newsfirstkannada.com

ಕುಡಿಯೋಕೆ ನೀರಿಲ್ಲ.. ಸದ್ದಿಲ್ಲದೇ ತಮಿಳುನಾಡಿಗೆ ಹರಿಯೋ ಕಾವೇರಿ ನೀರಿನ ಪ್ರಮಾಣ ಹೆಚ್ಚಳ

Share :

Published March 13, 2024 at 1:37pm

Update March 13, 2024 at 1:39pm

  ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದ ರಾಜ್ಯ ಸರ್ಕಾರ

  ಧರ್ಮಪುರಿ ತಲುಪಿದ KRS ಹಾಗೂ ಕಬಿನಿಯಿಂದ ಬಿಡುಗಡೆಯಾದ ನೀರು

  ತಮಿಳುನಾಡಿನ ಮೆಟ್ಟೂರು ಡ್ಯಾಮ್​ನಲ್ಲಿ 26 ಟಿಎಂಸಿ ನೀರು ಸಂಗ್ರಹ

ಬೆಂಗಳೂರು: ಕುಡಿಯೋಕೆ ನೀರಿಲ್ಲದೆ ಇಡೀ ಕರುನಾಡು ಕಣ್, ಕಣ್ ಬಿಡುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳ ಬಾಯಾರಿಕೆ ನೀಗಿಸೋದು ಬಹಳ ಕಷ್ಟವಾಗಿದೆ. ಟ್ಯಾಂಕರ್‌ ನೀರಿನ ವ್ಯವಸ್ಥೆ ಮಾಡಿದ್ರೂ ನೀರಿಲ್ಲ, ನೀರಿಲ್ಲ ಅಂತ ರಾಜ್ಯದ ಜನ ಪರದಾಡುತ್ತಿರುವಾಗ ಕೆಆರ್‌ಎಸ್‌ ಡ್ಯಾಂನಿಂದ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ಸಂಗತಿ ಬಯಲಾಗಿದೆ.

ನೀರಿಗೆ ಹಾಹಾಕಾರ ಹೆಚ್ಚಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ತಮಿಳುನಾಡಿಗೆ ಕಾವೇರಿ ನೀರು ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದರು. ಆದ್ರೀಗ ಸದ್ದಿಲ್ಲದೆ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ಅಂಶ ಬೆಳಕಿಗೆ ಬಂದಿದೆ. ಕಳೆದ ಮಾರ್ಚ್‌ 9 ಹಾಗೂ 10ರಂದು ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗಿದೆ. ತಮಿಳುನಾಡಿನ ಧರ್ಮಪುರಿ ಬಳಿ ಕಾವೇರಿ ನೀರಿನ ಹರಿವು ಸಾಮಾನ್ಯಕ್ಕಿಂತ ಅರ್ಧ ಮೀಟರ್ ಹೆಚ್ಚಾಗಿದೆ.

ಇದನ್ನೂ ಓದಿ: ಕಾವೇರಿ ನೀರು ತಮಿಳುನಾಡಿಗೆ ಬಿಡುತ್ತಿದ್ದಾರೆಂದು ಆರೋಪಿಸಿ ರೈತರ ಪ್ರತಿಭಟನೆ; KRS ಡ್ಯಾಂನ ನೀರಿನ ಮಟ್ಟ ಎಷ್ಟು ಕುಸಿದಿದೆ?

ಕರ್ನಾಟಕದ ಗಡಿ ಭಾಗವಾದ ಬಿಳಿಗುಂಡ್ಲು ಬಿಳಿಗುಂಡ್ಲು ಜಲಮಾಪಕದಲ್ಲಿ ನಿನ್ನೆ 257.6 ಮೀಟರ್ ಇದ್ದ ನೀರು ಇವತ್ತಿಗೆ 258.1 ಮೀಟರ್​ಗೆ ಏರಿಕೆಯಾಗಿದೆ. ತಮಿಳುನಾಡಿನ ಮೆಟ್ಟೂರು ಡ್ಯಾಮ್​ನಲ್ಲಿ 26 ಟಿಎಂಸಿ ನೀರು ಸಂಗ್ರಹವಾಗಿದೆ.

ಆಲ್ ಇಂಡಿಯಾ ರೇಡಿಯೋ ನ್ಯೂಸ್ ಇಂತಹದೊಂದು ಮಾಹಿತಿಯನ್ನ ಬಹಿರಂಗ ಮಾಡಿದೆ. ಸೋಷಿಯಲ್ ಮೀಡಿಯಾ Xನಲ್ಲಿ ವಿಡಿಯೋ ಸಮೇತ್ ಟ್ವೀಟ್ ಮಾಡಿರುವ AIR ನ್ಯೂಸ್‌ ತಮಿಳುನಾಡಿನ ಧರ್ಮಪುರಿ ಬಳಿ ಕಾವೇರಿ ನದಿ ನೀರಿನ ಪ್ರಮಾಣ ಹೆಚ್ಚಾಗಿದೆ ಎಂದಿದೆ. ಕಳೆದ ಮಾರ್ಚ್‌ 9, 10 ರಂದು ಕೆ.ಆರ್‌.ಎಸ್ ಹಾಗೂ ಕಬಿನಿಯಿಂದ ಬಿಡುಗಡೆಯಾದ ನೀರು ಈಗ ಧರ್ಮಪುರಿ ತಲುಪಿದೆ. ಮಂಡ್ಯದ ಕೆ.ಆರ್.ಎಸ್ ಡ್ಯಾಮ್‌ನಲ್ಲಿ ಇಂದು 15 ಟಿಎಂಸಿ ನೀರು ಸಂಗ್ರಹ ಇದೆ. ಆದರೆ, ತಮಿಳುನಾಡಿನ ಮೆಟ್ಟೂರು ಡ್ಯಾಮ್ ನಲ್ಲಿ ಇಂದು 26 ಟಿಎಂಸಿ ನೀರು ಸಂಗ್ರಹ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಡಿಯೋಕೆ ನೀರಿಲ್ಲ.. ಸದ್ದಿಲ್ಲದೇ ತಮಿಳುನಾಡಿಗೆ ಹರಿಯೋ ಕಾವೇರಿ ನೀರಿನ ಪ್ರಮಾಣ ಹೆಚ್ಚಳ

https://newsfirstlive.com/wp-content/uploads/2024/03/Tamil-nadu-Water.jpg

Load More