newsfirstkannada.com

Under-19 World Cup: ಬಾಂಗ್ಲಾ ವಿರುದ್ಧ ಟೀಮ್​ ಇಂಡಿಯಾಕ್ಕೆ ಗೆಲುವು.. ವಿಶ್ವಕಪ್​​ನಲ್ಲಿ ಶುಭಾರಂಭ

Share :

Published January 21, 2024 at 9:49am

Update January 21, 2024 at 9:50am

  ಸೌಮಿ ಪಾಂಡೆ, ಮುಶೀರ್​ ಖಾನ್ ಬೌಲಿಂಗ್​ಗೆ ಬಾಂಗ್ಲಾ ಔಟ್​

  ಪಂದ್ಯದಲ್ಲಿ ಹಾಫ್ ಸೆಂಚುರಿ ಸಿಡಿಸಿದ ಓಪನರ್​ ಆದರ್ಶ್ ಸಿಂಗ್ ​

  ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ U-19 ವಿಶ್ವಕಪ್​ ಟೂರ್ನಿ

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ U-19 ವಿಶ್ವಕಪ್​ ಟೂರ್ನಿಯಲ್ಲಿ ಬಾಂಗ್ಲಾ ವಿರುದ್ಧ ಟೀಮ್​ ಇಂಡಿಯಾ ಗೆಲ್ಲುವ ಮೂಲಕ ಶುಭಾರಂಭ ಮಾಡಿದೆ. ಭಾರತದ ಪರ ಸೌಮಿ ಪಾಂಡೆಯ ಮಿಂಚಿನ ಬೌಲಿಂಗ್​ ದಾಳಿಗೆ ಇನ್ನು 84 ರನ್​ ಇರುವಾಗಲೇ ಬಾಂಗ್ಲಾ ತಂಡ ಸೋಲೋಪ್ಪಿಕೊಂಡಿದೆ.

ಆಫ್ರಿಕಾದ ಬ್ಲೋಮ್‌ಫಾಂಟೈನ್​ನ ಮಂಗೌಂಗ್ ಓವಲ್ ಸ್ಟೇಡಿಯಂನಲ್ಲಿ ನಡೆದ U-19 ವಿಶ್ವಕಪ್​ ಪಂದ್ಯದಲ್ಲಿ ಬಾಂಗ್ಲಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು. ಭಾರತಕ್ಕೆ ಬ್ಯಾಟಿಂಗ್​ಗೆ ಆಹ್ವಾನಿಸಿತು. ಬ್ಯಾಟಿಂಗ್​ಗೆ ಇಳಿದ ಟೀಮ್​ ಇಂಡಿಯಾದ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. 31 ರನ್​ಗೆ 2 ವಿಕೆಟ್​ ಕಳೆದುಕೊಂಡರು ಕ್ರೀಸ್​ ಕಾಯ್ದುಕೊಂಡು ಬ್ಯಾಟ್ ಬೀಸಿದ ಓಪನರ್​ ಆದರ್ಶ್ ಸಿಂಗ್ 6 ಬೌಂಡರಿ ಸಮೇತ 76 ರನ್​ ಸಿಡಿಸಿದರು. ಅದರಂತೆ ಕ್ಯಾಪ್ಟನ್​ ಉದಯ್ ಸಹಾರನ್ 4 ಬೌಂಡರಿ ಸಮೇತ 64 ರನ್​ಗಳನ್ನು ಗಳಿಸಿದರು. ಹೀಗಾಗಿ ಭಾರತ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್​ಗಳನ್ನ ಟಾರ್ಗೆಟ್​ ಅನ್ನು ನೀಡಿತು.

ಈ ಗುರಿ ಬೆನ್ನತ್ತಿದ ಬಾಂಗ್ಲಾ 45.5 ಓವರ್​ಗೆ ತನ್ನೆಲ್ಲ ವಿಕೆಟ್​ಗಳನ್ನ ಕಳೆದುಕೊಂಡು ಕೇವಲ 167 ರನ್​ ಮಾತ್ರ ಗಳಿಸಿತು. ಭಾರತದ ಪರ ಬೌಲಿಂಗ್ ಮಾಡಿದ ಮುಶೀರ್​ ಖಾನ್ 2 ವಿಕೆಟ್ ಪಡೆದರು. ಸೌಮಿ ಪಾಂಡೆಯ ಮಿಂಚಿನ ದಾಳಿಗೆ ಬಾಂಗ್ಲಾ ಪ್ಲೇಯರ್ಸ್​ ಸುಸ್ತಾಗಿ ಪೆವಿಲಿಯನ್ ಪೆರೇಡ್ ನಡೆಸಿದರು. ಪಾಂಡೆ 24 ರನ್​ಗೆ ಪ್ರಮುಖ 4 ವಿಕೆಟ್​ ಪಡೆದು ಗೆಲುವಿಗೆ ಕಾರಣರಾದರು. ಭಾರತ 84 ರನ್​ಗಳಿಂದ ಗೆದ್ದು U-19 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Under-19 World Cup: ಬಾಂಗ್ಲಾ ವಿರುದ್ಧ ಟೀಮ್​ ಇಂಡಿಯಾಕ್ಕೆ ಗೆಲುವು.. ವಿಶ್ವಕಪ್​​ನಲ್ಲಿ ಶುಭಾರಂಭ

https://newsfirstlive.com/wp-content/uploads/2024/01/U_19_WORLD_CUP_1.jpg

Load More