Advertisment

ಕೊಹ್ಲಿ ಔಟ್ ಆಗ್ತಿದ್ದಂತೆ ದುಃಖ ವ್ಯಕ್ತಪಡಿಸಿದ ರೋಹಿತ್ ಪತ್ನಿ.. ಸ್ಫೂರ್ತಿಯ ಶ್ರೀರಕ್ಷೆ ಕೊಟ್ಟ ದ್ರಾವಿಡ್..!

author-image
Ganesh
Updated On
ಟಿ20 ವಿಶ್ವಕಪ್​ನಲ್ಲಿ ಭಾರತ ಫೈನಲ್​​​ಗೆ ಎಂಟ್ರಿ.. ಪಾಕಿಸ್ತಾನ ಹೇಳಿದ್ದೇನು.. ವಿಡಿಯೋ ವೈರಲ್..!
Advertisment
  • ಟಿ20 ವಿಶ್ವಕಪ್​​ನಲ್ಲಿ ಫೈನಲ್ ಪ್ರವೇಶ ಮಾಡಿರುವ ಭಾರತ
  • ಇಂಗ್ಲೆಂಡ್ ವಿರುದ್ಧ 68 ರನ್​ಗಳ ಜಯ ಗಳಿಸಿದ ಭಾರತ ತಂಡ
  • ನಾಳೆ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಫೈನಲ್ ಪಂದ್ಯ ಆಡಲಿದೆ

T20 ವಿಶ್ವಕಪ್​​​ನಲ್ಲಿ ಟೀಂ ಇಂಡಿಯಾ ಆಟಗಾರರ ಪ್ರದರ್ಶನ ಕಂಡು ಕೋಟ್ಯಾಂತ ಭಾರತೀಯರು ತುಂಬಾ ಖುಷಿ ಆಗಿದ್ದಾರೆ. ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಸೇರಿದಂತೆ ಬಹುತೇಕ ಆಟಗಾರರು ಜಬರ್ದಸ್ತ್​​ ಪ್ರದರ್ಶನ ನೀಡುತ್ತಿದ್ದಾರೆ.

Advertisment

ಆದರೆ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಇದುವರೆಗೆ ಅದ್ಭುತ ಇನ್ನಿಂಗ್ಸ್ ಬಂದಿಲ್ಲ. ವಿಶ್ವಕಪ್‌ನ ಸೆಮಿಫೈನಲ್‌ನಲ್ಲೂ ಅದೇ ಸಂಭವಿಸಿದೆ. ಕೊಹ್ಲಿ ಎರಡಂಕಿ ದಾಟಲು ಕೂಡ ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ವಿರುದ್ಧ 9 ರನ್​ಗಳಿಸಿ ಮೂರನೇ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರು. ವಿರಾಟ್ ಕೊಹ್ಲಿ ಔಟಾದಾಗ ರೋಹಿತ್ ಶರ್ಮಾ ಪತ್ನಿ ರಿತಿಕಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಪ್ರತಿಕ್ರಿಯೆ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ:KRS ಡ್ಯಾಮ್​​ನಲ್ಲಿ ಒಂದೇ ದಿನ ಭರ್ಜರಿ ಒಳಹರಿವು.. ನಿರೀಕ್ಷೆಗೂ ಮೀರಿ ಭರ್ತಿ ಆಗ್ತಿದೆ ಡ್ಯಾಮ್..!

publive-image

ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಕೊಹ್ಲಿಯಿಂದ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಹೊಂದಿದ್ದರು. ಅದಕ್ಕೆ ಕಾರಣ ಅವರ ಈ ಹಿಂದಿನ ದಾಖಲೆಗಳು. ಮೂರನೇ ಓವರ್‌ನಲ್ಲಿ ಮಿಡ್‌ವಿಕೆಟ್‌ ಮೇಲೆ ಸಿಕ್ಸರ್‌ ಬಾರಿಸಿ ಆ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದ್ದರು. ಅದೇ ಮೂರನೇ ಓವರ್​ ನಾಲ್ಕನೇ ಎಸೆತದಲ್ಲಿ ರೀಸ್ ಟೋಪ್ಲಿಗೆ ಬೌಲ್ಡ್ ಆದರು.

Advertisment

ಬಳಿಕ ಕೊಹ್ಲಿ ಪೆವಿಲಿಯನ್‌ನಲ್ಲಿ ಶಾಂತವಾಗಿ ಮತ್ತು ದುಃಖದಿಂದ ಕೂತಿದ್ದರು. ಕೊಹ್ಲಿ ಔಟ್ ಆದ ಸಂದರ್ಭದಲ್ಲಿ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇ ಮುಖದಲ್ಲೂ ಸಾಕಷ್ಟು ನಿರಾಸೆ ಎದ್ದು ಕಾಣುತ್ತಿತ್ತು. ಇನ್ನು ರಿಷಬ್ ಪಂತ್ ಔಟಾದಾಗ ವಿರಾಟ್ ಮುಖದಲ್ಲಿ ಇನ್ನಷ್ಟು ದುಃಖ ಕಾಣಿಸಿಕೊಂಡಿತು. ಇದನ್ನೆಲ್ಲ ಗಮನಿಸಿದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೊಹ್ಲಿ ಬಳಿ ಹೋಗಿ ಸ್ಫೂರ್ತಿ ತುಂಬಿದರು. ಇದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ:ಹಾವೇರಿ ಅಪಘಾತದಲ್ಲಿ ಅಮ್ಮನ ಎದುರೇ ಪ್ರಾಣಬಿಟ್ಟ ಅವಳಿ ಮಕ್ಕಳು.. ದೃಶ್ಯ ಕಂಡು ಗಳಗಳನೇ ಕಣ್ಣೀರಿಟ್ಟ ಆ್ಯಂಬುಲೆನ್ಸ್ ಸಿಬ್ಬಂದಿ

ಭಾರತ ಟಿ20 ವಿಶ್ವಕಪ್ ಫೈನಲ್ ತಲುಪಿದೆ. ಫೈನಲ್ ಪಂದ್ಯಕ್ಕೂ ಮುನ್ನ ಕೊಹ್ಲಿ ಈ ಋತುವಿನ ಟೂರ್ನಿಯಲ್ಲಿ 7 ಪಂದ್ಯಗಳನ್ನು ಆಡಿದ್ದಾರೆ. ಈ 7 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 81 ರನ್ ಗಳಿಸಿದ್ದಾರೆ. ಇದರಲ್ಲಿ ಅವರು ಬಾಂಗ್ಲಾದೇಶ ವಿರುದ್ಧ ಗರಿಷ್ಠ 37 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಅಮೆರಿಕ ಮತ್ತು ಆಸ್ಟ್ರೇಲಿಯಾ ವಿರುದ್ಧ ಶೂನ್ಯಕ್ಕೆ ಔಟ್ ಆಗಿದ್ದಾರೆ.

Advertisment

ಇದನ್ನೂ ಓದಿ:ಹಾವೇರಿಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ.. ದೇವರ ದರ್ಶನಕ್ಕೆ ತೆರಳಿದ್ದ 13 ಭಕ್ತರು ದಾರುಣ ಸಾವು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment