/newsfirstlive-kannada/media/post_attachments/wp-content/uploads/2025/02/TEAM-INDIA-1.jpg)
ಇಂಡೋ-ಇಂಗ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ನಮೋ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಮ್ಯಾಚ್, ಸರಣಿ ಗೆದ್ದಿರೋ ಟೀಮ್ ಇಂಡಿಯಾಗೆ ಅನೌಪಚಾರಿಕ. ಆದರೂ ಟೀಮ್ ಇಂಡಿಯಾಗೆ ಬೆಂಚ್ ಸ್ಟ್ರೆಂಥ್ ಜೊತೆಗೆ ಚಾಂಪಿಯನ್ಸ್ ಟ್ರೋಫಿ ದೃಷ್ಟಿಯಿಂದ ಮಹತ್ವದ್ದಾಗಿದೆ.
3 ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ, 2-0 ಮುನ್ನಡೆ ಸಾಧಿಸಿದೆ. ಇವತ್ತಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತರೂ, ಗೆದ್ದರೂ ಚಿಂತಿಸಬೇಕಿಲ್ಲ. ಇದೇ ಮ್ಯಾಚ್ ಕೆಲವು ಆಟಗಾರರಿಗೆ ಲಾಸ್ಟ್ ಚಾನ್ಸ್.
ಆಟಗಾರರಿಗೆ ಅಗ್ನಿ ಪರೀಕ್ಷೆ
ಟೀಮ್ ಇಂಡಿಯಾಗೆ ಈಗ ಬೆಂಚ್ ಸ್ಟ್ರೆಂಥ್ ಪರೀಕ್ಷೆ ಮಾಡೋ ಟೈಮ್. ಮೊದಲ ಎರಡು ಪಂದ್ಯಗಳಲ್ಲಿ ಪ್ರಯೋಗಕ್ಕೆ ಮುಂದಾಗದ ರೋಹಿತ್, ಗಂಭೀರ್, ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಸಿಕ್ಕ ಒಂದೇ ಒಂದು ಅವಕಾಶದಲ್ಲಿ ಬೆಂಚ್ ಸ್ಟ್ರೆಂಥ್ ಪರೀಕ್ಷೆ ಮಾಡಬೇಕಿದೆ. ಈ ಪ್ರಯೋಗ ಆಟಗಾರರ ಪಾಲಿಗೆ ನಿಜಕ್ಕೂ ಅಗ್ನಿ ಪರೀಕ್ಷೆಯ ಕಣವಾಗಿದೆ.
ಪಂತ್ಗೆ ಚಾನ್ಸ್!
ಎರಡು ಪಂದ್ಯಗಳಿಂದ ಬೆಂಚ್ಗೆ ಸಿಮೀತವಾಗಿದ್ದ ಪಂತ್ಗೆ, ಇವತ್ತು ಆಡುವ ಹನ್ನೊಂದರಲ್ಲಿ ಚಾನ್ಸ್ ಸಿಗಲಿದೆ. ಈ ಒಂದು ಅವಕಾಶ ಪಂತ್ ಬಳಸಿಕೊಂಡರೆ ಕೆ.ಎಲ್.ರಾಹುಲ್ ಬೆಂಚ್ಗೆ ಸೀಮಿತರಾಗಲಿದ್ದಾರೆ. ಈ ಹಿಂದಿನ ಪಂದ್ಯಗಳಲ್ಲಿ ರಾಹುಲ್ ಪ್ರದರ್ಶನ ಗಮನ ಸೆಳೆದಿಲ್ಲ.
ಸುಂದರ್ಗೆ ಅವಕಾಶ?
ಕಟಕ್ನಲ್ಲಿ ವಾಷ್ಟಿಂಗ್ಟನ್ ಸುಂದರ್ಗೆ ಅವಕಾಶ ನೀಡಬೇಕಾಗಿತ್ತು. ಆದರೆ ಕುಲ್ದೀಪ್ ಸ್ಥಾನದಲ್ಲಿ ವರುಣ್ ಚಕ್ರವರ್ತಿಗೆ ಅವಕಾಶ ನೀಡಲಾಗಿತ್ತು. ಚಕ್ರವರ್ತಿಗೆ ಕೊಕ್ ನೀಡಿ ಸುಂದರ್ಗೆ ನೀಡಬೇಕಾದ ಅನಿವಾರ್ಯತೆ ತಂಡದ ಮುಂದಿದೆ.
ಅರ್ಷದೀಪ್ಗೆ ಚಾನ್ಸ್
ಟೀಮ್ ಇಂಡಿಯಾ ಬೌಲಿಂಗ್ ವಿಭಾಗದ ಸೆಂಟರ್ ಆಫ್ ಅಟ್ರಾಕ್ಷನ್ ಅರ್ಷದೀಪ್ ಸಿಂಗ್. ಟೀಮ್ ಇಂಡಿಯಾದ ಬಿಗ್ ಸ್ಟ್ರೆಂಥ್ ಆಗಿರುವ ಪಂಜಾಬ್ ಕಾ ಪುತ್ತರ್ ಮೊದಲ ಪಂದ್ಯದಿಂದಲೇ ಅಖಾಡಕ್ಕಿಳಿಯೋ ಲೆಕ್ಕಾಚಾರವಿತ್ತು. ಟೀಮ್ ಮ್ಯಾನೇಜ್ಮೆಂಟ್ನ ದೃಷ್ಟಿಕೋನವೇ ಮತ್ತೊಂದಿತ್ತು. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಸಿಂಗ್ ಸಜ್ಜುಗೊಳಿಸುವ ಸವಾಲು ತಂಡದ ಮುಂದಿದೆ.
ಟೀಮ್ ಕಾಂಬಿನೇಷನ್ಗೆ ದಾರಿ
ಏಕದಿನ ಸರಣಿ ಗೆದ್ದಿರುವ ಟೀಮ್ ಇಂಡಿಯಾಗೆ ಇವತ್ತಿನ ಮ್ಯಾಚ್ ಅನೌಪಚಾರಿಕ ನಿಜ. ಇವತ್ತಿನ ಪಂದ್ಯವೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಆ್ಯಂಡ್ ಕಾಂಬಿನೇಷನ್ ಸೆಟ್ ಮಾಡೋಕೆ ಮಹತ್ವದ್ದಾಗಿದೆ. ಟೀಮ್ ಇಂಡಿಯಾದ ಟಾಪ್ ಆರ್ಡರ್ ಬಿಟ್ರೆ, ಇದುವರೆಗೂ ಟೀಮ್ ಇಂಡಿಯಾಗೆ ಸೆಟಲ್ಡ್ ಮಿಡಲ್ ಆರ್ಡರ್, ಲೋವರ್ ಆರ್ಡರ್ ಜೊತೆಗೆ ಬೌಲಿಂಗ್ ಕಾಂಬಿನೇಷನ್ ಇಲ್ವೇ ಇಲ್ಲ. ಹೀಗಾಗಿ ಇದಕ್ಕೆ ಸರಿಯಾದ ಉತ್ತರ ಕಂಡುಕೊಳ್ಳುವ ಪಂದ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ