/newsfirstlive-kannada/media/post_attachments/wp-content/uploads/2025/07/Gill-10.jpg)
ಕೆ.ಎಲ್.ರಾಹುಲ್ ಕೂಲ್ ಆ್ಯಂಡ್ ಕಾಮ್.. ಕ್ಯಾಪ್ಟನ್ ಶುಭ್ಮನ್ ಗಿಲ್ರ ಕ್ಲಾಸ್ ಆ್ಯಂಡ್ ಮಾಸ್. ವೈಸ್ ಕ್ಯಾಪ್ಟನ್ ರಿಷಭ್ ಪಂತ್ ರೋರಿಂಗ್ ಬ್ಯಾಟಿಂಗ್. ಈ ತ್ರಿಮೂರ್ತಿಗಳ ಬ್ಯಾಟಿಂಗ್ಗೆ ಇಂಗ್ಲೆಂಡ್ ಕಂಗಾಲ್ ಆಯ್ತು.
64 ರನ್, 1 ವಿಕೆಟ್ ನಷ್ಟದೊಂದಿಗೆ 4ನೇ ದಿನದಾಟ ಆರಂಭಿಸಿದ ಟೀಮ್ ಇಂಡಿಯಾ ಕನ್ನಡಿಗ ಕರುಣ್, ಆಧಾರವಾಗಲೇ ಇಲ್ಲ. 4ನೇ ದಿನದಾಟ ಬಿಗ್ ಇನ್ನಿಂಗ್ಸ್ ಕಟ್ಟಿ ಟೀಕೆಗಳಿಗೆ ಉತ್ತರಿಸಬೇಕಿದ್ದ ಕರುಣ್, 26 ರನ್ಗಳಿಗೆ ವಿಕೆಟ್ ಒಪ್ಪಿಸಿ ಹೊರನಡೆದ್ರು. ಮತ್ತೊಂದ್ಕಡೆ ಪಕ್ಕಾ ಲೆಕ್ಕಾಚಾರದ ಆಟವಾಡಿದ ಕೆ.ಎಲ್.ರಾಹುಲ್, ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ರು.
ಇದನ್ನೂ ಓದಿ: ದಿಗ್ಗಜ ಬ್ಯಾಟರ್ಗಳ ದಾಖಲೆ ಉಡೀಸ್ ಮಾಡಿದ ಯಶಸ್ವಿ ಜೈಸ್ವಾಲ್.. ಯಂಗ್ ಓಪನರ್ ಹೊಸ ಮೈಲಿಗಲ್ಲು!
ಗಿಲ್ ಜೊತೆಗೂಡಿ ಬಿಗ್ ಇನ್ನಿಂಗ್ಸ್ ಕಟ್ಟೋ ನಿರೀಕ್ಷೆ ಮೂಡಿಸಿದ್ದ ರಾಹುಲ್, 55 ರನ್ ಗಳಿಸಿದ್ದಾಗ ಜೋಶ್ ಟಂಗ್ರ ಮ್ಯಾಜಿಕಲ್ ಬಾಲ್ಗೆ ಕ್ಲೀನ್ ಬೋಲ್ಡ್ ಆಗಿ ಹೊರ ನಡೆದ್ರು.
ಶುಭ್ಮನ್ ಗಿಲ್ ಘರ್ಜನೆ.. ರಿಷಭ್ ಪಂತ್ ಫೈರ್..
ಕೆ.ಎಲ್.ರಾಹುಲ್ ವಿಕೆಟ್ ಪತನದ ಬಳಿಕ ಕ್ಯಾಪ್ಟನ್ ಗಿಲ್, ವೈಸ್ ಕ್ಯಾಪ್ಟನ್ ಪಂತ್ ಒಂದಾದ್ರು. 4ನೇ ವಿಕೆಟ್ಗೆ ಜೊತೆಯಾದ ಈ ಜೋಡಿ ಇಂಗ್ಲೆಂಡ್ ಬೌಲರ್ಗಳ ಮೇಲೆ ದಂಡಯಾತ್ರೆ ನಡೆಸಿದರು. ಒಂದ್ಕಡೆ ಶುಭ್ಮನ್ ಗಿಲ್ ಕ್ಲಾಸ್ ಬ್ಯಾಟಿಂಗ್ ನಡೆಸಿದ್ರೆ. ಮತ್ತೊಂದ್ಕಡೆ ಪಂತ್, ಫಿಯರ್ಲೆಸ್ ಬ್ಯಾಟಿಂಗ್ನಿಂದ ಇಂಗ್ಲೆಂಡ್ ಬೌಲರ್ಗಳನ್ನು ಕಾಡಿದ್ರು.
ಏಕದಿನ ಶೈಲಿಯಂತೆ ಬ್ಯಾಟ್ ಬೀಸಿದ ಈ ಜೋಡಿ, 4ನೇ ವಿಕೆಟ್ಗೆ 110 ರನ್ಗಳ ಜೊತೆಯಾಟವಾಡಿದ್ರು. ಗಿಲ್, 57 ಎಸೆತಗಳಲ್ಲೇ ಅರ್ಧಶತಕ ಪೂರೈಸಿದ್ರೆ, ಪಂತ್, 48 ಎಸೆತಗಳಲ್ಲೇ ಫಿಫ್ಟಿ ಸಿಡಿಸಿ ಆಂಗ್ಲರನ್ನು ಅಟ್ಟಾಡಿಸಿದ್ರು. 65 ರನ್ ಗಳಿಸಿದ್ದಾಗ ಬಶೀರ್ ಬೌಲಿಂಗ್ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.
ಶುಭ್ಮನ್ ಸೆಂಚುರಿ ಧಮಾಕ.. ಬೌಲರ್ಸ್ ಸುಸ್ತು
ಮೊದಲ ಇನ್ನಿಂಗ್ಸ್ನಲ್ಲಿ ಡಬಲ್ ಸೆಂಚುರಿ ಸಿಡಿಸಿ ಕಾಡಿದ್ದ ಗಿಲ್, 2ನೇ ಇನ್ನಿಂಗ್ಸ್ನಲ್ಲೂ ಇಂಗ್ಲೆಂಡ್ ಬೌಲರ್ಗಳನ್ನು ಬೆಂಡೆತ್ತಿದ್ದರು. ಮೈದಾನದ ಅಷ್ಟ ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿಸಿದ ಗಿಲ್, 129 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ಒಳಗೊಂಡ ಶತಕ ಪೂರೈಸಿದರು. ಆ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 7ನೇ ಶತಕ ದಾಖಲಿಸಿದರು.
ಇದನ್ನೂ ಓದಿ: ಕೆಟ್ಟ ಮೇಲೂ ಬುದ್ಧಿ ಕಲಿಯದ ಪ್ಲೇಯರ್ಸ್.. ಕ್ಯಾಪ್ಟನ್ ಗಿಲ್ ಸೇರಿ ಆಟಗಾರರಿಂದ ಕ್ಯಾಚ್ ಡ್ರಾಪ್
ಮತ್ತೊಂದ್ಕಡೆ ತಾಳ್ಮೆಯ ಬ್ಯಾಟಿಂಗ್ ನಡೆಸಿದ ಜಡೇಜಾ, ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ರೆ, ಇತ್ತ ಶತಕದ ಬಳಿಕ ಮತ್ತಷ್ಟು ವೈಲೆಂಟ್ ಆದ ಗಿಲ್, ಸಿಕ್ಸರ್ನೊಂದಿಗೆ 150 ರನ್ ಪೂರೈಸಿದರು. 5ನೇ ವಿಕೆಟ್ಗೆ ಜಡೇಜಾ ಜೊತೆ 175 ರನ್ಗಳ ಜೊತೆಯಾಟವಾಡಿದ ಶುಭ್ಮನ್, 161 ರನ್ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು. ನಾಯಕನ ಈ ಅದ್ಭುತ ಇನ್ನಿಂಗ್ಸ್ನಲ್ಲಿ 13 ಬೌಂಡರಿ, 8 ಸಿಕ್ಸರ್ಗಳಿದಿದ್ದು ವಿಶೇಷ.
427ಕ್ಕೆ 6 ಡಿಕ್ಲೇರ್.. ಇಂಗ್ಲೆಂಡ್ಗೆ ಆರಂಭಿಕ ಅಘಾತ..!
ಗಿಲ್ ವಿಕೆಟ್ ಪತನದ ಬೆನ್ನಲ್ಲೇ ನಿತಿಶ್ ಡಕೌಟ್ ಆಗಿ ಹಿಂತಿರುಗಿದ್ರೆ, ಸುಂದರ್ ಅಜೇಯ 12, ರವೀಂದ್ರ ಜಡೇಜಾ ಅಜೇಯ 69 ರನ್ಗಳ ನೆರವಿನಿಂದ ಟೀಮ್ ಇಂಡಿಯಾ, 2ನೇ ಇನ್ನಿಂಗ್ಸ್ 427 ರನ್ ಗಳಿಸಿತ್ತು. ಈ ವೇಳೆ ನಾಯಕ ಗಿಲ್ ಡಕ್ಲೇರ್ ಘೋಷಿಸಿದ್ರು. ಇದರೊಂದಿಗೆ ಟೀಮ್ ಇಂಡಿಯಾ 607 ರನ್ಗಳ ಮುನ್ನಡೆ ಸಾಧಿಸಿತು. 608 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ಗೆ ಆರಂಭದಲ್ಲೇ ಶಾಕ್ ಕಾದಿತ್ತು. ಸಿರಾಜ್ ಎಸೆದ 2ನೇ ಓವರ್ನಲ್ಲೇ ಓಪನರ್ ಕ್ರಾವ್ಲೆ ಪೆವಿಲಿಯನ್ ಸೇರಿದ್ರು.
ಕ್ರಾವ್ಲೆ ಔಟಾದರು, ಬೆನ್ ಡಕೆಟ್ ಬಿರುಸಿನ ಬ್ಯಾಟಿಂಗ್ ನಡೆಸಿದರು. 15 ಎಸೆತಗಳಲ್ಲಿ 5 ಬೌಂಡರಿ, ಒಳಗೊಂಡ 25 ರನ್ ಸಿಡಿಸಿದ್ದ ಡಕೆಟ್ಗೆ, ಆಕಾಶ್ ದೀಪ್ ಬ್ರೇಕ್ ಹಾಕಿದ್ರು. ಕ್ರಾವ್ಲೆ, ಡಕೆಟ್ ವಿಕೆಟ್ ಪತನದ ಬಳಿಕ ಒಲಿ ಪೊಪ್, ಜೋ ರೂಟ್ ಬೇರೂರುವ ಮುನ್ಸೂಚನೆ ನೀಡಿದ್ರು. ಈ ವೇಳೆ 6 ರನ್ ಗಳಿಸಿದ್ದ ರೂಟ್ಗೆ ಪೆವಿಲಿಯನ್ ರೂಟ್ ತೋರಿದ ಆಕಾಶ್ ದೀಪ್, ಟೀಮ್ ಇಂಡಿಯಾ ಮೇಲುಗೈ ಸಾಧಿಸಲು ನೆರವಾದ್ರು. 4ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 72 ರನ್ ಗಳಿಸಿರುವ ಇಂಗ್ಲೆಂಡ್, 536 ರನ್ಗಳ ಹಿನ್ನಡೆಯಲ್ಲಿದೆ.
ಇದನ್ನೂ ಓದಿ: ಕೊಹ್ಲಿ ದಾಖಲೆ ಸರಿಗಟ್ಟಿದ ಶುಭಮನ್ ಗಿಲ್.. ಇಂಗ್ಲೆಂಡ್ ನೆಲದಲ್ಲಿ ಯುವ ನಾಯಕ ಮಿಂಚಿಂಗ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ