ಆಂಗ್ಲರ ಕಾಡಲು ದೋಸ್ತಿಗಳು ರೆಡಿ.. ರೋಹಿತ್ ಸ್ಥಾನಕ್ಕೆ ರಾಹುಲ್, ಕೊಹ್ಲಿ ಸ್ಲಾಟ್​ಗೆ ಮತ್ತೊಬ್ಬ ಕನ್ನಡಿಗ..!

author-image
Ganesh
Updated On
ಆಂಗ್ಲರ ಕಾಡಲು ದೋಸ್ತಿಗಳು ರೆಡಿ.. ರೋಹಿತ್ ಸ್ಥಾನಕ್ಕೆ ರಾಹುಲ್, ಕೊಹ್ಲಿ ಸ್ಲಾಟ್​ಗೆ ಮತ್ತೊಬ್ಬ ಕನ್ನಡಿಗ..!
Advertisment
  • ಆಂಗ್ಲರ​ ಟೆನ್ಶನ್​​ ಹೆಚ್ಚಿಸಿದ ಕರುನಾಡ ‘ದೋಸ್ತಿಗಳು’
  • ಟೆಸ್ಟ್ ಆರಂಭಕ್ಕೂ ಮೊದಲೇ ಕನ್ನಡಿಗರ ವಾರ್ನಿಂಗ್​​
  • ನಾರ್ಥಾಂಪ್ಟನ್​​ನಲ್ಲಿ ರಾಹುಲ್ ಕ್ಲಾಸಿಕ್ ಸೆಂಚುರಿ

ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯ ಆರಂಭಕ್ಕೆ ಬೆರಳೆಣಿಕೆಯ ದಿನಗಳಷ್ಟೇ ಬಾಕಿಯಿದೆ. ಯುವ ಆಟಗಾರರೇ ತುಂಬಿ ಕೊಂಡಿರೋ ಟೀಮ್​ ಇಂಡಿಯಾ ಈ ಸರಣಿಯಲ್ಲಿ ಗೆಲ್ಲುತ್ತೋ..? ಇಲ್ವೋ.? ಎಂಬ ಪ್ರಶ್ನೆಗಿಂತ ನಮಗೆ ಟಫ್​​​ ಕಾಂಪಿಟೇಷನ್ ನೀಡುತ್ತಾ? ಎಂಬ ಚರ್ಚೆ ಇಂಗ್ಲೆಂಡ್​ ಕ್ಯಾಂಪ್​ನಲ್ಲಿ ನಡೆದಿತ್ತು. ಆದ್ರೀಗ ವೀರ ಕನ್ನಡಿಗರ ಬೊಂಬಾಟ್​ ಆಟ ಆಂಗ್ಲರ ಟೆನ್ಶನ್​ ಹೆಚ್ಚಿಸಿದೆ. ಟೀಮ್​ ಇಂಡಿಯಾಗೆ ಕನ್ನಡಿಗರ ಅಭಯ ಸಿಕ್ಕಿದ್ರೆ, ಇಂಗ್ಲೆಂಡ್​ಗೆ ಭಯ ಶುರುವಾಗಿದೆ.

ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್​ ಸರಣಿಗಾಗಿ ಟೀಮ್ ಇಂಡಿಯಾ ಇಂಗ್ಲೆಂಡ್​ತಲುಪಿದೆ. ಈಗಾಗಲೇ ಅಭ್ಯಾಸವನ್ನು ಆರಂಭಿಸಿರುವ ಯುವ ಪಡೆ, ಇದೇ ಜೂನ್​ 20ರಿಂದ ಆರಂಭವಾಗಲಿರುವ ಪ್ರತಿಷ್ಠಿತ ಟೆಸ್ಟ್​ ಸರಣಿಗೆ ಸಜ್ಜಾಗ್ತಿದೆ. ಅನುಭವಿಗಳ ಅಲಭ್ಯತೆಯಲ್ಲಿ ಆಂಗ್ಲರ ವಿರುದ್ಧ ಕಾದಾಡಲು ಯಂಗ್​ ಬ್ರಿಗೆಡ್​ ಸಜ್ಜಾಗಿದೆ. ಇಂಗ್ಲೆಂಡ್​ನ ಚಾಲೆಂಜಿಂಗ್​ ಕಂಡಿಷನ್ಸ್​, ಬೆಂಕಿ ಬೌಲರ್ಸ್​​ ಮುಂದೆ ಟೀಮ್ ಇಂಡಿಯಾದಲ್ಲಿನ ಯಾವ ಆಟಗಾರನ ಆಡ ನಡೆಯುತ್ತೋ.. ಇಲ್ವೋ.. ಗೊತ್ತಿಲ್ಲ. ಬಟ್​.. ಕನ್ನಡಿಗರ ಘರ್ಜನೆಯಂತೂ ಜೋರಾಗಿರೋದು ಪಕ್ಕಾ.

ಇದನ್ನೂ ಓದಿ: ಕೊನೆಗೂ ಭಾರತದಲ್ಲಿ ಲೈಸೆನ್ಸ್ ದಕ್ಕಿಸಿಕೊಂಡ ಸ್ಟಾರ್​ ಲಿಂಕ್; ಇದರ ಹೈ-ಸ್ಪೀಡ್ ಎಷ್ಟು? ರೇಟ್ ದುಬಾರಿನಾ?

publive-image

ಆಂಗ್ಲರ ಕಾಡಲು ‘ದೋಸ್ತಿಗಳು’ ರೆಡಿ

ಕೆ.ಎಲ್.ರಾಹುಲ್, ಟೀಮ್ ಇಂಡಿಯಾದ ಸೀನಿಯರ್ ಆಟಗಾರ. ಕರುಣ್ ನಾಯರ್ 8 ವರ್ಷಗಳ ಬಳಿಕ ಟೆಸ್ಟ್​ ತಂಡಕ್ಕೆ ಕಮ್​ಬ್ಯಾಕ್ ಮಾಡಿರೋ ಧೀರ. ಈ ದೋಸ್ತಿಗಳು ಬರೋಬ್ಬರಿ 8 ವರ್ಷಗಳ ಬಳಿಕ ಟೀಮ್​ ಇಂಡಿಯಾ ಪರ ಜೊತೆಯಾಗಿ ಆಡೋಕೆ ರೆಡಿಯಾಗಿದ್ದಾರೆ. ಚಾಲೆಂಜಿಂಗ್ ಕಂಡೀಷನ್ಸ್​ನಲ್ಲಿ ಆಂಗ್ಲರಿಗೇ ಚಾಲೆಂಜ್​ ಹಾಕಲು ಸಜ್ಜಾಗಿ ನಿಂತಿದ್ದಾರೆ. ಇಂಗ್ಲೆಂಡ್ ಲಯನ್ಸ್​ ಎದುರಿನ ಅನಧಿಕೃತ ಟೆಸ್ಟ್​ನಿಂದಲೇ ಕನ್ನಡಿಗರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಕೆ.ಎಲ್.ರಾಹುಲ್ ಕ್ಲಾಸಿಕ್ ಸೆಂಚುರಿ

ಟೆಸ್ಟ್​ ಸರಣಿಯ ಪ್ರಿಪರೇಷನ್​ ಸಲುವಾಗಿಯೇ ಅನಧಿಕೃತ ಟೆಸ್ಟ್​ನಲ್ಲಾಡುವ ಮನವಿ ಮಾಡಿದ್ದ ಕೆ.ಎಲ್.ರಾಹುಲ್​​​, 2ನೇ ಅನಧಿಕೃತ ಟೆಸ್ಟ್​ನಲ್ಲಿ ಬೊಂಬಾಟ್​​ ಸೆಂಚುರಿ ಸಿಡಿಸಿದ್ದಾರೆ. ನಾರ್ಥಾಂಪ್ಟನ್​​ನಲ್ಲಿ ತನ್ನ ಕ್ಲಾಸಿಕ್​​ ಆಟದೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಸರಾಗವಾಗಿ ರನ್ ಕಲೆಹಾಕಿದ ಕನ್ನಡಿಗ ಇಂಗ್ಲೆಂಡ್ ಬೌಲರ್​ಗಳನ್ನು ಇನ್ನಿಲ್ಲದಂತೆ ಕಾಡಿದದ್ರು. ಎದುರಿಸಿದ 168 ಎಸೆತಗಳಲ್ಲಿ 15 ಬೌಂಡರಿ, 1 ಸಿಕ್ಸರ್ ಸಿಡಿಸಿದ ರಾಹುಲ್​​ 116 ರನ್ ಗಳಿಸಿ ರಿಯಲ್ ಟೆಸ್ಟ್​ಗೆ ಆ್ಯಮ್ ರೆಡಿ ಎಂಬ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ: ನಿಶ್ಚಿತಾರ್ಥ ಆಗಿ ಎರಡೇ ದಿನಕ್ಕೆ ಟೀಂ ಇಂಡಿಯಾ ಡ್ಯೂಟಿಗೆ ಬಂದ ಸ್ಟಾರ್ ಕ್ರಿಕೆಟರ್..!

publive-image

ಕ್ಯಾಂಟರ್ಬರಿಯಲ್ಲಿ ಕರುಣ್ ನಾಯರ್ ಕಮಾಲ್​..!

ಕೆ.ಎಲ್.ರಾಹುಲ್ ಮಾತ್ರವಲ್ಲ. ಕ್ಯಾಂಟರ್ಬರಿಯಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಕರುಣ್ ನಾಯರ್​ ಕಮಾಲ್ ಮಾಡಿದ್ರು. ಪಂದ್ಯದಲ್ಲಿ ಅಷ್ಟ ದಿಕ್ಕುಗಳಿಗೂ ಚಂಡಿನ ದರ್ಶನ ಮಾಡಿಸಿದ್ದ ಕರುಣ್ ನಾಯರ್​, ಡಬಲ್​ ಸೆಂಚುರಿ ಸಿಡಿಸಿದ್ರು. ಬರೋಬ್ಬರಿ 281 ಎಸೆತ ಎದುರಿಸಿ ಬಿಗ್ ಇನ್ನಿಂಗ್ಸ್​ನಲ್ಲಿ ಕರುಣ್ ನಾಯರ್ 26 ಬೌಂಡರಿ, 1 ಸಿಕ್ಸರ್​ ಒಳಗೊಂಡ 204 ರನ್ ಗಳಿಸಿದ್ರು. ತನ್ನ ಆಟದಿಂದಲೇ ಟೆಸ್ಟ್​ ತಂಡದ ಆಯ್ಕೆ ಸಮರ್ಥಿಸಿಕೊಂಡ ಕರುಣ್​​ಗೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಸಿಗೋದು ಪಕ್ಕಾ.! ಅಂಗ್ಲರ ವಿರುದ್ಧ ಘರ್ಜಿಸೋದು ಪಕ್ಕಾ.!

ರೋಹಿತ್​ ಸ್ಥಾನಕ್ಕೆ ರಾಹುಲ್​​​​.. ಕೊಹ್ಲಿ ಸ್ಲಾಟ್​ಗೆ..?

ಆರಂಭಿಕನಾಗಿ ಆಡಿರುವ ಅನುಭವ ಹೊಂದಿರುವ ಕೆ.ಎಲ್.ರಾಹುಲ್​ಗೆ ಇಂಗ್ಲೆಂಡ್​ ಕಂಡಿಷನ್ಸ್​ ಬಗ್ಗೆ ಚನ್ನಾಗಿ ಅರಿವಿದೆ. ಅಂಗ್ಲರ ನಾಡಲ್ಲಿ ಉತ್ತಮ ಟ್ರ್ಯಾಕ್ ರೆಕಾರ್ಡ್​ ಕೂಡ ಹೊಂದಿದ್ದಾರೆ. ಈ ಹಿಂದಿನ ಆಸ್ಟ್ರೇಲಿಯಾ ಪ್ರವಾಸದಲ್ಲೂ ಕನ್ಸಿಸ್ಟೆಂಟ್​ ಆಟವಾಡಿದ್ದ ರಾಹುಲ್, ಇಂಗ್ಲೆಂಡ್ ಲಯನ್ಸ್​ ಎದುರು ಆರಂಭಿಕನಾಗಿ ಶತಕ ಸಿಡಿಸಿದ್ದಾರೆ. ಹೀಗಾಗಿ ಮಿಡಲ್​ ಆರ್ಡರ್​ ಬದಲಿಗೆ ರೋಹಿತ್​ ಶರ್ಮಾರಿಂದ ತೆರವಾದ ಆರಂಭಿಕನ ಸ್ಥಾನದಲ್ಲಿ ರಾಹುಲ್​ ಆಡಲಿದ್ದಾರೆ.

ಇದನ್ನೂ ಓದಿ: ಶ್ರೇಯಸ್ ಅಯ್ಯರ್ ಬಗ್ಗೆ ಶಾಕಿಂಗ್ ನ್ಯೂಸ್​ ಕೊಟ್ಟ ಬಾಲಿವುಡ್ ಬ್ಯೂಟಿ.. ಮದುವೆ, ಮಕ್ಕಳು ಏನಿದು..?

publive-image

ಮಿಡಲ್ ಆರ್ಡರ್​​ ಬ್ಯಾಟರ್ ಆಗಿರುವ ಕರುಣ್​ಗೆ, 4ನೇ ಕ್ರಮಾಂಕದಲ್ಲಿ ಆಡಿದ ಅನುಭವ ಇದೆ. ಅನಧಿಕೃತ ಟೆಸ್ಟ್​ ಸರಣಿಯಲ್ಲಿ 3 ಹಾಗೂ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ಕರುಣ್​​​​​​​​​​​​​​​​, ಸಕ್ಸಸ್​ ಕೂಡ ಕಂಡಿದ್ದಾರೆ. ಇದೇ ಇಂಗ್ಲೆಂಡ್​ನಲ್ಲಿ ಕೌಂಟಿ ಕ್ರಿಕೆಟ್​ನಲ್ಲೂ ಆಡಿದ ಅನುಭವವಿದೆ. ಕಂಡಿಷನ್ಸ್​ ಬಗ್ಗೆ ಅರಿವಿರೋ ಕರುಣ್​, ಸದ್ಯ ರೆಡ್​ ಹಾಟ್​ ಫಾರ್ಮ್​ನಲ್ಲಿದ್ದು ಕೊಹ್ಲಿಯಿಂದ ತೆರವಾದ4ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸೋ ಸಾಧ್ಯತೆ ದಟ್ಟವಾಗಿದೆ.

ಟೀಮ್ ಇಂಡಿಯಾಗೆ ಕನ್ನಡಿಗರ ಅಭಯ..

ಇಂಗ್ಲೆಂಡ್ ಸರಣಿ ಆರಂಭಕ್ಕೂ ಮುನ್ನ ಕನ್ನಡಿಗರು ನೀಡಿರುವ ಪ್ರದರ್ಶನ, ಟೀಮ್ ಇಂಡಿಯಾ ಕ್ಯಾಂಪ್​ನಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಇಂಗ್ಲೆಂಡ್ ಸರಣಿಯಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ವಿಭಾಗಕ್ಕೆ ಇವರಿಬ್ಬರೇ ರಕ್ಷಕರಾಗುವ ಭರವಸೆಯೂ ಮೂಡಿದೆ. ಅತ್ತ ಇಂಗ್ಲೆಂಡ್​ ಪಾಳಯದಲ್ಲಿ ಇವರಿಬ್ಬರ ಆಟ ಆತಂಕ ಮೂಡಿಸಿದೆ. ಸದ್ಯದ ಫಾರ್ಮ್​ ಒಂದು ತಲೆನೋವಾದ್ರೆ ಇಂಗ್ಲೆಂಡ್ ಎದುರು ಹಾಗೂ ಇಂಗ್ಲೆಂಡ್ ಕಂಡೀಷನ್ಸ್​ನಲ್ಲಿ ಇವರಿಬ್ಬರ ಟ್ರ್ಯಾಕ್ ರೆಕಾರ್ಡ್​ ಟೆನ್ಶನ್​ಗೆ ಇನ್ನೊಂದು ಕಾರಣವಾಗಿದೆ.
ಕೆ.ಎಲ್.ರಾಹುಲ್ ಇಂಗ್ಲೆಂಡ್​​ನಲ್ಲಿ ಆಡಿದ 9 ಟೆಸ್ಟ್​ಗಳಿಂದ 2 ಶತಕ, 1 ಅರ್ಧಶತಕ ಒಳಗೊಂಡ 614 ರನ್ ಗಳಿಸಿದ್ದಾರೆ. ಕರುಣ್ ನಾಯರ್​, ಇಂಗ್ಲೆಂಡ್ ಎದುರು ತ್ರಿಶತ ಸಿಡಿಸಿದ ದಾಖಲೆ ಹೊಂದಿದ್ದಾರೆ. ಇಂಗ್ಲೆಂಡ್​ನ ಕೌಂಟಿ ಚಾಂಪಿಯನ್ ಶಿಪ್​​​ನಲ್ಲೂ ಸಾಲಿಡ್ ಬ್ಯಾಟಿಂಗ್ ನಡೆಸಿರುವ ಕರುಣ್, 10 ಪಂದ್ಯಗಳಿಂದ 776 ರನ್​ ಗಳಿಸಿದ್ದಾರೆ. ಇದೀಗ ಸರಣಿಗೂ ಮುನ್ನ ಇವರಿಬ್ಬರು ಅಬ್ಬರದ ಆಟವಾಡಿದ್ದಾರೆ. ಟೀಮ್ ಇಂಡಿಯಾ ಪಾಲಿಗೆ ಅಭಯವಾಗಿದ್ರೆ, ಇಂಗ್ಲೆಂಡ್​ ತಂಡದಲ್ಲಿ ಭಯ ಹುಟ್ಟುಹಾಕಿದೆ.

ಇದನ್ನೂ ಓದಿ: ಇವತ್ತು ಸ್ಟಾರ್​ ಬ್ಯಾಟರ್​ ರಿಂಕು ಸಿಂಗ್ ನಿಶ್ಚಿತಾರ್ಥ.. ಹುಡುಗಿ ಯಾರು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment