/newsfirstlive-kannada/media/post_attachments/wp-content/uploads/2025/05/KRS-DAM.jpg)
ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದೆ. ಪರಿಣಾಮ ಜಲಾಶಯಗಳಿಗೆ ಜೀವಕಳೆ ಬಂದಿದೆ. ಅಂತೆಯೇ ಕೆಆರ್​ಎಸ್​ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಬಿಸಿಲಿನ ತಾಪಕ್ಕೆ ಕೆಆರ್​ಎಸ್​ನ ನೀರಿನ ಪ್ರಮಾಣ 89 ಅಡಿಗೆ ಕುಸಿದಿತ್ತು. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳ ಆಗಿದೆ. ನಿನ್ನೆಯ ವರೆಗು 150 ಕ್ಯೂಸೆಕ್ ಮಾತ್ರ ಒಳಹರಿವು ಇತ್ತು. ಇಂದು 2053 ಕ್ಯೂಸೆಕ್ ಒಳ ಹರಿವು ಇದೆ. ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಆಗಿದೆ. ಸದ್ಯ ಡ್ಯಾಂನಲ್ಲಿ 89.35 ಅಡಿ ನೀರು ಸಂಗ್ರಹವಾಗಿದೆ. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ 15.555 ಟಿಎಂಸಿ ನೀರಿದೆ.
ಇದನ್ನೂ ಓದಿ: ಆರ್​ಸಿಬಿ ಪಂದ್ಯಕ್ಕೂ ಮೊದಲು ಹನುಮನ ಮೊರೆ ಹೋದ ಕೊಹ್ಲಿ.. ವಿರುಷ್ಕಾ ದಂಪತಿ ಹೋಗಿದ್ದೆಲ್ಲಿಗೆ..?
/newsfirstlive-kannada/media/post_attachments/wp-content/uploads/2025/05/HIPPARAGI.jpg)
ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದ ಒಳಹರಿವಿನಲ್ಲಿ ಏಕಾಏಕಿ ಹೆಚ್ಚಳವಾಗಿದೆ. ಜಲಾಶಯದ ಗರಿಷ್ಟ ನೀರಿನ ಮಟ್ಟ 2284 ಅಡಿ ಆಗಿದೆ. ಇಂದಿನ ನೀರಿನ ಮಟ್ಟ 2263.50 ಅಡಿ ಆಗಿದೆ. ಜಲಾಶಯದ ಒಳಹರಿವಿನ ಪ್ರಮಾಣ 13500 ಕ್ಯೂಸೆಕ್ ನೀರಿದೆ. ಹೊರಹರಿವನ್ನು ಸಂಪೂರ್ಣ ನಿಲ್ಲಿಸಲಾಗಿದೆ.
ಬಾಗಲಕೋಟೆ ಭಾಗದಲ್ಲೂ ಮಳೆಯ ಆರ್ಭಟ ಜೋರಾಗಿರೋದ್ರಿಂದ ಕೃಷ್ಣೆ ನದಿ ನೀರಿನ ಒಳ ಹರಿವು ಹೆಚ್ಚಳವಾಗಿದೆ. ಹಿಪ್ಪರಗಿ ಜಲಾಶಯಕ್ಕೆ 25 ಸಾವಿರ ಕ್ಯೂಸೆಕ್ಸ್ ನೀರು ಹರಿದುಬರುತ್ತಿದೆ. ಸದ್ಯ 42 ಸಾವಿರ ಕ್ಯೂಸೆಕ್ ಹೊರ ಹರಿವು ಇದೆ. ನೀರಿನ ಒಳ ಹರಿವಿನ ಪ್ರಮಾಣ ನೋಡಿಕೊಂಡು ಹೊರ ಹರಿವಿನ ಪ್ರಮಾಣ ನಿಗದಿ ಮಾಡಲಾಗಿದೆ. ಪ್ರವಾಹಕ್ಕೆ ಅವಕಾಶವಾಗದಂತೆ ಮುನ್ನೆಚ್ಚರಿಕೆ ಕ್ರಮವನ್ನು ಅಧಿಕಾರಿಗಳು ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಅಯ್ಯೋ ಕಂದಮ್ಮ.. ಮೂರು ವರ್ಷದ ಮಗುವಿನ ಜೀವ ತೆಗೆದ ಮಳೆರಾಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us