ಭಾರತ vs ಬಾಂಗ್ಲಾದೇಶ ನಡುವೆ ಮೊದಲ ಟೆಸ್ಟ್
ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯ
ಹುಮ್ಮಸ್ಸಿನಲ್ಲಿದ್ದ ಭಾರತಕ್ಕೆ ಆಘಾತ ನೀಡಿದ ಬಾಂಗ್ಲಾ
ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ನಲ್ಲಿ ಭಾರತಕ್ಕೆ ಬಾಂಗ್ಲಾದೇಶ ಬಿಗ್ ಶಾಕ್ ನೀಡಿದೆ. ಆಘಾತಕಾರಿ ರೀತಿಯಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ವಿಕೆಟ್ ಕಳೆದುಕೊಂಡಿದ್ದು, ಸಂಕಷ್ಟಕ್ಕೆ ಸಿಲುಕಿದೆ.
ಟಾಸ್ ಗೆದ್ದ ಬಾಂಗ್ಲಾ ರೋಹಿತ್ ಪಡೆಯನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿತ್ತು. ಟೀಂ ಇಂಡಿಯಾ 14 ರನ್ಗಳಿಸಿ ಆಡ್ತಿದ್ದಾಗ ರೋಹಿತ್ ಔಟ್ ಆಗುವ ಮೂಲಕ ಶಾಕ್ ನೀಡಿದರು. ಬೆನ್ನಲ್ಲೇ ಮೂರನೇ ಕ್ರಮಾಂಕದಲ್ಲಿ ಬಂದ ಗಿಲ್ 8 ಬಾಲ್ ಎದುರಿಸಿ ಸೊನ್ನೆ ಸುತ್ತಿ ಪೆವಿಲಿಯನ್ಗೆ ಹೋದರು. ಇನ್ನು ವಿರಾಟ್ ಕೊಹ್ಲಿ ಕೂಡ 6 ರನ್ಗೆ ಸುಸ್ತಾದರು.
ಮೂವರ ಬಲಿ ಪಡೆದ ಒನ್ ಮ್ಯಾನ್ ಆರ್ಮಿ
ಬಾಂಗ್ಲಾ ಪರ ಹಸನ್ ಮಹ್ಮುದ್ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡ್ತಿದ್ದಾರೆ. 7 ಓವರ್ನಲ್ಲಿ ಕೇವಲ 15 ರನ್ ಮಾತ್ರ ನೀಡಿ 3 ವಿಕೆಟ್ ಪಡೆದುಕೊಂಡಿದ್ದಾರೆ. ತುಂಬಾ ದಿನಗಳ ನಂತರ ಬಾಂಗ್ಲಾ ವಿರುದ್ಧ ಟೀಂ ಇಂಡಿಯಾ ಫೀಲ್ಡಿಗೆ ಇಳಿದಿದೆ. ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶದ ದೃಷ್ಟಿಯಿಂದ ಭಾರತ ತಂಡಕ್ಕೆ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿ ಗೆಲ್ಲೋದು ಅನಿವಾರ್ಯವಾಗಿದೆ. ಅದೇ ನಿಟ್ಟಿನಲ್ಲೇ ಬ್ಯಾಟಿಂಗ್ಗೆ ಬಂದ ರೋಹಿತ್ ಪಡೆಗೆ ಆಘಾತವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್