/newsfirstlive-kannada/media/post_attachments/wp-content/uploads/2024/12/Bumrah.jpg)
ಮೆಲ್ಬೋರ್ನ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಆಸಿಸ್ ಓಪನಿಂಗ್ ಬ್ಯಾಟ್ಸ್​ಮನ್ ಸ್ಯಾಮ್ ಕಾನ್​ಸ್ಟಸ್​ ಟೀಂ ಇಂಡಿಯಾ ಬೌಲರ್​​ಗಳನ್ನು ಮನಸೋ ಇಚ್ಛೆ ಕಾಡಿದ್ದರು. ಎರಡನೇ ಇನ್ನಿಂಗ್ಸ್​ನಲ್ಲಿ ಅವರ ಆಟ ಬುಮ್ರಾ ಮುಂದೆ ನಡೆಯಲಿಲ್ಲ.
19 ವರ್ಷದ ಆಟಗಾರನ ವಿರುದ್ಧ ಸೇಡು ತೀರಿಸಿಕೊಳ್ಳುವ ಮೂಲಕ ಬುಮ್ರಾ ಟಕ್ಕರ್ ನೀಡಿದ್ದಾರೆ. ನಾಲ್ಕನೇ ದಿನವಾದ ಇಂದು ಟೀಂ ಇಂಡಿಯಾ 369ಕ್ಕೆ ಆಲೌಟ್ ಆಗಿ ಮೊದಲ ಇನ್ನಿಂಗ್ಸ್ ಮುಗಿಸಿತು. 105 ರನ್‌ಗಳ ಮುನ್ನಡೆ ಸಾಧಿಸಿದ ಆಸ್ಟ್ರೇಲಿಯಾ ಮತ್ತೆ ಬ್ಯಾಟಿಂಗ್​ಗೆ ಬಂದಿದೆ.
ಎರಡನೇ ಇನ್ನಿಂಗ್ಸ್​ ವೇಳೆ ಸ್ಯಾಮ್​​ ಅವರಿಗೆ ಮೊದಲ ಓವರ್​ನಿಂದಲೇ ಬುಮ್ರಾ ಬಲೆ ಹಣೆದಿದ್ದರು. ಕೊನೆಗೆ ಇನಿಂಗ್ಸ್‌ನ ಆರನೇ ಓವರ್‌ನಲ್ಲಿ ಬುಮ್ರಾ, ಸ್ಯಾಮ್ ಅವರನ್ನು ಪೆವಿಲಿಯನ್​ಗೆ ಕಳುಹಿಸುವಲ್ಲಿ ಯಶಸ್ವಿಯಾದರು. ಇನ್​ಸ್ವಿಂಗ್ ಮೂಲಕ ಬೋಲ್ಡ್​ ಮಾಡಿ ಔಟ್ ಮಾಡಿದರು. ನಂತರ ಬುಮ್ರಾ ಮೈದಾನದಲ್ಲಿ ಸಂಭ್ರಮಿಸಿದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಆ ಮೂಲಕ ಬುಮ್ರಾ ಆಸ್ಟ್ರೇಲಿಯಾದ ಪ್ರೇಕ್ಷಕರನ್ನು ಕೆಣಕಿದರು. ಮೂರನೇ ದಿನ ಆಸ್ಟ್ರೇಲಿಯಾದ ಆಟಗಾರರ ಒತ್ತಾಯದ ಮೇರೆಗೆ ಮೆಲ್ಬೋರ್ನ್ ಮೈದಾನದಲ್ಲಿ ಆಸ್ಟ್ರೇಲಿಯನ್ ವೀಕ್ಷಕರು, ಜೋರಾಗಿ ಕೂಗಾಡಿದ್ದರು. ಆದರೆ ಎರಡನೇ ಇನ್ನಿಂಗ್ಸ್​ನಲ್ಲಿ 20 ರನ್​ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿದೆ.
ಸ್ಯಾಮ್​ ಕಾನ್​​ಸ್ಟಸ್ ಮೊದಲ ಇನ್ನಿಂಗ್ಸ್‌ನಲ್ಲಿ 65 ಎಸೆತಗಳಲ್ಲಿ 60 ರನ್ ಗಳಿಸಿದ್ದರು. ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಒಂದಲ್ಲ ಎರಡು ಸಿಕ್ಸರ್ ಬಾರಿಸಿದ್ದರು. 3 ವರ್ಷಗಳ ನಂತರ 4483 ಎಸೆತಗಳಲ್ಲಿ ಬುಮ್ರಾಗೆ ಸಿಕ್ಸರ್ ಬಾರಿಸಿದ ವಿಶ್ವದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಸದ್ಯದ ಸ್ಕೋರ್ ನೋಡೋದಾದ್ರೆ ಆಸ್ಟ್ರೇಲಿಯಾ 85 ರನ್​ಗಳಿಗೆ ಐದು ವಿಕೆಟ್ ಕಳೆದುಕೊಂಡು 193 ರನ್​ಗಳ ಮುನ್ನಡೆ ಕಾಯ್ದುಕೊಂಡಿದೆ. ಟೀಂ ಇಂಡಿಯಾ ಪರ ಬುಮ್ರಾ 3 ವಿಕೆಟ್ ಪಡೆದರೆ, ಸಿರಾಜ್ 2 ವಿಕೆಟ್ ಕಿತ್ತಿದ್ದಾರೆ.
ಇದನ್ನೂ ಓದಿ:ತ್ವಚೆಯ ಕಾಂತಿ, ದೇಹದ ಎನರ್ಜಿ ಲೆವೆಲ್​ ಹೆಚ್ಚಿಸಿಕೊಳ್ಳಬೇಕಾ? ಈ ABC ಜ್ಯೂಸ್ ಟ್ರೈ ಮಾಡಿ!
JASPRIT BUMRAH IS THE GOAT, HE IS JUST TOOO GOOD...!!! 🇮🇳 pic.twitter.com/EXZbrcDu7K
— Johns. (@CricCrazyJohns) December 29, 2024
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us