/newsfirstlive-kannada/media/post_attachments/wp-content/uploads/2025/06/KARUN-NAIR-3.jpg)
8 ವರ್ಷಗಳ ಬಳಿಕ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಿದ ಕರುಣ್ ನಾಯರ್ ಸಿಕ್ಕ ಅವಕಾಶವನ್ನ ಕೈ ಚೆಲ್ಲಿದ್ರು. ಲೀಡ್ಸ್ನಲ್ಲಿ ನಡೆಯುತ್ತಿರೋ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಖಾತೆ ತೆರೆಯುವಲ್ಲಿ ಕರುಣ್ ನಾಯರ್ ವಿಫಲರಾದರು. 4 ಎಸೆತ ಎದುರಿಸಿದ ಕರುಣ್ ನಾಯರ್, ಬೆನ್ ಸ್ಟೋಕ್ಸ್ ಬೌಲಿಂಗ್ನಲ್ಲಿ ಒಲಿಪೋಪ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು.
ಮೊದಲ ಇನ್ನಿಂಗ್ಸ್ನಲ್ಲಿ ಹಿನ್ನಡೆ ಅನುಭವಿಸಿರುವ ನಾಯರ್ ಎರಡನೇ ಇನ್ನಿಂಗ್ಸ್ನಲ್ಲಿ ಮಿಂಚಬೇಕಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಆಡಲೇಬೇಕಾದ ಅನಿವಾರ್ಯತೆ ಇದೆ. 8 ವರ್ಷಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಕರುಣ್ ನಾಯರ್ಗೆ, ಮತ್ತೆ ಗೋಲ್ಡನ್ ಅವಕಾಶ ಸಿಕ್ಕಿದೆ. ಇದನ್ನು ಕರುಣ್ ಸರಿಯಾಗಿ ಬಳಸಿಕೊಂಡರೆ ಅಷ್ಟೇ ತಂಡದಲ್ಲಿ ಸ್ಥಾನ ಸಿಗಲಿದೆ. ಇಲ್ಲದಿದ್ದರೆ ಅವಕಾಶಕ್ಕಾಗಿ ಯಂಗ್ಸ್ಟರ್ಗಳು ಕ್ಯೂನಲ್ಲಿದ್ದಾರೆ.
ಇನ್ನು ಟೆಸ್ಟ್ ಕತೆ ಏನಾಗಿದೆ ಅಂತಾ ನೋಡೋದಾದರೆ, ಭಾರತ ಮೊದಲ ಇನ್ನಿಂಗ್ಸ್ನಲ್ಲಿ 471 ರನ್ ಗಳಿಸಿದೆ. ಟೀಂ ಇಂಡಿಯಾ ಈ ಬೃಹತ್ ಸ್ಕೋರ್ಗೆ ಎದುರಾಳಿ ಖಡಕ್ ಉತ್ತರ ನೀಡಿದೆ. ನಿನ್ನೆಯ ದಿನದ ಅಂತ್ಯಕ್ಕೆ ಮೂರು ವಿಕೆಟ್ ಕಳೆದುಕೊಂಡು 209 ರನ್ಗಳಿಸಿದೆ. ಟೀಂ ಇಂಡಿಯಾ ಪರ, ಬೂಮ್ರಾ ಸ್ಟ್ರೈಕ್ ಮಾಡಿದ್ದು, ಮೂರು ವಿಕೆಟ್ ಒಬ್ಬರೇ ಕಿತ್ತಿದ್ದಾರೆ. ಬೂಮ್ರಾಗೆ ಉಳಿದ ಬೌಲರ್ಸ್ ಸಹಾಯ ಮಾಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ