/newsfirstlive-kannada/media/post_attachments/wp-content/uploads/2024/03/ROHIT_KOHLI.jpg)
ಬಾರ್ಬಡೋಸ್​​​ನಲ್ಲಿ ಟೀಮ್ ಇಂಡಿಯಾ ಟಾಪ್​ ಆರ್ಡರ್​​​ ಕುಸಿದಿದೆ. ಘಟಾನುಘಟಿ ಬ್ಯಾಟರ್​ಗಳು ಮಂಕಾದ್ರು. ಕ್ಯಾಪ್ಟನ್ ರೋಹಿತ್ ಶರ್ಮಾ​ರಿಂದ ಹಿಡಿದು ಶಿವಂ ದುಬೆವರೆಗೆ ಎಲ್ಲರೂ ಸಿಲ್ಲಿಯಾಗಿ ವಿಕೆಟ್​​​​​ ಒಪ್ಪಿಸಿದ್ರು. ಆ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ್ರು.
ರೋಹಿತ್ ಶರ್ಮಾ, ರಿಷಬ್ ಪಂತ್, ವಿರಾಟ್ ಕೊಹ್ಲಿ ಹಾಗೂ ಶಿವಂ ದುಬೆ ಅಟ್ಟರ್ ಫ್ಲಾಪ್ ಆಗಿದ್ದಾರೆ. ಬಾರ್ಬಡೋಸ್​ನಲ್ಲಿ ಟೀಮ್​​​​ ಇಂಡಿಯಾ ಟಾಪ್ ಆರ್ಡರ್​ ಬರ್ಬಾದ್​​​​​​​​ ಆದ ಬಗೆ ಇದು. ಅಪ್ಘಾನಿಸ್ತಾನದ ಸ್ಪಿನ್ ದಾಳಿಗೆ ಪರದಾಡಿದ ಟೀಮ್ ಇಂಡಿಯಾ ಸ್ಟಾರ್​​ ಬ್ಯಾಟ್ಸ್​​ಮನ್​ಗಳು ಅನಾವಶ್ಯಕವಾಗಿ ವಿಕೆಟ್​ ​ ಕೈಚೆಲ್ಲಿದ್ದಾರೆ.
/newsfirstlive-kannada/media/post_attachments/wp-content/uploads/2024/04/SHIVAM_DUBE_1.jpg)
ನಾಯಕ ರೋಹಿತ್​​​​ ಬೇಜವಾಬ್ದಾರಿ ಶಾಟ್​​​​​​..!
ಅಫ್ಘಾನಿಸ್ತಾನ ವಿರುದ್ಧ ಕ್ಯಾಪ್ಟನ್ ರೋಹಿತ್​ ಬ್ಯಾಟ್ ಸೌಂಡ್​​ ಮಾಡುತ್ತೆ ಎಂದು ಎಲ್ಲರೂ ಭಾವಿಸಿದ್ರು. ಆದ್ರೆ ಹಿಟ್​ಮ್ಯಾನ್​​ ಆ ಭರವಸೆಯನ್ನ ಹುಸಿಯಾಗಿಸಿದ್ರು. 119 ಕಿ.ಮೀ ಸ್ಪೀಡ್​​​​ನಲ್ಲಿ ಬಂದ ಫುಲ್​​​ ಬಾಲ್​ ಅನ್ನ ಬೇಜವಾಬ್ದಾರಿಯಾಗಿ ಆಡಲು ಹೋಗಿ ವಿಕೆಟ್​​ ಬೆಲೆ ತೆತ್ತರು. ರೋಹಿತ್​​​ 13 ಎಸೆತ, 8 ರನ್ ಮಾತ್ರ ಗಳಿಸಿದರು.​
ಆತುರಕ್ಕೆ ಬಲಿಯಾದ ರಿಷಬ್​ ಪಂತ್​
ಮೊದಲ ಎಸೆತದಿಂದ ಅಬ್ಬರ ಶುರುವಿಟ್ಟುಕೊಂಡ ರಿಷಬ್​ ಪಂತ್​ ಪಟಪಟನೇ 4 ಬೌಂಡಿಗಳನ್ನ ಚಚ್ಚಿದ್ರು. ಉತ್ತಮವಾಗಿ ಆಡ್ತಿದ್ದ ಪಂತ್​​​ ಸ್ಪಿನ್​ ಮಾಂತ್ರಿಕ ರಶೀದ್​ ಖಾನ್​ ಬೌಲಿಂಗ್​ನಲ್ಲಿ ಆತುರಕ್ಕೆ ಬಿದ್ದು, ರಿವರ್ಸ್​ ಸ್ವೀಪ್ ಆಡಲು ಹೋಗಿ 11 ಎಸೆತಗಳಲ್ಲಿ 20 ರನ್ ಗಳಿಸಿ ವಿಕೆಟ್​ ಒಪ್ಪಿಸಿದ್ರು.
4ನೇ ಗೇರ್​​ನಲ್ಲಿ ಕೊಹ್ಲಿ ಬ್ಯಾಟಿಂಗ್​
ಸೂಪರ್​​​​​-8 ನಲ್ಲಿ ಕಿಂಗ್​ ಕೊಹ್ಲಿ ಕಮ್​​ಬ್ಯಾಕ್​ ಕನಸು ಭಗ್ನಗೊಳ್ತು. ಅಫ್ಘಾನ್​ ಎದುರು ರನ್ ಗಳಿಸಲು ಹೆಣಗಾಡಿದ ಕೊಹ್ಲಿ 4ನೇ ಗೇರ್​​ನಲ್ಲಿ ಬ್ಯಾಟ್ ಬೀಸಿದ್ರು. 24 ಎಸೆತದಲ್ಲಿ 24 ರನ್ ಗಳಿಸಿ ಲಾಂಗ್​ ಆಫ್​​ನಲ್ಲಿ ಕ್ಯಾಚ್​ ನೀಡಿ ಹೊರನಡೆದ್ರು.
ಇದನ್ನೂ ಓದಿ:ಅಂತಾರಾಷ್ಟ್ರೀಯ ಯೋಗ ದಿನ.. ಉತ್ತಮ ಆರೋಗ್ಯಕ್ಕಾಗಿ ಯೋಗ..!
/newsfirstlive-kannada/media/post_attachments/wp-content/uploads/2024/06/RISHAB_PANT_NEW_1.jpg)
ದುಬೆಗೆ ಇನ್ನೆಷ್ಟು ಚಾನ್ಸ್ ಕೊಡ್ಬೇಕು..?
ಇನ್ನು ಫ್ಲಾಫ್​​ಶೋಮ್ಯಾನ್​ ಶಿವಂ ದುಬೆ ಮತ್ತೊಮ್ಮೆ ತಂಡಕ್ಕೆ ಭಾರವಾದ್ರು. ಎದುರಿಸಿದ 7ನೇ ಎಸೆತದಲ್ಲಿ ರಶೀದ್ ಖಾನ್​ ಬೌಲಿಂಗ್​​ನಲ್ಲಿ ಸ್ಪಿನ್​ ಬಲೆಗೆ ಬಿದ್ರು. ಇಂತಹ ಫೇಲ್ಯೂರ್​ ಮಹಾಶಯನಿಗೆ ಇಷ್ಟೊಂದು ಚಾನ್ಸ್​​ ಯಾಕೆ ಅನ್ನೋದನ್ನ ಟೀಮ್​ ಮ್ಯಾನೇಜ್​ಮೆಂಟ್​​​​​​ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.
ಮಹತ್ವದ ಸ್ಟೇಜ್​​ನಲ್ಲಿ ಭಾರತಕ್ಕೆ ಟಾಪ್​ ಆರ್ಡರ್ಸ್​ ಕೈಕೊಡ್ತಿದ್ದಾರೆ. ಈ ತಪ್ಪನ್ನ ಸ್ಟಾರ್ ಬ್ಯಾಟರ್ಸ್​ ಆದಷ್ಟು ಬೇಗನೆ ತಿದ್ದಿಕೊಳ್ಳಲಿ. ಆಗಲೇ ಬಾಂಗ್ಲಾದೇಶ ವಿರುದ್ಧ ಟಾಪ್ ಆರ್ಡರ್​ ಬ್ಯಾಟ್ಸ್​ಮನ್​ಗಳಿಂದ ಟಾಪ್​​​​ ಕ್ಲಾಸ್​ ಆಟ ಮೂಡಿಬರಲು ಸಾಧ್ಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us