/newsfirstlive-kannada/media/post_attachments/wp-content/uploads/2025/01/Team-India-vs-England.jpg)
ಕೊಲ್ಕತ್ತಾದಲ್ಲಿ ದಿಗ್ವಿಜಯ ಸಾಧಿಸಿ ಸರಣಿಯಲ್ಲಿ ಶುಭಾರಂಭ ಮಾಡಿದ್ದ ಟೀಮ್ ಇಂಡಿಯಾ, ಚೆಪಾಕ್​ನ ಚಿದಂಬರಂ ಸ್ಟೇಡಿಯಂನಲ್ಲಿ ರೋಚಕ ಗೆಲುವು ದಾಖಲಿಸಿ ಸರಣಿ ಮುನ್ನಡೆ ಪಡೆದಿತ್ತು. ಇದೀಗ ರಾಜಕೋಟ್​ನಲ್ಲಿ ನಡೀತಿರುವ 3ನೇ ಪಂದ್ಯಕ್ಕೆ ಸಜ್ಜಾಗ್ತಿರುವ ಸೂರ್ಯ ಪಡೆ, ರಾಜಕೋಟ್​ನಲ್ಲಿ ರಾಜನಾಗಿ ಮರೆಯೋ ಲೆಕ್ಕಾಚಾರದಲ್ಲಿದೆ. ಆ ಮೂಲಕ ಸರಣಿ ಗೆಲುವಿನ ನಾಗಲೋಟ ಮುಂದುವರಿಸುವ ತವಕದಲ್ಲಿದೆ.
ಸ್ಪಿನ್ ಟು ವಿನ್ ಫಾರ್ಮುಲಾ?
ಹ್ಯಾಟ್ರಿಕ್ ಗೆಲುವಿನೊಂದಿಗೆ ಸರಣಿ ವಶ ಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿರುವ ಸೂರ್ಯ, ರಾಜಕೋಟ್​ನಲ್ಲಿ ಮತ್ತೆ ಸ್ಪಿನ್ ಟು ವಿನ್ ಫಾರ್ಮುಲಕ್ಕೆ ಅಂಟಿಕೊಳ್ಳುವ ನಿರೀಕ್ಷೆ ಇದೆ. ಮಿಸ್ಟ್ರಿ ಸ್ಪಿನ್ನರ್​ ವರುಣ್ ಚಕ್ರವರ್ತಿ, ಲೆಗ್ ಸ್ಪಿನ್ನರ್ ರವಿ ಬಿಷ್ನೋಯಿ ಜೊತೆ ವಾಷಿಗ್ಟಂನ್ ಸುಂದರ್ ಮತ್ತೆ ಇಂಗ್ಲೆಂಡ್ ಲಯನ್ಸ್​ ಬೇಟೆಗಿಳಿಯಲಿದ್ದಾರೆ. ರಾಜ್​ಕೋಟ್​ನ ಪಿಚ್ ರಿಪೋರ್ಟ್​ ಬೇರೆಯದ್ದೇ ಕಥೆ ಹೇಳ್ತಿದೆ.
ಇದನ್ನೂ ಓದಿ: ತಂಡಕ್ಕೆ ಬಿಗ್ ಶಾಕ್.. ಕೈಕೊಟ್ಟ ರೋಹಿತ್, ಅಯ್ಯರ್, ಯಶಸ್ವಿ ಜೈಸ್ವಾಲ್..!
ರಾಜ್​ಕೋಟ್ ಪಿಚ್ ಹೇಗಿದೆ..?
- ರಾಜ್​ಕೋಟ್​ನ ಪಿಚ್ ಪ್ಲಾಟ್​​ ಟ್ರ್ಯಾಕ್
- ಇದು ಬ್ಯಾಟ್ಸ್​ಮನ್​ಗಳ ಪಾಲಿಗೆ ಸ್ವರ್ಗ
- ಬಿಗ್ ಟೋಟಲ್ ಕಲೆ ಹಾಕುವುದು ಫಿಕ್ಸ್
- ಪೇಸ್, ಬೌನ್ಸಿ ಹಿನ್ನೆಲೆಯಲ್ಲಿ ವೇರಿಯೇಷನ್ಸ್ ಮುಖ್ಯ
- ವೇರಿಯೇಷನ್ಸ್ ​ಪೇಸರ್​​ಗಳಿಗೆ ಬಿಗ್ ಅಡ್ವಾಂಟೇಜ್
- ಪಂದ್ಯ ಸಾಗುತ್ತಾ ಸ್ಪಿನ್ನರ್​ಗಳಿಗೂ ನೆರವಾಗಲಿದೆ
- ಕಿರಿದಾದ ಬೌಂಡರಿ, ಟಾಸ್ ಗೆದ್ದವನೇ ಬಾಸು
- ಬಿಗ್ ಸ್ಕೋರ್ ಕಲೆಹಾಕುವ ಲೆಕ್ಕಾಚಾರ ಫಿಕ್ಸ್.
ಇದನ್ನೂ ಓದಿ: IND vs ENG: 3ನೇ ಪಂದ್ಯಕ್ಕೆ ಕೈಕೊಟ್ಟ ರಿಂಕು ಸಿಂಗ್.. ಬದಲಿ ಆಟಗಾರ ಎಂಟ್ರಿ..!
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us