newsfirstkannada.com

IND vs ENG; ಟೆಸ್ಟ್‌ ತಂಡಕ್ಕೆ ಎಂಟ್ರಿ ಕೊಟ್ಟ ಆಕಾಶ್​​ ದೀಪ್.. ಈ RCB ಪ್ಲೇಯರ್ ಕ್ರಿಕೆಟ್ ಎಂಟ್ರಿಯೇ ರೋಚಕ!

Share :

Published February 12, 2024 at 3:58pm

  ಸರ್​ಪ್ರೈಸ್​ ರೀತಿಯಲ್ಲಿ ಆರ್​​ಸಿಬಿ ವೇಗಿ ಆಕಾಶ್​ ದೀಪ್​ಗೆ ಸ್ಥಾನ

  ಯುವ ಆಟಗಾರರಿಗೆ ಸ್ಪೂರ್ತಿದಾಯಕ ಆಕಾಶ್​ ದೀಪ್​ ಜರ್ನಿ

  ಹುಟ್ಟೂರಲ್ಲಿ ಕ್ರಿಕೆಟ್​ ಆಡೋದೆ ‘ಕ್ರೈಂ​’, ಕದ್ದುಮುಚ್ಚಿ ಆಡ್ತಿದ್ದ ಆಕಾಶ್!

ಇಂಡೋ- ಇಂಗ್ಲೆಂಡ್​​​ ಟೆಸ್ಟ್​ ಸರಣಿಯ ತಂಡಕ್ಕೆ ಆರ್​​ಸಿಬಿ ವೇಗಿ ಆಕಾಶ್​ ದೀಪ್​ ಎಂಟ್ರಿ ಕೊಟ್ಟಿರೋದು ಬಹುತೇಕರಿಗೆ ಸರ್​​​ಪ್ರೈಸ್​​ ಮೂಡಿಸಿದೆ. ಆದ್ರೆ, ಆಕಾಶ್​​ ದೀಪ್​ ಜರ್ನಿ ನೋಡಿದ್ರೆ HE DESERVED IT ಅನ್ನಿಸದೇ ಇರಲ್ಲ.. ಅಷ್ಟು ರೋಚಕವಾಗಿದೆ ವೇಗಿಯ ಜರ್ನಿ. ಟೆನ್ನಿಸ್​​ ಬಾಲ್​ ಕ್ರಿಕೆಟ್​ ಆಡ್ತಿದ್ದ ಆಕಾಶ್​​ ದೀಪ್​ ಲೆದರ್​ ಕ್ರಿಕೆಟರ್​​ ಆಗಿದ್ದೇಗೆ?

ಟೆಸ್ಟ್​ ಸರಣಿಯಿಂದ ಹಿಂದೆ ಸರಿದಿರುವ ವಿರಾಟ್ ಕೊಹ್ಲಿ

ಇಂಡೋ- ಇಂಗ್ಲೆಂಡ್​​ ನಡುವಿನ ಟೆಸ್ಟ್​ ಸರಣಿಗೆ ತಂಡದ ಆಟಗಾರರ ಪಟ್ಟಿ ಪ್ರಕಟವಾಗಿದೆ. ನಿರೀಕ್ಷೆಯಂತೆ ವಿರಾಟ್​ ಕೊಹ್ಲಿ ಸರಣಿಯಿಂದ ಹಿಂದೆ ಸರಿದಿದ್ರೆ, ಶ್ರೇಯಸ್​ ಅಯ್ಯರ್​ಗೆ ಕೊಕ್​ ಕೊಡಲಾಗಿದೆ. ಇದ್ರ ನಡುವೆ ಸರ್​ಪ್ರೈಸ್​ ರೀತಿಯಲ್ಲಿ ಆರ್​​ಸಿಬಿ ವೇಗಿ ಆಕಾಶ್​ ದೀಪ್​ ಟೆಸ್ಟ್​ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಟೆನ್ನಿಸ್​ ಬಾಲ್ TO ಲೆದರ್​​ ಬಾಲ್., ಜರ್ನಿಯೇ ರೋಚಕ.!

ಆಕಾಶ್​​ ದೀಪ್​ ಟೆಸ್ಟ್​ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ ನಿಜ.. ಹಾಗಂತ ಆಕಾಶ್​​ ದೀಪ್​ ಆ ಸ್ಥಾನಕ್ಕಾಗಿ ಹಾರ್ಡ್​ವರ್ಕ್​ ಮಾಡಿಲ್ಲ ಅಂತಿಲ್ಲ. ನಿಜ ಹೇಳಬೇಕಂದ್ರೆ, ಈ ವೇಗಿಯ​ ಜರ್ನಿ ಎಂತವರಿಗೂ ಸ್ಪೂರ್ತಿ. ಹಿಂದೆ​ ಮಾಡಿದ ಹಾರ್ಡ್​​ವರ್ಕ್​, ಡೆಡಿಕೇಷನ್​​ನ​ ಫಲವೇ ಇಂದು ಟೆಸ್ಟ್​ ತಂಡದಲ್ಲಿ ಸ್ಥಾನ ಸಿಗುವಂತೆ ಮಾಡಿದೆ.

ಸರಕಾರಿ ಕೆಲಸ ಮಾಡುವಂತೆ ತಂದೆಯ ಒತ್ತಡ.!

ನಮ್ಮ ಅಪ್ಪನಿಗೆ ಕ್ರಿಕೆಟ್​ ಆಡೋದು ಇಷ್ಟವಿರಲಿಲ್ಲ. ಅವರು ಸ್ಕೂಲ್​ಗೆ ಹೋದಾಗ ಕದ್ದು ಮುಚ್ಚಿ ಕ್ರಿಕೆಟ್​ ಆಡ್ತಿದ್ದೆ. ಅವರಿಗೆ ಯಾವಾಗ ಗೊತ್ತಾಯ್ತೋ ಆಗ ಈತ ಜೀವನದಲ್ಲಿ ಏನನ್ನೂ ಮಾಡಲ್ಲ ಎಂದು ನಿರ್ಧರಿಸಿದ್ರು.

ಆಕಾಶ್​ ದೀಪ್​ ಹುಟ್ಟಿದ್ದು ಬಿಹಾರದ ಸಸಾರಾಂ​ನ ಮಧ್ಯಮ ವರ್ಗದ ಕುಟುಂಬದಲ್ಲಿ. ತಂದೆ ರಾಮ್ಜಿ ಸಿಂಗ್​ ಸಿಂಗ್​ ಟೀಚರ್​​ ಆಗಿ ಕಾರ್ಯ ನಿರ್ವಹಿಸ್ತಾ ಇದ್ರು. ಕ್ರಿಕೆಟ್​ ಆಡೋದೆ ದೊಡ್ಡ ಕ್ರೈಂ ಎನ್ನುವಂತೆ ಸಸಾರಂನ ಜನ ನೋಡ್ತಿದ್ದ ಕಾಲ ಅದು. ಹೀಗಾಗಿ ಕ್ರಿಕೆಟರ್​​ ಆಗೋ ಕನಸು ಕಾಣ್ತಿದ್ದ ಆಕಾಶ್​​ ದೀಪ್​ಗೆ ಮನೆಯಲ್ಲೇ ಬೆಂಬಲ ಇರಲಿಲ್ಲ.. ಮಗ ಕ್ರಿಕೆಟರ್​ ಆಗೋದು ತಂದೆ ರಾಮ್ಜಿ ಸಿಂಗ್​ಗೆ ಇಷ್ಟ ಇರಲಿಲ್ಲ. ಪೋಲಿಸ್​ ಪರೀಕ್ಷೆ ಬರೆಸಿದ್ದ ತಂದೆ, ಕಡೆಯ ಪಕ್ಷ ಪ್ಯೂವನ್​ ಕೆಲಸವನ್ನಾದ್ರೂ ಕೇಳಿಕೊಂಡಿದ್ರಂತೆ. ಆದ್ರೆ, ಕ್ರಿಕೆಟರ್​ ಆಗೋ ಕನಸು ಹೊತ್ತಿದ್ದ ಆಕಾಶ್​​ ದೀಪ್​ 2010ರಲ್ಲೇ ಬೆಂಗಾಲ್​ಗೆ ವಲಸೆ ಬಂದು ಲೋಕಲ್​ ಕ್ರಿಕೆಟ್​ ಅಕಾಡೆಮಿಗೆ ಸೇರಿದ್ರಂತೆ.

ತಂದೆಯ ಸಾವು ಸುಧಾರಿಸಿಕೊಳ್ಳುವ ಮುನ್ನ ಅಣ್ಣ ವಿಧಿವಶ.!

ಅಪ್ಪ 2015ರಲ್ಲಿ ತೀರಿ ಹೋದ್ರು. ಅದಾದ ಬಳಿಕ ಆ್ಯಕ್ಸಿಡೆಂಟ್​​ನಲ್ಲಿ ಅಣ್ಣ ಕೂಡ ತೀರಿ ಹೋದ್ರು.

ಆಕಾಶ್​ ದೀಪ್, ಯುವ ಆಟಗಾರ

ಬೆಂಗಾಲ್​ಗೆ ವಲಸೆ ಬಂದು ಅಭ್ಯಾಸ ಆರಂಭಿಸಿದ ಆಕಾಶ್​ ದೀಪ್​ರ ಕ್ರಿಕೆಟರ್​​ ಆಗೋ ಕನಸಿಗೆ ಇನ್ನೇನು ರೆಕ್ಕೆ ಪುಕ್ಕು ಬಂ​ತು ಅನ್ನೋವಾಗ್ಲೇ ಬದುಕಿಗೆ ಬರಸಿಡಿಲು ಬಡಿದು ಬಿಡ್ತು. ತಂದೆ ಇಹಲೋಕ ತ್ಯಜಿಸಿದ್ರು. ಈ ಸಾವಿನ ಆಘಾತದಿಂದ ಇನ್ನೂ ಹೊರ ಬಂದಿರಲಿಲ್ಲ.. ಅಣ್ಣ ಕೂಡ ತಂದೆಯ ದಾರಿಯನ್ನ ಹಿಡಿದು ಬಿಟ್ರು. ಅಣ್ಣನ 2 ಪುಟ್ಟ ಮಕ್ಕಳ ಸಹಿತ ಇಡೀ ಕುಟುಂಬದ ಜವಾಬ್ದಾರಿ ಆಕಾಶ್​​ ದೀಪ್​ ಮೇಲೆ ಬಿದ್ದು ಬಿಡ್ತು.

ಹೆಗಲೇರಿದ ಜವಾಬ್ದಾರಿ, 3 ವರ್ಷ ಕ್ರಿಕೆಟ್​ನಿಂದ ದೂರ

ಕುಟುಂಬದ ಜವಾಬ್ದಾರಿ ಹೊತ್ತ ಆಕಾಶ್​ ದೀಪ್​ 3 ವರ್ಷಗಳ ಕಾಲ ಕ್ರಿಕೆಟ್​ ದೂರ ಇದ್ರು. 2020ರಲ್ಲಿ ಕೊಲ್ಕತ್ತಾಗೆ ಉದ್ಯೋಗ ಅರಸಿ ಬಂದ ಆಕಾಶ್​ ದೀಪ್​, ಫಸ್ಟ್​ ಡಿವಿಷನ್​ ಲೀಗ್​ನಲ್ಲಿ ಪಂದ್ಯಗಳನ್ನ ಆಡಲು ಆರಂಭಿಸಿದ್ರು. ಆದ್ರೆ, ಆರ್ಥಿಕ ಸಮಸ್ಯೆ ಇಡೀ ಕುಟುಂಬವನ್ನ ಕಾಡಿತು. ಹೀಗಾಗಿ, ಲೋಕಲ್​ ಟೆನ್ನಿಸ್​ ಬಾಲ್​ ಕ್ರಿಕೆಟ್​ ಟೂರ್ನಮೆಂಟ್​​ ಆಡಲು ಆರಂಭಿಸಿದ್ರು. ಇದ್ರಿಂದ ಬರ್ತಿದ್ದ ಹಣದಲ್ಲಿ ಆಕಾಶ್​​ ದೀಪ್​ ಜೀವನ ನಿರ್ವಹಣೆ ಮಾಡ್ತಿದ್ರಂತೆ. ಕಷ್ಟದ ನಡುವೆ ಪರ್ಫಾಮ್ ಮಾಡಿ ಕೊನೆಗೂ ಬೆಂಗಾಲ್​ ಅಂಡರ್​-23 ತಂಡಕ್ಕೆ ಆಯ್ಕೆಯಾದ್ರು. ಆ ಬಳಿಕ ಜೀವನವೇ ಬದಲಾಯ್ತು.

ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ ಧಮ್​ದಾರ್​​ ಪ್ರದರ್ಶನ.!

ಡೊಮೆಸ್ಟಿಕ್​ ಕ್ರಿಕೆಟ್​ನ ಸಿಕ್ಕ ಅವಕಾಶಗಳನ್ನ ಆಕಾಶ್​ದೀಪ್​ ಎರಡೂ ಕೈಗಳಿಂದ ಬಾಚಿಕೊಂಡ್ರು. ಜಬರ್ದಸ್ತ್​ ಪರ್ಫಾಮೆನ್ಸ್​ನಿಂದ ಎಲ್ಲರ ಗಮನ ಸೆಳೆದ್ರು. 2021ರಲ್ಲಿ ಆರ್​​ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟ ವೇಗಿ ಐಪಿಎಲ್​ನಲ್ಲೂ ಮಿಂಚು ಹರಿಸಿದ್ರು. ಫಸ್ಟ್​ ಕ್ಲಾಸ್​ ಕ್ರಿಕೆಟ್​​ನಲ್ಲಿ ಆಡಿದ 29 ಪಂದ್ಯಗಳಲ್ಲೇ 103 ವಿಕೆಟ್​ ಕಬಳಿಸಿರೋ ಆಕಾಶ್​​ ದೀಪ್​, ಇತ್ತೀಚೆಗೆ ನಡೆದ ಇಂಗ್ಲೆಂಡ್​​ ವಿರುದ್ಧದ ಅನ್​ಅಫಿಶಿಯಲ್​ ಟೆಸ್ಟ್​ ಸರಣಿಯಲ್ಲಿ 2 ಪಂದ್ಯ ಆಡಿ 13 ವಿಕೆಟ್​ ಬೇಟೆಯಾಡಿದ್ರು.

ಜೀವನದ ಸಂಕಷ್ಟಗಳ ನಡುವೆ ಆಕಾಶ್​​ ದೀಪ್​ರಲ್ಲಿ ಕ್ರಿಕೆಟ್​ ಮೇಲಿನ ಪ್ರೀತಿ, ಸಾಧಿಸುವ ಛಲ ಕಡಿಮೆಯಾಗಲಿಲ್ಲ. ಅಂತಿಮವಾಗಿ ಯುವ ವೇಗಿಯ ಹೋರಾಟಕ್ಕೆ ಫಲ ಸಿಕ್ಕಿದೆ. ಟೆಸ್ಟ್​ ತಂಡಕ್ಕೆ ಎಂಟ್ರಿ ಕೊಟ್ಟಿರುವ ವೇಗಿ ಟೀಮ್​ ಇಂಡಿಯಾ ಪರವೂ ಮಿಂಚು ಹರಿಸಲಿ ಅನ್ನೋದೆ ಎಲ್ಲರ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IND vs ENG; ಟೆಸ್ಟ್‌ ತಂಡಕ್ಕೆ ಎಂಟ್ರಿ ಕೊಟ್ಟ ಆಕಾಶ್​​ ದೀಪ್.. ಈ RCB ಪ್ಲೇಯರ್ ಕ್ರಿಕೆಟ್ ಎಂಟ್ರಿಯೇ ರೋಚಕ!

https://newsfirstlive.com/wp-content/uploads/2024/02/AKASH_DEEP_RCB.jpg

Load More