ಇಂಗ್ಲೆಂಡ್​ಗೆ ಮಾಸ್ಟರ್​ ಸ್ಟ್ರೋಕ್ ನೀಡಲು ಸನ್ನದ್ಧ.. ಭಾರತ ತಂಡದಲ್ಲಿ ಯಾರು ಆಡ್ತಾರೆ, ಯಾರು ಆಡಲ್ಲ..?

author-image
Ganesh
Updated On
2ನೇ ಟೆಸ್ಟ್​ನಲ್ಲಿ 4 ಬದಲಾವಣೆ ಫಿಕ್ಸ್..! ಯಾರಿಕೆ ಕೊಕ್? ಪ್ಲೇಯಿಂಗ್-11ನಲ್ಲಿ ಯಾರಿಗೆಲ್ಲ ಅವಕಾಶ..?
Advertisment
  • ಇಂಡೋ, ಇಂಗ್ಲೆಂಡ್ ಹೈವೋಲ್ಟೇಜ್ ಕದನಕ್ಕೆ ಕೌಂಟ್​ಡೌನ್
  • ಡು ಆರ್​ ಡೈ ಮ್ಯಾಚ್ ಗೆದ್ದು ಬೀಗುತ್ತಾ ಟೀಮ್ ಇಂಡಿಯಾ..?
  • ಇಂಗ್ಲೆಂಡ್​​ಗೆ ಅಘಾತ​.. ಸ್ಟೋಕ್ಸ್​ ಔಟ್​​, ಆರ್ಚರ್​ಗೆ ರೆಸ್ಟ್​

ಇಂಡೋ ಇಂಗ್ಲೆಂಡ್ ಟೆಸ್ಟ್ ಬ್ಯಾಟಲ್​ ತಾರ್ಕಿಕ ಅಂತ್ಯಕ್ಕೆ ಬಂದು ನಿಂತಿದೆ. ಸರಣಿಯಲ್ಲಿ ಮುನ್ನಡೆಯಲ್ಲಿರುವ ಇಂಗ್ಲೆಂಡ್​, ಸರಣಿ ಉಳಿಸಿಕೊಳ್ಳಲು ಹೋರಾಡುವ ಯತ್ನದಲ್ಲಿದ್ರೆ, ಅತ್ತ ಯಂಗ್ ಇಂಡಿಯಾ, ಬಿಗ್ ಫೈಟ್​ ನೀಡಿ ಸರಣಿ ಸಮಬಲ ಮಾಡಿಕೊಳ್ಳುವ ಕನಸಿನಲ್ಲಿದೆ. ಹಾಗಾದ್ರೆ, ಡು ಆರ್​ ಡೈ ಪರಿಸ್ಥಿತಿಯಲ್ಲಿರುವ ಟೀಮ್ ಇಂಡಿಯಾ, ಫೈನಲ್​​ ಬ್ಯಾಟಲ್​​ ಗೆದ್ದು ಸರಣಿ ಉಳಿಸಿಕೊಳ್ಳುತ್ತಾ?

ಇಂಡೋ, ಇಂಗ್ಲೆಂಡ್ ಫೈನಲ್​​ ಬ್ಯಾಟಲ್​​ಗೆ ಕೌಂಟ್​ಡೌನ್..!

ಇಂಡೋ, ಇಂಗ್ಲೆಂಡ್ ಹೈವೋಲ್ಟೇಜ್ ಟೆಸ್ಟ್ ಕದನಕ್ಕೆ ಕೌಂಟ್​ಡೌನ್ ಶುರುವಾಗಿದೆ. ಇಂದಿನಿಂದ ಆರಂಭವಾಗಲಿರುವ ಅಂತಿಮ ಪಂದ್ಯಕ್ಕೆ ಲಂಡನ್​ನ ಕೆನ್ನಿಂಗ್ಟನ್​ ಓವಲ್​ ಸ್ಟೇಡಿಯಂ ವೇದಿಕೆಯಾಗ್ತಿದೆ. ಸರಣಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಟೀಮ್ ಇಂಡಿಯಾ ಪಾಲಿಗೆ ಡು ಆರ್​ ಡೈ ಮ್ಯಾಚ್ ಆಗಿದ್ರೆ. ಮುನ್ನಡೆ ಕಾಯ್ದುಕೊಂಡಿರುವ ಇಂಗ್ಲೆಂಡ್​, ಟೀಮ್ ಇಂಡಿಯಾಗೆ ಸ್ಟ್ರೋಕ್ ನೀಡುವ ಕನಸಿನಲ್ಲಿದೆ. ಹೀಗಾಗಿ ಹೈವೋಲ್ಟೇಜ್​ ಮ್ಯಾಚ್​ನಲ್ಲಿ ಯಾರ್ ಗೆಲ್ತಾರೆ ಎಂಬ ಕ್ಯೂರಿಯಾಸಿಟಿ ಸಹಜವಾಗೇ ಮನೆ ಮಾಡಿದೆ. ಆದ್ರೆ, ಟೀಮ್ ಇಂಡಿಯಾ ಪ್ಲೇಯಿಂಗ್​ ಇಲೆವೆನ್​​ನದ್ದೇ ಪ್ರಶ್ನೆಯಾಗಿದೆ.

ರಿಷಭ್​ ಪಂತ್ ಔಟ್​.. ಜುರೇಲ್ ಇನ್..!

ಟೀಮ್ ಇಂಡಿಯಾದ ಬ್ಯಾಟಿಂಗ್​ ವಿಭಾಗದಲ್ಲಿ ಹೆಚ್ಚೇನು ಬದಲಾವಣೆ ಇಲ್ಲ. ರಿಷಭ್ ಪಂತ್ ಇಂಜುರಿ ಕಾರಣಕ್ಕೆ ದ್ರುವ್ ಜುರೇಲ್ ಕಾಣಿಸಿಕೊಳ್ಳುವುದು ಬಹುತೇಕ ಫಿಕ್ಸ್. ಹೀಗಾಗಿ ಕಳೆದ 2 ಪಂದ್ಯಗಳಲ್ಲಿ ಕೇವಲ ವಿಕೆಟ್ ಕೀಪಿಂಗ್ ಮಾಡಿದ್ದ ದ್ರುವ್ ಜುರೇಲ್, ಈಗ ಬ್ಯಾಟಿಂಗ್ ಜವಾಬ್ದಾರಿಯೂ ನಿಭಾಯಿಸುವ ಚಾಲೆಂಜ್ ಎದುರಾಗಲಿದೆ.

ಇದನ್ನೂ ಓದಿ: ಧರ್ಮಸ್ಥಳ ಕೇಸ್​​ಗೆ ಹೊಸ ತಿರುವು.. ಪ್ಯಾನ್, 1 ಡೆಬಿಟ್ ಕಾರ್ಡ್ ಬಗ್ಗೆಯೂ ತೀವ್ರ ತನಿಖೆ..!

ಓವಲ್ ಟೆಸ್ಟ್​​ನಲ್ಲಿ ಆಡಲ್ವಾ ಬೂಮ್ರಾ..!?

ಟೀಮ್ ಇಂಡಿಯಾದ ಬಿಗೆಸ್ಟ್ ಕ್ವಷನ್, ಜಸ್​ಪ್ರಿತ್ ಬೂಮ್ರಾ ಆಡ್ತಾರಾ ಇಲ್ವಾ..? ಟೆಸ್ಟ್ ಸರಣಿ ಮುನ್ನ ಕೇವಲ 3 ಪಂದ್ಯಗಳನ್ನಷ್ಟೇ ಬೂಮ್ರಾ ಆಡ್ತಾರೆ ಎನ್ನಲಾಗಿತ್ತು. ಅದರಂತೆ ಈಗಾಗಲೇ 3 ಪಂದ್ಯಗಳನ್ನಾಡಿರುವ ಜಸ್​​ಪ್ರೀತ್​ ಬೂಮ್ರಾ, ವರ್ಕ್​ಲೋಡ್​ದೃಷ್ಟಿಯಿಂದ ನಿರ್ಣಾಯಕ ಪಂದ್ಯದಲ್ಲೇ ರೆಸ್ಟ್ ಮಾಡ್ತಿದ್ದಾರೆ ಎನ್ನಲಾಗಿದೆ. ಬೂಮ್ರಾ ಆಡುವ ಬಗ್ಗೆ ಕ್ಯಾಪ್ಟನ್​​​ ಶುಭ್​ಮನ್ ಅಡ್ಡಗೋಡೆ ಮೇಲೆ ದೀಪವಿಟ್ಟಿದ್ದಾರೆ. ಅಕಸ್ಮಾತ್ ಬೂಮ್ರಾ ಆಡದಿದ್ರೆ. ಆಕಾಶ್ ದೀಪ್ ಆಡುವುದು ಬಹುತೇಕ ಫಿಕ್ಸ್​.!

ಅನ್ಶುಲ್​ ಕಾಂಬೋಜ್ ಆಡ್ತಾರಾ ಇಲ್ವಾ..?

ಮ್ಯಾಂಚೆಸ್ಟರ್‌ ಟೆಸ್ಟ್​ನಲ್ಲಿ ಡೆಬ್ಯೂ ಮಾಡಿದ್ದ ಅಂನ್ಶುಲ್‌ ಕಂಬೋಜ್‌, ಮೊದಲ ಪಂದ್ಯದಲ್ಲೇ ಡಿಸಾಸ್ಟರ್ ಪರ್ಫಾಮೆನ್ಸ್​ ನೀಡಿದ್ದಾರೆ. ಇದು ಸಹಜವಾಗೇ ಅನ್ಶುಲ್​ ಮುಂದುವರಿಕೆ ಅನಿವಾರ್ಯನಾ ಎಂಬ ಪ್ರಶ್ನೆ ಹುಟ್ಟಿಹಾಕಿದೆ. ಹೀಗಾಗಿ ಇಂಜುರಿಯಿಂದ ಫಿಟ್​ ಆಗಿರುವ ಅರ್ಷದೀಪ್ ಸಿಂಗ್, ಕಾಂಬೋಜ್​​ ಜಾಗದಲ್ಲಿ ಡೆಬ್ಯೂ ಮಾಡೋದು ಶತಸಿದ್ಧ.

ಕುಲ್​ದೀಪ್ ಕಥೆ ಏನು..?

ಇಂಗ್ಲೆಂಡ್ ಸರಣಿ ಆರಂಭದಿಂದ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಆ ಮ್ಯಾಚ್ ಸಿಗುತ್ತೆ, ಈ ಮ್ಯಾಚ್ ಚಾನ್ಸ್ ಸಿಗುತ್ತೆ ಎಂದು ಬೆಂಚ್ ಕಾದಿದ್ದ ಕುಲ್​​ದೀಪ್, ಇದುವರೆಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಚಾನ್ಸ್ ಪಡೆಯಹದಿರುವುದು ನಿಜಕ್ಕೂ ಅಚ್ಚರಿ. ಹೀಗಾಗಿ ಶಾರ್ದೂಲ್ ಠಾಕೂರ್​​ಗೆ ಬೆಂಚ್​​​​​​ ಕಾಯಿಸಿ ಕುಲ್​​ದೀಪ್​ಗೆ ಒಂದಾದ್ರೂ ಅವಕಾಶ ನೀಡ್ತಾರಾ ಅನ್ನೋದು ಕೌತುಕ.?

ಇದನ್ನೂ ಓದಿ: ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

ಡು ಆರ್​ ಡೈ.. ಸರಣಿ ಸಮಬಲನಾ..? ಮುಖಭಂಗವಾ..?

ಒಂದ್ಕಡೆ ಪ್ಲೇಯಿಂಗ್​​ ಇಲೆವೆನ್​​ನಲ್ಲಿ ಯಾರನ್ನಾಡಿಸುವುದು ಎಂಬ ತಲೆನೋವಿನಲ್ಲಿರುವ ಟೀಮ್ ಇಂಡಿಯಾಗೆ, ಮತ್ತೊಂದ್ಕಡೆ ಓವಲ್​​ ಟೆಸ್ಟ್​ನಲ್ಲಿ ಗೆಲ್ಲಲೇಬೇಕಾದ ಒತ್ತಡ ಇದೆ. 4 ಪಂದ್ಯಗಳ ಪೈಕಿ 2 ಸೋಲು, 1 ಗೆಲುವು, 1 ಡ್ರಾ ಸಾಧಿಸಿರುವ ಟೀಮ್ ಇಂಡಿಯಾ, ಸರಣಿ ಸಮಬಲಕ್ಕಾಗಿ ಹೋರಾಡಲೇಬೇಕಾದ ಅನಿವಾರ್ಯತೆ ಸಿಲುಕಿದೆ. ಹೀಗಾಗಿ ಕೆಚ್ಚೆದೆಯ ಹೋರಾಟ ನೀಡಬೇಕಾಗಿದೆ. ಇಲ್ಲ ಸರಣಿ ಸೋಲಿನ ಮುಖಭಂಗ ಫಿಕ್ಸ್​.

ಇಂಗ್ಲೆಂಡ್​​ಗೆ ಅಘಾತ​.. ಬೆನ್​ ಸ್ಟೋಕ್ಸ್​ ಔಟ್​​, ಆರ್ಚರ್​ಗೆ ರೆಸ್ಟ್​..!

5ನೇ ಟೆಸ್ಟ್​ ಪಂದ್ಯಕ್ಕೂ ಇಂಗ್ಲೆಂಡ್​​ ತಂಡಕ್ಕೂ ಅಘಾತ ಎದುರಾಗಿದೆ. ಸರಣಿಯುದ್ದಕ್ಕೂ ಟೀಮ್ ಇಂಡಿಯಾಗೆ ಕಾಡಿದ್ದ ನಾಯಕ ಬೆನ್​ ಸ್ಟೋಕ್ಸ್​, ಶೋಲ್ಡರ್ ಇಂಜುರಿಯ ಕಾರಣಕ್ಕೆ ಪಂದ್ಯದಿಂದ ಹೊರಬಿದ್ದಿದ್ದಾರೆ. ಮತ್ತೊಂದ್ಕಡೆ ವೇಗಿ ಜೋಫ್ರಾ ಆರ್ಚರ್​ಗೂ ರೆಸ್ಟ್ ನೀಡಲಾಗಿದೆ. ಒಲಿ ಪೋಪ್​ ಇಂಗ್ಲೆಂಡ್ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸರಣಿ ಉಳಿಸಿಕೊಳ್ಳಬೇಕಾದ್ರೆ, ಕನಿಷ್ಠ ಡ್ರಾ ಮಾಡಿಕೊಳ್ಳಬೇಕಿರುವ ಅನಿವಾರ್ಯತೆಯಲ್ಲಿರುವ ಇಂಗ್ಲೆಂಡ್​​ಗೆ ಇದು ನಿಜಕ್ಕೂ ಬಿಗ್ ಶಾಕ್​​​​.

ಇದನ್ನೂ ಓದಿ: Baba Vanga: ಮತ್ತೆ ನಿಜವಾಯ್ತು ಬಾಬಾ ವಾಂಗಾ ನುಡಿದ ಭವಿಷ್ಯ.. ಎಲ್ಲರಿಗೂ ಅಚ್ಚರಿ.. ಏನದು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment