/newsfirstlive-kannada/media/post_attachments/wp-content/uploads/2025/07/KL_RAHUL_BEN_STOCKS.jpg)
ಇಂಡೋ, ಇಂಗ್ಲೆಂಡ್ ಟೆಸ್ಟ್ ಸರಣಿಯ ಬ್ಯಾಟಲ್ ಅಂತಿಮ ಘಟ್ಟಕ್ಕೆ ತಲುಪಿದೆ. ಬರೋಬ್ಬರಿ ಒಂದೂವರೆ ತಿಂಗಳಿನಿಂದ ನಡೀತಿದ್ದ ಮದಗಜಗಳ ಹೋರಾಟದಲ್ಲಿ ಯಾರು ಗೆಲ್ತಾರೆ ಎಂಬ ಪ್ರಶ್ನೆಗೆ ಆಗಸ್ಟ್ 4ಕ್ಕೆ ತೆರೆ ಬೀಳಲಿದೆ. ಸರಣಿಯುದ್ಧಕ್ಕೂ ಸಾಲಿಡ್ ಆಟವಾಡಿರುವ ಟೀಮ್ ಇಂಡಿಯಾ, ಸರಣಿ ಸೋಲಿನಿಂದ ತಪ್ಪಿಸಿಕೊಳ್ಳಬೇಕಾದ್ರೆ ಈ ಚಾಲೆಂಜ್ಗಳನ್ನು ಮೆಟ್ಟಿ ನಿಲ್ಲಬೇಕಿದೆ.
ಕನ್ನಿಂಗ್ಟನ್ ಓವಲ್ನ ಫೈನಲ್ ಬ್ಯಾಟಲ್ಗೆ ಕ್ಷಣಗಣನೆ ಶುರುವಾಗಿದೆ. 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-2ರ ಹಿನ್ನಡೆಯಲ್ಲಿರುವ ಟೀಮ್ ಇಂಡಿಯಾ, ಇಂದಿನಿಂದ ಆರಂಭವಾಗುವ ಪಂದ್ಯ ಗೆಲ್ಲೋ ಫ್ರಷರ್ನಲ್ಲಿದೆ. ಒಂದೇ ಒಂದು ಗೆಲುವಿನೊಂದಿಗೆ ಸರಣಿ ಸಮಬಲ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿರುವ ಶುಭ್ಮನ್ ಪಡೆ, ಸರಣಿ ಸೋಲಿನ ಮುಖಭಂಗದಿಂದ ಪಾರಾಗಲು ಪಣ ತೊಟ್ಟಿದೆ. ಇಲ್ಲಿ ಟೀಮ್ ಇಂಡಿಯಾ ಗೆಲ್ಲೋದು ಅಷ್ಟು ಸುಲಭದಲ್ಲ. ಹಾಗಾಂತ ಅಸಾಧ್ಯವೂ ಅಲ್ಲ. ಇದು ನಿಜವಾಗಬೇಕಾದ್ರೆ ಈ ಚಾಲೆಂಜ್ ಮೆಟ್ಟಿನಿಲ್ಲಬೇಕಿದೆ.
ಇದನ್ನೂ ಓದಿ: 5 ಸ್ಥಳಗಳಲ್ಲೂ ಸಿಗಲಿಲ್ಲ ಕಳೇಬರ.. SIT ಹೆಲ್ಪ್ಲೈನ್ ರಿಲೀಸ್, ಮುಂದಿನ ತನಿಖೆ ತೀವ್ರ ಕುತೂಹಲ..!
ಟಾಪ್ ಆರ್ಡರ್ ಬಿಗ್ ಸ್ಕೋರ್ ಇಂಪಾರ್ಟೆಂಟ್
ಟೀಮ್ ಇಂಡಿಯಾ ಗೆಲುವಿನ ಅಡಿಪಾಯ ಟಾಪ್ ಆರ್ಡರ್. ಟಾಪ್ ಆರ್ಡರ್ ಬ್ಯಾಟರ್ಗಳಾದ ಕೆ.ಎಲ್.ರಾಹುಲ್, ಯಶಸ್ವಿ ಜೈಸ್ವಾಲ್ ಸಾಲಿಡ್ ಸ್ಟಾರ್ಟ್ ಜೊತೆಗೆ ಬಿಗ್ ಸ್ಕೋರ್ ಕಲೆಹಾಕಬೇಕಿದೆ. ಸರಣಿಯುದ್ದಕ್ಕೂ ಕಾಡ್ತಿರುವ 3ನೇ ಕ್ರಮಾಂಕದ ಬ್ಯಾಟರ್ನಿಂದ ರನ್ ಹೊಳೆ ಹರಿಯುವುದರ ಜೊತೆಗೆ ನಾಯಕ ಶುಭ್ಮನ್ ಗಿಲ್, ಮತ್ತೊಂದು ಬಿಗ್ ಇನ್ನಿಂಗ್ಸ್ ಕಟ್ಟಬೇಕಿದೆ. ಆ ಮೂಲಕ ಬಿಗ್ ಟಾರ್ಗೆಟ್ ಸೆಟ್ ಮಾಡಲು ಉತ್ತಮ ಅಡಿಪಾಯ ಹಾಕಬೇಕಿದೆ.
ಪಂತ್ ಸ್ಥಾನ ತುಂಬುವುದೇ ಬಿಗೆಸ್ಟ್ ಚಾಲೆಂಜ್
ಟೀಮ್ ಇಂಡಿಯಾ ಗೆಲುವು. ಕೇವಲ ಟಾಪ್ ಆರ್ಡರ್ ಮೇಲೆಯೇ ನಿಂತಿಲ್ಲ. ಮಿಡಲ್ ಆರ್ಡರ್ ಬ್ಯಾಟಿಂಗ್ ರೋಲ್, ವೆರಿ ವೆರಿ ಇಂಪಾರ್ಟೆಂಟ್. ಇಂಗ್ಲೆಂಡ್ಗೆ ಕೌಂಟರ್ ಅಟ್ಯಾಕ್ ನೀಡ್ತಿದ್ದ ರಿಷಭ್ ಪಂತ್ ತಂಡದಲ್ಲಿ ಇಲ್ಲ. ಹೀಗಾಗಿ ದ್ರುವ್ ಜುರೇಲ್, ವಾಷ್ಟಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಹೆಚ್ಚುವರಿ ಜವಾಬ್ದಾರಿ ನಿರ್ವಹಿಸಬೇಕಿದೆ. ಟಾಪ್ ಆರ್ಡರ್ ಕೈಕೊಟ್ಟಲ್ಲಿ ತಂಡಕ್ಕೆ ಆಸರೆಯಾಗುವಂತಹ ಇನ್ನಿಂಗ್ಸ್ ಕಟ್ಟುವುದು ಅನಿವಾರ್ಯ. ಸೋಲು ಗ್ಯಾರಂಟಿ.
ಬೂಮ್ರಾ ರೆಸ್ಟ್.. ಸಿರಾಜ್, ಆಕಾಶ್ಗೆ ‘ರಿಯಲ್ ಟೆಸ್ಟ್’
ಡು ಆರ್ ಡೈ ಮ್ಯಾಚ್ನಲ್ಲೇ ಜಸ್ಪ್ರೀತ್ ಬೂಮ್ರಾ ಆಡ್ತಿಲ್ಲ. ಇದು ಸಹಜವಾಗೇ ಟೀಮ್ ಇಂಡಿಯಾಗೆ ಹಿನ್ನಡೆಯಾಗುವಂತೆ ಮಾಡಿದೆ. ಇದೀಗ ಬೂಮ್ರಾ ಅಲಭ್ಯತೆಯಲ್ಲಿ ಎಡ್ಜ್ಬಾಸ್ಟನ್ ಟೆಸ್ಟ್ ಗೆಲ್ಲಿಸಿಕೊಟ್ಟಿದ್ದ ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.. ಮಗದೊಮ್ಮೆ ಎಡ್ಜ್ಬಾಸ್ಟನ್ ಟೆಸ್ಟ್ ಫಲಿತಾಂಶ ಪುನರಾವರ್ತಿಸುವಂತ ಪರ್ಫಾಮೆನ್ಸ್ ನೀಡಬೇಕಿದೆ. ಆ ಮೂಲಕ ಬೂಮ್ರಾ ಇಲ್ಲದ ಹೊರತಾಗಿಯೂ ನಾವು ಗೆಲ್ಲಬಲ್ಲೆವು ಅನ್ನೋದನ್ನ ಮತ್ತೊಮ್ಮೆ ಫ್ರೂವ್ ಮಾಡಬೇಕಿದೆ.
ಇದನ್ನೂ ಓದಿ: ಕಾಮಾಕ್ಯ ದೇವಿ ಮುಂದೆ ನಿಂತು ವಿಜಯಲಕ್ಷ್ಮೀ ಸಂದೇಶ.. ಪ್ರಥಮ್ ಕೇಸ್ನಲ್ಲಿ FIR, ಜಗ್ಗೇಶ್ ಏನಂದ್ರು..?
ಡೆಬ್ಯು ಮ್ಯಾಚ್ ಒತ್ತಡ ಗೆಲ್ಲಬೇಕು ಅರ್ಷದೀಪ್ ಸಿಂಗ್
ಅರ್ಷದೀಪ್ ಸಿಂಗ್ ಬಹುದಿನಗಳ ಕನಸು ನನಸಾಗ್ತಿದೆ. ಅರ್ಷದೀಪ್ ಡೆಬ್ಯೂ ಕಾರಣಕ್ಕೆ ಟೀಮ್ ಇಂಡಿಯಾ ಬೌಲಿಂಗ್ನಲ್ಲಿ ರೈಟ್ ಅಂಡ್ ಲೆಫ್ಟ್ ಕಾಂಬಿನೇಷನ್ ಸಿಗ್ತಿದೆ. ಇದು ಸಹಜವಾಗೇ ಟೀಮ್ ಇಂಡಿಯಾ ಬೌಲಿಂಗ್ ಅಟ್ಯಾಕ್ಗೆ ಬಲ ಹೆಚ್ಚಿಸುತ್ತೆ. ಡೆಬ್ಯೂ ಮಾಡುವ ಖುಷಿಯಲ್ಲಿರುವ ಪಂಜಾಬ್ ಪುತ್ತರ್ಗೆ ಮತ್ತೊಂದ್ಕಡೆ ಒತ್ತಡವೂ ಕಾಡ್ತಿದೆ. ಇದು ಕೇವಲ ಡೆಬ್ಯೂ ಒತ್ತಡವಲ್ಲ. ಡು ಆರ್ ಡೈ ಮ್ಯಾಚ್ನಲ್ಲಾಡ್ತಿರುವ ಆತಂಕ. ಹೀಗಾಗಿ ಫ್ರಷರ್ ಫ್ರೀ ಬೌಲಿಂಗ್ ಮಾಡಿದ್ರೆ, ಆಂಗ್ಲರ ಎಡೆ ಮುರಿಕಟ್ಟೋದ್ರಲ್ಲಿ ಡೌಟೇ ಇಲ್ಲ.
ಮೊದಲ 3 ದಿನ ಟೀಮ್ ಇಂಡಿಯಾಗೆ ನಿರ್ಣಾಯಕ
ಟೀಮ್ ಇಂಡಿಯಾ ಈ ಮ್ಯಾಚ್ ಗೆಲ್ಲಬೇಕಾದ್ರೆ ಮೊದಲ ಮೂರು ದಿನ ಮೋಸ್ಟ್ ಕ್ರೂಶಿಯಲ್ ಆಗಿದೆ. ಪ್ರಮುಖವಾಗಿ ಪೇಸ್ ಬೌಲರ್ಗಳ ಪಾಲಿಗೆ ಇಂಪಾರ್ಟೆಂಟ್. ಇದು ಓವಲ್ನ ಗ್ರೀನ್ ಪಿಚ್ನ ಟ್ರ್ಯಾಕ್ ರೆಕಾರ್ಡ್ ಹೇಳ್ತಿರುವ ಸತ್ಯ ಕಥೆ.
ಇದನ್ನೂ ಓದಿ: ಇಡೀ ವೈದ್ಯ ಲೋಕವೇ ಶಾಕ್.. ಕೋಲಾರ ಮಹಿಳೆ ದೇಹದಲ್ಲಿ ವಿಭಿನ್ನ ರಕ್ತ ಗುಂಪು ಪತ್ತೆ; ಹೇಗೆ ಸಾಧ್ಯ?
2022ರಿಂದ ಓವಲ್ನಲ್ಲಿ ಸ್ಪಿನ್ ಮತ್ತು ಪೇಸ್ ಬೌಲರ್ಸ್
2022ರಿಂದ ಓವಲ್ನಲ್ಲಿ ಆಡಿರುವ 4 ಟೆಸ್ಟ್ ಪಂದ್ಯಗಳ ಮೊದಲ ದಿನ ವೇಗಿಗಳು 15 ವಿಕೆಟ್ ಉರುಳಿಸಿದ್ರೆ, ಸ್ಪಿನ್ನರ್ಗಳು 2 ವಿಕೆಟ್ ಉರುಳಿಸಿದ್ದಾರೆ. 2ನೇ ದಿನದಾಟದಲ್ಲಿ 25 ವಿಕೆಟ್ಸ್ ವೇಗಿಗಳ ಪಾಲಾಗಿದ್ರೆ. ಸ್ಪಿನ್ನರ್ಗಳು 6 ವಿಕೆಟ್ ಬೇಟೆಯಾಡಿದ್ದಾರೆ. 3ನೇ ದಿನದಾಟ ಪಾರಮ್ಯ ಮೆರೆದಿರುವ ವೇಗಿಗಳು ಬರೋಬ್ಬರಿ 45 ವಿಕೆಟ್ ಕಬಳಿಸಿದ್ರೆ, ಸ್ಪಿನ್ನರ್ಗಳು 6 ವಿಕೆಟ್ ಪಡೆದಿದ್ದಾರೆ. 4 ಹಾಗೂ 5ನೇ ದಿನದಾಟ ವೇಗಿಗಳು ಕ್ರಮವಾಗಿ 19 ಹಾಗೂ 12 ವಿಕೆಟ್ ಪಡೆದ್ರೆ, ಸ್ಪಿನ್ನರ್ಗಳು 3 ಹಾಗೂ 6 ವಿಕೆಟ್ ಪಡೆದಿದ್ದಾರೆ.
ಮೊದಲ 3 ದಿನ ಪೇಸರ್ಗಳು ಮೆರೆದಾಡಿದ್ದಾರೆ ನಿಜ. 2ನೇ ದಿನದಿಂದಲೂ ಸ್ಪಿನ್ನರ್ಗಳು ವಿಕೆಟ್ ಬೇಟೆಯಾಡಿದ್ದಾರೆ.
ಪ್ರಮುಖವಾಗಿ ಕೊನೆ ದಿನ ಪೇಸರ್ಗಳ ಅರ್ಧದಷ್ಟು ವಿಕೆಟ್ಸ್ ಸ್ಪಿನ್ನರ್ಗಳು ಪಡೆದಿದ್ದಾರೆ. 2021ರಿಂದ 5 ಪಂದ್ಯಗಳ ಪೈಕಿ 3 ಮೊದಲು ಬ್ಯಾಟಿಂಗ್ ಮಾಡಿದವ್ರೇ ಗೆದ್ದಿದ್ದಾರೆ. ಟೀಮ್ ಇಂಡಿಯಾ ಟಾಸ್ಗಿಂತಲೂ ತಮ್ಮ ಆಟವನ್ನಷ್ಟೇ ನಂಬಿಕೊಂಡು ಹೋರಾಡಿದ್ರೆ, ಗೆಲುವು ಟೀಮ್ ಇಂಡಿಯಾ ಪಾಲಾಗುವುದರಲ್ಲಿ ಡೌಟಿಲ್ಲ.
ಇದನ್ನೂ ಓದಿ: ಹೆತ್ತ ಕಂದಮ್ಮನ ಹುಡುಕುತ್ತ 150 ಕಿಮೀ ಅಲೆದಾಟ.. ಮೃತ ಮುದ್ದು ಮರಿಗಾಗಿ ತಾಯಿ ಮೂಕ ರೋಧನೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ