newsfirstkannada.com

ಹಾರ್ದಿಕ್​ ಪಾಂಡ್ಯ ಬಿಟ್ಟು ಸೂರ್ಯ ಕುಮಾರ್​ಗೆ ಕ್ಯಾಪ್ಟನ್ ಪಟ್ಟ ಕಟ್ಟುತ್ತಾ BCCI? T20 ಸರಣಿಯಲ್ಲಿ ಆಗೋದೇನು?

Share :

Published July 23, 2023 at 3:28pm

    ಹೊಸ ಕ್ಯಾಪ್ಟನ್​ ಹೇಗೆ ನಿಭಾಯಿಸುತ್ತಾರೆ ಎಂಬುದೇ ಕುತೂಹಲ

    ಈ ರೀತಿ ನಿರ್ಧಾರದಿಂದ T20 ತಂಡದ ಮೇಲೆ ಹೆಚ್ಚು ಒತ್ತಡ..!

    ಕೆರಿಬಿಯನ್​ ಸರಣಿ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಸವಾಲ್

ಟೀಮ್​ ಇಂಡಿಯಾ ವೆಸ್ಟ್​ ಇಂಡೀಸ್​ ವಿರುದ್ಧ 3 ಏಕದಿನ ಪಂದ್ಯ, 5 ಟಿ20 ಸರಣಿ ಬೆನ್ನಲ್ಲೇ ಆಗಸ್ಟ್​ 18 ರಿಂದ ಐರ್ಲೆಂಡ್​ ಜೊತೆಗೆ 3 ಪಂದ್ಯಗಳ ಟಿ20 ಸರಣಿ ಆಡಲಿದೆ. ಹೀಗಾಗಿ ಟಿ20 ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯಗೆ ರೆಸ್ಟ್​ ನೀಡುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಟಿ20 ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ಅನುಪಸ್ಥಿತಿಯಲ್ಲಿ 360 ಖ್ಯಾತಿಯ ಸೂರ್ಯಕುಮಾರ್ ಯಾದವ್ ಟಿ20 ತಂಡದ ಸಾರಥ್ಯ ವಹಿಸಲಿದ್ದಾರೆ ಎಂದು ಹೇಳಲಾಗ್ತಿದೆ.​ ಪಾಂಡ್ಯ ಅವರಿಗೆ ಐರ್ಲೆಂಡ್ ಸರಣಿಯಿಂದ ವಿಶ್ರಾಂತಿ ನೀಡಲು ಬಿಸಿಸಿಐ ಬಯಸಿದೆ. ಹೀಗಾಗಿ ಉಪನಾಯಕ ಸೂರ್ಯ ಕುಮಾರ್​ಗೆ ಕ್ಯಾಪ್ಟನ್ಸಿ ಕಟ್ಟಲು ಮುಂದಾಗಿದೆ. ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಬಿಸಿಸಿಐ ಹೇಳಿದೆ.

ಇದೇ ವರ್ಷದಲ್ಲಿ ವಿಶ್ವಕಪ್ ಹಾಗೂ ಏಷ್ಯ ಕಪ್​ ಪಂದ್ಯಗಳು ನಡೆಯುವುದರಿಂದ ಆಟಗಾರರಿಗೆ ಬಿಡುವಿಲ್ಲದ ಶೆಡ್ಯೂಲ್ಡ್​ ಇರಲಿದೆ. ಇದರಿಂದ ಹಾರ್ದಿಕ್ ಪಾಂಡ್ಯ ಜೊತೆಗೆ ಶುಭ್​ಮನ್​ ಗಿಲ್​ಗೂ ವಿಶ್ರಾಂತಿ ನೀಡಬಹುದು ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಹಾರ್ದಿಕ್​ ಪಾಂಡ್ಯ ಬಿಟ್ಟು ಸೂರ್ಯ ಕುಮಾರ್​ಗೆ ಕ್ಯಾಪ್ಟನ್ ಪಟ್ಟ ಕಟ್ಟುತ್ತಾ BCCI? T20 ಸರಣಿಯಲ್ಲಿ ಆಗೋದೇನು?

https://newsfirstlive.com/wp-content/uploads/2023/07/SURYA_KUMAR_HARDHIK_PANDYA.jpg

Load More