ಇಂಡಿಯನ್ ಕ್ರಿಕೆಟ್ ಸ್ಟಾರ್ ಕೊಹ್ಲಿಗೆ, ಇಂಗ್ಲೆಂಡ್ ಪ್ಲೇಯರ್ ಏನಂದ್ರು?
ಯಾವುದೇ ಪಂದ್ಯವನ್ನು ಗೆಲ್ಲಿಸಿಕೊಡುವ ಒಂಟಿ ಸಲಗ ವಿರಾಟ್ ಕೊಹ್ಲಿ
ಟೆಸ್ಟ್ ಸರಣಿಗೂ ಮುನ್ನ ರನ್ ಮಾಸ್ಟರ್ಗೆ ಇಂಗ್ಲೆಂಡ್ ವೇಗಿ ಚಾಲೆಂಜ್
ತವರಿನಲ್ಲಿ ಸರಣಿ ನಡೆಯುತ್ತೆ ಅಂದ್ರೆ ಪ್ರವಾಸಿ ತಂಡಗಳು ಕೊಹ್ಲಿ, ಕೊಹ್ಲಿಯನ್ನ ಕೆಣಕುವ ದುಸ್ಸಾಹಸಕ್ಕೆ ಕೈ ಹಾಕಲ್ಲ. ಯಾಕಂದ್ರೆ ಕೊಹ್ಲಿ ಕೆಣಕಿದಷ್ಟು ಡೇಂಜರ್. ಹೀಗಾಗಿ ತಾಳ್ಮೆ ಮಂತ್ರಜಪ ಜಪಿಸ್ತಿವೆ. ಆದ್ರೆ ಟೆಸ್ಟ್ ಸರಣಿಗೂ ಮುನ್ನ ಇಂಗ್ಲೆಂಡ್ ವೇಗಿ ರನ್ ಮಾಸ್ಟರ್ಗೆ ಚಾಲೆಂಜ್ ಹಾಕಿದ್ದಾರೆ. ಅಷ್ಟಕ್ಕೂ ಚಾಲೆಂಜಿಂಗ್ ಸ್ಟಾರ್ಗೆ ಸವಾಲು ಹಾಕಿದ ಆ ಬೌಲರ್ ಯಾರು?.
ಹೈ ಪ್ರೊಫೈಲ್ ಇಂಡೋ-ಆಂಗ್ಲ ಟೆಸ್ಟ್ ಬ್ಯಾಟಲ್ಗೆ ಕೌಂಟ್ಡೌನ್ ಶುರುವಾಗಿದೆ. ಜನವರಿ 25 ರಿಂದ ಹೈದ್ರಬಾದ್ನಲ್ಲಿ ಉಭಯ ತಂಡಗಳು ತೊಡೆತಟ್ಟಲಿವೆ. ತವರಿನಲ್ಲಿ ರೋಹಿತ್ ಪಡೆ ಆಂಗ್ಲ ಮೇಲೆ ದಂಡೆತ್ತಿ ಹೋಗಲು ಎದುರು ನೋಡ್ತಿದೆ. ಇದೇ ಹೊತ್ತಲ್ಲಿ ಆಂಗ್ಲ ಸ್ಟಾರ್ ವೇಗಿ ಕಿಂಗ್ ಕೊಹ್ಲಿಗೆ ಸವಾಲೆಸೆದು, ಟೆಸ್ಟ್ ಕಾಳಗಕ್ಕೆ ಇನ್ನಷ್ಟು ಕಿಚ್ಚು ಹಚ್ಚಿದ್ದಾರೆ.
ಕಿಂಗ್ ಕೊಹ್ಲಿಗೆ ಗರ್ವ ಜಾಸ್ತಿ ಎಂದ ಇಂಗ್ಲೆಂಡ್ ವೇಗಿ
ಪ್ರತಿ ಸರಣಿ ವೇಳೆ ಕಿಂಗ್ ಕೊಹ್ಲಿ ಮೇಲೆ ಎಲ್ಲರ ಚಿತ್ತ ನೆಟ್ಟಿರುತ್ತೆ. ವಿರಾಟ್ ಒಬ್ಬರನ್ನ ಕಟ್ಟಿಹಾಕಿದ್ರೆ ಸಾಕು ತಂಡವನ್ನ ಸುಲಭವಾಗಿ ಕಟ್ಟಿಹಾಕ್ಬಹುದು ಅನ್ನೋದು ಎದುರಾಳಿ ಲೆಕ್ಕಚಾರ. ಯಾಕಂದ್ರೆ ಕೊಹ್ಲಿ ಒಂಟಿಯಾಗಿ ಪಂದ್ಯ ಗೆಲ್ಲಿಸಿಕೊಡುವ ಒಂಟಿಸಲಗ. ಈ ಒನ್ಮ್ಯಾನ್ ಆರ್ಮಿ ಮೇಲೆ ಆಂಗ್ಲರ ಕಣ್ಣು ಬಿದ್ದಿದ್ದು, ವೇಗಿ ಓಲಿ ರಾಬಿನ್ಸನ್ ಕದನಕ್ಕೂ ಮುನ್ನವೇ ಸೆಂಚುರಿ ಸಾಮ್ರಾಟನಿಗೆ ಚಾಲೆಂಜ್ ಹಾಕಿದ್ದಾರೆ.
ಕಿಂಗ್ ಕೊಹ್ಲಿಗೆ ಗರ್ವ ಜಾಸ್ತಿ
ನೀವು ಯಾವಾಗಲೂ ಉತ್ತಮ ಆಟಗಾರರ ಎದುರು ಆಡಲು ಬಯಸುತ್ತೀರಿ, ಹಾಗೆ ಶ್ರೇಷ್ಠ ಆಟಗಾರರ ವಿಕೆಟ್ ಕಬಳಿಸುವ ಬಯಕೆ ಇರುತ್ತೆ. ಅಂತಹ ಅತ್ಯುತ್ತಮರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಕೊಹ್ಲಿಗೆ ತುಂಬಾ ಅಹಂಕಾರ ಇದೆ. ವಿಶೇಷವಾಗಿ ಭಾರತದಲ್ಲಿ ಅವರು ರನ್ ಗಳಿಸಿ ಪ್ರಾಬಲ್ಯ ಸಾಧಿಸಲು ಬಯಸುತ್ತಾರೆ. ಹಿಂದೆ ಇದನ್ನ ನೋಡಿದ್ದು, ಆಡಲು ರೋಮಾಂಚನಕಾರಿಯಾಗಿರಲಿದೆ.
ಆಲಿ ರಾಬಿನ್ಸನ್, ಇಂಗ್ಲೆಂಡ್ ಕ್ರಿಕೆಟಿಗ
ಇಂಗ್ಲೆಂಡ್ ಡೆಡ್ಲಿ ಪೇಸರ್ ರಾಬಿನ್ಸನ್, ಕಿಂಗ್ ಕೊಹ್ಲಿಗೆ ಹಾಕಿದ ಸವಾಲನ್ನ. ಅಹಂಕಾರಿ ಕೊಹ್ಲಿ ವಿಕೆಟ್ ಪಡೆಯಲು ರಾಬಿನ್ಸನ್ ಎದುರು ನೋಡ್ತಿದ್ದಾರಂತೆ. ಅಷ್ಟಕ್ಕೂ ರಾಬಿನ್ಸನ್ ಇಷ್ಟೊಂದು ಕಾನ್ಫಿಡೆಂಟ್ ಆಗಿ ಮಾತನಾಡೋಕೆ ಕಾರಣವಿದೆ. ಅದೇನಂದ್ರೆ ರಾಬಿನ್ಸನ್ ವಿರುದ್ಧ ಕೊಹ್ಲಿ ಆಡಿರೋ ಕಳಪೆ ಆಟ.
ಕೊಹ್ಲಿ ವಿರುದ್ಧ ರಾಬಿನ್ಸನ್
ವಿರಾಟ್ ಕೊಹ್ಲಿ ಹಾಗೂ ಆಲಿ ರಾಬಿನ್ಸನ್ ಇಲ್ಲಿ ತನಕ ಒಟ್ಟು 6 ಇನ್ನಿಂಗ್ಸ್ಗಳಲ್ಲಿ ಮುಖಾಮುಖಿ ಆಗಿದ್ದಾರೆ. ಆ ಪೈಕಿ ರಾಬಿನ್ಸನ್ 3 ಬಾರಿ ಕೊಹ್ಲಿ ಪಡೆದಿದ್ದಾರೆ. 19.66 ಎವರೇಜ್ನಲ್ಲಿ ಬರೀ 59 ರನ್ ಬಿಟ್ಟುಕೊಟ್ಟಿದ್ದಾರೆ.
ಕೊಹ್ಲಿಗೆ ಚಾಲೆಂಜ್ ಹಾಕಿ ತಪ್ಪು ಮಾಡಿದ್ರಾ ರಾಬಿನ್ಸನ್..?
ಆನ್ ಫೀಲ್ಡ್ನಲ್ಲಿ ಕಿಂಗ್ ಕೊಹ್ಲಿಗೆ ಚಾಲೆಂಜ್ ಹಾಕೋರು ಆಗ್ಲಿ ಅಥವಾ ಕೆಣಕೋರು ಕಮ್ಮಿ. ಒಂದು ವೇಳೆ ಕೆಣಕಿದ್ರೆ ಸುಮ್ಮನೆ ಬಿಟ್ಟ ಉದಾಹರಣೆಯಿಲ್ಲ. ಬ್ಯಾಟ್ನಿಂದ ಘರ್ಜಿಸಿ ಆನ್ ಸ್ಪಾಟ್ನಲ್ಲೆ ಆನ್ಸರ್ ನೀಡ್ತಾರೆ. ಮುಂಬರೋ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ತಮ್ಮದೆ ಸ್ಟೈಟ್ನಲ್ಲಿ ರಾಬಿನ್ಸನ್ಗೆ ಆನ್ಸರ್ ಕೊಟ್ರು ಆಶ್ಚರ್ಯವಿಲ್ಲ.
ಯಾಕಂದ್ರೆ ಕೊಹ್ಲಿ ಸದ್ಯ ಗುಡ್ ಟಚ್ನಲ್ಲಿದ್ದಾರೆ. ಆಫ್ರಿಕಾ ಪ್ರವಾಸದಲ್ಲಿ ಭರ್ಜರಿ ಶತಕ ಸಿಡಿಸಿ ಶೈನ್ ಆಗಿದ್ರು. ಎಲ್ಲಕ್ಕಿಂತ ಹೆಚ್ಚಾಗಿ ಕಳೆದ 2021ರ ಇಂಗ್ಲೆಂಡ್ ಪ್ರವಾಸದಲ್ಲಿ ರಾಬಿನ್ಸನ್ ಕೊಹ್ಲಿ ಮೇಲೆ ಡಾಮಿನೆಂಟ್ ಸಾಧಿಸಿದ್ರು. ಆ ಫೇಲ್ಯೂರ್ ಕಿಚ್ಚು ಕಿಂಗ್ ಕೊಹ್ಲಿಯಲ್ಲಿ ಜ್ವಾಲೆಯಾಗಿ ಉರಿಯುತ್ತಿದೆ. ಈ ವೈಫಲ್ಯದ ಜ್ವಾಲೆಯಲ್ಲಿ ಆಲಿ ರಾಬಿನ್ಸನ್ ಸುಟ್ಟು ಭಸ್ಮವಾದ್ರು ಆಶ್ಚರ್ಯಪಡಬೇಕಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ