newsfirstkannada.com

IND vs ENG: ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಫೀಲ್ಡಿಗೆ ಇಳಿದ ಭಾರತ ತಂಡ; ಕಾರಣ..?

Share :

Published February 17, 2024 at 11:09am

    ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯ

    ಇಂಗ್ಲೆಂಡ್​ಗೆ​ ಆರಂಭದಲ್ಲಿ ಆಘಾತ, 3 ವಿಕೆಟ್ ಪತನ

    ರಾಜ್​ಕೋಟ್​ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯ

ರಾಚ್ಕೋಟ್​ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯ ಮೂರನೇ ದಿನವಾದ ಇಂದು ಭಾರತ ತಂಡವು ಕೈಗೆ ಕಪ್ಪು ಬಟ್ಟೆ ಧರಿಸಿ ಆಡುತ್ತಿದೆ. ಫೆಬ್ರವರಿ 13 ರಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ದತ್ತಾಜಿ ರಾವ್ ಗಾಯಕ್ವಾಡ್​ ಅವರು 95 ವರ್ಷಕ್ಕೆ ನಿಧನರಾಗಿದ್ದಾರೆ.

ಅವರ ಅಗಲಿಕೆಯ ಕಂಬನಿಯಲ್ಲಿರುವ ಭಾರತ ತಂಡವು ಕಪ್ಪು ಬಟ್ಟೆ ಧರಿಸಿ ಕಣಕ್ಕೆ ಇಳಿದಿದೆ. 1959ರ ಸಂದರ್ಭದಲ್ಲಿ ದತ್ತಾಜಿ ರಾವ್ ಭಾರತ ಕ್ರಿಕೆಟ್ ತಂಡದ ಪ್ರಮುಖ ಆಧಾರವಾಗಿದ್ದರು. 1959ರಲ್ಲಿ ಭಾರತ ತಂಡದ ಕ್ಯಾಪ್ಟನ್ ಆಗಿಯೂ ಮುನ್ನಡೆಸಿದ್ದರು. 1952 ರಿಂದ 59ವರೆಗೆ ಒಟ್ಟು 11 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇವರ ಅವಧಿಯಲ್ಲಿ ಭಾರತ ತಂಡವು ಇಂಗ್ಲೆಂಡ್ ಮತ್ತು ವೆಸ್ಟ್​ ವಿಂಡೀಸ್​ ಪ್ರವಾಸ ಕೈಗೊಂಡಿತ್ತು. ಒಟ್ಟು 11 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು, 350 ರನ್ ಗಳಿಸಿದ್ದರು.

ಅವರ ನಿಧನ ಹಿನ್ನೆಲೆಯಲ್ಲಿ ಭಾರತ ತಂಡವು ಮೂರನೇ ದಿನವಾದ ಇಂದು ಕಪ್ಪು ಪಟ್ಟಿ ಧರಿಸಿ ಕಣಕ್ಕೆ ಇಳಿದಿದೆ. ನಿನ್ನೆಯಿಂದ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ತಂಡ 268 ರನ್​ಗಳಿಸಿ ಐದು ವಿಕೆಟ್ ಕಳೆದುಕೊಂಡಿದೆ. ಭಾರತದ ಪರ ಕುಲ್ದೀಪ್ ಯಾದವ್ 2 ವಿಕೆಟ್ ಪಡೆದುಕೊಂಡಿದ್ದಾರೆ. ಇನ್ನು ಭಾರತ ತಂಡವು ಮೊದಲ ಇನ್ನಿಂಗ್ಸ್​​ನಲ್ಲಿ 445ರನ್​ಗಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IND vs ENG: ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಫೀಲ್ಡಿಗೆ ಇಳಿದ ಭಾರತ ತಂಡ; ಕಾರಣ..?

https://newsfirstlive.com/wp-content/uploads/2024/02/TEST-INDIA.jpg

Load More