newsfirstkannada.com

ಸಿಲಿಕಾನ್​ ಸಿಟಿ ಜನರೇ ಎಚ್ಚರ.. ದಿನದಿಂದ ದಿನಕ್ಕೆ ಡೆಂಘೀ ಕೇಸ್​ ಹೆಚ್ಚಳ; ಎಲ್ಲೆಲ್ಲಿ ಅಪಾಯ?

Share :

Published June 26, 2024 at 6:14am

    ಯಾವ ವಲಯದಲ್ಲಿ ಎಷ್ಟು ಡೆಂಘಿ ಕೇಸ್​ ಪತ್ತೆ? ಕೇಳಿದ್ರೆ ಶಾಕ್ ಆಗ್ತೀರಾ!

    ಪ್ರತಿ ಬಾರಿಯಂತೆ ಈ ಬಾರಿಯೂ ರಾಜಧಾನಿಯಲ್ಲಿ ಡೆಂಘೀ ಕಾಟ ಶುರು

    ಮಹಾದೇವಪುರ ಹಾಗೂ ಪೂರ್ವ ವಲಯದಲ್ಲಿ ಹೆಚ್ಚಿನ‌ ಡೆಂಘೀ ಪ್ರಕರಣ

ಬೆಂಗಳೂರು: ಸೊಗಸಾದ ಕನಸ್ಸಲ್ಲಿರಬೇಕಾದ್ರೆ ನಿಮ್ಮನ್ನ ಯಾರಾದ್ರೂ ಡಿಸ್ಬರ್ಬ್​​ ಮಾಡಿದ್ರೆ ಅದು ಸೊಳ್ಳೆಗಳು ಮಾತ್ರ. ಆದ್ರೆ ಹೀಗೆ ನಿದ್ದೇಲಿದ್ದಾಗ ಬಂದು ನಿಮ್ಮ ರಕ್ತಹೀರಿ ಹೋಗೋ ಸೊಳ್ಳೆಗಳ ಬಗ್ಗೆ ನೆಗೆಲೆಕ್ಟ್​​ ಮಾಡಲೇಬೇಡಿ ಯಾಕಂದ್ರೆ ಪ್ರತಿ ವರ್ಷದಂತೆ ಈ ವರ್ಷವೂ ಆ ಟೈಮ್​ ಬಂದ್​ ಬಿಟ್ಟಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದೇ ಮೊದಲ ತಪ್ಪು.. A4 ರಘು ಪತ್ನಿ ಸಹನಾ ಖಡಕ್‌ ಮಾತು; ಹೇಳಿದ್ದೇನು?

ಹೌದು, ಪ್ರತಿ ಬಾರಿಯಂತೆ ಈ ಬಾರಿಯೂ ಡೆಂಘೀ ಕಾಟ ಶುರುವಾಗ್ಬಿಟ್ಟಿದೆ. ಅದ್ರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಡೆಂಘೀ ಆತಂಕ ಹೆಚ್ಚಾಗಿದೆ. 20 ದಿನದಲ್ಲೇ 1000ಕ್ಕೂ ಅಧಿಕ ಡೆಂಘೀ ಪ್ರಕರಣ ದಾಖಲಾಗಿದ್ದು, ಕಳೆದ ವರ್ಷಕ್ಕಿಂತ ಡೆಂಘೀ ಪಾಸಿಟಿವ್ ಶೇ. 40ರಷ್ಟು ಹೆಚ್ಚಾಗಿದೆ. ಇದರ ಜೊತೆ ಜೊತೆಗೆ ಮಳೆ ಕಣ್ಣಾಮುಚ್ಚಾಲೆ, ಶೀತಗಾಳಿಯಿಂದ ವೈರಲ್ ಫೀವರ್ ಸಹ ಹೆಚ್ಚಿದೆ. ಹಾಗಾದ್ರೆ ಯಾವ ವಲಯದಲ್ಲಿ ಎಷ್ಟು ಡೆಂಘಿ ಕೇಸ್​ ಇದೆ.

ಮಹಾದೇವಪುರ ಹಾಗೂ ಪೂರ್ವ ವಲಯದಲ್ಲಿ ಹೆಚ್ಚಿನ‌ ಡೆಂಘೀ ಪ್ರಕರಣ ದಾಖಲಾಗಿದ್ದು, ಬೊಮ್ಮನಹಳ್ಳಿಯಲ್ಲಿ 113ಕೇಸ್​ ದಾಖಲಾಗಿದ್ರೆ, ದಾಸರ ಹಳ್ಳಿ 6, ಪೂರ್ವವಲಯದಲ್ಲಿ 236, ದಕ್ಷಿಣದಲ್ಲಿ 113 ಪ್ರಕರಣಗಳು ದಾಖಲಾಗಿದೆ. ಇತ್ತ ಪಶ್ಚಿಮದಲ್ಲಿ 77 ಕೇಸ್​ ಪತ್ತೆಯಾಗಿದ್ರೆ, ಮಹಾದೇವಪುರದಲ್ಲಿ 328, ಯಲಹಂಕದಲ್ಲಿ 90 ಜನರಿಗೆ ಡೆಂಘಿ ವಕ್ಕರಿಸಿದೆ. ಒಟ್ಟು 1046 ಪ್ರಕರಣಗಳು ದಾಖಲಾಗಿದೆ. ಜನವರಿ 1 ರಿಂದ ಜೂನ್ 20ರವರೆಗೆ ಕೇವಲ ಆರು ತಿಂಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 2457 ಡೆಂಘೀ ಪ್ರಕರಣ ದಾಖಲಾಗಿದೆ. ಇತ್ತ ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್​ಗೆ ಡೇಂಘಿ ಅಟ್ಯಾಕ್ ಆಗಿದ್ದು, ಕಳೆದ 5 ದಿನಗಳಿಂದ‌ ಜ್ವರದಿಂದ ಬಳಲುತ್ತಿದ್ದ ತುಷಾರ್ ಗಿರಿನಾಥ್ ಮನೆಯಲ್ಲೇ‌ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಲಿಕಾನ್​ ಸಿಟಿ ಜನರೇ ಎಚ್ಚರ.. ದಿನದಿಂದ ದಿನಕ್ಕೆ ಡೆಂಘೀ ಕೇಸ್​ ಹೆಚ್ಚಳ; ಎಲ್ಲೆಲ್ಲಿ ಅಪಾಯ?

https://newsfirstlive.com/wp-content/uploads/2024/06/dengue2.jpg

Load More