/newsfirstlive-kannada/media/post_attachments/wp-content/uploads/2025/07/anshul-kamboj.jpg)
ಮ್ಯಾಂಚೆಸ್ಟರ್ನಲ್ಲಿ ಟೀಮ್ ಇಂಡಿಯಾ ಗೆಲ್ಲುತ್ತಾ ಇಲ್ವಾ ಎಂಬ ಪ್ರಶ್ನೆಯ ಜೊತೆಗೆ ಎಲ್ಲರನ್ನೂ ಕಾಡ್ತಿರುವ ಪ್ರಶ್ನೆ ಏನೆಂದರೆ.. ಅನ್ಶುಲ್ ಕಾಂಬೋಜ್ ಡೆಬ್ಯು ಮಾಡ್ತಾರಾ? ಒಂದೇ ಒಂದು ಟೆಸ್ಟ್ ಪಂದ್ಯಕ್ಕಾಗಿ ಆತನಿಗೆ ಅದೃಷ್ಟ ಖುಲಾಯಿಸುತ್ತಾ? ಅನ್ಶುಲ್ ಡೆಬ್ಯೂ ಮಾಡಿದ್ರೆ ಅದೃಷ್ಟವಲ್ಲ. ಆತನ ಕಠಿಣ ಪರಿಶ್ರಮಕ್ಕೆ ಸಿಕ್ಕ ಬೆಲೆಯೇ ಆಗಿದೆ!
ಇಂಡೋ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯಕ್ಕೆ ಕೌಂಟ್ಡೌನ್ ಶುರುವಾಗಿದೆ. ಇಂಜುರಿಯ ನಡುವೆಯೇ ಡು ಆರ್ ಡೈ ಮ್ಯಾಚ್ ಗೆಲ್ಲೋಕೆ ಟೀಮ್ ಇಂಡಿಯಾ ಪಣ ತೊಟ್ಟಿದೆ. ಇದೇ ಪಂದ್ಯದಲ್ಲಿ ಹರಿಯಾಣ ಎಕ್ಸ್ಪ್ರೆಸ್ ಅನ್ಶಲ್ ಕಾಂಬೋಜ್, ಅದೃಷ್ಟ ಖುಲಾಯಿಸುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: ಕ್ರೀಡಾಪಟುಗಳಿಗೆ ಗುಡ್ನ್ಯೂಸ್; ಚಿನ್ನ, ಬೆಳ್ಳಿ, ಕಂಚಿನ ಪದಕ ಗೆದ್ದರೆ ಕೋಟಿ ಕೋಟಿ ಹಣ.. ಸರ್ಕಾರಿ ಉದ್ಯೋಗ
ನೆಟ್ಸ್ನಲ್ಲಿ ಕಾಂಬೋಜ್ ಕಮಾಲ್..!
2 ದಿನಗಳ ಹಿಂದಷ್ಟೇ ಟೀಮ್ ಇಂಡಿಯಾ ಕ್ಯಾಂಪ್ ಸೇರಿರುವ ಅನ್ಶುಲ್ ಕಾಂಬೋಜ್, ನೆಟ್ಸ್ನಲ್ಲಿ ಅದ್ಭುತ ರಿದಮ್ನಲ್ಲಿ ಬೌಲಿಂಗ್ ಮಾಡಿದ್ದಾರೆ. ಟೀಮ್ ಇಂಡಿಯಾದ ಟಾಪ್ ಆರ್ಡರ್ ಹಾಗೂ ಮಿಡಲ್ ಆರ್ಡರ್ ಬ್ಯಾಟರ್ಗಳಿಗೆ ಚಳ್ಳೆ ಹಣ್ಣು ತಿನ್ನಿಸಿರುವ ಹರಿಯಾಣ ಎಕ್ಸ್ಪ್ರೆಸ್ ಬೌಲಿಂಗ್ಗೆ ಗೌತಮ್ ಗಂಭೀರ್, ಮಾರ್ನೆ ಮಾರ್ಕೆಲ್, ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಫಿದಾ ಆಗಿದ್ದಾರೆ. ಇಂಜುರಿ ವೇಗಿ ಆಕಾಶ್ ದೀಪ್ ಅಥವಾ ನಿತಿಶ್ ರೆಡ್ಡಿಯ ಬದಲಿ ಸ್ಥಾನದಲ್ಲಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಡೆಬ್ಯೂ ಮಾಡಲು ಸಜ್ಜಾಗಿರುವ ಕಾಂಬೋಜ್ ನಡೆದು ಬಂದ ಹಾದಿ ನಿಜಕ್ಕೂ ಸುಲಭದಲ್ಲ.
ಇದನ್ನೂ ಓದಿ: ಈ ಐದು ಸವಾಲು ಮೆಟ್ಟಿ ನಿಂತ್ರೆ ಟೀಂ ಇಂಡಿಯಾ ಸೇಫ್.. ಇಲ್ಲದಿದ್ರೆ ಕನಸು ಭಗ್ನ..!
ರೈತನ ಮಗ ಕ್ರಿಕೆಟರ್ ಆಗಿದ್ದೇಗೆ?
ಅನ್ಶುಲ್ ಕಾಂಬೋಜ್ ಹರಿಯಾಣದ ಕರ್ನಾಲ್ ಮೂಲದವರು. ತಂದೆ ಉದಮ್ ಸಿಂಗ್, ತಾಯಿ ಫಿಂಕಿ. ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಅನ್ಶುಲ್, ಕ್ರಿಕೆಟರ್ ಆಗಲು ಕಾರಣವೇ ತಂದೆ ಉದಮ್ ಸಿಂಗ್. ಬಾಲ್ಯದಲ್ಲೇ ಮಗನನ್ನ ಕ್ರಿಕೆಟರ್ ಆಗಿ ಮಾಡಬೇಕೆಂಬ ಕನಸು ಕಂಡಿದ್ದ ಉದಮ್ ಸಿಂಗ್, 11ನೇ ವಯಸ್ಸಿನಲ್ಲೇ ಶಾಲಾ ಶಿಕ್ಷಣದ ಜೊತೆಗೆ ಕ್ರಿಕೆಟ್ ಅಕಾಡಮಿಗೆ ಸೇರಿಸಿತ್ತು.
11 ವರ್ಷದಿಂದ ಕ್ರಿಕೆಟ್ ಆಡಲು ಆರಂಭಿಸಿದೆ. ಫಾಸ್ಟ್ ಬೌಲರ್ ಆಗಿ ಕ್ರಿಕೆಟ್ ಆರಂಭಿಸಿದ ನನ್ನ ಜೀವನದಲ್ಲಿ ಅಪ್ಪನ ಬಹುದೊಡ್ಡ ಪಾತ್ರ ವಹಿಸಿದ್ದಾರೆ. ನನ್ನ ಕುಟುಂಬದ ಬೆಂಬಲವೂ ಅಪಾರ. ಕೋಚ್ಗಳಿಂದ ಸಿಕ್ಕ ಬೆಂಬಲದಿಂದಲೇ ಕ್ರಿಕೆಟರ್ ಆಗಿದ್ದೇನೆ-ಅನ್ಶುಲ್ ಕಾಂಬೋಜ್, ಕ್ರಿಕೆಟರ್
2 ಗಂಟೆ ಟ್ರಾವೆಲ್..!
ಮಗ ಕ್ರಿಕೆಟರ್ ಆಗಬೇಕೆಂಬ ಕನಸು ಅಪ್ಪ ಕಂಡ್ರೆ ತಂದೆಯ ಕನಸು ನಿಜ ಮಾಡಬೇಕೆಂಬ ಛಲ, ಹಠ ಅನ್ಶುಲ್ಗೆ ಇತ್ತು. ಬೆಳಗ್ಗೆ 4 ಗಂಟೆಗೆ ಎಳುತ್ತಿದ್ದ ಅನ್ಶುಲ್, ಬಸ್ ಕ್ಯಾಚ್ ಮಾಡಲು ಸಲುವಾಗಿ ಸುಮಾರು 8 ಕಿಲೋ ಮೀಟರ್ ವಾಕ್ ಮಾಡಬೇಕಿತ್ತು. ಕಾರ್ನಲ್ನಲ್ಲಿರುವ ಕ್ರಿಕೆಟ್ ಅಕಾಡೆಮಿಗೆ ತಲುಪುವ ಸಲುವಾಗಿ ಅನ್ಶುಲ್, ಹುಟ್ಟೂರಾದ ಫಜಲ್ಪುರದಿಂದ ಇಂದ್ರಿಗೆ ನಡೆಯಬೇಕಿತ್ತು. ಇಂದ್ರಿಯಲ್ಲಿ ಬಸ್ ಹಿಡಿದು ಕರ್ನಾಲ್ನ ಕ್ರಿಕೆಟ್ ಅಕಾಡಮಿಗೆ ತಲುಪುತ್ತಿದ್ದ ಅನ್ಶುಲ್, ಪ್ರಯಾಣದ ಅವಧಿಯೇ 2 ಗಂಟೆಯಾಗ್ತಿತ್ತು. ಮಗನ ಕನಸು ನನಸಾಗಬೇಕಾದ್ರೆ ಇಲ್ಲಿಂದ ಸಾಧ್ಯವಿಲ್ಲ ಎಂದು ಅರಿತಿದ್ದ ತಂದೆ ಉದಮ್ ಸಿಂಗ್, ಸ್ವಗ್ರಾಮದಿಂದ ಕುಟುಂಬ ಸಮೇತರಾಗಿ ಕಾರ್ನಲ್ಗೆ ಶಿಫ್ಟ್ ಆಗಿಬಿಟ್ರು.
ಇದನ್ನೂ ಓದಿ: ಹೊಸ ಕೆಲಸ ಪ್ರಾರಂಭಿಸಲು ಒಳ್ಳೆ ದಿನ, ದೊಡ್ಡ ಪ್ರಮಾಣದ ಹೂಡಿಕೆ ಬೇಡ; ಇಲ್ಲಿದೆ ಇಂದಿನ ಭವಿಷ್ಯ..!
ಆರಂಭಿಕ ದಿನಗಳಲ್ಲಿ ಪ್ರಯಾಣ ಕಷ್ಟವಾಗಿತ್ತು. ನಮ್ಮ ಗ್ರಾಮದಿಂದ ಕ್ರಿಕೆಟ್ ಆಕಾಡಮಿಗೆ ಹೋಗಿ ಬರಲು 2 ಗಂಟೆಯಾಗ್ತಿತ್ತು. ಬೆಳೆಯುತ್ತಾ ಬೆಳೆಯುತ್ತಾ, ಗ್ಲೆನ್ ಮೆಗ್ರಾಥ್ ನನಗೆ ಸ್ಫೂರ್ತಿಯಾಗಿದ್ರು. ಅವರ ವಿಡಿಯೋ ನೋಡ್ತಿದ್ದೆ. ನೋಡ್ತಾ ನೋಡ್ತಾ ಕನ್ಸಿಸ್ಟೆನ್ಸಿ, ಉತ್ತಮ ಲೈನ್ ಆ್ಯಂಡ್ ಲೆನ್ತ್ ಮೇಲೆ ಗಮನ ಹರಿಸಿದೆ-ಅನ್ಶುಲ್ ಕಾಂಬೋಜ್, ಕ್ರಿಕೆಟರ್
ಎಂದಿಗೂ ಟ್ರೈನಿಂಗ್ ಸೆಷನ್ನಿಂದ ತಪ್ಪಿಸಿಕೊಳ್ಳದ ಅನ್ಶುಲ್, ಕ್ಲಬ್ ಕ್ರಿಕೆಟ್ನಿಂದ ಅಂಡರ್-16, ಅಂಡರ್-19 ಮಟ್ಟದಲ್ಲಿ ಸದ್ದು ಮಾಡಿದ್ರು. ಸಿಕ್ಕ ಪ್ರತಿ ಅವಕಾಶದಲ್ಲಿ ಮಿಂಚಿದ 2022ರಲ್ಲಿ ಹರಿಯಾಣ ರಣಜಿ ತಂಡಕ್ಕೂ ಆಯ್ಕೆಯಾದರು. 2022ರ ಫೆಬ್ರವರಿಯಲ್ಲೇ ತ್ರಿಪುರ ಎದುರು ರಣಜಿಗೆ ಡೆಬ್ಯು ಮಾಡಿದ ಅನ್ಶುಲ್, 2023-24ರ ವಿಜಯ್ ಹಜಾರೆ ಟ್ರೋಫಿಯಲ್ಲೂ ಸ್ಥಾನ ಪಡೆದರು. ಇದೇ ಟೂರ್ನಿಯಲ್ಲಿ 10 ಪಂದ್ಯಗಳಿಂದ 17 ವಿಕೆಟ್ ಪಡೆದು ಮಿಂಚಿದ್ದ ಕಾಂಬೋಜ್, ಹರಿಯಾಣ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ರು. ನಂತರ 2024-25ರ ರಣಜಿಯಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ರು.
2024-25ರ ರಣಜಿ ಟ್ರೋಫಿಯಲ್ಲಿ ಅನ್ಶುಲ್
2024-25ರ ರಣಜಿ ಟ್ರೋಫಿಯಲ್ಲಿ ಆಡಿದ 6 ಪಂದ್ಯಗಳಿಂದ 34 ವಿಕೆಟ್ ಬೇಟೆಯಾಡಿದ ಅನ್ಶುಲ್, 2.80ರ ಎಕಾನಮಿಯಲ್ಲಿ ರನ್ ನೀಡಿದರು. ಕೇರಳ ಎದುರು 49 ರನ್ ನೀಡಿ 10 ವಿಕೆಟ್ ಪಡೆದು ಇತಿಹಾಸ ಬರೆದಿದ್ರು.
ಐಪಿಎಲ್ ಎಂಟ್ರಿ..
2024ರಲ್ಲಿ ಮುಂಬೈ ತಂಡದಲ್ಲಿದ್ದ ಅನ್ಶುಲ್ಗೆ ಯಶಸ್ಸು ಸಿಗಲಿಲ್ಲ. 2025ರ ಐಪಿಎಲ್ಗೂ ಮುನ್ನ ಮಿಂಚಿನ ಪ್ರದರ್ಶನ ನೀಡಿದ್ದ ಕಾಂಬೋಜ್, ಮೆಗಾ ಹರಾಜಿನಲ್ಲಿ 3.40 ಕೋಟಿಗೆ ಚೆನ್ನೈ ಪಾಲಾದರು. ಆರಂಭದಲ್ಲಿ ಕೇವಲ ಬೆಂಚ್ಗೆ ಸೀಮಿತವಾಗಿದ್ದ ಕಾಂಬೋಜ್, ಅವಕಾಶ ಸಿಕ್ಕ 8 ಪಂದ್ಯಗಳಿಂದ 8 ವಿಕೆಟ್ ಬೇಟೆಯಾಡಿದ್ರು. ಕೇವಲ 8ರ ಎಕಾನಮಿ ಕಾಯ್ದಕೊಂಡಿದ್ರು. ಐಪಿಎಲ್ ಬಳಿಕ ಭಾರತ ಎ ತಂಡದ ಪರವಾಗಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಕಾಂಬೋಜ್, ಅದ್ಬುತ ಪ್ರದರ್ಶನವನ್ನೇ ಹೊರಗಾಕಿದ್ರು. ಎರಡೂ ಕಡೆ ಸ್ವಿಂಗ್ ಮಾಡಬಲ್ಲ ಈತ, ಗುಡ್ ಲೈನ್ ಆ್ಯಂಡ್ ಲೆನ್ತ್ ಜೊತೆಗೆ ಬೌಲಿಂಗ್ನಲ್ಲಿ ವೇರಿಯನ್ಸ್ ಹೊಂದಿದ್ದಾರೆ. 6.2 ಉದ್ದನೆಯ ಕಾಂಬೋಜ್ಗೆ, ಇಂಗ್ಲೆಂಡ್ನಲ್ಲಿ ಆಡಿದ ಅನುಭವದ ಜೊತೆಗೆ ಕಂಡೀಷನ್ಸ್ ಸೂಟ್ ಆಗುತ್ತೆ. ಹೀಗಾಗಿ ಇಂದು ಅನ್ಶುಲ್, ಡೆಬ್ಯೂ ಮಾಡಿದ್ರು ಅಚ್ಚರಿ ಏನಿಲ್ಲ.
ಇದನ್ನೂ ಓದಿ: ಕೆಜಿಎಫ್ ಬಾಬುಗೆ RTO ಶಾಕ್; ಬಿಗ್ಬಿ, ಅಮೀರ್ ಖಾನ್ರಿಂದ ಖರೀದಿಸಿದ್ದ ಕಾರುಗಳು ಸೀಜ್..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ