Air pollution: ಬೆಂಗಳೂರಲ್ಲಿ ಹೆಚ್ಚಾದ ಕಲುಷಿತ ಗಾಳಿ.. ಸಿಟಿಯ ಈ ಏರಿಯಾಗಳಲ್ಲಿ ಮಾಸ್ಕ್​ ಧರಿಸಲೇಬೇಕು

author-image
Bheemappa
Updated On
Air pollution: ಬೆಂಗಳೂರಲ್ಲಿ ಹೆಚ್ಚಾದ ಕಲುಷಿತ ಗಾಳಿ.. ಸಿಟಿಯ ಈ ಏರಿಯಾಗಳಲ್ಲಿ ಮಾಸ್ಕ್​ ಧರಿಸಲೇಬೇಕು
Advertisment
  • WHO ನಿಗದಿ ಪಡಿಸಿದ್ದಕ್ಕಿಂತ ಎಷ್ಟು ಪಟ್ಟು ಅಧಿಕವಾಗಿದೆ..?
  • ನಗರದಲ್ಲಿನ ಗಾಳಿ ಗುಣಮಟ್ಟ ತುಂಬಾ ಕಳಪೆ ಆಗಿದೆಯಾ?
  • ಸಿಲಿಕಾನ್ ಸಿಟಿಯ ಈ ಏರಿಯಾಗಳಲ್ಲಿ ಗಾಳಿ ಪಾಯಿಸನ್

ನಾವು ತಿನ್ನುವ ಊಟ ಕಲಬೆರಕೆ, ಕುಡಿಯುವ ನೀರು ಕಲಬೆರಕೆ ಎನ್ನುವ ಸಂಗತಿಗಳ ನಡುವೆ ನಾವು ಸೇವನೆ ಮಾಡುವ ಗಾಳಿಯೂ ಕೆಲಬೆರಕೆ ಆಗುತ್ತಿದೆ ಎನ್ನುವ ವಿಚಾರ ಹೊರಬಿದ್ದಿದೆ. ಈ ವಿಚಾರ ಕೇಳಿ ಸಿಲಿಕಾನ್ ಸಿಟಿ ಜನರು ಸ್ವಲ್ಪ ಗಾಬರಿ ಪಡುವಂತಾಗಿದೆ.

publive-image

ಬೆಂಗಳೂರಿನಲ್ಲಿ ಸದ್ಯ ತಣ್ಣನೆ ಗಾಳಿ ಮೆಲ್ಲನೇ ಬೀಸುತ್ತಿದ್ದು ಮೈ ನಡುಗಿಸುವ ಚಳಿ ಕೂಡ ಇದೆ. ಈ ವೆದರ್​ ಎಂಜಾಯ್ ಸಹ ಮಾಡೋರಿದ್ದಾರೆ. ಬಟ್, ಬೆಂಗಳೂರಿನ ಗಾಳಿ ಸುರಕ್ಷಿತವಾಗಿಲ್ಲ ಎನ್ನುವ ಶಾಕಿಂಗ್ ಮಾಹಿತಿ ಒಂದು ಹೊರ ಬಿದ್ದಿದೆ.‌ ಬೆಂಗಳೂರಿನಲ್ಲಿ ಕಳೆದ ವರ್ಷ ಗಾಳಿಯ ಗುಣಮಟ್ಟ ಹೆಚ್ಚು ಕಳಪೆಯಾಗಿದೆ ಎಂದು ಗ್ರೀನ್ ಪೀಸ್ ಇಂಡಿಯಾ ಎಂಬ ಸಂಸ್ಥೆ ವರದಿ ಮಾಡಿದೆ.

2023ನೇ ವರ್ಷದಲ್ಲಿ ಬೆಂಗಳೂರಿನ ವಾಯುಮಾಲಿನ್ಯದ ಬಗ್ಗೆ ಸ್ಟಡಿ‌ ಮಾಡಿರುವ ಗ್ರೀನ್‌ಪೀಸ್ ಇಂಡಿಯಾ, ಸಿಲಿಕಾನ್ ಸಿಟಿಯ ಗಾಳಿಯಲ್ಲಿ ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣ ದುಪ್ಪಟ್ಟಾಗಿದೆ ಎಂದು ವರದಿ ನೀಡಿದೆ. WHO ನಿಗದಿಪಡಿಪಡಿಸಿರುವ ಪ್ರಮಾಣಕ್ಕಿಂತಲೂ 2 ಪಟ್ಟು ನೈಟ್ರೋಜನ್ ಡೈಆಕ್ಸೈಡ್ ಕಂಟೆಂಟ್ ಗಾಳಿಯಲ್ಲಿ‌ ಮಿಶ್ರಣವಾಗಿದ್ದು, ಇದು ಜನಸಾಮಾನ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದು ಬಂದಿದೆ. ಅದರಲ್ಲೂ ವಿಶೇಷವಾಗಿ ಟ್ರಾಫಿಕ್​ನಲ್ಲಿ ವಾಹನಗಳಿಂದ ಹೊರಸೂಸುವ ಕೆಟ್ಟ ಇಂಧನದಿಂದ ವಾಯುಮಾಲಿನ್ಯ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.

ಇದನ್ನೂ ಓದಿ:ಬುಡಬುಡಿಕೆ ವೇಷದಲ್ಲಿ ಯಾರದ್ರೂ ಬಂದ್ರೆ ಎಚ್ಚರ.. ಪ್ರಜ್ಞೆ ತಪ್ಪಿಸಿ ಹಣ, ಚಿನ್ನಾಭರಣ ದೋಚಿ ಪರಾರಿ

publive-image

ನಗರದ ಯಾವ್ಯಾವ ಪ್ರದೇಶಗಳಲ್ಲಿ‌ ಕಲುಷಿತ ಗಾಳಿ ಹೆಚ್ಚಿದೆ?

ಸದ್ಯ ಗ್ರೀನ್ ಪೀಸ್ ಇಂಡಿಯಾ ವರದಿ‌ ಮಾಡಿರುವ ಪ್ರಕಾರ, ಸಿಟಿ ರೈಲ್ವೆ ಸ್ಟೆಷನ್​​ನಲ್ಲಿ ಹೆಚ್ಚು ವಾಯುಮಾಲಿನ್ಯ ವರದಿಯಾಗಿದೆ. ಅದುನ್ನ ಬಿಟ್ಟರೇ ಬಿಟಿಎಂ‌ ಲೇಔಟ್, ಪೀಣ್ಯ, ಹೆಬ್ಬಾಳ, ಹೊಂಬೇಗೌಡ ನಗರ, ಸಿಲ್ಕ್ ಬೋರ್ಡ್, ಬಾಪೂಜಿ ನಗರಗಳಲ್ಲಿ ಹೆಚ್ಚು ಕಲುಷಿತ ಗಾಳಿ ಇದೆ ಎಂದು ವರದಿಯಿಂದ ತಿಳಿದು ಬಂದಿದೆ.

ನೈಟ್ರೋಜನ್ ಮಿಶ್ರಿತ ಗಾಳಿ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಉಸಿರಾಟದ ತೊಂದರೆ, ಕಣ್ಣಿನ‌ ತೊಂದರೆ, ಚರ್ಮರೋಗ ಸೇರಿ ಇನ್ನಷ್ಟು ರೋಗಗಳು ಕಾಣಿಸಿಕೊಳ್ಳುವ ಆತಂಕ ಇದೆ.‌ ಹಾಗಾಗಿ, ಇಂಥಹ ಪ್ರದೇಶಗಳಲ್ಲಿ ಎನ್-95 ಮಾಸ್ಕ್ ಧರಿಸುವುದು ಹಾಗೂ ಅಂತರ ಕಾಯ್ದುಕೊಳ್ಳುವುದು ಉತ್ತಮ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment