newsfirstkannada.com

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾರತ ನಂ-1.. ಇಂಗ್ಲೆಂಡ್​ ವಿರುದ್ಧ ಸರಣಿ ಜಯಿಸಿ ದಾಖಲೆ ಬರೆದ ರೋಹಿತ್ ಟೀಮ್

Share :

Published March 10, 2024 at 8:52am

  ಐದನೇ ಟೆಸ್ಟ್​​ನಲ್ಲಿ ಕುಲ್​ದೀಪ್, ಆರ್ ಅಶ್ವಿನ್​ ಸ್ಪಿನ್ ಮ್ಯಾಜಿಕ್

  ಸರಣಿಯಲ್ಲಿ ಸಾಲು ಸಾಲು ಸವಾಲುಗಳನ್ನ ಎದುರಿಸಿದ ಭಾರತ

  ಇಂಗ್ಲೆಂಡ್​ ವಿರುದ್ಧದ ಸರಣಿ ಗೆಲುವಿನ ಕ್ರೆಡಿಟ್​ ಯಾರಿಗೆ ಸಲ್ಲಬೇಕು?

ಇಂಡೋ -ಇಂಗ್ಲೆಂಡ್​​ 5ನೇ ಟೆಸ್ಟ್​ ಪಂದ್ಯ ಮೂರೇ ದಿನಕ್ಕೆ ಮುಕ್ತಾಯವಾಗಿದೆ. ಧರ್ಮಶಾಲಾ ಟೆಸ್ಟ್​​ನಲ್ಲಿ ಟೀಮ್​ ಇಂಡಿಯಾದ ಅಬ್ಬರದ ಮುಂದೆ ಆಂಗ್ಲ ಪಡೆಯ ಲೆಕ್ಕಾಚಾರಗಳೆಲ್ಲ ತಲೆ ಕೆಳಗಾದ್ವು. ಹೀಗಾಗಿ ಹೀನಾಯ ಸೋಲಿಗೆ ಇಂಗ್ಲೆಂಡ್​ ಶರಣಾದ್ರೆ, ಟೀಮ್​ ಇಂಡಿಯಾ ವಿಜಯ ಪತಾಕೆ ಹಾರಿಸಿತು. ಅಷ್ಟಕ್ಕೂ ಪಂದ್ಯ ಮೂರೇ ದಿನಕ್ಕೆ ಪಂದ್ಯ ಅಂತ್ಯ ಆಗಿದ್ದೇಗೆ.?

ಅಂದುಕೊಂಡಂತೆ ಧರ್ಮಶಾಲಾ ಟೆಸ್ಟ್​ ಮೂರೇ ದಿನಕ್ಕೆ ಮುಕ್ತಾಯವಾಗಿದೆ. ಟೀಮ್​ ಇಂಡಿಯಾದ ಆಲ್​​ರೌಂಡ್​ ಆಟದ ಮುಂದೆ ಪತರುಗುಟ್ಟಿದ ಇಂಗ್ಲೆಂಡ್​ ತಂಡ ಹೀನಾಯ ಸೋಲಿಗೆ ಶರಣಾಗಿದೆ. ಧರ್ಮಶಾಲಾದಲ್ಲಿ ದರ್ಬಾರ್​ ನಡೆಸಿದ ರೋಹಿತ್​ ಗ್ಯಾಂಗ್​ ಇನ್ನಿಂಗ್ಸ್​ ಹಾಗೂ 64 ರನ್​​ಗಳ ದಿಗ್ವಿಜಯ ಸಾಧಿಸಿದೆ.

ಬಿಗ್​ ಲೀಡ್​ ನೋಡಿ ದಂಗಾದ ಇಂಗ್ಲೆಂಡ್​.!

3ನೇ ದಿನದಾಟದಲ್ಲಿ ಕೇವಲ 4.1 ಓವರ್​​ ಬ್ಯಾಟಿಂಗ್​ ನಡೆಸಿದ ಟೀಮ್​ ಇಂಡಿಯಾ ಬಹು ಬೇಗನೇ ಆಲೌಟ್​​ ಆಯ್ತು. ಆದ್ರೆ, ಇಂಗ್ಲೆಂಡ್​ ಪಾಳಯದಲ್ಲಿ ಟೀಮ್​ ಇಂಡಿಯಾವನ್ನ ಆಲೌಟ್​ ಮಾಡಿದ ಖುಷಿಗಿಂತ ಆತಂಕವೇ ಹೆಚ್ಚು ಎದ್ದು ಕಾಣ್ತಿತ್ತು. ಯಾಕಂದ್ರೆ, ಅದಾಗಲೇ ರೋಹಿತ್​ ಪಡೆ ಬರೋಬ್ಬರಿ 259 ರನ್​ಗಳ ಮುನ್ನಡೆ ಪಡೆದುಕೊಂಡಿತ್ತು. ಬಿಗ್​ ಲೀಡ್​​ ನೋಡಿಯೇ ಆಂಗ್ಲರ ಪಡೆ ದಂಗಾಗಿ ಹೋಗಿತ್ತು.

ಸ್ಪಿನ್​ ಸುಳಿಗೆ ಸಿಲುಕಿ ವಿಲ ವಿಲ ಒದ್ದಾಡಿದ ಆಂಗ್ಲರು.!

ಮೊದಲ ಇನ್ನಿಂಗ್ಸ್​ನಲ್ಲಿ ಕುಲ್​​ದೀಪ್​ ಯಾದವ್​, 2ನೇ ಇನ್ನಿಂಗ್ಸ್​ನಲ್ಲಿ ರವಿಚಂದ್ರನ್​ ಅಶ್ವಿನ್​ ಇಷ್ಟೇ ವ್ಯತ್ಯಾಸ. ರಿಸಲ್ಟ್​​ ಮಾತ್ರ ಸೇಮ್​ ನೋಡಿ. ಟೀಮ್​ ಇಂಡಿಯಾದ ಸ್ಪಿನ್​​ ಸುಳಿಗೆ ಸಿಲುಕಿದ ಇಂಗ್ಲೆಂಡ್​ ಪಡೆ ವಿಲ ವಿಲ ಒದ್ದಾಡಿ ಬಿಡ್ತು. 2ನೇ ಇನ್ನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್​​ಗೆ ಅಶ್ವಿನ್​ ಶಾಕ್​ ಮೇಲೆ ಶಾಕ್​ ಕೊಟ್ರು.. ಇಂಗ್ಲೆಂಡ್​​ ಟಾಪ್​ 5 ಬ್ಯಾಟರ್ಸ್​​ ತಿರುಗಿಯೂ ನೋಡದೆ ಪೆವಿಲಿಯನ್​ ಸೇರಿದ್ರು.

48.1 ಓವರ್​ಗಳಲ್ಲಿ​ ಗಂಟು ಮೂಟೆ ಕಟ್ಟಿದ ಇಂಗ್ಲೆಂಡ್​​.!

2ನೇ ಇನ್ನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್​ನ ಖೇಲ್​ ಖತಂ ಮಾಡೋಕೆ ಟೀಮ್​ ಇಂಡಿಯಾ ಬೌಲರ್ಸ್​​ ಹೆಚ್ಚು ಹೊತ್ತು ತೆಗೆದುಕೊಳ್ಳಲೇ ಇಲ್ಲ.. ಜಸ್ಟ್​​ 48.1 ಓವರ್​​ಗಳಲ್ಲಿ ಇಂಗ್ಲೆಂಡ್​​​ ಪಡೆಯನ್ನ ಆಲೌಟ್​ ಮಾಡಿಬಿಟ್ರು. ಅಶ್ವಿನ್​ 5 ವಿಕೆಟ್​ ತೆಗೆದು ಮಿಂಚಿದ್ರೆ, ಕುಲ್​​ದೀಪ್​, ಬೂಮ್ರಾ ತಲಾ 2, ಜಡೇಜಾ 1 ವಿಕೆಟ್​ ಕಬಳಿಸಿದ್ರು.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾರತಕ್ಕೆ ಅಗ್ರಸ್ಥಾನ

2ನೇ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್​​ ತಂಡವನ್ನ ಕೇವಲ 195 ರನ್​ಗಳಿಗೆ ಟೀಮ್​ ಇಂಡಿಯಾ ಆಲೌಟ್​ ಮಾಡ್ತು. ಈ ಮೂಲಕ ಇನ್ನಿಂಗ್ಸ್​ ಹಾಗೂ 195 ರನ್​ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ 112 ವರ್ಷಗಳ ಬಳಿಕ ಮೊದಲ ಟೆಸ್ಟ್​ ಪಂದ್ಯದಲ್ಲಿ ಸೋತರೂ 4-1 ಅಂತರದಲ್ಲಿ ಸರಣಿ ಜಯಿಸಿದ ತಂಡ ಎಂಬ ವಿಶೇಷ ದಾಖಲೆಯನ್ನ ಬರೆಯಿತು. ಗೆಲುವಿನೊಂದಿಗೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಅಂಕಪಟ್ಟಿಯಲ್ಲಿ ಟೀಮ್​ ಇಂಡಿಯಾ ಅಗ್ರಸ್ಥಾನಕ್ಕೇರಿತು.

ಸರಣಿಯ ಮೊದಲ ಟೆಸ್ಟ್​ನಲ್ಲೇ ಸೋಲಿನ ಹಿನ್ನಡೆ, ಅನುಭವಿ ಆಟಗಾರರ ಅಲಭ್ಯತೆ, ಇಂಜುರಿ ಕಾಟ. ಹೀಗೆ ಇಂಗ್ಲೆಂಡ್​​ ವಿರುದ್ಧದ ಸರಣಿಯಲ್ಲಿ ಟೀಮ್​ ಇಂಡಿಯಾ ಸಾಲು ಸಾಲು ಸವಾಲುಗಳನ್ನ ಎದುರಿಸಿತು. ಆದ್ರೆ, ಅಂತಿಮವಾಗಿ ಯುವ ಪಡೆಯೊಂದಿಗೆ ಆ ಸವಾಲುಗಳನ್ನ ಮೆಟ್ಟಿ ನಿಂತು, ದಿಗ್ವಿಜಯ ಸಾಧಿಸಿದೆ. ಇದ್ರ ಕ್ರೆಡಿಟ್​​​ ಕ್ಯಾಪ್ಟನ್​ ರೋಹಿತ್​ ಶರ್ಮಾ, ಕೋಚ್​ ರಾಹುಲ್​ ದ್ರಾವಿಡ್​​ಗೆ ಸಲ್ಲಲೇಬೇಕು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾರತ ನಂ-1.. ಇಂಗ್ಲೆಂಡ್​ ವಿರುದ್ಧ ಸರಣಿ ಜಯಿಸಿ ದಾಖಲೆ ಬರೆದ ರೋಹಿತ್ ಟೀಮ್

https://newsfirstlive.com/wp-content/uploads/2024/03/ROHIT_GILL_KHAN_PADIKAL.jpg

Load More