IND vs ENG: ಟೀಮ್ ‘ಇಂಜುರಿ’.. ಹೇಗಿರುತ್ತೆ ನಾಳಿನ ಪ್ಲೇಯಿಂಗ್ 11..?

author-image
Ganesh
Updated On
ಇಂಗ್ಲೆಂಡ್ ವಿರುದ್ಧ ಮತ್ತೊಂದು ಸೋಲು, ನಾಯಕ ಶುಬ್ಮನ್ ಗಿಲ್ ಏನಂದ್ರು..?
Advertisment
  • ಡು ಆರ್ ಡೈ ಮ್ಯಾಚ್.. ಇಂಜುರಿಯದ್ದೇ ಕಾಟ..
  • ಏನಯ್ಯಾ ಟೀಮ್ ಇಂಡಿಯಾ ಮುಂದಿನ ಕಥೆ..?
  • ಅರ್ಷದೀಪ್ ಸಿಂಗ್ ಔಟ್​.. ಕಾಂಬೋಜ್​ಗೆ ಬುಲಾವ್​

ಮಿಷನ್ ಮ್ಯಾಂಚೆಸ್ಟರ್​​ಗೆ ವೇದಿಕೆ ಸಜ್ಜಾಗಿದೆ. ಟಾರ್ಗೆಟ್ ಫಿಕ್ಸ್ ಮಾಡಿರುವ ಟೀಮ್ ಇಂಡಿಯಾ, ಅಖಾಡಕ್ಕಿಳಿದು ಭರ್ಜರಿ ಅಭ್ಯಾಸ ನಡೆಸ್ತಿದೆ. ನಾಲ್ಕನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನವೇ ಸಮಸ್ಯೆಗಳ ಸರಮಾಲೆಗೆ ಸಿಲುಕಿರುವ ಟೀಮ್ ಇಂಡಿಯಾ, ಈಗ ಗೊಂದಲದ ಗೂಡಾಗಿದೆ. ಇದಕ್ಕೆ ಮೂಲ ಕಾರಣ ಇಂಜುರಿ.

ಡು ಆರ್ ಡೈ ಮ್ಯಾಚ್.. ಇಂಜುರಿಯದ್ದೇ ಕಾಟ..

ಇಂಡೋ ಇಂಗ್ಲೆಂಡ್​ ನಡುವಿನ 4ನೇ ಟೆಸ್ಟ್​ಗೆ ಕೌಂಟ್​ಡೌನ್ ಶುರುವಾಗಿದೆ. ಲಾರ್ಡ್ಸ್​ನಲ್ಲಿ ಸೋತ ಟೀಮ್ ಇಂಡಿಯಾ, ಈಗ ಮ್ಯಾಂಚೆಸ್ಟರ್‌ನಲ್ಲಿ ಕಮ್​ಬ್ಯಾಕ್​ ಮಾಡುವ ಉತ್ಸುಕದಲ್ಲಿದೆ. ಇದಕ್ಕಾಗಿ ನೆಟ್ಸ್​ನಲ್ಲಿ ಬೆವರಿಳಿಸ್ತಿದೆ. ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಗೆದ್ದು ಇತಿಹಾಸ ಸೃಷ್ಟಿಸುವ ಲೆಕ್ಕಾಚಾರದಲ್ಲಿದೆ. ಕನಸು ಕಾಣ್ತಿರುವ ಟೀಮ್ ಇಂಡಿಯಾ ಕ್ಯಾಂಪ್​​ನಲ್ಲೀಗ ಆತಂಕದ ಮನೆ ಮಾಡಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರದ ಜೊತೆಗಿನ ಕಿತ್ತಾಟದ ಕಾರಣಕ್ಕೆ ಉಪರಾಷ್ಟ್ರಪತಿ ಸ್ಥಾನಕ್ಕೆ ಧನಕರ್ ರಾಜೀನಾಮೆ..!

publive-image

ಮ್ಯಾಂಚೆಸ್ಟರ್​​​ನಲ್ಲಿ ಒಂದೇ ಒಂದು ಟೆಸ್ಟ್ ಗೆಲ್ಲದ ಟೀಮ್ ಇಂಡಿಯಾ, ಎಡ್ಜ್​​ಬಾಸ್ಟನ್​ನಂತೆಯೇ ಮ್ಯಾಂಚೆಸ್ಟರ್​​ನಲ್ಲಿ ಹೊಸ ಚರಿತ್ರೆ ಸೃಷ್ಡಿಸುವ ತವಕದಲ್ಲಿದೆ. ಡು ಆರ್ ಡೈ ಪಂದ್ಯದಲ್ಲಿ ಶತಯಾ ಗತಾಯ ಗೆಲ್ಲಲು ಪಣ ತೊಟ್ಟಿದೆ. ಟೀಮ್ ಇಂಡಿಯಾದಲ್ಲಾದ ಸಾಲು ಸಾಲು ಇಂಜುರಿಗಳು ಹೊಸ ತಲೆನೋವನ್ನೇ ಹುಟ್ಟು ಹಾಕಿದೆ. ಇಂಜುರಿಯ ಕಾಟದಿಂದ ಈಗಾಗಲೇ ಹಿನ್ನಡೆ ಅನುಭವಿಸಿರುವ ಟೀಮ್ ಇಂಡಿಯಾದ ಮುಂದಿನ ಕಥೆ ಏನು ಎಂಬ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ.

ಆರ್ಷ್​​​ದೀಪ್ ಔಟ್​.. ಕಾಂಬೋಜ್​ಗೆ ಬುಲಾವ್

ಮ್ಯಾಂಚೆಸ್ಟರ್ ಪಂದ್ಯಕ್ಕೆ ಜಸ್ಟ್ ಒಂದೇ ಒಂದು ದಿನ ಬಾಕಿಯಿದೆ. ಈ ನಡುವೆಯೇ ಟೀಮ್ ಇಂಡಿಯಾ ಕ್ಯಾಂಪ್​​ನಲ್ಲಿ ಸಾಲು ಸಾಲು ಪ್ರಾಬ್ಲಂ ಕ್ರಿಯೇಟ್ ಆಗಿದೆ. ಲೆಫ್ಟಿ ಪೇಸರ್​ ಆರ್ಷದೀಪ್ ಸಿಂಗ್, ಅಭ್ಯಾಸ ವೇಳೆ ಎಡಗೈ ಇಂಜುರಿಗೆ ತುತ್ತಾಗಿ 4ನೇ ಟೆಸ್ಟ್​ನಿಂದ ಹೊರಬಿದ್ದಿದ್ದಾರೆ. ಈ ಬೆನ್ನಲ್ಲೇ ಎಡ್ಜ್ ಬಾಸ್ಟನ್ ಟೆಸ್ಟ್ ಗೆಲುವಿನ‌ ಹೀರೋ ಆಕಾಶ್ ದೀಪ್, ತೊಡೆ ಸಂದಿನ‌ ನೋವಿಗೆ ತುತ್ತಾಗಿದ್ದಾರೆ. ಇನ್ನೊಂದು ದಿನದಲ್ಲಿ ಆಕಾಶ್ ದೀಪ್, ಫಿಟ್ ಆಗ್ತಾರಾ ಎಂಬ ಚಿಂತೆಯಲ್ಲಿದೆ. ಈ ನಡುವೆಯೇ ಟೀಮ್ ಇಂಡಿಯಾಗೆ ಮತ್ತೊಂದು ಶಾಕ್ ಎದುರಾಗಿದೆ. ಅದೇ ನಿತಿಶ್ ರೆಡ್ಡಿಯ ಇಂಜುರಿ.

ಇದನ್ನೂ ಓದಿ: ಮಕ್ಕಳಿಗೆ ಬೇಕರಿ ಫುಡ್ ಕೊಡುವ ಮುನ್ನ ಇರಲಿ ಎಚ್ಚರ.. ಮಂಡ್ಯದಲ್ಲಿ ಏನಾಗಿದೆ ನೋಡಿ..

publive-image

ಆರ್ಷದೀಪ್, ಆಕಾಶ್ ದೀಪ್ ಇಂಜುರಿ ಬೆನ್ನಲ್ಲೇ ಆಲ್​ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಜಿಮ್​ನಲ್ಲಿನ ತರಬೇತಿ ವೇಳೆ ಮೊಣಕಾಲಿನ ಇಂಜುರಿಗೆ ತುತ್ತಾಗಿದ್ದು, ಕೊನೆ ಎರಡು ಟೆಸ್ಟ್ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಇದು ಟೀಮ್ ಇಂಡಿಯಾ ಪಾಲಿಗೆ ನುಂಗಲಾರದ ತುತ್ತಾಗಿ ಮಾರ್ಪಟ್ಟಿದೆ.

ಪಂತ್ ಇಂಜುರಿ ಬಗ್ಗೆಯೂ ಇಲ್ಲ ಅಪ್​ಡೇಟ್ಸ್​

ಒಂದ್ಕಡೆ ಅರ್ಷದೀಪ್, ಆಕಾಶ್ ದೀಪ್, ನಿತಿಶ್ ರೆಡ್ಡಿ ಇಂಜುರಿಯಿಂದ ಶಾಕ್ ಆಗಿರುವ ಟೀಮ್ ಇಂಡಿಯಾಗೆ, ಮತ್ತೊಂದ್ಕಡೆ ವಿಕೆಟ್ ಕೀಪರ್ ಆ್ಯಂಡ್ ಗೇಮ್ ಚೇಂಜರ್ ರಿಷಭ್ ಪಂತ್, ಫಿಂಗರ್​ ಇಂಜುರಿ ಬಗ್ಗೆಯೂ ಕಳವಳ ಇದೆ. 3ನೇ ಟೆಸ್ಟ್ ಮುಗಿದು ವಾರ ಕಳೆದ್ರೂ ರಿಷಭ್ ಆಡ್ತಾರಾ? ಇಲ್ವಾ? ಅನ್ನೋ ಕ್ಲಾರಿಟಿ ಇಲ್ಲ. ಇದು ಸಹಜವಾಗೇ ಟೀಮ್ ಮ್ಯಾನೇಜ್​ಮೆಂಟ್​​ನ ಇಕ್ಕಟ್ಟಿಗೆ ಸಿಲುಕಿಸಿದೆ.

ಟೀಮ್ ಇಂಡಿಯಾ ಅಲ್ಲ.. ಇದು ಟೀಮ್ ‘ಇಂಜುರಿ’..!

ಟೀಮ್ ಇಂಡಿಯಾ ಒಂದು ರೀತಿ, ಟೀಮ್ ಇಂಜುರಿಯಂತಾಗಿದೆ. ಟೀಮ್ ಇಂಡಿಯಾದಲ್ಲಿ ಒಂದಲ್ಲ, ಎರಡಲ್ಲ. ಬರೋಬ್ಬರಿ ನಾಲ್ವರು ಒಂಜುರಿಗೆ ತುತ್ತಾಗಿದ್ದಾರೆ. ಇದು ಟೀಮ್ ಮ್ಯಾನೇಜ್​​ಮೆಂಟ್​ ಟೆನ್ಶನ್​​ ಹೆಚ್ಚಾಗುವಂತೆ ಮಾಡಿದೆ. ಈ ಟೆನ್ಶನ್ ನಡುವೆ ಖುಷಿ ವಿಚಾರ ಜಸ್​ಪ್ರೀತ್ ಬೂಮ್ರಾ, ಮ್ಯಾಂಚೆಸ್ಟರ್​ನಲ್ಲಿ ಆಡುವುದಾಗಿದೆ. 4ನೇ ಟೆಸ್ಟ್​ನಿಂದ ದೂರ ಉಳಿಯಬೇಕಿದ್ದ ಬೂಮ್ರಾ, ಈಗ ನಾಲ್ಕನೇ ಟೆಸ್ಟ್ ಆಡಲು ಸಜ್ಜಾಗಿದ್ದಾರೆ. ಇದು ಟೀಮ್ ಇಂಡಿಯಾವನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ. ಎರಡು ಪ್ರಶ್ನೆಗಳು ಕಾಡ್ತಿದೆ. ಅದೇ ಮೂರನೇ ವೇಗಿ ಯಾರು..? ವಿಕೆಟ್ ಕೀಪರ್ ಯಾರು..?

ಶಾರ್ದೂಲ್ ಒಕೆ.. ಪ್ರಸಿದ್ಧ ಕೃಷ್ಣ V/S ಕಾಂಬೋಜ್..?

ನಿತಿಶ್ ರೆಡ್ಡಿ ಇಂಜುರಿ ಕಾರಣಕ್ಕೆ ಶಾರ್ದೂಲ್ ಠಾಕೂರ್​​ಗೆ ಪ್ಲೇಯಿಂಗ್​ ಇಲೆವೆನ್​ ಡೋರ್ ಒಪನ್ ಆಗಿದೆ. ಆಕಾಶ್ ದೀಪ್​ರಿಂದ ತೆರವಾದ ಸ್ಥಾನಲ್ಲಿ ಯಾರು ಕಣಕ್ಕಿಳಿಯುತ್ತಾರೆ ಅನ್ನೋ ಪ್ರಶ್ನೆ ಇದೆ. ಕನ್ನಡಿಗ ಪ್ರಸಿದ್ಧ ಕೃಷ್ಣ, ಅನ್ಶಲ್​ ಕಾಂಬೋಜ್ ಇಬ್ಬರು ಆಯ್ಕೆಗೆ ಲಭ್ಯರಿದ್ದಾರೆ. ಮೊದಲ 2 ಪಂದ್ಯಗಳಲ್ಲಿ ಇಂಪ್ರೆಸ್ ಮಾಡದ ಪ್ರಸಿದ್ಧ್​​ಗೆ ಮತ್ತೊಂದು ಅವಕಾಶ ನೀಡ್ತಾರಾ.? ಇಲ್ಲ ಇಂಗ್ಲೆಂಡ್ ಲಯನ್ಸ್ ಎದುರು ಮಿಂಚಿದ ಕಾಂಬೋಜ್​ಗೆ ಚಾನ್ಸ್​​ ಸಿಗುತ್ತಾ..? ಇನ್ನು ಕೀಪರ್​​ ಪಂತ್ ಫಿಟ್​ ಇಲ್ಲ ಅಂದ್ರೆ ಧೃವ್ ಆಡ್ತಾರಾ? ಎಂಬ ಕುತೂಹಲಗಳಿವೆ. ಇದ್ರಿಂದಾಗಿ ನಾಲ್ಕನೇ ಟೆಸ್ಟ್ ಗೆಲ್ಲೋ‌ ತವಕದಲ್ಲಿದ್ದ ಟೀಮ್ ಇಂಡಿಯಾ ಗೊಂದಲದ ಗೂಡಾಗಿದೆ. ಟೀಮ್ ಕಾಂಬಿನೇಷನ್ ಸೆಟ್ ಮಾಡೋದೆ ಬಿಗ್​ ಚಾಲೆಂಜ್ ಆಗಿದೆ.

ಇದನ್ನೂ ಓದಿ: UAEನಲ್ಲಿ ಪ್ರಾಣ ಕಳ್ಕೊಂಡ ಮತ್ತೊಬ್ಬ ಕೇರಳದ ಮಹಿಳೆ.. ವಿದೇಶದಲ್ಲಿದ್ದ ಹುಡುಗನ ಜೊತೆ ಮದ್ವೆ ಮಾಡಿದ್ದೇ ತಪ್ಪಾಯ್ತು..

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment