/newsfirstlive-kannada/media/post_attachments/wp-content/uploads/2024/10/Hardik-Pandya_News.jpg)
ಭಾರತ ಮತ್ತು ಇಂಗ್ಲೆಂಡ್ ನಡುವಿನ T20 ಸರಣಿಯ ಮೂರನೇ ಪಂದ್ಯವು ರಾಜ್‌ಕೋಟ್‌ನಲ್ಲಿ ನಡೆಯಿತು. ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 26 ರನ್‌ಗಳಿಂದ ಸೋಲನ್ನ ಕಂಡಿದೆ. ಬೆನ್ನಲ್ಲೇ ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್, ಪಾಂಡ್ಯರನ್ನು ಟಾರ್ಗೆಟ್ ಮಾಡಿದ್ದಾರೆ.
ನಿನ್ನೆಯ ಪಂದ್ಯದಲ್ಲಿ 35 ಎಸೆತಗಳ ಎದುರಿಸಿ 1 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿ 40 ರನ್ ಗಳಿಸಿ ಔಟ್ ಆದರು. ಪಾಂಡ್ಯ ಅವರ ಇನ್ನಿಂಗ್ಸ್ ಟೀಕಿಸಿರುವ ಪಟೇಲ್, ಆರಂಭದಲ್ಲಿ ಅವರು ಸಾಕಷ್ಟು ಬಾಲ್ ಡಾಟ್ ಮಾಡಿದರು. ಟಿ20 ಪಂದ್ಯದಲ್ಲಿ ಸೆಟ್ ಆಗಲು ಆಟಗಾರ 20 ರಿಂದ 25 ಎಸೆತಗಳನ್ನು ಆಡುವಂತಿಲ್ಲ. ಪಾಂಡ್ಯ ಮಾಡಿದ ದೊಡ್ಡ ತಪ್ಪು ಅದೇ ಎಂದಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾ ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟ ಕ್ಯಾಪ್ಟನ್ ಸೂರ್ಯ; ಏನಂದ್ರು ಗೊತ್ತಾ?
ನೀವು ಸೆಟ್ ಆಗಲು 20-25 ಎಸೆತ ಎದುರಿಸುವಂತಿಲ್ಲ. ನಿಮ್ಮ ಸಮಯವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಸ್ಟ್ರೈಕ್ ತಿರುಗಿಸುತ್ತಲೇ ಇರಬೇಕು. 35 ಎಸೆತಗಳಲ್ಲಿ 40 ರನ್ ಗಳಿಸಿದ್ದರೂ, ಸಾಕಷ್ಟ ಡಾಟ್ ಬಾಲ್ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ. ಟೀಂ ಇಂಡಿಯಾ ಚೇಸಿಂಗ್ ಅವಧಿಯಲ್ಲಿ 9 ರಿಂದ 16 ಓವರ್ಗಳ ನಡುವೆ ಕೇವಲ 40 ರನ್ಗಳಿಸಿತು. ಇದೇ ತಂಡದ ಸೋಲಿಗೆ ಕಾರಣವಾಗಿದೆ. ಈ ಅವಧಿಯಲ್ಲಿ ವಿಕೆಟ್ಗಳು ಸತತವಾಗಿ ಬೀಳುತ್ತಿದ್ದವು. ಟೀಂ ಇಂಡಿಯಾದಿಂದ ಯಾವುದೇ ದೊಡ್ಡ ಜೊತೆಯಾಟ ಬರಲಿಲ್ಲ.
ಇದನ್ನೂ ಓದಿ: ಇನ್ಮುಂದೆ ವಾರಕ್ಕೆ ನಾಲ್ಕೇ ದಿನ ಕೆಲಸ; ಬರೋಬ್ಬರಿ 3 ದಿನ ರಜೆ; ಉದ್ಯೋಗಿಗಳು ಓದಲೇಬೇಕಾದ ಸ್ಟೋರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ