newsfirstkannada.com

​21 ವರ್ಷದಲ್ಲಿ ಹ್ಯಾಟ್ರಿಕ್ ಸಿಕ್ಸ್​ ಹೊಡೆಸಿಕೊಳ್ಳದ ಆ್ಯಂಡರ್ಸನ್​.. ಜೈಸ್ವಾಲ್​ ಮುಂದೆ ತಲೆ ಬಾಗಿದ ಲೆಜೆಂಡರಿ ಬೌಲರ್

Share :

Published February 19, 2024 at 2:21pm

Update February 19, 2024 at 4:28pm

  ಜೈಸ್ವಾಲ್​ ಬ್ಯಾಟಿಂಗ್​ಗೆ ಶಾಕ್ ಆದ ವೇಗಿ ಜೇಮ್ಸ್​ ಆ್ಯಂಡರ್ಸನ್

  ಕರಿಯರ್​​ನಲ್ಲಿ ಫಸ್ಟ್​​ ಟೈಮ್​ ಹ್ಯಾಟ್ರಿಕ್ ಸಿಕ್ಸ್​ ಹೊಡೆಸಿಕೊಂಡರು

  ಪಂದ್ಯದ ಎರಡೂ ಇನ್ನಿಂಗ್ಸ್​​ಗಳಲ್ಲಿ 400+ ರನ್ ಚಚ್ಚಿದ ಭಾರತ

ವಿರಾಟ್​ ಕೊಹ್ಲಿ, ಕೆ.ಎಲ್ ರಾಹುಲ್​, ಶ್ರೇಯಸ್​​ ರಂಥಾ ಸೂಪರ್​ ಸ್ಟಾರ್​ಗಳಿರಲಿಲ್ಲ. ಪಂದ್ಯ ನಡುವೆ ತಂಡದ ಮ್ಯಾಚ್​ ವಿನ್ನರ್​ ಅಶ್ವಿನ್ ಕೂಡ ತಂಡ ತೊರೆದರು​. ಮೊದಲ ಇನ್ನಿಂಗ್ಸ್​ನಲ್ಲಿ ಆಂಗ್ಲರು ಆಕ್ರಮಣ ನಡೆಸಿದರು. ಇಷ್ಟೆಲ್ಲ ಹಿನ್ನಡೆ ಅನುಭವಿಸಿದ್ರೂ, ರಾಜ್​ಕೋಟ್​​ನಲ್ಲಿ ಅಂತಿಮವಾಗಿ ನಡೆದಿದ್ದು ಟೀಮ್​ ಇಂಡಿಯಾದ್ದೇ ರಾಜ್ಯಭಾರ. ಹಳೆ ಫಾರ್ಮುಲಾಗೆ ಕೊಕ್​ ಕೊಟ್ಟು, ಹೊಸ ಅವತಾರ ಎತ್ತಿದ್ದೇ ಈ ಗೆಲುವಿನ ಹಿಂದಿನ ಯಶಸ್ಸಿನ ಮಂತ್ರ.

ಬಝ್​ಬಾಲ್​ ಮಂತ್ರ ಪಠಿಸಿ ಎಲ್ಲೆಡೆ ಸಕ್ಸಸ್​​ ಕಂಡಿದ್ದ ಆಂಗ್ಲರು ಭಾರತದಲ್ಲಿ ಮಕ್ಕರ್​ ಆಗಿದ್ದಾರೆ. ಇಲ್ಲೂ ಅಗ್ರೆಸ್ಸೀವ್​ ಆಟದ ಮಂತ್ರ ಪಠಿಸಿದ ಇಂಗ್ಲೆಂಡ್​​ ಪಡೆಗೆ ಟೀಮ್​ ಇಂಡಿಯಾದ ಯಂಗ್​​ಸ್ಟರ್​​ಗಳು ಪರ್ಫೆಕ್ಟ್​ ಪಾಠ ಕಲಿಸಿದರು. ಆಂಗ್ಲರು ಹಾಕಿಕೊಂಡಿದ್ದ ಲೆಕ್ಕಾಚಾರಗಳೆಲ್ಲ ತಲೆಕೆಳಗಾದ್ವು. ಯಾಕಂದ್ರೆ, ಆಂಗ್ಲರು ಗೇಮ್​ ಪ್ಲಾನ್​ ಮಾಡಿದ್ದು ಈ ಹಿಂದಿನ ಡಿಫೆನ್ಸಿವ್​ ಟೀಮ್​ ಇಂಡಿಯಾಗೆ. ಮುಯ್ಯಿಗೆ ಮುಯ್ಯಿ ಎಂದು ಘರ್ಜಿಸೋ ನಯಾ ಇಂಡಿಯಾಗಲ್ಲ.

ಲೆಜೆಂಡ್​​ ಆ್ಯಂಡರ್ಸನ್​ಗೆ ಯಂಗ್​​ ಜೈಸ್ವಾಲ್​ ಡಿಚ್ಚಿ.!

185 ಟೆಸ್ಟ್​ ಪಂದ್ಯ, ಸುದೀರ್ಘ 21 ವರ್ಷಗಳ ಕರಿಯರ್​​​ನಲ್ಲಿ ಇಂಗ್ಲೆಂಡ್​​ ವೇಗಿ ಜೇಮ್ಸ್​ ಆ್ಯಂಡರ್ಸನ್​ ಹೀಗೆ ಆಗುತ್ತೆ ಅಂತಾ ಬಹುಷಃ ಹಿಂದೆದೂ ಊಹಿಸಿಯೇ ಇರಲಿಲ್ಲ ಅನ್ನಿಸುತ್ತೆ. ಆದ್ರೆ, 22 ವರ್ಷದ ಯಶಸ್ವಿ ಜೈಸ್ವಾಲ್​, ಲೆಜೆಂಡ್​​ ಆ್ಯಂಡರ್ಸನ್​ಗೆ ಡಿಚ್ಚಿ ಹೊಡೆದು ಬಿಟ್ಟ. ಕರಿಯರ್​​ನಲ್ಲೇ ಫಸ್ಟ್​ ಟೈಂ ಆ್ಯಂಡರ್ಸನ್​​ ಹ್ಯಾಟ್ರಿಕ್​​ ಸಿಕ್ಸರ್​​ ಹೊಡೆಸಿಕೊಂಡ ಕಳಪೆ ಸಾಧನೆ ಮಾಡಿಬಿಟ್ಟರು.

ಸ್ಟೋಕ್ಸ್​​​ -ಮೆಕಲಮ್​ಗೇ ಸರ್ಫರಾಜ್ ಬಝ್​​ಬಾಲ್​ ಪಾಠ

ಇಡೀ ವಿಶ್ವ ಕ್ರಿಕೆಟ್​​ಗೆ ಟೆಸ್ಟ್​ ಕ್ರಿಕೆಟ್​​ನಲ್ಲಿ ಅಗ್ರೆಸ್ಸಿವ್​ ಕ್ರಿಕೆಟ್​​ನ ಪಾಠ ಮಾಡಿದ್ದು ಬೆನ್​​ ಸ್ಟೋಕ್ಸ್​ ಹಾಗೂ ಬ್ರೆಂಡನ್​ ಮೆಕಲಮ್​ ಜೋಡಿ. ಇವರಿಬ್ಬರು ಕೋಚ್​ & ಕ್ಯಾಪ್ಟನ್​ ಆಗಿದ್ದೇ ತಡ ಟೆಸ್ಟ್​ ಕ್ರಿಕೆಟ್​ನಲ್ಲಿ ಅಗ್ರೆಸ್ಸಿವ್​ ಬ್ಯಾಟಿಂಗ್​ಗೆ ಬುನಾದಿ ಹಾಕಿದ್ರು. ಆದ್ರೆ, ಈ ಸೃಷ್ಟಿಕರ್ತರಿಗೇ ಟೀಮ್​ ಇಂಡಿಯಾ ಡೆಬ್ಯೂಟಂಟ್​​ ಸರ್ಫರಾಜ್​ ಖಾನ್​ ಬಝ್​​ಬಾಲ್​ನ ಪಾಠ ಮಾಡಿದ. ಎರಡೂ ಇನ್ನಿಂಗ್ಸ್​​ಗಳಲ್ಲಿ ಅಬ್ಬರಿಸಿದ ಸರ್ಫರಾಜ್​​ ಆಂಗ್ಲರ ಅಹಂ ಇಳಿಸಿದ್ರು.

ಪಂದ್ಯದ ಎರಡೂ ಇನ್ನಿಂಗ್ಸ್​​ಗಳಲ್ಲಿ 400+ ರನ್​​..!

ಒಂದಲ್ಲ.. ಎರಡಲ್ಲ.. 2ನೇ ಇನ್ನಿಂಗ್ಸ್​ ಒಂದರಲ್ಲೇ ಟೀಮ್​ ಇಂಡಿಯಾ ಆಟಗಾರರು ಬರೋಬ್ಬರಿ 18 ಸಿಕ್ಸರ್​​​ ಸಿಡಿಸಿದ್ರು. ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿ ಇಷ್ಟು ಸಿಕ್ಸರ್​​ಗಳು ಸಿಡಿದಿದ್ದು. ಪಂದ್ಯದ 2ನೇ ಇನ್ನಿಂಗ್ಸ್​ನಲ್ಲಿ ಟೀಮ್​ ಇಂಡಿಯಾ ಫಿಯರ್​​ಲೆಸ್​​ ಆಟ ಹೇಗಿತ್ತು ಅನ್ನೋದಕ್ಕೆ ಇದು ಬೆಸ್ಟ್​ ಎಕ್ಸಾಂಪಲ್​. ಕೇವಲ 2ನೇ ಇನ್ನಿಂಗ್ಸ್​ ಮಾತ್ರವಲ್ಲ, ಪಂದ್ಯದ ಎರಡೂ ಇನ್ನಿಂಗ್ಸ್​ ಟೀಮ್​ ಇಂಡಿಯಾ ಸ್ಕೋರ್​​ 400ರ ಗಡಿ ದಾಟಿತ್ತು. 2009ರ ಬಳಿಕ ಇದೇ ಮೊದಲ ಬಾರಿ ಈ ಸಾಧನೆಯನ್ನ ಟೀಮ್​ ಇಂಡಿಯಾ ಮಾಡಿದ್ದು.

ರೋಹಿತ್​ ರಣವ್ಯೂಹದಲ್ಲಿ ವಿಲ ವಿಲ ಒದ್ದಾಡಿದ ಆಂಗ್ಲರು.!

ರಾಜ್​ಕೋಟ್​​ನ ರಣಾಂಗಣದಲ್ಲಿ ಇಂಗ್ಲೆಂಡ್​​ ತಂಡ ರೋಹಿತ್​ ಶರ್ಮಾ ರಣವ್ಯೂಹದಲ್ಲಿ ಸಿಲುಕಿ ಒದ್ದಾಡಿಬಿಡ್ತು. ಮೊದಲ ಇನ್ನಿಂಗ್ಸ್​ ಅಗ್ರೆಸ್ಸಿವ್​ ಆರಂಭ ಕಂಡು ಮಕಾಡೆ ಮಲಗಿದ್ದ ತಂಡ 2ನೇ ಇನ್ನಿಂಗ್ಸ್​ನಲ್ಲಂತೂ ಸಂಪೂರ್ಣ ನೆಲಕಚ್ಚಿತು. ಇನ್​ಫ್ಯಾಕ್ಟ್​​, ಮೆಕಲಮ್​, ಸ್ಟೋಕ್ಸ್​ ಕೋಚ್​-ಕ್ಯಾಪ್ಟನ್​ ಆದ ಬಳಿಕ ಯಾವುದೇ ಎದುರಾಳಿ ತಂಡ 2ನೇ ಇನ್ನಿಂಗ್ಸ್​​​ ಡಿಕ್ಲೇರ್​ ಮಾಡಿಕೊಳ್ಳುವ ಧೈರ್ಯ ತೋರಿಸಿರಲಿಲ್ಲ. ಆದ್ರೆ, ರೋಹಿತ್​ ಶರ್ಮಾ, ಟೀ ಬ್ರೇಕ್​ ಮುನ್ನವೇ ಡಿಕ್ಲೇರ್​ ಮಾಡಿಕೊಂಡು ಆಂಗ್ಲರಿಗೆ ಶಾಕ್​ ಕೊಟ್ರು.

39.4 ಓವರ್​​, 122 ರನ್​, ಆಂಗ್ಲರ ಖೇಲ್​ ಖತಂ.!

ಇಂಗ್ಲೆಂಡ್​​ಗೆ ಬಿಗ್​ ಟಾರ್ಗೆಟ್​ ನೀಡಿ ಇನ್ನಿಂಗ್ಸ್​ ಡಿಕ್ಲೆರ್​​​ ಮಾಡಿಕೊಂಡ ಟೀಮ್​ ಇಂಡಿಯಾ ಆಟಗಾರರು, ಫೀಲ್ಡ್​​ನಲ್ಲಿ ಹಸಿದ ಹುಲಿಗಂಳಂತೆ ಫೀಲ್ಡ್​ ಮಾಡಿದ್ರು. ಆರಂಭದಿಂದ ಅಂತ್ಯದವರೆಗೆ ಇಂದೇ ಪಂದ್ಯ ಗೆಲ್ಲಬೇಕು ಎಂಬ ಛಲ ತಂಡದಲ್ಲಿತ್ತು. ಇದ್ರ ಫಲವೇ ಇಂಗ್ಲೆಂಡ್​​ 39.4 ಓವರ್​​ಗಳಲ್ಲಿ ಆಲೌಟ್​ ಆಯ್ತು. ಯಾವ ಪಿಚ್​​ನಲ್ಲಿ ಟೀಮ್​ ಇಂಡಿಯಾ 2 ಇನ್ನಿಂಗ್ಸ್​ಗಳಲ್ಲಿ 400+ ರನ್​ಗಳಿಸಿತ್ತೋ ಅದೇ ಪಿಚ್​ನಲ್ಲಿ ಇಂಗ್ಲೆಂಡ್​​ 122 ರನ್​ಗಳಿಗೆ ಆಲೌಟ್​ ಆಯ್ತು.

ಇದೇ ಟೆಸ್ಟ್​ ಸರಣಿಯ ಮೊದಲ 2 ಪಂದ್ಯಗಳಿಗೆ ಹೋಲಿಸಿದ್ರೆ, ರಾಜಕೋಟ್​ ಟೆಸ್ಟ್​ನಲ್ಲಿ ಟೀಮ್​ ಇಂಡಿಯಾ ಆಟವೇ ಬದಲಾಗಿತ್ತು. ನಯಾ ಬ್ರ್ಯಾಂಡ್​​ನ ಆಟದೊಂದಿಗೆ ಆಟದೊಂದಿಗೆ ಗೆಲುವಿನ ಪತಾಕೆ ಹಾರಿಸಿರೋ ಟೀಮ್​ ಇಂಡಿಯಾ ಮುಂದಿನ 2 ಪಂದ್ಯಗಳಲ್ಲೂ ಅಬ್ಬರದ ಆಟವಾಡಲಿ. ಸರಣಿ ಗೆದ್ದು ಬೀಗಲಿ ಅನ್ನೋದೆ ಫ್ಯಾನ್ಸ್​ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

​21 ವರ್ಷದಲ್ಲಿ ಹ್ಯಾಟ್ರಿಕ್ ಸಿಕ್ಸ್​ ಹೊಡೆಸಿಕೊಳ್ಳದ ಆ್ಯಂಡರ್ಸನ್​.. ಜೈಸ್ವಾಲ್​ ಮುಂದೆ ತಲೆ ಬಾಗಿದ ಲೆಜೆಂಡರಿ ಬೌಲರ್

https://newsfirstlive.com/wp-content/uploads/2024/02/Yashasvi_Jaiswal_Anderson_1.jpg

Load More