೆ 15 ಗಂಟೆ ಕೆಲಸ ಮಾಡಬೇಕಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ