newsfirstkannada.com

ಮುಗಿಯದ ಗಿಲ್​​​​​ ಫೇಲ್ಯೂರ್​​ ಪುರಾಣ.. 23 ರನ್​ಗೆ ಸಿಲ್ಲಿಯಾಗಿ ವಿಕೆಟ್ ಒಪ್ಪಿಸಿದ ಪ್ರಿನ್ಸ್​​..!

Share :

Published January 27, 2024 at 2:26pm

    ಇಂಗ್ಲೆಂಡ್​ ವಿರುದ್ಧ ಅದೇ ರಾಗ ಅದೇ ಹಾಡು

    ಸತತ ವೈಫಲ್ಯ ಕಂಡರೂ ಇನ್ನೆಷ್ಟು ಚಾನ್ಸ್​​​..?

    ಗಿಲ್​​ ಸತತ ವೈಫಲ್ಯಕ್ಕೆ ಫ್ಯಾನ್ಸ್ ಕೆಂಡಾಮಂಡಲ..!

ಟೀಮ್ ಇಂಡಿಯಾ ತವರಿನಲ್ಲಿ ಆಂಗ್ಲರನ್ನ ಸದೆಬಡಿಯುವ ಉತ್ಸಾಹದಲ್ಲಿದೆ. ಬ್ಯಾಟಿಂಗ್​​-ಬೌಲಿಂಗ್​ನಲ್ಲಿ ಕಮಾಲ್ ಮಾಡ್ತಿದೆ. ಆದರೆ ಶುಭ್​​ಮನ್​​​​​ ಗಿಲ್ ಮಾತ್ರ ಫೇಲ್ಯೂರ್​ ಮೂಡ್​​ನಿಂದ ಹೊರಬರ್ತಿಲ್ಲ. ಚಾನ್ಸ್ ಮೇಲೆ ಚಾನ್ಸ್​ ಕೊಟ್ರೂ ಕಳಪೆ ಆಟವಾಡಿ ಟೀಕಾಕಾರರಿಗೆ ಆಹಾರವಾಗಿದ್ದಾರೆ.

ವೈಟ್​​ಬಾಲ್​​​​ ಕ್ರಿಕೆಟ್​ನಲ್ಲಿ ಧೂಳೆಬ್ಬಿಸಿದ ಶುಭ್​​ಮನ್​ ಗಿಲ್​​​​​ ರೆಡ್​ಬಾಲ್​ನಲ್ಲಿ ಫುಲ್ ಸೈಲೆಂಟಾಗಿದ್ದಾರೆ. ಸರಣಿ ಮೇಲೆ ಸರಣಿ ಬಂದು ಹೋದ್ವು. ಆದರೆ ಗಿಲ್ ಬ್ಯಾಟ್​​ ಮಾತ್ರ ಸೌಂಡ್ ಮಾಡ್ತಿಲ್ಲ. ಅದೇ ರಾಗ ಅದೇ ಹಾಡು ಎನ್ನುವಂತೆ ವೈಟ್ ಜರ್ಸಿಯಲ್ಲಿ ಅಟ್ಟರ್ ಪ್ಲಾಫ್​ ಶೋ ಮುಂದುವರಿಸಿದ್ದಾರೆ.

ಮುಗಿಯದ ಗಿಲ್​​​​​ ಫೇಲ್ಯೂರ್​​ ಪುರಾಣ..!
ಚೇತೇಶ್ವರ್ ಪೂಜಾರ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದ ಗಿಲ್​​​ ಟೆಸ್ಟ್​ನಲ್ಲಿ ಪರದಾಡ್ತಿದ್ದಾರೆ. ಕನಿಷ್ಠ ಪಕ್ಷ ತವರಿನಲ್ಲಿ ನಡೆಯುವ ಇಂಗ್ಲೆಂಡ್ ಟೆಸ್ಟ್​ ಸರಣಿಯಲ್ಲಾದ್ರು ಕಮ್​ಬ್ಯಾಕ್​ ಮಾಡ್ತಾರೆ ಅನ್ನೋ ನಿರೀಕ್ಷೆ ಇತ್ತು. ಸದ್ಯ ಆ ಭರವಸೆಯೂ ಹುಸಿಯಾಗಿದೆ. ಹೈದ್ರಾಬಾದ್​​​ನ ಟೆಸ್ಟ್​​​​ನ ಮೊದಲ ಇನ್ನಿಂಗ್ಸ್​ನಲ್ಲಿ ವೈಫಲ್ಯ ಕಂಡು ನಿರಾಸೆ ಮೂಡಿಸಿದ್ದಾರೆ.

ಬೇಜವಾಬ್ದಾರಿಯುತವಾಗಿ ವಿಕೆಟ್​ ಒಪ್ಪಿಸುವ ಅಗತ್ಯ ಏನಿತ್ತು..?
3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗಿಲ್​ ತಾಳ್ಮೆಯುತ ಇನ್ನಿಂಗ್ಸ್ ಕಟ್ತಾ ಇದ್ರು. ಆದರೆ 23 ರನ್​ ಆಗ್ತಿದ್ದೆ ತಡ ಬಿಗ್​ ಶಾಟ್ ಬಾರಿಸಲು ಹೋಗಿ ಸಿಲ್ಲಿಯಾಗಿ ವಿಕೆಟ್ ಒಪ್ಪಿಸಿದ್ರು. ಇಂತಹ ಬೇಜವಾಬ್ದಾರಿಯುತ ಆಟಗಾರನಿಗೆ ಇನ್ನೆಷ್ಟು ಚಾನ್ಸ್​ ಕೊಡ್ಬೇಕು ಅಂತ ಫ್ಯಾನ್ಸ್​ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಇದು ಬರೀ ಒಂದು ಇನ್ನಿಂಗ್ಸ್ ಕಥೆಯಲ್ಲ. 3ನೇ ಸ್ಲಾಟ್​ನಲ್ಲಿ ಆಡಲು ಶುರುವಾದಾಗಿನಿಂದಲೂ ಪಂಜಾಬ್ ಪುತ್ತರ್ ರನ್​​ ಬರ ಎದುರಿಸ್ತಿದ್ದಾರೆ.

3ನೇ ಕ್ರಮಾಂಕದಲ್ಲಿ ಗಿಲ್​​​​​..!
ಶುಭ್​​ಮನ್ ಗಿಲ್​ ಟೆಸ್ಟ್​ನಲ್ಲಿ 3ನೇ ಕ್ರಮಾಂಕದಲ್ಲಿ ಇಲ್ಲಿ ತನಕ 19 ಇನ್ನಿಂಗ್ಸ್​ ಆಡಿದ್ದಾರೆ. 23.62 ಎವರೇಜ್​ನಲ್ಲಿ ಕೇವಲ​​ 189 ರನ್ ಗಳಿಸಿದ್ದು, ಒಂದೇ ಒಂದು ಅರ್ಧಶತಕ ಬಾರಿಸಿಲ್ಲ.

ಶುಭ್​​ಮನ್​​ ಗಿಲ್​ ಎಚ್ಚರ..! ಎಚ್ಚರ..!
ಯಂಗ್​ಗನ್​ ಗಿಲ್​​​ ಆದಷ್ಟು ಬೇಗ ಫಾರ್ಮ್​ ಕಂಡುಕೊಳ್ಳಬೇಕಿದೆ. ಯಾಕಂದ್ರೆ ಯುವರಾಜನ ಸ್ಥಾನದ ಮೇಲೆ ಕನ್ನಡಿಗ ದೇವ್​ದತ್ ಪಡಿಕ್ಕಲ್ ಹದ್ದಿನ ಕಣ್ಣಿಟ್ಟಿದ್ದಾರೆ. ಡ್ರೀಮ್ ಫಾರ್ಮ್​ನಲ್ಲಿರೋ ಪಡಿಕ್ಕಲ್​​ ಪ್ರಸಕ್ತ ರಣಜಿ ಟ್ರೋಫಿಯಲ್ಲಿ 3 ಪಂದ್ಯಗಳಿಂದ ಬರೋಬ್ಬರಿ 369 ರನ್ ಕೊಳ್ಳೆ ಹೊಡೆದಿದ್ದಾರೆ. ಪಡಿಕ್ಕಲ್​​ ಕರ್ನಾಟಕ ತಂಡದಲ್ಲಿ 3ನೇ ಕ್ರಮಾಂಕದಲ್ಲಿ ರನ್​ ಭರಾಟೆ ನಡೆಸ್ತಿದ್ದಾರೆ. 92.25 ಎವರೇಜ್​ನಲ್ಲಿ ಬ್ಯಾಟಿಂಗ್​​​​​​​ ಮಾಡ್ತಿದ್ದು, ಟೀಮ್​ ಇಂಡಿಯಾಗೆ ಎಂಟ್ರಿ ಕೊಡೋ ಲೆಕ್ಕಾಚಾರದಲ್ಲಿದ್ದಾರೆ. ಇದ್ರಿಂದ ಗಿಲ್​​​​ಗೆ ಢವ ಢವ ಶುರುವಾಗಿರೋದಂತೂ ಸತ್ಯ. ಹೀಗಾಗಿ ಗಿಲ್​​​ ಇನ್ನಾದ್ರು ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲವಾದ್ರೆ ಪಂಜಾಬ್​​ ಪುತ್ತರ್​​​​ನ 3 ಸ್ಲಾಟ್​ ಅನ್ನ ಕನ್ನಡಿಗ ದೇವ್​ದತ್ ಪಡಿಕ್ಕಲ್​​ ಆಕ್ರಮಿಸಿಕೊಳ್ಳಲಿದ್ದಾರೆ..

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಮುಗಿಯದ ಗಿಲ್​​​​​ ಫೇಲ್ಯೂರ್​​ ಪುರಾಣ.. 23 ರನ್​ಗೆ ಸಿಲ್ಲಿಯಾಗಿ ವಿಕೆಟ್ ಒಪ್ಪಿಸಿದ ಪ್ರಿನ್ಸ್​​..!

https://newsfirstlive.com/wp-content/uploads/2024/01/GILL-6.jpg

Load More