newsfirstkannada.com

×

ಭಾರತ- ಬಾಂಗ್ಲಾ T20 ಪಂದ್ಯ ನಡೆಯೋದು ಡೌಟ್.. ಕೊನೆ ಮ್ಯಾಚ್​ಗೆ ಎಂಟ್ರಿ ಆಗುತ್ತಾ ಮಳೆ?

Share :

Published October 12, 2024 at 5:58pm

    ಯಾವ ಸ್ಟೇಡಿಯಂನಲ್ಲಿ ಇಂದಿನ ಮ್ಯಾಚ್ ನಡೆಯುತ್ತದೆ.?

    ಕ್ಲೀನ್ ಸ್ವೀಪ್ ನಿರೀಕ್ಷೆಯಲ್ಲಿರುವ ಸೂರ್ಯಕುಮಾರ್ ಪಡೆ

    ನಗರಾದ್ಯಂತ ಭಾರೀ ಮಳೆ ಸಾಧ್ಯತೆ, ಪಂದ್ಯ ನಡೆಯುತ್ತಾ?

ಇಂದು ಭಾರತ ಹಾಗೂ ಬಾಂಗ್ಲಾ ನಡುವೆ ಕೊನೆ ಟಿ20 ಪಂದ್ಯ ನಡೆಯಲಿದೆ. 3 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಈಗಾಗಲೇ 2 ಪಂದ್ಯಗಳನ್ನು ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ. ಅದರಂತೆ ಇಂದು ಮೂರನೇ ಪಂದ್ಯ ಹೈದರಾಬಾದ್​​ನ ರಾಜೀವ್​ ಗಾಂಧಿ ಸ್ಟೇಡಿಯಂನಲ್ಲಿ ನಡೆಯಲಿದ್ದು ಪಂದ್ಯದ ವೇಳೆ ಮಳೆ ಬರುವ ಮುನ್ಸೂಚನೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: T20ಯಲ್ಲಿ ಹೈದ್ರಾಬಾದ್​ ಯಂಗ್ ಪ್ಲೇಯರ್​ ಹವಾ.. ನಿತೀಶ್​ ರೆಡ್ಡಿ ಖರೀದಿ ಮಾಡುತ್ತಾ RCB?

ಹೈದರಾಬಾದ್‌ ನಗರಾದ್ಯಂತ ಗುಡುಗು ಸಹಿತ ವರುಣ ಆರ್ಭಟಿಸುವ ಅವಕಾಶ ಹೆಚ್ಚಿದ್ದು ಇದು ಭಾರತ- ಬಾಂಗ್ಲಾ ನಡುವಿನ ಟಿ20 ಪಂದ್ಯದ ಮೇಲೆ ಪರಿಣಾಮ ಬೀರಲಿದೆ. ಹವಾಮಾನವು ಭಾಗಶಃ ಮೋಡ ಕವಿದಂತೆ ಇರಲಿದೆ. ಪ್ರಸ್ತುತ ತಾಪಮಾನ ಸುಮಾರು 30 ಡಿಗ್ರಿ ಸೆಲ್ಸಿಯಸ್ ಇದ್ದು, ಆರ್ದ್ರತೆ ಮಟ್ಟ ಶೇ.62 ರಷ್ಟು ಇದೆ. ಸುಮಾರು 10 ಎಂಪಿಹೆಚ್ (ಮೈಲ್ ಪರ್ ಹವರ್) ವೇಗದಲ್ಲಿ ಗಾಳಿ ಬೀಸಬಹುದು. ಪ್ರಸ್ತುತ ನಗರಾದ್ಯಂತ ಭಾರೀ ಮಳೆ ಆಗುವ ನಿರೀಕ್ಷೆ ಇದ್ದು ಕನಿಷ್ಠ 2 ಗಂಟೆ ಕಾಲ ಧಾರಾಕಾರ ಮಳೆ ಸುರಿಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಇದನ್ನೂ ಓದಿ: ತಮ್ಮ ಯೋಗ್ಯತೆ ಬಗ್ಗೆ ಬೆಲೆ ಕಟ್ಟಿದ ಪಂತ್; IPL ಹರಾಜಿಗೆ ಪ್ರವೇಶಿಸುವ ದೊಡ್ಡ ಸುಳಿವು..

ಈಗಾಗಲೇ ಸರಣಿ ವಶಕ್ಕೆ ಪಡೆದಿರುವ ಸೂರ್ಯಕುಮಾರ್ ಪಡೆ ಕ್ಲೀನ್ ಸ್ವೀಪ್ ಮೇಲೆ ಕಣ್ಣಿಟ್ಟಿದೆ. ಅಲ್ಲದೇ ಕೊನೆ ಪಂದ್ಯವಾಗಿದ್ದರಿಂದ ತಂಡದಲ್ಲಿ ಭಾರೀ ಬದಲಾವಣೆ ಮಾಡುವ ಸಾಧ್ಯತೆ ಇದೆ. ಇನ್ನು ಇವತ್ತಿನ ಪಂದ್ಯದಲ್ಲಿ ಯುವ ಪೇಸ್ ಬೌಲರ್ ಹರ್ಷಿತ್ ರಾಣಾ ಡೆಬ್ಯು ಮಾಡುವ ನಿರೀಕ್ಷೆ ದಟ್ಟವಾಗಿದೆ. ಯಂಗ್ ಆಲ್​​ರೌಂಡರ್ ನಿತೀಶ್ ಕುಮಾರ್ ರೆಡ್ಡಿ ತವರಿನ ಅಂಗಳದಲ್ಲಿ ಅಬ್ಬರಿಸುವ ಸೂಚನೆ ಕೂಡ ಇದೆ. ಏಕೆಂದರೆ ಐಪಿಎಲ್​ ಪಂದ್ಯಗಳಲ್ಲಿ ತವರಿನಲ್ಲೇ ನಿತೀಶ್ ಭರ್ಜರಿ ಆಲ್​ರೌಂಡರ್ ಪ್ರದರ್ಶನ ತೋರಿದ್ದರು.

  • ಮ್ಯಾಚ್- ಭಾರತ ವರ್ಸಸ್ ಬಾಂಗ್ಲಾದೇಶ
  • ಸಮಯ- ಸಂಜೆ 7 ಗಂಟೆ
  • ಸ್ಥಳ- ರಾಜೀವ್ ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂ, ಹೈದರಾಬಾದ್
  • ಸ್ಟೇಡಿಯಂ ಆಸನಗಳು- 38,000

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಭಾರತ- ಬಾಂಗ್ಲಾ T20 ಪಂದ್ಯ ನಡೆಯೋದು ಡೌಟ್.. ಕೊನೆ ಮ್ಯಾಚ್​ಗೆ ಎಂಟ್ರಿ ಆಗುತ್ತಾ ಮಳೆ?

https://newsfirstlive.com/wp-content/uploads/2024/10/HYDRABAD_STEDIUAM.jpg

Load More