IND vs AUS: ರೋಚಕ ಘಟ್ಟ ತಲುಪಿದ ಮೂರನೇ ಟೆಸ್ಟ್; ಟೀಂ ಇಂಡಿಯಾ ಗೆಲುವಿಗೆ ಇದೆ ಚಾನ್ಸ್..!

author-image
Ganesh
Updated On
IND vs AUS: ರೋಚಕ ಘಟ್ಟ ತಲುಪಿದ ಮೂರನೇ ಟೆಸ್ಟ್; ಟೀಂ ಇಂಡಿಯಾ ಗೆಲುವಿಗೆ ಇದೆ ಚಾನ್ಸ್..!
Advertisment
  • ಗಬ್ಬಾ ಟೆಸ್ಟ್​ನಲ್ಲಿ ಭಾರತ ಗೆಲ್ಲಲು ಎಷ್ಟು ರನ್ ಬೇಕು
  • 2ನೇ ಇನ್ನಿಂಗ್ಸ್​ನಲ್ಲಿ 89 ರನ್​ಗಳಿಸಿ ಆಸ್ಟ್ರೇಲಿಯಾ ಡಿಕ್ಲೇರ್
  • ಮೂರು ವಿಕೆಟ್ ಕಿತ್ತ ಬುಮ್ರಾ, ಸಿರಾಜ್​, ದೀಪ್​ಗೂ 2 ವಿಕೆಟ್

ಗಬ್ಬಾ ಟೆಸ್ಟ್​ ಕೊನೇಯ ದಿನವಾದ ಇವತ್ತು ರೋಚಕ ಘಟ್ಟ ತಲುಪಿದೆ. ಇಂದು ಬೆಳಗ್ಗೆ ಮಳೆರಾಯ ಪಂದ್ಯ ಆರಂಭಕ್ಕೆ ಅಡ್ಡಿಪಡಿಸಿದ. ಮಳೆಯ ನಡುವೆಯೂ ಪಂದ್ಯ ಆರಂಭ ಆಗ್ತಿದ್ದಂತೆ, ಭಾರತ 260 ರನ್​​ಗೆ ಮೊದಲ ಇನ್ನಿಂಗ್ಸ್ ಮುಗಿಸಿತು.

ಎರಡನೇ ಇನ್ನಿಂಗ್ಸ್​ಗೆ ಇಳಿದ ಆಸ್ಟ್ರೇಲಿಯಾ ಟೀಂ ಇಂಡಿಯಾ ಬೌಲರ್ಸ್​ ಬಿಗ್ ಶಾಕ್ ನೀಡಿದರು. ಬೂಮ್ರಾ, ಸಿರಾಜ್ ಹಾಗೂ ಆಕಾಶ್ ದೀಪ್ ವಿಕೆಟ್ ಮೇಲೆ ವಿಕೆಟ್ ಕಿತ್ತರು. ಬೂಮ್ರಾ 3, ಸಿರಾಜ್ ಹಾಗೂ ಆಕಾಶ್ ದೀಪ್ ತಲಾ ಎರಡು ವಿಕೆಟ್ ಪಡೆದರು. ಪರಿಣಾಮ ಆಸ್ಟ್ರೇಲಿಯಾ 7 ವಿಕೆಟ್ ಕಳೆದುಕೊಂಡು ಕೇವಲ 89 ರನ್​ಗಳಿಸಿತ್ತು. ನಂತರ ಆಸ್ಟ್ರೇಲಿಯಾ ಡಿಕ್ಲೇರ್ ಮಾಡಿಕೊಂಡಿತು.

ಇದನ್ನೂ ಓದಿ:ಪುಷ್ಪಾ 2 ಸಿನಿಮಾ ವೇಳೆ ನಡೆದ ಕಾಲ್ತುಳಿತ; ಮೃತ ರೇವತಿ ಮಗನ ಆರೋಗ್ಯ ಸ್ಥಿತಿ ಚಿಂತಾಜನಕ !

ಮೊದಲ ಇನ್ನಿಂಗ್ಸ್​ನಲ್ಲಿ 185 ರನ್​ಗಳ ಹಿನ್ನಡೆ ಅನುಭವಿಸಿರುವ ಟೀಂ ಇಂಡಿಯಾಗೆ 274 ರನ್​ಗಳ ಗುರಿಯನ್ನ ನೀಡಿದೆ. ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡ ವಿಕೆಟ್​ನಷ್ಟವಿಲ್ಲದೇ 8 ರನ್​ಗಳಿಸಿದೆ. ಇದೀಗ ಗೆಲ್ಲಬೇಕು ಎಂದರೆ ಭಾರತ 267 ರನ್​ಗಳನ್ನು ಬಾರಿಸಬೇಕಿದೆ. ಅದು ಸಾಧ್ಯವಾಗದಿದ್ದರೆ ಸುಲಭವಾಗಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಅವಕಾಶ ಕೂಡ ಭಾರತಕ್ಕೆ ಇದೆ.

ಇದನ್ನೂ ಓದಿ:ಯಾರ ಪ್ರಭಾವಕ್ಕೂ ಒಳಗಾಗಿಲ್ಲ, ಗಾಡ್​ಫಾದರ್ ಇಲ್ಲ; ಐಐಟಿ ಪದವೀಧರ ಕೋಟ್ಯಾಧಿಪತಿ ಆಗಿದ್ದು ಹೇಗೆ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment