newsfirstkannada.com

2 ಟೆಸ್ಟ್​ನಿಂದ ಹಿಂದೆ ಸರಿದ ವಿರಾಟ್​ ಕೊಹ್ಲಿ.. ತಲೆನೋವು ತಂದಿಟ್ಟ ಪ್ಲೇಯಿಂಗ್​- 11 ಆಯ್ಕೆ; RCB ಪ್ಲೇಯರ್​ಗೆ ಚಾನ್ಸ್?

Share :

Published January 24, 2024 at 2:27pm

    3 ಫಾರ್ಮೆಟ್​ ಆಡಲು ಈ ಯಂಗ್​ಸ್ಟರ್ ರೆಡಿ, ಯಾರಿಗೆ ಚಾನ್ಸ್ ಸಿಗುತ್ತೆ.?

    ಪ್ಲೇಯಿಂಗ್​- 11​ನಲ್ಲಿ ಕೊಹ್ಲಿ ಸ್ಥಾನ ತುಂಬೋದ್ಯಾರು ಅನ್ನೋ ಕುತೂಹಲ

    ಆರ್​​ಸಿಬಿಯ ಈ ಆಟಗಾರ ವಿರಾಟ್​ ಕೊಹ್ಲಿಯ ಸ್ಥಾನ ತುಂಬಬಹುದಾ.?

ಇಂಗ್ಲೆಂಡ್‌ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ವಿರಾಟ್ ಕೊಹ್ಲಿ ಹಿಂದೆ ಸರಿದಿದ್ದಾರೆ. ಕೊಹ್ಲಿ ಹಿಂದೆ ಸರಿದಿದ್ದೆ ತಡ ಅವರ ಸ್ಥಾನಕ್ಕೆ ಬದಲಿ ಯಾರು ಎಂಬ ಚರ್ಚೆ ಕ್ರಿಕೆಟ್ ಪಡೆಸಾಲೆಯಲ್ಲಿ ಜೋರಾಗಿ ನಡೆಯುತ್ತಿದೆ. ಅದರಲ್ಲೂ ಇಬ್ಬರ ನಡುವೆ ಟಫ್ ಕಾಂಫಿಟೇಷನ್ ನಡೆಯುತ್ತಿದೆ. ಹಾಗಾದ್ರೆ, ಆ ಯಾರಿಗೆ ಜಾಕ್​ಪಾಟ್ ಹೊಡೆಯುತ್ತೆ?

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ಅಘಾತ ಎದುರಾಗಿದೆ. ವೈಯಕ್ತಿಕ ಸಮಸ್ಯೆಯ ಕಾರಣ ನೀಡಿ ಮೊದಲ 2 ಪಂದ್ಯಗಳಿಂದ ಹಿಂದೆ ಸರಿದಿರುವ ವಿರಾಟ್, ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ. ಈ ಬೆನ್ನಲ್ಲೇ ಟೀಮ್ ಮ್ಯಾನೇಜ್​ಮೆಂಟ್ ಹಾಗೂ ಸೆಲೆಕ್ಷನ್ ಕಮಿಟಿಗೆ ಬಿಗ್ ಟೆನ್ಶನ್ ಶುರುವಾಗಿದೆ.

ಸದ್ಯ ವಿರಾಟ್​ ನಿರ್ಗಮನದಿಂದ ಟೀಮ್ ಮ್ಯಾನೇಜ್​ಮೆಂಟ್​ಗೆ ಪ್ಲೇಯಿಂಗ್​ ಇಲೆವೆನ್​ ಆಯ್ಕೆಯ ತಲೆನೋವು ಸೃಷ್ಟಿಯಾಗಿದ್ರೆ, ಮತ್ತೊಂದೆಡೆ ಸೆಲೆಕ್ಷನ್ ಕಮಿಟಿಗೆ ಬದಲಿ ಆಯ್ಕೆಯ ಸವಾಲು ಎದುರಾಗಿದೆ. ಬದಲಿ ಆಟಗಾರನಾಗಿ ಯಾರಿಗೆ ಸ್ಥಾನ ಸಿಗುತ್ತೆ?. ಪ್ಲೇಯಿಂಗ್​ ಇಲೆವೆನ್​ನಲ್ಲಿ ಕೊಹ್ಲಿ ಸ್ಥಾನ ತುಂಬೋದ್ಯಾರು.? ಅನ್ನೋ ಕುತೂಹಲ ಫ್ಯಾನ್ಸ್ ವಲಯದಲ್ಲಿದೆ.

ಕೊಹ್ಲಿ ಔಟ್.. ಆರ್​ಸಿಬಿ ಆಟಗಾರನಿಗೆ ಅದೃಷ್ಟ..?

ಸದ್ಯ ವಿರಾಟ್​, ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದೆ ತಡ. ಬದಲಿ ಆಟಗಾರನ ರೇಸ್​ನಲ್ಲಿ ಆರ್​ಸಿಬಿ ಆಟಗಾರನ ಹೆಸರು ಕೇಳಿಬರುತ್ತಿದೆ. ಆತನೇ ರಜತ್ ಪಾಟಿದಾರ್. 2021ರಿಂದ ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಆಲಿ, ರಣಜಿ ಸೇರಿದಂತೆ ಲಿಸ್ಟ್​ ಎ, ಭಾರತ ಎ, ಐಪಿಎಲ್​ನಲ್ಲಿ ರನ್ ಪ್ರಹಾರ ಸೃಷ್ಟಿಸಿರುವ ಆಟಗಾರ. 2022ರಿಂದ ಫಸ್ಟ್ ಕ್ಲಾಸ್ ಕ್ರಿಕೆಟ್​ನಲ್ಲಿ ಕನ್ಸಿಸ್ಟೆನ್ಸಿ ಪರ್ಫಮೆನ್ಸ್ ನೀಡ್ತಿದ್ದಾರೆ. ಮೂರು ಫಾರ್ಮೆಟ್​​ನಲ್ಲೂ ರನ್​ ಕೊಳ್ಳೆ ಹೊಡೆದಿರುವ ಈತನ ಹೆಸರು ಮುಂಚೂಣಿಯಲ್ಲಿದೆ.

2022ರಿಂದ ಫಸ್ಟ್ ಕ್ಲಾಸ್ ಕ್ರಿಕೆಟ್​ನಲ್ಲಿ ರಜತ್

2022ರಿಂದ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 29 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ರಜತ್ ಪಾಟಿದಾರ್​, ಬರೋಬ್ಬರಿ 1,703 ರನ್ ಸಿಡಿಸಿದ್ದಾರೆ. ಈ ಪೈಕಿ 6 ಶತಕ, 10 ಅರ್ಧ ಶತಕಗಳು ದಾಖಲಾಗಿದ್ದು, 68.12ರ ಸರಾಸರಿಯಲ್ಲಿ ರನ್​ ಗಳಿಸಿದ್ದಾರೆ.

ಇಂಗ್ಲೆಂಡ್ ಲಯನ್ಸ್​ ಎದುರು ವಾರಿಯರ್ ಇನ್ನಿಂಗ್ಸ್​..!

ಸದ್ಯ ಭಾರತ ಎ ಪರ ಅನಧಿಕೃತ ಟೆಸ್ಟ್​ ಸರಣಿಯನ್ನಾಡ್ತಿರುವ ರಜತ್, ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಇಂಗ್ಲೆಂಡ್ ಲಯನ್ಸ್ ಎದುರಿನ ಮೊದಲ ಟೆಸ್ಟ್​ನ ಮೊದಲ ಇನ್ನಿಂಗ್ಸ್​ ವಿಕೆಟ್ ಬೀಳುತ್ತಿದ್ರೂ ಎದೆಯೊಡ್ಡಿ ನಿಂತಿದ್ದ ರಜತ್​, 150 ರನ್ ಸಿಡಿಸಿ ಮಿಂಚಿದ್ರು. ಇಂಗ್ಲೆಂಡ್ ಎದುರಿನ ಅಭ್ಯಾಸ ಪಂದ್ಯ ಹಾಗೂ ನ್ಯೂಜಿಲೆಂಡ್ ಎ ಎದುರು ಶತಕ ಸಿಡಿಸಿದ್ರು. ಹೀಗಾಗಿಯೇ ಸೆಲೆಕ್ಷನ್ ಕಮಿಟಿಯ ಫಸ್ಟ್​ ಚಾಯ್ಸ್​ ರಜತ್ ಪಾಟಿದಾರ್ ಆಗಿದ್ದಾರೆ.

ರಜತ್​ಗೆ ಟಫ್ ಫೈಟ್​​​​​ ನೀಡ್ತಾರಾ X-ಆರ್​ಸಿಬಿಯನ್..?

ರತಜ್​ ಪಾಟಿದಾರ್ ಮಾಜಿ ಆರ್​ಸಿಬಿ ಆಟಗಾರನೇ ವಿಲನ್ ಆದ್ರೂ ಅಚ್ಚರಿ ಇಲ್ಲ. ಅಂದ್ಹಾಗೆ ಆತ ಬೇರ್ಯಾರು ಅಲ್ಲ. ಲಾಂಗ್ ವೇಯ್ಟೆಟ್​ ಪ್ಲೇಯರ್​ ಸರ್ಫರಾಜ್ ಖಾನ್. ದೇಶಿ ಕ್ರಿಕೆಟ್​ನಲ್ಲಿ ಅದ್ಬುತ ಪ್ರದರ್ಶನ ನೀಡಿರುವ ಸರ್ಫರಾಜ್​, ಸದ್ಯ ಇಂಗ್ಲೆಂಡ್ ಲಯನ್ಸ್ ವಿರುದ್ಧ ಕ್ರಮವಾಗಿ 96 ರನ್, 55 ರನ್ ಬಾರಿಸಿದ್ದಾರೆ. ಹಿಂದಿನ 3 ರಣಜಿ ಸೀಸನ್​ಗಳಲ್ಲೂ ಸ್ಥಿರ ಪ್ರದರ್ಶನ ತೋರಿದ್ದಾರೆ. ಆದ್ರೆ, ಸರ್ಫರಾಜ್ ದೇಹ ತೂಕವೇ ವಿಲನ್ ಆಗ್ತಿದೆ. ಇದು ಸಹಜವಾಗೇ ರಜತ್ ಪಾಟಿದಾರ್​ಗೆ ಪ್ಲಸ್ ಪಾಯಿಂಟ್ ಆಗಿದೆ. ಆದ್ರೆ, ಇವರ ಜೊತೆ ಅಭಿಮನ್ಯು ಈಶ್ವರನ್, ಟೆಸ್ಟ್​ ಸ್ಪೆಷಲಿಸ್ಟ್​ ಚೇತೇಶ್ವರ್​ ಪೂಜಾರ ಕೂಡ ಕಾಂಪಿಟೇಟರ್​ಗಳು ಅನ್ನೋದನ್ನ ಮರೆಯುವಂತಿಲ್ಲ.

ಕಿಂಗ್​​ ಕೊಹ್ಲಿ ನಿರ್ಧಾರ ಶ್ರೇಯಸ್​ಗೆ ಜೀವದಾನ..!

ವಿರಾಟ್​ ಅಲಭ್ಯತೆಯಿಂದಾಗಿ ಯಾರೇ ತಂಡಕ್ಕೆ ಎಂಟ್ರಿ ನೀಡಿದ್ರೂ ಅವರಿಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನ ಸಿಗೋ ಸಾಧ್ಯತೆ ಕಡಿಮೆಯಿದೆ. ಈಗಾಗಲೇ ತಂಡದಲ್ಲಿರೋ ಶ್ರೇಯಸ್​ ಅಯ್ಯರ್​​ ಆಡೋ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳೋ ಸಾಧ್ಯತೆ ದಟ್ಟವಾಗಿದೆ. ರನ್ ಗಳಿಸಲು ಪರದಾಡಿದ್ದ ಶ್ರೇಯಸ್​, ಈ ಸರಣಿಯಲ್ಲಿ ಬೆಂಚ್ ಕಾಯಬೇಕಾಗುವ ಸ್ಥಿತಿ ಎದುರಾಗಿತ್ತು. ಆದ್ರೀಗ ವಿರಾಟ್​ ಅಲಭ್ಯತೆಯಿಂದ ಶ್ರೇಯಸ್​ ಅಯ್ಯರ್​ಗೆ ಜೀವದಾನ ಸಿಕ್ಕಂತಿದೆ. ಆದ್ರೆ, ಸಿಕ್ಕ ಈ ಜೀವದಾನ ಶ್ರೇಯಸ್​ ಹೇಗೆ ಬಳಸಿಕೊಳ್ತಾರೆ ಅನ್ನೋದೇ ಪ್ರಶ್ನೆಯಾಗಿದೆ.

ವಿರಾಟ್​ ಅಲಭ್ಯತೆ ಶ್ರೇಯಸ್​ಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಜೀವದಾನ ನೀಡ್ತಿದ್ರೆ. ಚೇತೇಶ್ವರ ಪೂಜಾರಗೆ ಕಮ್​​​ಬ್ಯಾಕ್ ಕನಸು ಹುಟ್ಟಿಸಿದೆ. ಆದ್ರೆ, ಬಿಗ್​ಬಾಸ್​ಗಳ ಕೃಪೆ ಯಾರ ಮೇಲಿದೆ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

2 ಟೆಸ್ಟ್​ನಿಂದ ಹಿಂದೆ ಸರಿದ ವಿರಾಟ್​ ಕೊಹ್ಲಿ.. ತಲೆನೋವು ತಂದಿಟ್ಟ ಪ್ಲೇಯಿಂಗ್​- 11 ಆಯ್ಕೆ; RCB ಪ್ಲೇಯರ್​ಗೆ ಚಾನ್ಸ್?

https://newsfirstlive.com/wp-content/uploads/2024/01/VIRAT_RAJATH_PATIDAR.jpg

Load More