/newsfirstlive-kannada/media/post_attachments/wp-content/uploads/2024/06/ROHIT_RASHID.jpg)
ಸೂಪರ್​​ 8ನ ಮೊದಲ ಪಂದ್ಯದಲ್ಲೇ, ಟೀಮ್​ ಇಂಡಿಯಾಗೆ ದೋಸ್ತ್​​ಗಳ ಸವಾಲು ಎದುರಾಗ್ತಿದೆ. ಬಾರ್ಬಡೋಸ್​ನಲ್ಲಿ ನಡೆಯೋ ಪಂದ್ಯದಲ್ಲಿ ಅಫ್ಘಾನಿಸ್ತಾನ ಪಡೆಯನ್ನ ರೋಹಿತ್​ ಪಡೆ ಎದುರಿಸಲಿದೆ. ದೋಸ್ತ್​ಗಳು ಎಂದುಕೊಂಡು ಫುಲ್​ ರಿಲ್ಯಾಕ್ಸ್ಡ್​​ ಆಗಿ ಕಣಕ್ಕಿಳಿದ್ರೆ, ನೂರಕ್ಕೆ 100ರಷ್ಟು ಶಾಕ್​ ಪಕ್ಕಾ. ಅತಿಯಾದ ಆತ್ಮವಿಶ್ವಾಸದಲ್ಲಿ ಮೈದಾನಕ್ಕಿಳಿದ್ರೆ, ದೋಸ್ತ್​​ಗಳೇ ವಿಲನ್​ ಆಗಿ ಬಿಡ್ತಾರೆ.
ಯಾಮಾರಿದ್ರೆ ‘ದೋಸ್ತ್’​ಗಳೇ ‘ವಿಲನ್’​.!
ಲೀಗ್​ ಸ್ಟೇಜ್​ನಲ್ಲಿ ಹ್ಯಾಟ್ರಿಕ್​ ಗೆಲುವು ಸಾಧಿಸಿರುವ ಟೀಮ್​ ಇಂಡಿಯಾ ಸೋಲಿಲ್ಲದ ಸರದಾರನಂತೆ ಸೂಪರ್​-8 ಹಂತಕ್ಕೆ ಕಾಲಿಟ್ಟಿದೆ. ಅಮೆರಿಕದಿಂದ ವೆಸ್ಟ್ ಇಂಡೀಸ್​ಗೆ ಕಾಲಿಟ್ಟಿರುವ ರೋಹಿತ್​ ಪಡೆ ಇದೀಗ, ಮಹತ್ವದ ಪಂದ್ಯಗಳನ್ನಾಡಲು ಸಜ್ಜಾಗಿದೆ. ಮೊದಲ ಪಂದ್ಯದಲ್ಲೇ ದೋಸ್ತ್​​ ಅಫ್ಘಾನಿಸ್ತಾನದ​ ಸವಾಲು ಎದುರಾಗಲಿದೆ. ಟೀಮ್​ ಇಂಡಿಯಾದ ಬಹುತೇಕ ಆಟಗಾರರಿಗೆ ಅಫ್ಘಾನ್​ ಪಡೆಯ ಆಟಗಾರರು ದೋಸ್ತ್​​ಗಳಿದ್ದಾರೆ. ಹಾಗೆಂದುಕೊಂಡು ಫುಲ್​ ರಿಲ್ಯಾಕ್ಸ್​ ಆದ್ರೆ, ದೋಸ್ತ್​​ಗಳೇ ವಿಲನ್​ ಆಗ್ಬಿಡ್ತಾರೆ. ವಿಶ್ವಕಪ್​ನಲ್ಲಿ ಅಫ್ಘಾನ್​​​ ಆಟಗಾರರು ಅಂತಾ ಪರ್ಫಾಮೆನ್ಸ್​ ನೀಡ್ತಿದ್ದಾರೆ.
ಇದನ್ನೂ ಓದಿ: ಪುರುಷತ್ವ ಪರೀಕ್ಷೆಗೆ ಹೋಗಲು ಪ್ರಜ್ವಲ್ ರೇವಣ್ಣ ಅಳಲು; ಪರಿ, ಪರಿಯಾಗಿ ಕೇಳಿಕೊಂಡಿದ್ದೇನು?
/newsfirstlive-kannada/media/post_attachments/wp-content/uploads/2024/06/ROHIT-6.jpg)
ವಿಶ್ವಕಪ್​ ಅಖಾಡದಲ್ಲಿ ಫಾರೂಕಿ ಬೆಂಕಿ-ಬಿರುಗಾಳಿ.!
ಚುಟುಕು ವಿಶ್ವಕಪ್​ ದಂಗಲ್​ನಲ್ಲಿ ಅಫ್ಘಾನಿಸ್ತಾನ ಆಟಗಾರರು ಅಬ್ಬರದ ಪರ್ಫಾಮೆನ್ಸ್​ ನೀಡ್ತಿದ್ದಾರೆ. ತಂಡದ ವೇಗಿ ಫಝಲ್​ಹಕ್​ ಫಾರೂಕಿಯಂತೂ ಧೂಳೆಬ್ಬಿಸಿದ್ದಾರೆ. ಫಾರೂಕಿಯ ಬೌಲಿಂಗ್​ ದಾಳಿಗೆ ಬ್ಯಾಟ್ಸ್​ಮನ್​ಗಳು ತತ್ತರಿಸಿ ಹೋಗಿದ್ದಾರೆ. ವಿಶ್ವಕಪ್​​ನ ಪರ್ಫಾಮೆನ್ಸ್​ ಟೀಮ್​ ಇಂಡಿಯಾ ಬ್ಯಾಟರ್​​ಗಳಿಗೆ ವಾರ್ನಿಂಗ್​ ಬೆಲ್​ ಅಂದ್ರೂ ತಪ್ಪಾಗಲ್ಲ.
ವಿಶ್ವಕಪ್​​ ಫಾರೂಕಿ ಪ್ರದರ್ಶನ
ಟಿ20 ವಿಶ್ವಕಪ್​​ ಟೂರ್ನಿಯಲ್ಲಿ 3 ಪಂದ್ಯ ಆಡಿರುವ ಫಝಲ್​ಹಲ್​ ಫಾರೂಕಿ, 11.2 ಓವರ್​ ಬೌಲಿಂಗ್​ ಮಾಡಿದ್ದಾರೆ. ಬರೋಬ್ಬರಿ 12 ವಿಕೆಟ್​ ಬೇಟೆಯಾಡಿದ್ದು, 3.71ರ ಎಕಾನಮಿಯಲ್ಲಿ ರನ್​ ಬಿಟ್ಟು ಕೊಟ್ಟಿದ್ದಾರೆ.
ವಿಂಡೀಸ್​ ನಾಡಲ್ಲಿ ಧೂಳೆಬ್ಬಿಸಿದ ನವೀನ್​.!
ವೇಗಿ ನವಿನ್​ ಉಲ್​ ಹಕ್​ ಕೂಡ ವಿಂಡೀಸ್​ನಲ್ಲಿ ಧೂಳೆಬ್ಬಿಸಿದ್ದಾರೆ. ನವೀನ್​ ಉಲ್​​ ಹಕ್​​ ಬೌಲಿಂಗ್​ನಲ್ಲಿ ಬ್ಯಾಟ್ಸ್​ಮನ್​ಗಳು ರನ್​ಗಳಿಕೆಗೆ ಅಕ್ಷರಶಃ ಪರದಾಡಿದ್ದಾರೆ. ಆಡಿದ 3 ಪಂದ್ಯಗಳಲ್ಲಿ 7.5 ಓವರ್​ ಮಾತ್ರ ಬೌಲಿಂಗ್​ ಮಾಡಿ 4 ವಿಕೆಟ್​ ಉರುಳಿಸಿದ್ದಾರೆ. ಕೇವಲ 2.30ರ ಎಕಾನಮಿಯಲ್ಲಿ ರನ್​ ಬಿಟ್ಟು ಕೊಟ್ಟಿದ್ದಾರೆ.
3 ಪಂದ್ಯ, 6 ವಿಕೆಟ್​.. ರಶೀದ್ ಖಾನ್​​​ ಮೋಡಿ.!
ಸ್ಪಿನ್​ ಮಾಂತ್ರಿಕ, ಅಫ್ಘಾನ್​​ ತಂಡದ ಕ್ಯಾಪ್ಟನ್​ ರಶೀದ್​ ಖಾನ್​, ಕೆರಬಿಯನ್​ ನಾಡಲ್ಲಿ ಮೋಡಿ ಮಾಡಿದ್ದಾರೆ. ಸ್ಪಿನ್​ ಮ್ಯಾಜಿಕ್​ನಿಂದಲೇ ಎದುರಾಳಿ ಪಡೆಗಳನ್ನ ಕಾಡಿರುವ 3 ಪಂದ್ಯಗಳಲ್ಲೇ 6 ವಿಕೆಟ್​ ಬೇಟೆಯಾಡಿದ್ದಾರೆ. 12 ಬೌಲಿಂಗ್​ ಮಾಡಿದ್ದು, ಕೇವಲ 4.50ರ ಎಕಾನಮಿ ಹೊಂದಿದ್ದಾರೆ. ಸಾಲಿಡ್​ ಫಾರ್ಮ್​ನಲ್ಲಿರೋ ರಶೀದ್​​, ಭಾರತದ ಬ್ಯಾಟರ್​​ಗಳ ಸವಾಲಾಗೋ ಸಾಧ್ಯತೆ ದಟ್ಟವಾಗಿದೆ.
ಗುರ್ಬಾಜ್​​ ಅಬ್ಬರದ ಮುಂದೆ ಬೌಲರ್ಸ್​ ಥಂಡಾ.!
ಬ್ಯಾಟಿಂಗ್​ನಲ್ಲೂ ಅಫ್ಘಾನ್​ ಆಟಗಾರರು ಬೊಂಬಾಟ್​ ಪರ್ಫಾಮೆನ್ಸ್​ ನೀಡಿದ್ದಾರೆ. ಆರಂಭಿಕ ಆಟಗಾರ ರೆಹಮಾನುಲ್ಲಾ ಗುರ್ಬಾಜ್​​ ವಿಶ್ವಕಪ್​ನ ಟಾಪ್​​ ರನ್​ ಸ್ಕೋರರ್​ ಆಗಿ ಹೊರ ಹೊಮ್ಮಿದ್ದಾರೆ. 154.63ರ ಸ್ಟ್ರೈಕ್​ರೇಟ್​ನಲ್ಲಿ ಬೌಂಡರಿ-ಸಿಕ್ಸರ್​ ಸುರಿಮಳೆ ಸುರಿಸಿದ್ದಾರೆ. 3 ಪಂದ್ಯಗಳಲ್ಲಿ ಕನ್ಸಿಸ್ಟೆಂಟ್​ ಬ್ಯಾಟಿಂಗ್​ ನಡೆಸಿರೋ ಗುರ್ಬಾಜ್​,​ 55.67ರ ಸರಾಸರಿಯಲ್ಲಿ 167 ರನ್​ಗಳನ್ನ ಚಚ್ಚಿದ್ದಾರೆ.
/newsfirstlive-kannada/media/post_attachments/wp-content/uploads/2024/06/ROHIT-12.jpg)
ಸೈಲೆಂಟಾಗೆ ಕತೆ ಮುಗಿಸ್ತಾರೆ​ ಇಬ್ರಾಹಿಂ ಝರ್ದಾನ್.!
ಅಫ್ಘಾನ್​​​ ತಂಡದ ಇನ್ನೊರ್ವ ಬ್ಯಾಟ್ಸ್​ಮನ್​ ಇಬ್ರಾಹಿಂ ಝರ್ದಾನ್​ ಕೂಡ ಎದುರಾಳಿಗಳ ಬೌಲಿಂಗ್​ ದಾಳಿಯನ್ನ ಚಿಂದಿ ಉಡಾಯಿಸಿದ್ದಾರೆ. 3 ಪಂದ್ಯಗಳಲ್ಲಿ 114 ರನ್​ಗಳಿಸಿರೋ ಝರ್ಧಾನ್​, 38ರ ಸರಾಸರಿ ಹೊಂದಿದ್ದಾರೆ. ಸೈಲೆಂಟಾಗೆ ಇನ್ನಿಂಗ್ಸ್​ ಕಟ್ಟೋ, ಈ ಬ್ಯಾಟರ್​ ಟೀಮ್​ ಇಂಡಿಯಾ ಬೌಲರ್ಸ್​ಗೆ ಸವಾಲಾಗಲಿದ್ದಾರೆ.
ಕ್ರಿಕೆಟ್​ ವಲಯದಲ್ಲಿ ಟೀಮ್​ ಇಂಡಿಯಾದ ಸೂಪರ್​ ಸ್ಟಾರ್​​ಗಳ ಮುಂದೆ ಅಫ್ಘಾನಿಸ್ತಾನ ಆಟ ನಡೆಯಲ್ಲ ಅನ್ನೋ ಒಂದು ಇಮೇಜ್​ ಇದೆ. ಆದ್ರೆ, ಈ ಬಾರಿ ಅಫ್ಘಾನ್​​ ಆಟಗಾರರು ನೀಡಿರುವ ಪರ್ಫಾಮೆನ್ಸ್​​ ನೋಡಿದ್ರೆ, ಆ ಇಮೇಜ್​ ಸುಳ್ಳಾಗೋ ಸಾಧ್ಯತೆ ದಟ್ಟವಾಗಿದೆ. ಟೀಮ್​ ಇಂಡಿಯಾ ಎಚ್ಚರಿಕೆಯ ಹೆಜ್ಜೆ ಇಟ್ರೆ ಮಾತ್ರ ಗೆಲುವು ನಮ್ಮದಾಗಲಿದೆ. ಸ್ವಲ್ಪ ಯಾಮಾರಿದ್ರೂ ಸಂಕಷ್ಟ ತಪ್ಪಿದ್ದಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us