/newsfirstlive-kannada/media/post_attachments/wp-content/uploads/2025/01/Prayagraj-Mahakumbh-20255.jpg)
ಪ್ರಯಾಗ್‌ರಾಜ್: ದೇಶಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಜೋರಾಗಿದೆ. ಈ ಮಕರ ಸಂಕ್ರಾಂತಿಯದ್ದೇ ಜಗತ್ತಿನ ಅತಿ ದೊಡ್ಡ ಧಾರ್ಮಿಕ ಜಾತ್ರೆಯಲ್ಲಿ ಸೇರಿಕೊಂಡಿದ್ದಾರೆ ಕೋಟ್ಯಂತರ ಭಕ್ತರು. ಜಗತ್ತಿನ ಅತಿ ದೊಡ್ಡ ಧಾರ್ಮಿಕ ಸಂಗಮ ಇದು. ಸದ್ಯ ಪ್ರಯಾಗ್‌ರಾಜ್ ಮಿನಿ ಭಾರತದಂತೆ ಕಾಣಿಸ್ತಿದೆ.
ಊಹೆಗೂ ಮೀರಿ ಭಕ್ತ ಸಾಗರವೇ ಹರಿದು ಬಂದಿದೆ. ನಿನ್ನೆ ಒಂದೇ ದಿನ ಒಂದೂವರೆ ಕೋಟಿ ಜನ, ಪವಿತ್ರ ಗಂಗೆಯಲ್ಲಿ ಪುಣ್ಯ ಸ್ನಾನಗೈದಿದ್ದಾರೆ. 144 ವರ್ಷಗಳಿಗೊಮ್ಮೆ ಬರೋ ಮಾಹಾಕುಂಭಮೇಳ ಆ ಭೋಲೇನಾಥನ ಆರಾಧನೆಯಲ್ಲಿ ತೇಲಿಸುತ್ತಿದೆ. ಈ ಮಹಾಕುಂಭ ಮೇಳದಿಂದ 2 ಲಕ್ಷ ಕೋಟಿ ರೂಪಾಯಿ ಆದಾಯದ ನಿರೀಕ್ಷೆಯ ಅಂದಾಜಿದೆ. 2025ರ ಮಹಾ ಕುಂಭಮೇಳಕ್ಕೆ ಇವತ್ತು ಎರಡನೇ ದಿನ. ಮಕರ ಸಂಕ್ರಾತಿಯಂದು ಜಗತ್ತಿನ ಅತಿ ದೊಡ್ಡ ಧಾರ್ಮಿಕ ಜಾತ್ರೆ ನಡೆಯುತ್ತಿರೋದು ಮತ್ತೊಂದು ವಿಶೇಷವಾಗಿದೆ.
ಇದನ್ನೂ ಓದಿ: ಸಂಕ್ರಾಂತಿ ಸಂಭ್ರಮ; ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ವಿಸ್ಮಯ ಕಣ್ತುಂಬಿಕೊಳ್ಳಲು ಭಕ್ತರು ಕಾತರ
ಎರಡನೆ ದಿನದ ಇಂದು 13 ಅಖಾಡದ ಸಾಧುಗಳಿಂದ ಬೆಳಿಗ್ಗೆ 4 ಗಂಟೆಯಿಂದಲೇ ಪುಣ್ಯಸ್ನಾನ ಆರಂಭವಾಗಿದೆ. ನಿನ್ನೆ ಮೊದಲ ದಿನ ಒಟ್ಟು 1.5 ಕೋಟಿ ಜನ ಪುಣ್ಯಸ್ನಾನ ಮಾಡಿದ್ದಾರೆ. ಇಂದು ಒಂದು ಕೋಟಿಗೂ ಹೆಚ್ಚು ಜನ ಸ್ನಾನ ಮಾಡೋ ಸಾಧ್ಯತೆ ಇದೆ. ಒಟ್ಟು ಮೂರು ಪುಣ್ಯಸ್ನಾನಗಳು ಇರಲಿದ್ದು, ಅದರಲ್ಲಿ ಇಂದು ಮೊದಲ ಪುಣ್ಯಸ್ನಾನವಾಗಿದೆ. ಈ ಮಹಾಕುಂಭ ಮೇಳದಲ್ಲಿ ವಿದೇಶಿ ಭಕ್ತರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ.
ಮಹಾ ಕುಂಭಮೇಳದಲ್ಲಿ 15 ಲಕ್ಷಕ್ಕೂ ಹೆಚ್ಚು ವಿದೇಶಿ ಭಕ್ತರು ಆಗಮಿಸಿದ್ದಾರೆ. ವಿದೇಶಿ ಭಕ್ತಕು ಕೂಡ ಪುಣ್ಯಸ್ನಾನ ಮಾಡಿದ್ದಾರೆ. ಜೊತೆಗೆ ಪೂಜೆ, ಹೋಮದಲ್ಲಿಯೂ ವಿದೇಶಿ ಭಕ್ತರು ಭಾಗಿಯಾಗಲಿದ್ದಾರೆ. ಇದೆ ಮೊದಲ ಬಾರಿಗೆ 15 ಲಕ್ಷಕ್ಕೂ ಹೆಚ್ಚು ಭಕ್ತರ ಸಮಾಗಮವಾಗಿದೆ. ಕೆನಡಾ, ಯುಕೆ, ಅಮೆರಿಕಾ, ಆಸ್ಟ್ರೇಲಿಯಾ, ಯುರೋಪ್ನ ಹಲವು ವಿದೇಶಿಗರು ಈ ಮಹಾಕುಂಭ ಮೇಳದಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ ಈ ಮಹಾಕುಂಭ ಮೇಳದದ ಬಗ್ಗೆ ತಿಳಿದುಕೊಳ್ಳಲು ಹಲವರ ಆಗಮಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ