/newsfirstlive-kannada/media/post_attachments/wp-content/uploads/2025/07/Rishab-Pant-Injury.jpg)
ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನವೇ ಟೀಂ ಇಂಡಿಯಾಗೆ ದೊಡ್ಡ ಆಘಾತವಾಗಿದೆ. ಉಪನಾಯಕ, ವಿಕೆಟ್ ಕೀಪರ್ ರಿಷಭ್ ಪಂತ್ ಗಾಯಗೊಂಡು ಮೈದಾನ ತೊರೆದಿದ್ದಾರೆ. 48 ಎಸೆತಗಳಲ್ಲಿ 37 ರನ್ ಗಳಿಸಿರುವ ಪಂತ್ ಗಾಯಗೊಂಡು ನಿವೃತ್ತರಾದರು.
ಕ್ರಿಸ್ ವೋಕ್ಸ್ ಓವರ್‌ನಲ್ಲಿ ಸ್ವೀಪ್ ಶಾಟ್ಗೆ ಪ್ರಯತ್ನಿಸಿದಾಗ ಪಂತ್ ಗಾಯಗೊಂಡರು. ಬಾಲ್ ಅವರ ಬಲಗಾಲಿಗೆ ನೇರವಾಗಿ ತಗುಲಿದೆ. ಇದರಿಂದ ಅವರಿಗೆ ನಡೆಯಲು ಕೂಡ ಆಗಲಿಲ್ಲ. ಕೊನೆಗೆ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಹೊರಗೆ ಕರೆದೊಯ್ಯಲಾಗಿದೆ. ಗಾಯದ ಬಗ್ಗೆ ಬಿಸಿಸಿಐ ಅಪ್ಡೇಟ್ಸ್ ನೀಡಿದೆ.
ಇದನ್ನೂ ಓದಿ: ಭಾರೀ ಮಳೆಗೆ ಉರುಳಿಬಿದ್ದ ಆಲದ ಮರ.. ಬೈಕ್ನಲ್ಲಿ ಹೋಗ್ತಿದ್ದ ದಂಪತಿ ಅಲ್ಲೇ ಕೊನೆಯುಸಿರು..
68ನೇ ಓವರ್‌ನಲ್ಲಿ ರಿಷಭ್ ಪಂತ್ ಗಾಯಗೊಂಡರು. ಕ್ರಿಸ್ ವೋಕ್ಸ್ ಅವರ ಚೆಂಡಿಗೆ ರಿವರ್ಸ್ ಸ್ವೀಪ್ ಪ್ರಯತ್ನಿಸಿದರು. ಅದು ಫುಲ್ ಟಾಸ್ ಆಗಿದ್ದರಿಂದ ಬಾಲ್ ಮಿಸ್ ಆಗಿದೆ. ಚೆಂಡು ಅವರ ಬಲ ಶೂಗೆ ಬಡಿಯಿತು. ಪಂತ್ ನೋವಿನಿಂದ ಬಳಲುತ್ತಿದ್ದರು, ಫಿಸಿಯೋ ತಕ್ಷಣ ಮೈದಾನಕ್ಕೆ ಬಂದರು. ಪಂತ್ ತಮ್ಮ ಶೂ ತೆಗೆದಾಗ, ರಕ್ತಸ್ರಾವ ಆಗುತ್ತಿತ್ತು. ನಂತರ ಪಾದದಲ್ಲಿ ಊತ ಕೂಡ ಕಾಣಿಸಿಕೊಂಡಿದೆ. ಇದರಿಂದ ನಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಪಂತ್ ಗಾಯ ಟೀಂ ಇಂಡಿಯಾಗೆ ದೊಡ್ಡ ಹೊಡೆತ ನೀಡಿದೆ. ಮೊದಲ ದಿನದ ಅಂತ್ಯಕ್ಕೆ ಭಾರತ ಒಟ್ಟು 4 ವಿಕೆಟ್ ಕಳೆದುಕೊಂಡಿದೆ. ಸದ್ಯ ಜಡೇಜಾ, ಶಾರ್ದುಲ್ ಠಾಕೂರ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ಪಂತ್ ಮತ್ತೆ ಆಡುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಇದನ್ನೂ ಓದಿ: ಟೌನ್ ಪ್ಲ್ಯಾನಿಂಗ್ ಸಹಾಯಕನ ಮನೆ ಮೇಲೆ ಲೋಕಾಯುಕ್ತ ರೇಡ್.. ಯಾರು ಈ ಮಾರುತಿ ಬಾಗ್ಲಿ?
Fingers crossed for our X-factor 🤞
Speedy recovery, Rishabh!#SonySportsNetwork#GroundTumharaJeetHamari#ENGvIND#NayaIndia#DhaakadIndia#TeamIndia#ExtraaaInningspic.twitter.com/ZHfyMvMfNx— Sony Sports Network (@SonySportsNetwk) July 23, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ