Advertisment

IND vs ENG ಸೆಮಿಫೈನಲ್ ಪಂದ್ಯ ಕ್ಯಾನ್ಸಲ್..? ವೆದರ್​​ ರಿಪೋರ್ಟ್​​ನಲ್ಲಿ ಶಾಕಿಂಗ್ ಮಾಹಿತಿ..!

author-image
Ganesh
Updated On
IND vs ENG ಸೆಮಿಫೈನಲ್ ಪಂದ್ಯ ಕ್ಯಾನ್ಸಲ್..? ವೆದರ್​​ ರಿಪೋರ್ಟ್​​ನಲ್ಲಿ ಶಾಕಿಂಗ್ ಮಾಹಿತಿ..!
Advertisment
  • ಇಂದು ಇಂಡಿಯಾ-ಇಂಗ್ಲೆಂಡ್ ನಡುವೆ ಸೆಮಿಫೈನಲ್
  • ಅಫ್ಘಾನ್ ಸೋಲಿಸಿ ದಕ್ಷಿಣ ಆಫ್ರಿಕಾ ಫೈನಲ್ ಪ್ರವೇಶ
  • ಫೈನಲ್ ಪ್ರವೇಶದ ಕನಸು ಕಾಣ್ತಿರುವ ಭಾರತ ತಂಡ

ಟಿ20 ವಿಶ್ವಕಪ್​​​ನ 2ನೇ ಸೆಮಿ ಫೈನಲ್​​ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಇಂದು ರಾತ್ರಿ ಸೆಣಸಾಟ ನಡೆಸುತ್ತಿವೆ. ಗಯಾನದಲ್ಲಿ ನಡೆಯುವ ಹೈವೋಲ್ಟೇಜ್​​ ಪಂದ್ಯಕ್ಕೆ ಮಳೆರಾಯನ ಆತಂಕ ಎದುರಾಗಿದೆ. ಮಳೆ ಬಂದು ಪಂದ್ಯವೇ ರದ್ದಾದರೂ ಅಚ್ಚರಿ ಇಲ್ಲ ಎನ್ನುತ್ತಿವೆ ವರದಿಗಳು.

Advertisment

ಸದ್ಯ ಹೇಗಿದೆ..?
ಗಯಾನದ Providence Stadium ಸುತ್ತಮುತ್ತ ಸದ್ಯ ಮೋಡ ಕವಿದ ವಾತಾವರಣ ಇದೆ. ಮಳೆರಾಯ ಸೆಮಿಫೈನಲ್​​ ಮೇಲೆ ಪರಿಣಾಮ ಬೀರಲಿದ್ದಾನೆ ಎಂದು ಅಂದಾಜಿಸಲಾಗಿದೆ. ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾಗದಿದ್ದರೂ, ಟಾಸ್ ಪ್ರಕ್ರಿಯೆಗೆ, ಪಂದ್ಯ ಆರಂಭಕ್ಕೆ ಮಳೆ ಅಡ್ಡಿ ಮಾಡೋದು ಗ್ಯಾರಂಟಿ ಎಂದು ಹೇಳಲಾಗಿದೆ.

ಇದನ್ನೂ ಓದಿ:ನಿಶ್ಚಿತಾರ್ಥ ಮುಗಿಸಿ ಬರುವಾಗ ಭೀಕರ ಅಪಘಾತ.. ಓರ್ವ ಸಾವು, 10 ಮಂದಿ ಗಂಭೀರ

ಪರಿಣಾಮ ಮಳೆಯಿಂದ ಪಂದ್ಯ ವಿಳಂಬವಾದರೂ ಅಚ್ಚರಿ ಇಲ್ಲ. ಬೆಳಗ್ಗೆ 10 ಗಂಟೆ ಸುಮಾರಿಗೆ ಅಲ್ಲಿ ಪ್ರತಿಶತ 66 ರಷ್ಟು ಮಳೆ ಬರುವ ಸಂಭವ ಇದೆ. ಅದರ ಪ್ರಮಾಣವು 11 ಗಂಟೆ ಸುಮಾರಿಗೆ ಶೇಕಡಾ 75ಕ್ಕೆ ಏರಿಕೆ ಆಗಲಿದೆ. ಸಮಾಧಾನಕರ ವಿಚಾರ ಏನಂದರೆ ಮಧ್ಯಾಹ್ನ ಒಂದು ಗಂಟೆಯ ನಂತರ ಮಳೆಯ ಪ್ರಮಾಣ ಕಡಿಮೆ ಆಗಲಿದೆ. ಶೇಕಡಾ 49 ರಷ್ಟು ಮಳೆ ಬೀಳುವ ಸಂಭವ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisment

ಇದನ್ನೂ ಓದಿ:ಭಾರತ-ಇಂಗ್ಲೆಂಡ್ ಪಂದ್ಯಕ್ಕೆ ಮೀಸಲು ದಿನ ಇಲ್ಲ.. ಮಳೆಯಿಂದ ಪಂದ್ಯ ರದ್ದಾದರೆ ಫೈನಲ್​ಗೆ ಹೋಗೋದ್ಯಾರು?

ಮಧ್ಯಾಹ್ನ 3 ಗಂಟೆ ವೇಳೆಗೆ ಅಲ್ಲಿ ಮಳೆ ಬೀಳುವ ಸಾಧ್ಯತೆಯ ಪ್ರಮಾಣ ಪ್ರತಿಶತ 35 ರಿಂದ 45 ಇರಬಹುದು. ಸಂಜೆ 7 ಗಂಟೆ ನಂತರ ಮಳೆ ಬರುವ ಸಾಧ್ಯತೆ ಕಡಿಮೆ ಇದೆ. ಆದರೆ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ:ಇಂಗ್ಲೆಂಡ್, ಅಫ್ಘಾನಿಸ್ತಾನ್ ಯಾವುದೂ ಅಲ್ಲ.. ಈ ತಂಡ ವಿಶ್ವಕಪ್ ಗೆಲ್ಲುತ್ತೆ ಎಂದ ಮಾಜಿ ಕ್ರಿಕೆಟಿಗ

Advertisment

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment