/newsfirstlive-kannada/media/post_attachments/wp-content/uploads/2025/06/KARUN_NAIR_KL_RAHUL.jpg)
ಭಾರತ ಹಾಗೂ ಇಂಗ್ಲೆಂಡ್ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಿದ್ದು ಈಗಾಗಲೇ ಮೊದಲ ಟೆಸ್ಟ್ ಪಂದ್ಯ ಶುರುವಾಗಿದೆ. ಮೊದಲ ಟೆಸ್ಟ್ನಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಭಾರತ ಮೊದಲ ಬ್ಯಾಟಿಂಗ್ ಮಾಡುತ್ತಿದೆ. ಈ ಟೆಸ್ಟ್ ಈ ಪಂದ್ಯದ ಇನ್ನೊಂದು ವಿಶೇಷ ಎಂದರೆ ಒಟ್ಟು ಮೂವರು ಕನ್ನಡಿಗರು ಸ್ಥಾನ ಪಡೆದಿದ್ದಾರೆ.
ಕೆ.ಎಲ್ ರಾಹುಲ್ ಸದ್ಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅನುಭವಿ ಆಟಗಾರ ಆಗಿದ್ದಾರೆ. ಏಕೆಂದರೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ಗುಡ್ಬೈ ಹೇಳಿದ ಮೇಲೆ ಕೆ.ಎಲ್ ರಾಹುಲ್ ಅವರ ಬ್ಯಾಟಿಂಗ್ ತಂಡದಲ್ಲಿ ಅತ್ಯಂತ ಪ್ರಾಮುಖ್ಯತೆ ವಹಿಸುತ್ತದೆ. ಅದರಲ್ಲಿ ಆಂಗ್ಲರ ನೆಲದಲ್ಲಿ ಕೆ.ಎಲ್ ರಾಹುಲ್ ತಮ್ಮದೇ ಆದ ದಾಖಲೆ ಹೊಂದಿದ್ದಾರೆ. ಯಾವ ಸ್ಲಾಟ್ನಲ್ಲಿ ಕ್ರೀಸ್ಗೆ ಬಂದರೂ ಎದುರಾಳಿಗೆ ಟಕ್ಕರ್ ಪಕ್ಕಾ.
ಇದನ್ನೂ ಓದಿ: ಮೊದಲ ಟೆಸ್ಟ್ನಲ್ಲಿ ಕೈಕೊಟ್ಟ ಟಾಸ್.. ಟೀಮ್ ಇಂಡಿಯಾದ ಪ್ಲೇಯಿಂಗ್- 11ನಲ್ಲಿ ಯಾರ್ ಯಾರಿಗೆ ಸ್ಥಾನ?
ಮತ್ತೊಬ್ಬ ಕನ್ನಡಿಗ ಎಂದರೆ ಅದು ಕರುಣ್ ನಾಯರ್. ಟೀಮ್ ಇಂಡಿಯಾದ ಅವಕಾಶಕ್ಕಾಗಿ ಕಾದು ಕಾದು ಬೇಸತ್ತ ಮೇಲೆ ಕರುಣ್ಗೆ ಅದೃಷ್ಟ ಒಲಿದು ಬಂದಿದೆ. ಬರೋಬ್ಬರಿ 8 ವರ್ಷಗಳ ಬಳಿಕ ಕರುಣ್ ನಾಯರ್ಗೆ ಭಾರತ ತಂಡದಲ್ಲಿ ಸ್ಥಾನ ಲಭಿಸಿದೆ. ಅಭ್ಯಾಸ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿ ದ್ವಿಶತಕ ಬಾರಿಸಿದ್ದರು. ಇದೇ ಪರ್ಫಾಮೆನ್ಸ್ನಲ್ಲಿ ಸಿಕ್ಕ ಅವಕಾಶವನ್ನು ಕರುಣ್ ನಾಯರ್ ಅವರು ಸದುಪಯೋಗ ಮಾಡಿಕೊಳ್ಳಬೇಕಿದೆ. ಜೊತೆಗೆ ತಮ್ಮ ಸಾಮರ್ಥ್ಯ ತೋರಿಸಿ ಮುಂದಿನ ಪಂದ್ಯಗಳಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬೇಕಿದೆ.
ಇಬ್ಬರು ಕನ್ನಡಿಗರು ಬ್ಯಾಟರ್ ಆದರೆ ಇನ್ನೊಬ್ಬ ಕನ್ನಡಿಗ ಬೌಲರ್ ಆಗಿದ್ದಾರೆ. ಹೌದು ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದಲ್ಲಿ ಪ್ರಸಿದ್ಧ್ ಕೃಷ್ಣಗೆ ಅದೃಷ್ಟ ಒಲಿದಿದೆ. ಪ್ಲೇಯಿಂಗ್-11ರಲ್ಲಿ ಸ್ಥಾನ ಪಡೆದಿರುವ ಪ್ರಸಿದ್ಧ್ ಕೃಷ್ಣ ಎದುರಾಳಿಗಳ ಮೇಲೆ ಎರಗಲಿದ್ದಾರೆ. 2025ರ ಐಪಿಎಲ್ನಲ್ಲಿ ಭರ್ಜರಿ ಬೌಲಿಂಗ್ ಮಾಡಿದ್ದ ಪ್ರಸಿದ್ಧ್ ಕೃಷ್ಣ 15 ಪಂದ್ಯಗಳಿಂದ ಒಟ್ಟು 25 ವಿಕೆಟ್ ಉರುಳಿಸಿದ್ದರು. ಈ ಸಲ ಪರ್ಪಲ್ ಕ್ಯಾಪ್ ವಿನ್ನರ್ ಆದ ಪ್ರಸಿದ್ಧ್ ಕೃಷ್ಣ ಐಪಿಎಲ್ ಫೈನಲ್ ಪಂದ್ಯದ ಬಳಿಕ ಬಹುಮಾನ ಕೂಡ ಪಡೆದುಕೊಂಡಿದ್ದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ