newsfirstkannada.com

ಟೀಮ್​ ಇಂಡಿಯಾ ಕಟ್ಟಿ ಹಾಕೋ ಬಿಗ್ ಪ್ಲಾನ್​ನಲ್ಲಿ ಇಂಗ್ಲೆಂಡ್​ ತಂಡ.. ಇವರ ಗೇಮ್​ ವ್ಯೂಹ ಹೇಗಿದೆ?

Share :

Published January 20, 2024 at 3:10pm

    ಇಂಗ್ಲೆಂಡ್​​ ಪ್ಲೇಯರ್ಸ್​ಗೆ ಐಪಿಎಲ್ ಆಡಿ ಭಾರತದ ಪಿಚ್ ಗೊತ್ತಾಗಿದೆ

    ಗೆಲುವಿಗಾಗಿ ಹೋರಾಡುವ ಇಂಗ್ಲೆಂಡ್ ತಂಡ ಸುಲಭಕ್ಕೆ ತುತ್ತಾಗುವುದಿಲ್ಲ

    ರೆಹನ್ ಸೇರಿ ಯಂಗ್ ಸ್ಪಿನ್ನರ್​ಗಳಿಗೆ ಅವಕಾಶ ನೀಡಿದ ಇಂಗ್ಲೆಂಡ್ ತಂಡ

ಅಫ್ಘಾನ್ ಸಿರೀಸ್ ಮುಗೀತು. ಟೀಮ್ ಇಂಡಿಯಾ ಫೋಕಸ್​, ಈಗ ಇಂಗ್ಲೆಂಡ್ ಟೆಸ್ಟ್​ ಸಿರೀಸ್​ ಮೇಲೆ ನೆಟ್ಟಿದೆ. ಭಾರತ ಪ್ರವಾಸಕ್ಕಾಗಮಿಸುತ್ತಿರುವ ಇಂಗ್ಲೆಂಡ್, ಈ ಸಲ ಇತಿಹಾಸ ನಿರ್ಮಿಸುವ ಹೊಂಗನಸು ಕಾಣುತ್ತಿದೆ. ಸ್ವದೇಶದಲ್ಲಿ ಟೀಮ್ ಇಂಡಿಯಾನೇ ಗೆಲ್ಲೋ ಫೇವರಿಟ್ ಆಗಿದ್ರೂ, ಗೆಲ್ಲೋದು ಸುಲಭವಲ್ಲ.

ಇಂಡೋ ಇಂಗ್ಲೆಂಡ್ ಟೆಸ್ಟ್​ ಸರಣಿಗೆ ಕೌಂಟ್​ಡೌನ್ ಶುರುವಾಗಿದೆ. ವಿಶ್ವ ಕ್ರಿಕೆಟ್​ನ ಮದಗಜಗಳ ಕಾದಾಟ ಕ್ರಿಕೆಟ್ ಅಭಿಮಾನಿಗಳ ಕುತೂಹಲ ಹುಟ್ಟಿಹಾಕಿದ್ದು, ಯಾರ್ ಗೆಲ್ತಾರೆ ಎಂಬ ಚರ್ಚೆ ಕ್ರಿಕೆಟ್ ಪಡೆಸಾಲೆಯಲ್ಲಿ ಜೋರಾಗಿದೆ. ಆದ್ರೀಗ ಭಾರತಕ್ಕೆ ದಂಡೆತ್ತಿ ಬರುತ್ತಿರುವ ಇಂಗ್ಲೆಂಡ್, 2012ರ ಇತಿಹಾಸವನ್ನ ಮರು ಸೃಷ್ಟಿಸುವ ಇರಾದೆಯಲ್ಲಿದೆ. ಅಷ್ಟೇ ಅಲ್ಲ, ಶತಯಾ ಗತಾಯ ಭಾರತದಲ್ಲೇ ಭಾರತವನ್ನ ಮಣಿಸೋ ಉತ್ಸಾಹದಲ್ಲಿದೆ. ಇದಕ್ಕಾಗಿ ಇಂಗ್ಲೆಂಡ್ ಪಕ್ಕಾ ಗೇಮ್​ಪ್ಲಾನ್, ಸ್ಟ್ರಾಟರ್ಜಿಯೊಂದಿಗೆ ಭಾರತಕ್ಕೆ ಬರುತ್ತಿದೆ.

ಟೀಮ್ ಇಂಡಿಯಾಗೆ ಬಿಗ್​ ಚಾಲೆಂಜ್..!

ಭಾರತದಲ್ಲೇ ಟೀಮ್ ಇಂಡಿಯಾಮ ಮಣಿಸೋದು ಸಲಭದ ಮಾತಲ್ಲ. ಆದ್ರೆ, ಈ ಸಲ ಇಂಗ್ಲೆಂಡ್​​​​​​​​​, ಟೀಮ್ ಇಂಡಿಯಾಗೆ ಮಗದಷ್ಟು ಸವಾಲಾಗಲಿದೆ. ಇದಕ್ಕೆ ಕಾರಣ ಈ ಹಿಂದಿನ ಟೀಮ್ ಇಂಡಿಯಾಗೂ ಈಗಿನ ಟೀಮ್ ಇಂಡಿಯಾಗಿರುವ ಬದಲಾಣೆ. 2020ರ 4 ಪಂದ್ಯಗಳ ಟೆಸ್ಟ್​ ಸರಣಿಗೆ ಹೋಲಿಸಿದ್ರೆ. ಈಗಿನ ಟೀಮ್ ಇಂಡಿಯಾದಲ್ಲಿನ ಆಟಗಾರರ ಬದಲಾಗಿದ್ದಾರೆ. ತಂಡದಲ್ಲಿರುವ ಪ್ರತಿ ಆಟಗಾರರಿಗೂ ಟೆಸ್ಟಿಂಗ್ ಟೈಮ್ ಇದಾಗಿದ್ದು, ಪರ್ಫಾಮ್​ ಮಾಡಲೇಬೇಕಾದ ಒತ್ತಡದಲ್ಲಿದ್ದಾರೆ.

ಬಜ್ ಬಾಲ್ ತಡೆಯೋ ಶಕ್ತಿ ಭಾರತಕ್ಕೆ ಇದೆಯಾ..?

ಕೋಚ್ ಮೆಕಲಂ ಹಾಗೂ ಬೆನ್ ಸ್ಟೋಕ್ಸ್​ ಜುಗಲ್​ಬಂದಿಯಲ್ಲಿ ಇಂಗ್ಲೆಂಡ್ ಬಲಿಷ್ಠವಾಗಿ ಕಾಣ್ತಿದೆ. ಟೆಸ್ಟ್​ನಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡುವ ಇಂಗ್ಲೆಂಡ್, 2022ರಿಂದ ಸತತ 14 ಟೆಸ್ಟ್​ ಗೆದ್ದಿದೆ. ಕೇವಲ 6ರಲ್ಲಿ ಮಾತ್ರವೇ ಸೋಲುಪ್ಪಿಕೊಂಡಿದೆ. ಹೀಗಾಗಿ ನ್ಯೂ ಬೌಲಿಂಗ್ ಲೈನ್​​ ಆಫ್​ನೊಂದಿಗೆ ಕಣಕ್ಕಿಳಿಯುತ್ತಿರುವ ಟೀಮ್ ಇಂಡಿಯಾ, ಬಜ್​ ಬಾಲ್​ಗೆ ಬ್ರೇಕ್​ ಹಾಕುತ್ತಾ ಎಂಬ ಅನುಮಾನವೂ ಕಾಡ್ತಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಪ್ರತಿ ಪಂದ್ಯದ ಗೆಲುವಿಗಾಗಿ ಹೋರಾಡುವ ಇಂಗ್ಲೆಂಡ್, ಸುಲಭಕ್ಕೆ ಸೋಲು ಒಪ್ಪಿಕೊಳ್ಳಲ್ಲ.

ಭಾರತ ಟೆಸ್ಟ್​ ಸರಣಿಗೆ ಇಂಗ್ಲೆಂಡ್ ರೆಡಿ..!

ಭಾರತದಲ್ಲಿ ಟೆಸ್ಟ್​ ಸರಣಿಯನ್ನ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಇಂಗ್ಲೆಂಡ್, ಭಾರತ ಪ್ರವಾಸಕ್ಕೂ ಮುನ್ನ ಇಂಡಿಯನ್ ಸ್ಪಿನ್ ಕಂಡೀಷನ್ಸ್​ಗೆ ಒಗ್ಗಿಕೊಲ್ಳುವ ಸಲುವಾಗಿ ಯುಎಇನಲ್ಲಿ ಅಭ್ಯಾಸ ನಡೆಸಿದೆ. ಆ ಮೂಲಕ ಟೆಸ್ಟ್ ಸರಣಿಗೆ ಸಂಪೂರ್ಣ ಸಿದ್ಧವಾಗಿದೆ. ಐಪಿಎಲ್ ಆಡಿರುವ ಅನುಭವ ಹೊಂದಿರುವ ಆಟಗಾರರಿಗೆ ಪಿಚ್ ಕಂಡೀಷನ್​​​​​​​​​​​​ ಗೊತ್ತಿದೆ. ಇದಲ್ಲದೆ ಭಾರತ ಎ ಎದುರು ಅನ್​​ ಅಫೀಶಿಯಲ್ ಟೆಸ್ಟ್​ ಆಡ್ತಿರುವ ಇಂಗ್ಲೆಂಡ್ ಲಯನ್ಸ್ ತಂಡದಿಂದ ಸಿನೀಯರ್ ಟೀಮ್​ಗೆ ಪಿಚ್​ನ ಇಂಚಿಂಚು ಮಾಹಿತಿ ರವಾನೆಯಾಗ್ತಿದೆ.

ಟೀಮ್ ಇಂಡಿಯಾಗೆ ಸ್ಪಿನ್​​ ಸ್ಟ್ರೋಕ್​​​​​..!

ಟೀಮ್ ಇಂಡಿಯಾ ಬಲವೇ ಸ್ಪಿನ್ ಅಸ್ತ್ರ. ಆದ್ರೀಗ ಈ ಸ್ಪಿನ್ ಅಸ್ತ್ರದೊಂದಿಗೆ ಮಾಸ್ಟರ್ ಸ್ಟ್ರೋಕ್ ನೀಡುವ ವ್ಯೂಹ ರಚಿಸಿದೆ. ಇದಕ್ಕಾಗಿ ತಂಡದಲ್ಲಿ ನಾಲ್ವರು ಸ್ಪಿನ್ನರ್​ಗಳಿಗೆ ಸ್ಥಾನ ನೀಡಿದೆ. ಅದರಲ್ಲೂ 2020ರ ಟೆಸ್ಟ್​ ಸರಣಿಯಲ್ಲಿ ಟೀಮ್ ಇಂಡಿಯಾವನ್ನ ಕಾಡಿದ್ದ ಜಾಕ್ ಲೀಚ್​ಗೆ ಸ್ಥಾನ ನೀಡಿರುವ ಇಂಗ್ಲೆಂಡ್, 20 ವರ್ಷದ ಆಫ್ ಸ್ಪಿನ್ನರ್ ಶೋಯೆಬ್ ಬಶೀರ್, 19 ವರ್ಷದ ಲೆಗ್ ಸ್ಪಿನ್ನರ್ ರೆಹನ್ ಅಹ್ಮದ್, 24 ವರ್ಷದ ಟಾಮ್ ಹಾರ್ಟ್ಲೆ ಅವಕಾಶ ಕಲ್ಪಿಸಿದೆ. ಆ ಮೂಲಕ ಸ್ಪಿನ್​ ಬಲದೊಂದಿಗೆ ಟಕ್ಕರ್ ನೀಡುವ ಲೆಕ್ಕಚಾರದಲ್ಲಿದೆ.

ಭಾರತ ಪ್ರವಾಸಕ್ಕೂ ಮುನ್ನ ಪಕ್ಕಾ ಗೇಮ್​ಪ್ಲಾನ್, ಸ್ಟ್ರಾಟರ್ಜಿ ರೂಪಿಸಿಕೊಂಡೇ ಭಾರತಕ್ಕೆ ಆಗಮಿಸುತ್ತಿರುವ ಇಂಗ್ಲೆಂಡ್, ಟೀಮ್ ಇಂಡಿಯಾಗೆ ಟಕ್ಕರ್ ಕೊಡುತ್ತಾ? ಭಾರತದ ಬಲೆಯಲ್ಲಿ ಸಿಲುಕಿ ಸೋಲೊಪ್ಪಿಕೊಳ್ಳುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್​ ಇಂಡಿಯಾ ಕಟ್ಟಿ ಹಾಕೋ ಬಿಗ್ ಪ್ಲಾನ್​ನಲ್ಲಿ ಇಂಗ್ಲೆಂಡ್​ ತಂಡ.. ಇವರ ಗೇಮ್​ ವ್ಯೂಹ ಹೇಗಿದೆ?

https://newsfirstlive.com/wp-content/uploads/2023/06/Team-India-test.jpg

Load More