/newsfirstlive-kannada/media/post_attachments/wp-content/uploads/2024/06/IND-VS-ENG.jpg)
ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಯನ್ನು ಗೆದ್ದು ಬೀಗಿರುವ ಭಾರತ ತಂಡ, ಏಕದಿನ ಪಂದ್ಯಗಳ ಮೇಲೆ ಕಣ್ಣಿಟ್ಟಿದೆ. ನಾಳೆಯಿಂದ ಏಕದಿನ ಪಂದ್ಯಗಳ ಸರಣಿ ನಡೆಯಲಿದ್ದು, ನಾಗಪುರದ ವಿದರ್ಭ ಸ್ಟೇಡಿಯಂನಲ್ಲಿ ಜಿದ್ದಾಜಿದ್ದಿನ ಸೆಣಸಾಟ ನಡೆಸಲಿವೆ.
ಟಿ-20 ಸರಣಿ ಸೋತಿರುವ ಇಂಗ್ಲೆಂಡ್ ಪಡೆಗೆ ಏಕದಿನ ಪಂದ್ಯಗಳನ್ನು ಗೆಲ್ಲೋದು ಅನಿವಾರ್ಯ. ಅಲ್ಲದೇ ಫ್ರೆಬ್ರವರಿ 19 ರಿಂದ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಹೀಗಾಗಿ ಎರಡೂ ತಂಡಗಳಿಗೂ ಈ ಸರಣಿ ತುಂಬಾನೇ ಮುಖ್ಯವಾಗಿದೆ. ಫೆಬ್ರವರಿ 6 ರಿಂದ ಪಂದ್ಯಗಳು ಶುರುವಾಗಿ 12 ರಂದು ಮುಕ್ತಾಯವಾಗಲಿದೆ. ಒಟ್ಟು ಮೂರು ಏಕದಿನ ಪಂದ್ಯ ನಡೆಯಲಿದೆ.
ಇದನ್ನೂ ಓದಿ: ವಿಶ್ವದ ಬಲಿಷ್ಠ ಸೇನೆಗಳ ಟಾಪ್-10 ಪಟ್ಟಿಯಲ್ಲಿ ಭಾರತದ ಪರಾಕ್ರಮ; ಪಾಕಿಸ್ತಾನದ ಸ್ಥಿತಿ ಹೇಗಿದೆ ಗೊತ್ತಾ?
ಎಷ್ಟು ಗಂಟೆಗೆ ಪಂದ್ಯ?
ಮೊದಲ ಪಂದ್ಯ ನಾಳೆ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ. ಒಂದು ಗಂಟೆಗೆ ಟಾಸ್ ನಡೆಯಲಿದೆ. ಮೂರು ಪಂದ್ಯಗಳು ಹೊನಲು ಬೆಳಕಿನ ಪಂದ್ಯಗಳು. ಎರಡನೇ ಪಂದ್ಯ ಫೆಬ್ರವರಿ 9 ರಂದು ಬಾರಮತಿ ಸ್ಟೇಡಿಯಂನಲ್ಲಿ ನಡೆದ್ರೆ, ಕೊನೆಯ ಪಂದ್ಯವು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಯಾವ ಟಿವಿಯಲ್ಲಿ ನೇರ ಪ್ರಸಾರ..?
ಸ್ಟಾರ್ಸ್ಪೋರ್ಟ್ಸ್ ನೆಟ್ವರ್ಕ್ ಪಂದ್ಯದ ನೇರ ಪ್ರಸಾರದ ಜವಾಬ್ದಾರಿಯನ್ನು ಹೊತ್ತಿದೆ. ಮೊಬೈಲ್ನಲ್ಲಿ ಡಿಸ್ನಿ ಹಾಟ್ಸ್ಟಾರ್ನಲ್ಲಿ ಉಚಿತವಾಗಿ ನೋಡಬಹುದು. ಇಲ್ಲಿಯವರೆಗೆ ಎರಡು ತಂಡಗಳ ಮಧ್ಯೆ 107 ಏಕದಿನ ಪಂದ್ಯಗಳು ನಡೆದಿವೆ. ಅದರಲ್ಲಿ ಭಾರತ 58 ಪಂದ್ಯಗಳಲ್ಲಿ ಗೆದ್ದರೆ, ಇಂಗ್ಲೆಂಡ್ 44 ಮ್ಯಾಚ್ ಗೆಲುವು ಸಾಧಿಸಿದೆ. ಮೂರು ಪಂದ್ಯಗಳು ಟೈನಲ್ಲಿ ಕೊನೆಗೊಂಡಿದ್ರೆ, ಎರಡು ಪಂದ್ಯಗಳಲ್ಲಿ ರಿಸಲ್ಟ್ ಸಿಕ್ಕಿಲ್ಲ.
ಇದನ್ನೂ ಓದಿ: ಭಿಕ್ಷುಕನಿಗೆ RS 10 ಕೊಟ್ಟು ಲಾಕ್ ಆದ ಬೈಕ್ ಸವಾರ.. ಒಂದು ವರ್ಷ ಜೈಲು ಶಿಕ್ಷೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ