Advertisment

ಕೊಹ್ಲಿ, ರೋಹಿತ್ ಇಬ್ಬರೂ ಫೇಲ್.. ಜೈಸ್ವಾಲ್ ಕಣಕ್ಕಿಳಿಯುವ ನಿರೀಕ್ಷೆ.. ಕೊಕ್ ಯಾರಿಗೆ?

author-image
Ganesh
Updated On
ಕೊಹ್ಲಿ, ರೋಹಿತ್ ಇಬ್ಬರೂ ಫೇಲ್.. ಜೈಸ್ವಾಲ್ ಕಣಕ್ಕಿಳಿಯುವ ನಿರೀಕ್ಷೆ.. ಕೊಕ್ ಯಾರಿಗೆ?
Advertisment
  • ಟಿ20 ವಿಶ್ವಕಪ್​ನಲ್ಲಿ ಇವತ್ತು IND vs AUS
  • ರಾತ್ರಿ 8 ಗಂಟೆಯಿಂದ ಪಂದ್ಯ ಆರಂಭ ಆಗಲಿದೆ
  • ಪ್ಲೇಯಿಂಗ್ 11ನಲ್ಲಿ ಭಾರೀ ಬದಲಾವಣೆ ನಿರೀಕ್ಷೆ

ಟಿ20 ವಿಶ್ವಕಪ್​ ಮೆಗಾ ಟೂರ್ನಿಯ ಸೋಲಿಲ್ಲದ ಸರದಾರ ಟೀಮ್​ ಇಂಡಿಯಾದ ಮುಂದಿರೋದು ಬಿಗ್​ ಚಾಲೆಂಜ್​. ಟೂರ್ನಿ ಆರಂಭದಿಂದ ಅಬ್ಬರದ ಆಟದೊಂದಿಗೆ ಸೆಮಿಫೈನಲ್​ನತ್ತ ದಾಪುಗಾಲಿಟ್ಟಿರುವ ರೋಹಿತ್​ ಪಡೆ ಇಂದು ಬಲಿಷ್ಠ ಆಸ್ಟ್ರೇಲಿಯಾದ ಸವಾಲನ್ನು ಎದುರಿಸಲಿದೆ. ಸೂಪರ್​​ 8 ಹಂತದ ಹೈವೋಲ್ಟೆಜ್​ ಹಣಾಹಣಿಯಲ್ಲಿ ಗೆದ್ದು ಸೆಮಿಸ್​​​ಗೆ ರಾಯಲ್​ ಎಂಟ್ರಿ ಕೊಡಲು ಬ್ಲೂ ಬಾಯ್ಸ್​ ತುದಿಗಾಲಲ್ಲಿ ನಿಂತಿದ್ದಾರೆ.

Advertisment

St Lucia ನಲ್ಲಿರುವ ಡೆರೆನ್ ಸಮ್ಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ರಾತ್ರಿ 8 ಗಂಟೆಯಿಂದ ಪಂದ್ಯ ಆರಂಭವಾಗಲಿದೆ. ಈ ಕ್ಷಣಕ್ಕಾಗಿ ಕೋಟ್ಯಾಂತರ ಅಭಿಮಾನಿಗಳು ತುದಿಗಾಲಲ್ಲಿ ಕಾದು ಕೂತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್-11ನಲ್ಲಿ ಬದಲಾವಣೆಯಾದರೂ ಅಚ್ಚರಿ ಇಲ್ಲ.

ಇದನ್ನೂ ಓದಿ:ಆಸ್ಟ್ರೇಲಿಯಾಗೆ ಭಾರತದ ಈ ಆಟಗಾರರು ಎಂದರೆ ಭಯ.. ರೋಹಿತ್, ಕೊಹ್ಲಿ, ಬೂಮ್ರಾ, ಪಂತ್ ಅಲ್ಲವೇ ಅಲ್ಲ..!

ಕಾರಣ ಇಷ್ಟೇ, ಟೀಂ ಇಂಡಿಯಾದ ಟಾಪ್ ಆರ್ಡರ್ ಬ್ಯಾಟ್ಸ್​​ಮನ್​ಗಳು ಸೋಲನ್ನು ಕಂಡಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬ್ಯಾಟಿಂಗ್​ನಲ್ಲಿ ಫೇಲ್ಯೂರ್ ಆಗಿದ್ದಾರೆ. ಹೀಗಾಗಿ ಆರಂಭಿಕ ಜೋಡಿಯಾಗಿ ಯಶಸ್ವಿ ಜೈಸ್ವಾಲ್​​ ಕಣಕ್ಕಿಳಿದರೂ ಅಚ್ಚರಿ ಇಲ್ಲ. ಒಂದು ವೇಳೆ ಜೈಸ್ವಾಲ್ ಕಣಕ್ಕಿಳಿದರೆ ಯಾರು ಹೊರಗುಳಿಯುತ್ತಾರೆ ಅನ್ನೋದು ಕುತೂಹಲ ಮೂಡಿಸಿದೆ. ಟೀಂ ಇಂಡಿಯಾ ಸತತ ಗೆಲುವಿನಲ್ಲಿರುವ ಹಿನ್ನೆಲೆಯಲ್ಲಿ ಬದಲಾವಣೆಯ ನಿರ್ಧಾರ ಕಮ್ಮಿ ಇದೆ ಎಂದು ಹೇಳಲಾಗುತ್ತಿದೆ. ಇರುವ ತಂಡವನ್ನೇ ಉಳಿಸಿಕೊಂಡು ಆಡುವ ಸಾಧ್ಯತೆ ಹೆಚ್ಚಿದೆ.

Advertisment

ಇದನ್ನೂ ಓದಿ:ಒಂದಲ್ಲ.. ಆಸ್ಟ್ರೇಲಿಯಾ ವಿರುದ್ಧ ಒಟ್ಟು 3 ಲೆಕ್ಕ ಚುಕ್ತಾ ಬಾಕಿ ಇದೆ.. ಇಂದು ಪ್ರತೀಕಾರದ ಮ್ಯಾಚ್..!

ಟೀಂ ಇಂಡಿಯಾದ ಪ್ಲೇಯಿಂಗ್ 11: ರೋಹಿತ್ ಶರ್ಮಾ (ಕ್ಯಾಪ್ಟನ್), ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಸೂರ್ಯ ಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ರವೀಂದ್ರ ಜಡೇಜಾ, ಅರ್ಷ್​​ದೀಪ್ ಸಿಂಗ್, ಕುಲ್ದೀಪ್ ಯಾದವ್, ಜಸ್​​ಪ್ರೀತ್ ಬೂಮ್ರಾ

ಇದನ್ನೂ ಓದಿ:ಭಾರತ vs ಆಸ್ಟ್ರೇಲಿಯಾ ಪಂದ್ಯ ರದ್ದು ಸಾಧ್ಯತೆ.. ಅಭಿಮಾನಿಗಳಿಂದ ಈಗಲೇ ಬೇಸರ.. ಕಾರಣ ಇಲ್ಲಿದೆ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment