/newsfirstlive-kannada/media/post_attachments/wp-content/uploads/2025/07/GAMBHIR-1.jpg)
ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಆಡುತ್ತಿರುವ ಟೀಮ್ ಇಂಡಿಯಾ 1-2 ಅಂತರದಲ್ಲಿ ಹಿನ್ನಡೆ ಅನುಭವಿಸಿದೆ. ನಾಲ್ಕನೇ ಟೆಸ್ಟ್ ಜುಲೈ 23 ರಿಂದ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದ್ದು, ಇದಕ್ಕಾಗಿ ಟೀಮ್ ಇಂಡಿಯಾ ಅಭ್ಯಾಸ ಆರಂಭಿಸಿದೆ.
ಈ ಮಧ್ಯೆ ಬಿಸಿಸಿಐ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಒಂದನ್ನ ಹಂಚಿಕೊಂಡಿದೆ. ಇದರಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಸೋಲಿನ ನಂತರ ಡ್ರೆಸ್ಸಿಂಗ್ ರೂಮ್ನಲ್ಲಿ ಆಟಗಾರರೊಂದಿಗೆ ಮಾತನಾಡುತ್ತಿರುವ ಕ್ಲಿಪ್ ಅದಾಗಿದೆ. ಗಂಭೀರ್, ರವೀಂದ್ರ ಜಡೇಜಾ ಅವರನ್ನು ಹೊಗಳಿದ್ದಾರೆ. ಜಡೇಜಾ ಅದ್ಭುತವಾಗಿ ಹೋರಾಡಿದರು. ಜಡ್ಡು ನೀಡಿದ ಹೋರಾಟ ನಿಜಕ್ಕೂ ಉತ್ತಮ ಇನ್ನಿಂಗ್ಸ್ ಆಗಿತ್ತು ಎಂದು ಗಂಭೀರ್ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಇಂಗ್ಲೆಂಡ್‌ನಲ್ಲಿ RCB ಸ್ಟಾರ್ ಜಿತೇಶ್ ಶರ್ಮಾಗೆ ಅವಮಾನ; ಗುರು ಕಾರ್ತಿಕ್ ಬಂದು ಸಮಸ್ಯೆ ಇತ್ಯರ್ಥ -VIDEO
ಮೂರನೇ ಟೆಸ್ಟ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಜಡೇಜಾ 61 ರನ್‌ಗಳಿಸಿದರು. ಸೋಲಿನ ಹೊರತಾಗಿಯೂ, ಜಡೇಜಾ ಇನ್ನಿಂಗ್ಸ್ ಎಲ್ಲರ ಹೃದಯ ಗೆದ್ದಿತು. 193 ರನ್‌ಗಳನ್ನು ಬೆನ್ನಟ್ಟುವಾಗ, ಟೀಮ್ ಇಂಡಿಯಾ 170 ರನ್‌ಗಳಿಗೆ ಆಲೌಟ್ ಆಯಿತು. ಆದರೆ ಜಡೇಜಾ ಅಜೇಯರಾಗಿ ಉಳಿದರು.
ಬಿಸಿಸಿಐ ಹಂಚಿಕೊಂಡ ವೀಡಿಯೊದಲ್ಲಿ, ಸಿರಾಜ್ ರವೀಂದ್ರ ಜಡೇಜಾ ಬಗ್ಗೆ ಹೀಗೆ ಹೇಳಿದ್ದಾರೆ, ‘‘ಜಡ್ಡು ಭಾಯ್ ಫೀಲ್ಡಿಂಗ್, ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅಸಾಧಾರಣ. ಅವರು ಕಷ್ಟದ ಸಮಯದಲ್ಲೂ ರನ್ ಗಳಿಸುತ್ತಾರೆ'' ಎಂದು ಹೊಗಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ BMTC ಚಾಲಕನ ಹುಚ್ಚಾಟ.. ನಿಂತಿದ್ದವರ ಮೇಲೆ ನುಗ್ಗಿದ ಬಸ್, ಮಹಿಳೆ ಗಂಭೀರ
ಇನ್ನು ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಮಾತನಾಡಿ.. ಅವರ ಬ್ಯಾಟಿಂಗ್ ಬೇರೆಯದ್ದೇ ಹಂತ ತಲುಪಿದೆ. ಕಳೆದ 2 ಟೆಸ್ಟ್‌ಗಳಲ್ಲಿ ಅವರ ಸ್ಥಿರತೆ ಮತ್ತು ಶಾಂತ ನಡವಳಿಕೆ ಕಂಡುಬಂದಿದೆ. ಒತ್ತಡದಲ್ಲಿ ಆಡುವ ಸಾಮರ್ಥ್ಯ ಹೊಂದಿದ್ದಾರೆಂದು ಭಾವಿಸಿದ್ದೇನೆ ಎಂದಿದ್ದಾರೆ.
ಇನ್ನು ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆಡುವ 11 ಜನರ ತಂಡದಲ್ಲಿ ಹಲವು ಬದಲಾವಣೆಗಳಾಗುವ ಸಾಧ್ಯತೆ ಇದೆ. ಬುಮ್ರಾಗೆ ವಿಶ್ರಾಂತಿ ನೀಡಬಹುದು. ರಿಷಭ್ ಪಂತ್ ಬಗ್ಗೆ ಅನುಮಾನ ಇದೆ. ಕಳೆದ 3 ಟೆಸ್ಟ್‌ಗಳಲ್ಲಿ ಕರುಣ್ ನಾಯರ್ ಪರಿಣಾಮಕಾರಿಯಾಗಿ ಆಡಿಲ್ಲ. ಅವರ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ನಾಲ್ಕನೇ ಟೆಸ್ಟ್ ಪಂದ್ಯ ಜುಲೈ 23 ರಿಂದ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
ಇದನ್ನೂ ಓದಿ: ಬೇರೆ ಹುಡುಗಿ ಜೊತೆ ಗಿಲ್ ಪಾರ್ಟಿ.. ಸಿಟ್ಟಿನಿಂದ ರಹಸ್ಯವಾಗಿ ಗುರಾಯಿಸಿದ ಸಾರಾ ತೆಂಡುಲ್ಕರ್ -VIDEO
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ